wayground logo

Free Printable Worksheets

NEW

Font size

S
M
L
XL
Worksheets

ಒಗಟು ಮತ್ತು ಗಾದೆಮಾತುಗಳ ಕುರಿತು ರಸಪ್ರಶ್ನೆ

Total questions: 40

Worksheet time: 20mins

Name
Class
Date
1.

ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡ - ಗಾದೆಯ ಅರ್ಥ

a)

ಅವಕಾಶವನ್ನು ಕೈಚೆಲ್ಲು

b)

ಅವಸರದ ಸದುಪಯೋಗ

c)

ಅವಕಾಶವನ್ನು ಸೃಷ್ಟಿಸಿಕೊ

d)

ಅವಕಾಶ ಮಾಡಿಕೋ

2.

ಬೆರಳು ತೋರಿಸಿದರೆ ಹಸ್ತ ನುಂಗಿದನಂತೆ- ಈ ಗಾದೆಯ ಅರ್ಥ

a)

ಮೋಡಿಗಾರ

b)

ಚತುರ

c)

ತಿಳಿಗೇಡಿ

d)

ಬಕಾಸುರ

3.

ಸಾವಿರ ಸುಳ್ಳು ಹೇಳಿ ಒಂದು_______________ ಮಾಡಿಸು.

a)

ಕೆಲಸ

b)

ಚಿನ್ನ

c)

ಮದುವೆ

d)

ಊಟ

4.

ಹಾವೂ ಸಾಯಬೇಕು ; ____________________.

a)

ನಾಯಿನೂ ಸಾಯಬೇಕು

b)

ಕೋಲೂ ಮರಿಯಬೇಕು

c)

ಕೋಲೂ ಮುರಿಯಬಾರದು

d)

ನಾಯಿನೂ ಸಾಯಬಾರದು

5.

ಇವುಗಳಲ್ಲಿ ಯಾವುದು ಗಾದೆಮಾತು ಅಲ್ಲ

a)

ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು

b)

ಹೊಟ್ಟೆಗೆ ಹಿಟ್ಟಿಲ್ಲ; ಜುಟ್ಟಿಗೆ ಮಲ್ಲಿಗೆ ಹೂವು

c)

ಅತ್ತೆ ಕಾಲು ಕಾರ್ಯ ವಾಸಿ

d)

ಮನೆಗೆ ಬಂದು ಮಾತಾಡಬೇಡ

6.

ಕಜ್ಜಿ ಹೋದರೂ ಕಡಿತ ಹೋಗಲಿಲ್ಲ - ಗಾದೆಯ ಅರ್ಥ ನೀಡುವ ಮತ್ತೊಂದು ಗಾದೆ ಇದು

a)

ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು

b)

ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ

c)

ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪೇ

d)

ಎಲ್ಲಾರ ಮನೆ ದೋಸೆನೂ ತೂತೆ

7.

ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು______________.

a)

ಗಡಿಗೆಗೆ ಬಾಯಿ ಹಾಕಿದರಂತೆ

b)

ಊರೆಲ್ಲ ತುಪ್ಪಕ್ಕೆ ಅಲೆದಾಡಿದರಂತೆ

c)

ಚೆನ್ನಾಗಿ ತಿಂದರಂತೆ

d)

ಮನೆಯಲ್ಲಾ ಹುಡುಕಿದರಂತೆ

8.

ತಮ್ಮ ಮನೇಲಿ ಹೆಗ್ಗಣ ಸತ್ತಿದ್ದರೂ ಬೇರೆ ಮನೆಯ___________ ಕಡೆ ಬೆಟ್ಟು ಮಾಡಿದ ಹಾಗೆ.

a)

ದೊಡ್ಡ ಹೆಗ್ಗಣದ

b)

ಸತ್ತ ಇಲಿಯ

c)

ಸತ್ತ ನೊಣದ

d)

ಸತ್ತ ಹೆಗ್ಗಣದ

9.

ಎಂಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ - ಗಾದೆಯ ಅರ್ಥವೇನು

a)

ಉದಾರಿ

b)

ಜಿಪುಣ

c)

ಪಕ್ಷಿ ಪ್ರೇಮಿ

d)

ಧನಿಕ

10.

