wayground logo

Free Printable Worksheets

NEW

Font size

S
M
L
XL
Worksheets

10ನೇ ತರಗತಿಯ ಪಠ್ಯಾಧಾರಿತ ಕಾರ್ಯಕ್ರಮ.

Total questions: 40

Worksheet time: 20mins

Name
Class
Date
1.

ಪುಟ್ಟ ಮಗುವಿನ ಅಳು ಕೇಳಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದರು

a)

ತಂದೆ

b)

ತಾಯಿ

c)

ಮುದುಕಿ

d)

ಮಗ

2.

ಮುದುಕಿಗೆ ಇಂದಿಗೂ ಮರೆಯದ ಗಾಯ ಇದಾಗಿದೆ

a)

ಗಂಡನ ಸಾವು

b)

ಮಗನ ನೋವು

c)

ಮೊಮ್ಮೊಗನ ಸಾವು

d)

ಸೊಸೆ ಹೆರಿಗೆಯ ನೋವು

3.

ಪು.ತಿ.ನ ರವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕೃತಿ

a)

ಶಾರದಾ ಯಾಮಿನಿ

b)

ಶ್ರೀಹರಿಚರಿತೆ

c)

ಹಂಸದಮಯಂತಿ ಮತ್ತು ಇತರ ರೂಪಕಗಳು

d)

ಗೋಕುಲ ನಿರ್ಗಮನ

4.

ನಾಚುತಿಹೇನಿ ಪುಜ್ಯತೇ ನಲುಮೆಯಿಂದ ಈ ಮಾತನ್ನು ಹೇಳಿದವರು

a)

ಸೀತೆ

b)

ರಾಮ

c)

ಶಬರಿ

d)

ಲಕ್ಷ್ಮಣ

5.

ನಾಲ್ವಡಿ ಕೃಷ್ಣರಾಜ ಒಡೆಯರು ಪಟ್ಟಾಭಿಷಿಕ್ತರಾದದ್ದು.

a)

1895

b)

1913

c)

1902

d)

1900

6.

ವಿಶ್ವೇಶ್ವರಯ್ಯನವರ ತುಡಿತ ಇದಾಗಿತ್ತು

a)

ತಂತ್ರಜ್ಞಾನದ ಬೆಳವಣಿಗೆ

b)

ಸಮಾನ ಶಿಕ್ಷಣ ನೀಡುವುದು

c)

ಅಂದಿನ ಕೆಲಸ ಅಂದೇ ಮಾಡುವುದು

d)

ಸಮಗ್ರ ದೇಶದ ಅಭಿವೃದ್ಧಿ

7.

' ಶಿವಾನುಭವ ಶಬ್ದಕೋಶ' ಕೃತಿಯನ್ನು ಬರೆದವರು

a)

ಬಸವಣ್ಣ

b)

ಅಕ್ಕಮಹಾದೇವಿ

c)

ಪ. ಗು.ಹಳಕಟ್ಟಿ

d)

ಅಲ್ಲಮಪ್ರಭು

8.

ದೇವನೂರ ಮಹಾದೇವ ಅವರ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದವರು

a)

ಶ್ರೀರಾಮ

b)

ಗೌತಮ ಬುದ್ಧ

c)

ಮಹಾವೀರ

d)

ಬಾಹುಬಲಿ

9.

ಎ.ಎನ್. ಮೂರ್ತಿರಾವ್ ರವರಿಗೆ ಪಂಪ ಪ್ರಶಸ್ತಿ ತಂದುಕೊಟ್ಟ ಕೃತಿ.

a)

ಅಲೆಯುವ ಮನ

b)

ಮಿನುಗುಮಿಂಚು

c)

ದೇವರು

d)

ಚಿತ್ರಗಳು ಪತ್ರಗಳು

10.

ಶಾನುಭೋಗರ ಬ್ರಹ್ಮಾಸ್ತ್ರ

a)

ಕೊಡೆ

b)

ಖಿರ್ದಿ ಪುಸ್ತಕ

c)

ಜಗುಲಿ

d)

ಶ್ಲೋಕಗಳು

11.

