wayground logo

Free Printable Worksheets

NEW

Font size

S
M
L
XL
Worksheets

ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು

Total questions: 20

Worksheet time: 10mins

Name
Class
Date
1.

ಕಮಟುವಿಕೆಯು ಇದಕ್ಕೆ ಉದಾಹರಣೆಯಾಗಿದೆ.

a)

ಉತ್ಕರ್ಷಣೆ ಕ್ರಿಯೆ

b)

ಅಪಕರ್ಷಣೆ ಕ್ರಿಯೆ

c)

ನಶಿಸುವಿಕೆ

d)

ರಾಸಾಯನಿಕ ಸ್ಥಾನಪಲ್ಲಟ

2.

ಉತ್ಕರ್ಷಣೆಯನ್ನು ತಡೆಗಟ್ಟಲು ಚಿಪ್ಸ ತಯಾರಕರು ಚಿಪ್ಸ ಪೊಟ್ಟಣದಲ್ಲಿ ಹಾಕುವ ಅನಿಲ ಯಾವುದು?

a)

ಜಲಜನಕ

b)

ಆಮ್ಲಜನಕ

c)

ನೈಟ್ರೋಜನ್

d)

ಹೀಲಿಯಂ

3.

ಬಿಳಿ ಬಣ್ಣ ಬಳಿಯಲು X ವಸ್ತುವಿನ ದ್ರಾವಣ ಪಡೆಯಲಾಗುತ್ತದೆ. X ವಸ್ತು ಯಾವುದು?

a)

ಮೆಗ್ನೀಸಿಯಂ ಆಕ್ಸೈಡ್

b)

ಕ್ಯಾಲ್ಸಿಯಂ ಆಕ್ಸೈಡ್

c)

ಸೋಡಿಯಂ ಹೈಡ್ರಾಕ್ಸೈಡ್

d)

ಮೆಗ್ನೀಸಿಯಂ ಆಕ್ಸೈಡ್

4.

ಈ ಕೆಳಗಿನವುಗಳಲ್ಲಿ ಸರಿದೂಗಿಸಲ್ಪಟ್ಟ ಸಮೀಕರಣ

a)

2Mg + O2 -------- MgO

b)

Mg + 2O2 ---------- 2MgO

c)

Mg + O2 ---------- 2MgO

d)

2Mg + O2 ---------- 2MgO

5.

ನೀರಿನೊಂದಿಗೆ ವೇಗವಾಗಿ ವರ್ತಿಸಿ ದೊಡ್ಡ ಪ್ರಮಾಣದಲ್ಲಿ ಉಷ್ಣವನ್ನು ಉತ್ಪತ್ತಿ ಮಾಡುವ ಸಂಯುಕ್ತ

a)

PbO

b)

CaO

c)

MgO

d)

Fe2O3

6.

ಸೀಸದ ನೈಟ್ರೇಟನ್ನು ಕಾಯಿಸಿದಾಗ ಬಿಡುಗಡೆಯಾಗುವ ದಟ್ಟ ಕಂದು ಬಣ್ಣದ ಅನಿಲ ಯಾವುದು?

a)

ಆಕ್ಸಿಜನ್

b)

ನೈಟ್ರೋಜನ್

c)

ಸಲ್ಫರ್ ಡೈ ಆಕ್ಸೈಡ್

d)

ನೈಟ್ರೋಜನ್ ಡೈ ಆಕ್ಸೈಡ್

7.

AX + BY -------- AY+BX

ಇದು ಯಾವ ರಾಸಾಯನಿಕ ಕ್ರಿಯೆ

a)

ರಾಸಾಯನಿಕ ಸಂಯೋಗ

b)

ರಾಸಾಯನಿಕ ವಿಭಜನೆ

c)

ರಾಸಾಯನಿಕ ಸ್ಥಾನಪಲ್ಲಟ

d)

ರಾಸಾಯನಿಕ ದ್ವಿ ಸ್ಥಾನಪಲ್ಲಟ

8.

ಈ ಕೆಳಗಿನ ರಾಸಾಯನಿಕ ಕ್ರಿಯೆಯಲ್ಲಿ ಅಪಕರ್ಷಣಾಕಾರಿಯಾಗಿ ಬಳಸಿರುವ ವಸ್ತು ಯಾವುದು?

ZnO + C ---------Zn + CO

a)

Zn

b)

C

c)

CO

d)

ZnO

9.

ರಾಸಾಯನಿಕ ಕ್ರಿಯೆಯಲ್ಲಿ ಇಲೆಕ್ಟ್ರಾನ್ ಕಳೆದುಕೊಳ್ಳುವ ಕ್ರಿಯೆ

a)

ಅಪಕರ್ಷಣೆ

b)

ಉತ್ಕರ್ಷಣೆ

c)

ಅಂತರುಷ್ಣಕ

d)

ಬಹೀರುಷ್ಣಕ

10.

ನಶಿಸುವಿಕೆಯನ್ನು ತಡೆಗಟ್ಟುವ ಕ್ರಮ

a)

ಲೋಹಗಳಿಗೆ ಬಣ್ಣ ಬಳಿಯುವುದು

b)

ಗ್ರೀಸ್ ಅಥವಾ ಡಣ್ಣೆ ಹಚ್ಚುವುದು

c)

ಅನೋಡಿಕರಣ

d)

ಮೇಲಿನ ಎಲ್ಲವೂ

11.