ತುಂಬಿದ ಕೊಡ ತುಳುಕುವುದಿಲ್ಲ - ಗಾದೆಯ ಮಹತ್ವ

a)

ಜ್ಞಾನವಂತನಾದರೂ ಅಜ್ಞಾನಿ

b)

ಜ್ಞಾನಿಯಾದರೂ ಬುದ್ಧಿವಂತ

c)

ಜ್ಞಾನವಂತನಾದರೂ ದುರ್ಗುಣಿ

d)

ಜ್ಞಾನವಂತನಾದರೂ ನಿರಂಹಕಾರಿ

11.

ದೇವರು ವರ ಕೊಟ್ಟರೂ ಪೂಜಾರಿ ವರ ಕೊಡ - ಗಾದೆಯ ಅರ್ಥ

a)

ಅರ್ಹತೆಯಿದ್ದರೂ ದಕ್ಕದಿರುವುದು

b)

ಅರ್ಹತೆಯಿದ್ದರೂ ದಕ್ಕುವುದು

c)

ದೇವರಿಗೆ ಇಷ್ಟ ಪೂಜಾರಿಗೆ ಕಷ್ಟ

d)

ಮಧ್ಯವರ್ತಿಗಳ ಹಾವಳಿ

12.

ಕುಂಬಾರನಿಗೆ ವರುಷ; ದೊಣ್ಣೆಗೆ ನಿಮಿಷ - ಗಾದೆಯ ಮಹತ್ವ

a)

ಮಡಿಕೆಯ ಗುಣಮಟ್ಟ

b)

ಶ್ರಮದ ಮಹಿಮೆ

c)

ದೊಣ್ಣೆಯ ಅನುಕೂಲ

d)

ಕಾಯಕದ ಗುಣ

13.

ಉಪ್ಪು ತಿಂದಮೇಲೆ ನೀರು ಕುಡಿಯಲೇಬೇಕು- ಗಾದೆಯ ಅರ್ಥಕ್ಕೆ ಮತ್ತೊಂದು ಉದಾಹರಣೆ

a)

ಮಾಡಿದ್ದುಣ್ಣೋ ಮಹಾರಾಯ

b)

ಬೆಳ್ಳಗಿರುವುದೆಲ್ಲಾ ಹಾಲಲ್ಲ

c)

ಕುಡಿಯೋ ನೀರಿನಲ್ಲಿ ಕೈಯಾಡಿಸಿದ ಹಾಗೆ

d)

ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ

14.

ಗುಂಪಿಗೆ ಸೇರದ ಗಾದೆಯನ್ನು ಆರಿಸಿ

a)

ಬಸ್ ಹೋದಮೇಲೆ ತೆಗೆದು ತೆಗೆದುಕೊಂಡ ಹಾಗೆ

b)

ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವೇನು

c)

ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಂಡಂತೆ

d)

ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ

15.

ಕೂತು ತಿನ್ನುವವನಿಗೆ ಕುಡಿಕೆ ಹೊನ್ನು ಸಾಲದು- ಗಾದೆಯ ಮಹತ್ವ

a)

ಕಾಯಕವೇ ಪರಮಸತ್ಯ

b)

ಕೂತರೆ ಬಡತನ ಬರುತ್ತೆ

c)

ಕೂತು ತಿನ್ನಬಾರದು

d)

ಕುಳಿತವರು ಉದ್ಧಾರವಾಗುವುದಿಲ್ಲ

16.

ಕಪ್ಪೆ ನ __________ ಹಾಕಿದ ಹಾಗೆ

a)

ಕೊಳದಲ್ಲಿ

b)

ಬ್ಯಾಗಲ್ಲಿ

c)

ತಕ್ಕಡಿಯಲ್ಲಿ

d)

ನೀರಿನಲ್ಲಿ

17.

ಬೆಟ್ಟ ಅಗೆದು_____________ ಹಿಡಿದ ಹಾಗೆ.

a)

ಚಿನ್ನ

b)

ಇಲಿ

c)

ಹುಲಿ

d)

ಚಿರತೆ

18.