ವೃಕ್ಷಸಾಕ್ಷಿ ಪಾಠದ ಪ್ರಮುಖ ನೀತಿಗಳಲ್ಲಿ ಇದು ಒಂದಾಗಿದೆ

a)

ಸಹಕಾರ ನೀಡುವುದು

b)

ತ್ಯಾಗ ಮಾಡುವುದು

c)

ದ್ರೋಹ ಬಗೆಯುವುದು

d)

ಸತ್ಯ ಹೇಳುವುದು

12.

ಪ್ರೇಮಮತಿ ತನ್ನ ಮಗ ಹೊನ್ನು ಕದ್ದ ವಿಚಾರವಾಗಿ ಸುಳ್ಳು ಹೇಳಿ ಎಂದಾಗ ಅದನ್ನು ಆರಂಭದಲ್ಲಿ ನಿರಾಕರಿಸಲು ಕಾರಣ

a)

ಪರಧನ ಆಸೆ ಪಡಬಾರದು ಎಂದು

b)

ಮಗನಿಗೆ ತಿಳುವಳಿಕೆ ಇಲ್ಲವೆಂದು

c)

ಸಮಯ ಅವಕಾಶ ಬೇಕೆಂದು

d)

ತಪ್ಪು ಮಾಡಬಾರದೆಂದು

13.

ನಾಳಿನ ಕನಸನ್ನು ಬಿತ್ತ ಬೇಕಾಗಿರುವುದು

a)

ಗೆಳೆಯರಲ್ಲಿ

b)

ಭಯ-ಸಂಶಯಗಳು ಕಂದಿದ ಕಣ್ಣೊಳು

c)

ಹಸುಗಾನದ ಹಸುಮಕ್ಕಳಲ್ಲಿ

d)

ಕನಸು ತುಂಬಿಕೊಂಡ ಯುವಕರಲ್ಲಿ

14.

ಜಿ.ಎಸ್. ಶಿವರುದ್ರಪ್ಪನವರು ರಚಿಸಿರುವ ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ

a)

ದೇವಶಿಲ್ಪಿ

b)

ದೀಪದ ಹೆಜ್ಜೆ

c)

ಕಾವ್ಯಾರ್ಥ ಚಿಂತನೆ

d)

ಸೌಂದರ್ಯ ಮತ್ತು ಸಮೀಕ್ಷೆ

15.

ಹಕ್ಕಿ ಯಾವುದರ ಬಾಗ್ಯ ತರಿಸಿದೆ

a)

ಕ್ಷೀರಭಾಗ್ಯ

b)

ಮನ್ವಂತರಗಳ ಭಾಗ್ಯ

c)

ಅನ್ನಭಾಗ್ಯ

d)

ಹೊಸಗಾಲದ ಭಾಗ್ಯ

16.

ನೀಲಮೇಘಮಂಡಲ-ಸಮ ಬಣ್ಣ_ಇದರ ಮುಂದಿನ ಸಾಲು

a)

ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ

b)

ಬಿಳಿ ಹೊಳೆ ಬಣ್ಣದ ಗರಿ-ಗರಿಯುಂಟು

c)

ಸಾರ್ವಭೌಮರಾ ನೆತ್ತಿಯ ಕುಕ್ಕಿ

d)

ಹೊಸಗಾಲದ ಹಸುಮಕ್ಕಳ ಹರಸಿ

17.

ಕುಂಪಣಿ ಸರಕಾರ ಹೊರಡಿಸಿದ ಆದೇಶ

a)

ಹಲಗಲಿ ಬೇಡರ ಬಂಧಿಸಿ

b)

ಹಲಗಲಿ ಬೇಡರ ಸೊಕ್ಕು ಮುರಿಯಿರಿ

c)

ಹಲಗಲಿ ಯನ್ನು ಸುಟ್ಟು ಬೂದಿ ಮಾಡಿರಿ

d)

ಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ

18.

ಹಲಗಲಿ ಬಂಟರ ಕಥನ ನಡೆದಾಗ- ಹಲಗಲಿ ಗ್ರಾಮ ಜಿಲ್ಲೆಯಲ್ಲಿತ್ತು

a)

ವಿಜಯಪುರ

b)

ಬಾಗಲಕೋಟೆ

c)

ಕಲಾದಗಿ

d)

ಮುಧೋಳ

19.