ಬರಗಾಲದಲ್ಲಿ______________ .

a)

ಚನ್ನಾಗಿ ಉಂಡ

b)

ಬಡತನ

c)

ಅಧಿಕ ಮಾಸ

d)

ಚಿನ್ನ

19.

ಮನೆ, ಮನೆಗೆರಡು ಬಾಗಿಲು, ಬಾಗಿಲ ಮುಂದೆ ಮುಚ್ಚಿದರೆ ಹಾನಿ - ಇದು

a)

ಗಡಿಯಾರ

b)

ಮೂಗು, ಬಾಯಿ

c)

ರಾತ್ರಿ

d)

ಸೂರ್ಯ, ಚಂದ್ರ

20.

ಗೂಡಿನಲ್ಲಿರುವ ಪಕ್ಷಿ ನಾಡೆಲ್ಲ ನೋಡುತ್ತದೆ

a)

ಕಣ್ಣು

b)

ಮಗು

c)

ನಾಯಿಮರಿ

d)

ದೂರದರ್ಶನ

21.

" ಒಂದು ಹಸ್ತಕ್ಕೆ ನೂರೆಂಟು ಬೆರಳು "- ನಾನ್ಯಾರು

a)

ಈರುಳ್ಳಿ

b)

ಬಾಳೆಗೊನೆ

c)

ಕಸದ ಪೊರಕೆ

d)

ಮೂಲಂಗಿ

22.

ಕಲ್ಲಿಲ್ಲದ ಬೆಟ್ಟ; ಮರಳಿಲ್ಲದ ಮರುಭೂಮಿ ; ನಾನ್ಯಾರು

a)

ಕಾಡು

b)

ಹಿಮಾಲಯ

c)

ಕರಾವಳಿ

d)

ಭೂಪಟ

23.

ಕಾಸಿನ ಕುದುರೆ ಬಾಲದ ಲಗಾಮು - ನಾನ್ಯಾರು

a)

ಸೂಜಿದಾರ

b)

ಮೂಲಂಗಿ

c)

ನಾಯಿಮರಿ

d)

ಗಜ್ಜರಿ

24.

ಸುತ್ತಮುತ್ತ ಸುಣ್ಣದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ - ಇದು

a)

ಮಲ್ಲಿಗೆ

b)

ಬಣ್ಣದ ಮನೆ

c)

ಚಂಡು

d)

ಮೊಟ್ಟೆ

25.

ಕೂಗಿದರೆ ರಾವಣ, ಹಾರಿದರೆ ಹನುಮಂತ, ಕೂತರೆ ಮುನಿ- ನಾನ್ಯಾರು

a)

ಸಿಂಹ

b)

ಕಪ್ಪೆ

c)

ಕೋತಿ

d)

ಕುದುರೆ

26.

ಹೆಣ್ಣಿಗಾಗಿ ರಾವಣ ಕೆಟ್ಟ , ಮಣ್ಣಿಗಾಗಿ _______ ಕೆಟ್ಟ.

a)

ರಾಮ

b)

ಜಯದ್ರಥ

c)

ಕೌರವ

d)

ಶಕುನಿ

27.

ಅಪಾಯ ಬಂದಾಗ _____________ ಇರಬೇಕು

a)

ಉಪಾಯ

b)

ಸಹಾಯ

c)

ಸಂಕಟ

d)

ಸಡಗರ

28.

ಅನ್ನ ದೇವರ ಮುಂದೆ ಇನ್ನೂ _________ ಉಂಟೆ.

a)

ಮನುಷ್ಯರು

b)

ಮಾನವರು

c)

ದೇವರು

d)

ರಕ್ಷಕರು

29.

ಮಂಗಳಾರತಿ ತಗೊಂಡ್ರೆ ಉಷ್ಣ; ತೀರ್ಥ ತಗೊಂಡ್ರೆ___________.

a)

ಆರತಿ

b)

ಪ್ರಸಾದ

c)

ಊಟ

d)

ಶೀತ

30.

ಬಡವರ ಮನೆ ಊಟ ಚೆಂದ; ಶ್ರೀಮಂತರ ಮನೆಯ ____________ಚೆಂದ.

a)

ಆಟ

b)

ಕೂಟ

c)

ಹಾಡು

d)

ನೋಟ

31.