ಕುಮಾರವ್ಯಾಸರ ಆರಾಧ್ಯದೈವ

a)

ಶ್ರೀಕೃಷ್ಣ

b)

ಗದಗಿನ ವೀರನಾರಾಯಣ

c)

ಹನುಮಂತ

d)

ಶ್ರೀರಾಮ

20.

ಕುಂತಿಯ ನಾಲ್ಕನೆಯ ಮಂತ್ರದಲ್ಲಿ ಜನಿಸಿದವನು

a)

ಭೀಮ

b)

ಅರ್ಜುನ

c)

ಕರ್ಣ

d)

ಧರ್ಮರಾಜ

21.

ಹಸಿರು ಪದ್ಯದ ಆಕರ ಗ್ರಂಥ

a)

ನೆನಪಿನ ದೋಣಿಯಲ್ಲಿ

b)

ಯಮನ ಸೋಲು

c)

ಪಕ್ಷಿಕಾಶಿ

d)

ಕೊಳಲು

22.

ಹೊಸ ಹೂವಿನ ಕಂಪು ಉಸಿರಾದರೆ. ಹಕ್ಕಿಯ........

a)

ಕೊರಲಿಂಪು ಹಸಿರು

b)

ರೆಕ್ಕೆ ಹಸಿರು

c)

ಗರಿ ಹಸಿರು

d)

ನೋಟ ಹಸಿರು

23.

ಭೀಷ್ಮಾಚಾರ್ಯರ ಮನಸ್ಸಿನ ಇಚ್ಛೆ ಇದಾಗಿತ್ತು

a)

ಮಹಾಭಾರತ ಯುದ್ಧ ನಡೆಸುವುದು

b)

ಪಾಂಡವರ ಕೌರವರ ಸಂಧಿ ಮಾಡಿಸುವುದು

c)

ಅರ್ಜುನನ ರಕ್ಷಣೆ

d)

ದುರ್ಯೋಧನನ ರಕ್ಷಣೆ

24.

ಎನ್ನ ಅಣುಗದಮ್ಮ ಎಂದು ದುರ್ಯೋಧನ ಕರೆದದ್ದು

a)

ಭೀಮ

b)

ವಿಕರಣ

c)

ದುಶ್ಯಾಸನ

d)

ಅರ್ಜುನ

25.

ಅಶ್ವಮೇಧದ ಕುದುರೆಯು ವಾಲ್ಮೀಕಿಯ ಋಷಿಗಳ ಆಶ್ರಮವನ್ನು ಹೊಕ್ಕು

a)

ಓಡಾಡಿತು

b)

ಸುಮ್ಮನೆ ನಿಂತಿತು

c)

ಮರಳಿ ಬಂತು

d)

ಹಸಿರಾದ ಹುಲ್ಲನ್ನು ನಾಶ ಮಾಡಿತು

26.

ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಲು ಪಾರ್ವರ ಮಕ್ಕಳು ಹೆದರಿದರೆ ಇವರ ಮಗನು ಹೆದರಲಿಲ್ಲ

a)

ಕೌಶಲ್ಯ

b)

ಜಾನಕಿ

c)

ಸುಮಿತ್ರ

d)

ಕೈಕೆ

27.

ವಿವೇಕಾನಂದರೆಂದರೆ

a)

ಹೋರಾಟಗಾರರು

b)

ದೇಶಭಕ್ತರು

c)

ಸಾಮಾಜಿಕ ಕಳಕಳಿ ಉಳ್ಳವರು

d)

ಸಮಾಜಿಕ ಸಂಕಟ, ಸಿಟ್ಟು, ಸ್ಪಷ್ಟತೆಯ ರೂಪಕ

28.

ವಸಂತನು ಮರಗಿದ್ದು

a)

ಬಡವರನ್ನು ನೋಡಿ

b)

ಹರಿದ ಚಿಂದಿ ಬಟ್ಟೆಗಳನ್ನು ನೋಡಿ

c)

ತೂತು ಬಿದ್ದ ಸೀರೆಯನ್ನು ನೋಡಿ

d)

ಬಡ ಕಾರ್ಮಿಕರನ್ನು ನೋಡಿ

29.