" ನೋಡಿದರೆ ಕಲ್ಲು, ನೀರು ಹಾಕಿದರೆ ಮಣ್ಣು "- ನಾನ್ಯಾರು

a)

ಮೊಟ್ಟೆ

b)

ಸುಣ್ಣ

c)

ಉಪ್ಪು

d)

ಮೂಲಂಗಿ

32.

" ಹತ್ತಾರು ಮಕ್ಕಳ ತಂದೆ, ಅದಕ್ಕೆ ತಲೆಯ ಮೇಲೆ ಜುಟ್ಟು "- ನಾನ್ಯಾರು

a)

ಗಿಳಿ

b)

ಕೋಳಿ

c)

ಹುಂಜ

d)

ನವಿಲು

33.

" ಬಿಳಿ ಸಾಮ್ರಾಜ್ಯದಲ್ಲಿ ಕಪ್ಪು ಪ್ರಜೆಗಳು "- ನಾನ್ಯಾರು

a)

ಸೀತಾಫಲ

b)

ಕಲ್ಲಂಗಡಿ

c)

ಮಾವು

d)

ಆನೆ

34.

" ಕಾಡಿನಲ್ಲಿ ಹುಟ್ಟುವುದು, ಕಾಡಿನಲ್ಲಿ ಬೆಳೆಯುವುದು, ಕಡಿದಲ್ಲಿ ಕಂಪು ಸೂಸುವೆನು "- ನಾನ್ಯಾರು

a)

ಮಲ್ಲಿಗೆ

b)

ಕನ್ನಡ

c)

ಶ್ರೀಗಂಧ

d)

ಕಸ್ತೂರಿ

35.

" ಒಂದು ಕಾಲಿನ ಪಕ್ಷಿಗೆ ಒಂಬತ್ತು ರೆಕ್ಕೆ, ಒಂದೇ ಕಾಲಲ್ಲಿ ನಿಂತು ನೂರಾರು ಮೊಟ್ಟೆ ಇಡುತ್ತೇನೆ "- ನಾನ್ಯಾರು

a)

ಆಕಾಶ

b)

ಜೋಳದ ದಂಟು

c)

ಬೆಳ್ಳೂಳ್ಳಿ

d)

ಮೂಲಂಗಿ

36.

" ಬಾ ಅಂದರೆ ಬರೋಲ್ಲ, ಹೋಗು ಅಂದರೆ ಹೋಗೋಲ್ಲ "- ನಾನ್ಯಾರು

a)

ಆಕಾಶ

b)

ಕರೇಂಟು

c)

ನಾಲಿಗೆ

d)

ಮಳೆ

37.

" ಹಸಿರು ಮೈ, ಹಳದಿ ಮೈ, ಪೇಡೇಲಿ ಕುಳಿತು ಎಲ್ಲರನ್ನು ಕರೆಯುತ್ತೆ..... "- ನಾನ್ಯಾರು

a)

ಆಕಾಶ

b)

ಮಾವು

c)

ದಾಳಿಂಬೆ

d)

ಮಳೆ

38.

" ಕಾಂತಾಮಣಿ ಎಂಬ ಪಕ್ಷಿ, ಚಿಂತಾಮಣಿ ಎಂಬ ಕೆರೆ, ಕೆರೆಯಲ್ಲಿ ನೀರಿಲ್ದೆ ಹೋದ್ರೆ ಪಕ್ಷಿಗೆ ಮರಣ "- ನಾನ್ಯಾರು

a)

ಆಕಾಶ

b)

ನೀರು

c)

ದೀಪ

d)

ಮಳೆ

39.

" ನೀಲಿ ಕೆರೆಯಲಿ ಬಿಳಿ ಮೀನು "- ನಾನ್ಯಾರು

a)

ಆಕಾಶ

b)

ನಕ್ಷತ್ರ

c)

ದೀಪ

d)

ಮಳೆ

40.

ಭಂಗಿದೇವರಿಗೆ ಹೆಂಡುಗುಡುಕ__________.

a)

ಭಕ್ತ

b)

ಪೂಜಾರಿ

c)

ಪ್ರಸಾದ

d)

ತೀರ್ಥ