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದದ್ದು

a)

1917

b)

1918

c)

1919

d)

1920

30.

ಒಗಟುಗಳಿಗೆ ಹೀಗೂ ಕರೆಯುವರು

a)

ವಚನ

b)

ಮಾತು

c)

ನೋಡಿ

d)

ಬೆಡಗು

31.

ಅಷ್ಟೈಶ್ವರ್ಯ -. ಈ ಪದದ ಸಂಧಿ

a)

ಗುಣಸಂಧಿ

b)

ಯಣ್ ಸಂಧಿ

c)

ವೃದ್ಧಿ ಸಂಧಿ

d)

ಸವರ್ಣದೀರ್ಘ ಸಂಧಿ

32.

ಈ ಕೆಳಗಿನವುಗಳಲ್ಲಿ ದ್ವಂದ್ವ ಸಮಾಸಕ್ಕೆ ಉದಾಹರಣೆಯಾದ ಪದ

a)

ರಾಮಲಕ್ಷ್ಮಣರು

b)

ಹಿಂದಲೆ

c)

ಮುಕ್ಕಣ್ಣು

d)

ಆ ಕಲ್ಲು

33.

ತದ್ದಿತಾಂತ ಅವ್ಯಯಕ್ಕೆ ಉದಾಹರಣೆಯಾದ ಪದ

a)

ಬಳೆಗಾರ

b)

ರಾಮನಿಗಿಂತ

c)

ಸಿರಿತನ

d)

ಕನ್ನಡಿಗ

34.

ಷಷ್ಠಿ _ ವಿಭಕ್ತಿಯ ಕಾರಕ

a)

ಅಧಿಕರಣ

b)

ಅಪಾದಾನ

c)

ಸಂಪ್ರದಾನ

d)

ಸಂಬಂಧ

35.

ಒಂದು ಅಥವಾ ಎರಡು ವ್ಯಂಜನಾಕ್ಷರಗಳು ಪದ್ಯದ ಸಾಲುಗಳಲ್ಲಿ ಮತ್ತೆ ಮತ್ತೆ ಬರುವುದು

a)

ಛೇಕಾನು ಪ್ರಾಸ

b)

ಯಮಕ

c)

ವೃತ್ತ್ಯಾನ ಪ್ರಾಸ

d)

ಚಿತ್ರಕವಿತ್ವ

36.

ಭೀಮ_ದುರ್ಯೋಧನರು ಮದಗಜಗಳಂತೆ ಹೋರಾಡಿದರು._ ಈ ವಾಕ್ಯದಲ್ಲಿರುವ ಉಪಮಾನ ಪದ

a)

ಮದಗಜ

b)

ಭೀಮ ದುರ್ಯೋಧನರು

c)

ಹೋರಾಡುವುದು

d)

ಅಂತೆ

37.

ಬರೆಯಲಿ- ಈ ಕ್ರಿಯಾಪದದ ರೂಪ

a)

ನಿಷೇದಾರ್ಥಕ

b)

ವಿದ್ಯಾರ್ಥಕ

c)

ಸಂಭವನಾರ್ಥಕ

d)

ಮೇಲಿನ ಯಾವುದೂ ಅಲ್ಲ

38.

ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವಾಗ ಬಳಸುವ ಸಂಬೋಧನೆ

a)

ಗಣ್ಯರೇ

b)

ಮಾನ್ಯರೇ

c)

ಗೌರವಾನ್ವಿತರೇ

d)

ಪೂಜ್ಯರೇ

39.

ವಾಗ್ದೇವಿ_ ಈ ಸಂದಿಗೆ ಉದಾಹರಣೆಯಾಗಿದೆ

a)

ಜಸ್ತ್ವ ಸಂಧಿ

b)

ಗುಣಸಂಧಿ

c)

ವೃದ್ಧಿ ಸಂಧಿ

d)

ಅನುನಾಸಿಕ ಸಂಧಿ

40.

ಆತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆಯಾದ ಪದ

a)

ಅವರು

b)

ತಾವು

c)

ನನಗೋಸ್ಕರ

d)

ನಾನು