ಲೋಹವು ತನ್ನ ಸುತ್ತಲಿನ ತೇವಾಂಶ,ಆಮ್ಲಗಳು ಇತ್ಯಾದಿಗಳಿಂದ ಆಕ್ರಮಿಸಲ್ಪಡುವ ಕ್ರಿಯೆ

a)

ಕಮಟುವಿಕೆ

b)

ನಶಿಸುವಿಕೆ

c)

ಅಂತರುಷ್ಣಕ ಕ್ರಿಯೆ

d)

ವಿಭಜನೆ ಕ್ರಿಯೆ

12.

ಕಮಟುವಿಕೆಯಿಂದಾಗುವ ಅನಾನುಕೂಲ ಯಾವುದು?

a)

ಆಹಾರ ಪದಾರ್ಥದ ರುಚಿ ಬದಲಾಗುತ್ತದೆ

b)

ಆಹಾರ ಪದಾರ್ಥದ ವಾಸನೆ ಬದಲಾಗುತ್ತದೆ

c)

ಆಹಾರ ಪದಾರ್ಥಗಳ ಸಂಗ್ರಹಯೋಗ್ಯ ಕಾಲ ಬದಲಾಗುತ್ತದೆ

d)

ಮೇಲಿನ ಎಲ್ಲವೂ

13.

ಈ ಕೆಳಗಿನ ರಾಸಾಯನಿಕ ಕ್ರಿಯೆಗೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ?

3Fe(s) + 4H2O(g) -------Fe3O4 (s) +4 H2(g)

a)

ಕಬ್ಬಿಣವು ಉತ್ಕರ್ಷಣೆ ಹೊಂದಿದೆ

b)

ನೀರು ಉತ್ಕರ್ಷಣೆ ಹೊಂದಿದೆ

c)

ಕಬ್ಬಿಣವು ಸ್ಪಟಕೀಕರಣಗೊಂಡಿದೆ

d)

ಇದು ರಾಸಾಯನಿಕ ಸಂಯೋಗ ಕ್ರಿಯೆ

14.

ಅಮ್ರತಶಿಲೆ(ಕ್ಯಾಲ್ಸಿಯಂ ಕಾರ್ಬೋನೇಟ್ ) ನ ರಾಸಾಯನಿಕ ಸೂತ್ರ

a)

Can(OH)2

b)

CaCl2

c)

CaCo3

d)

CaO

15.

ಆಕ್ಸೈಡ್ ಅದಿರುಗಳಿಂದ ಲೋಹಗಳನ್ನು ಪ್ರತ್ಯೇಕಿಸಲು ಕೈಗೊಳ್ಳುವ ರಾಸಾಯನಿಕ ಕ್ರಿಯೆ ಯಾವುದು?

a)

ಉತ್ಕರ್ಷಣ ಕ್ರಿಯೆ

b)

ಅಪಕರ್ಷಣ ಕ್ರಿಯೆ

c)

ವಿಭಜನ ಕ್ರಿಯೆ

d)

ಸ್ಥಾನಪಲ್ಲಟ ಕ್ರಿಯೆ

16.

ಈ ಕೆಳಗಿನ ಯಾವ ಕ್ರಿಯೆಯು ಬಹೀರುಷ್ಣಕ ಕ್ರಿಯೆಯಾಗಿದೆ?

a)

ಕಬ್ಬಿಣದ ಸಲ್ಫೇಟನ ವಿಭಜನೆ

b)

ನೀರಿನೊಂದಿಗೆ ಅರಳಿದ ಸುಣ್ಣದ ವರ್ತನೆ

c)

ನೀರಿನ ವಿದ್ಯುದ್ವಿಭಜನೆ

d)

ನೀರಿನಲ್ಲಿ ಸೋಡಿಯಂ ಕ್ಲೋರೈಡ್ ನ ವಿಯೋಜನೆ

17.

ಸ್ಥಾನಪಲ್ಲಟ ಕ್ರಿಯೆಗೆ ಉದಾಹರಣೆ

a)

C + O2 ------CO2

b)

CH4 + 2O2---------CO2 + 2H2O

c)

Na2SO4 +BaCl2 -------- BaSO4 + 2NaCl

d)

Pb + CuCl2 ----------- PbCl2 + Cu

18.

ಬೆಳ್ಳಿಯ ಕ್ಲೋರೈಡನ್ನು ಗಾಜಿನ ಶೀಸೆಗಳಲ್ಲಿ ಸಂಗ್ರಹಿಸಿಡಲು ಕಾರಣವೇನು?

a)

ಗಾಳಿಯೊಂದಿಗೆ ವರ್ತಿಸುತ್ತದೆ

b)

ನೀರಿನೊಂದಿಗೆ ವರ್ತಿಸುತ್ತದೆ

c)

ಬೆಳಕಿನೊಂದಿಗೆ ವರ್ತಿಸುತ್ತವೆ

d)

ನೀರಾವಿಯೊಂದಿಗೆ ವರ್ತಿಸುತ್ತದೆ

19.

ಕೊಬ್ಬು ಮತ್ತು ಎಣ್ಣೆ ಪದಾರ್ಥಗಳು ಉತ್ಕರ್ಷಣೆಗೊಂಡು ಅವುಗಳ ವಾಸನೆ ಮತ್ತು ರುಚಿ ಬದಲಾಗುವ ಕ್ರಿಯೆ

a)

ನಶಿಸುವಿಕೆ

b)

ಕಮಟುವಿಕೆ

c)

ಸಂಯೋಗ ಕ್ರಿಯೆ

d)

ವಿಭಜನ ಕ್ರಿಯೆ

20.

ಎರಡು ಅಥವಾ ಹೆಚ್ಚು ಪ್ರತಿವರ್ತಕಗಳು ವರ್ತಿಸಿ ಒಂದೇ ಒಂದು ಉತ್ಪನ್ನ ಉಂಟುಮಾಡುವ ಕ್ರಿಯೆಗೆ ಏನೆಂದು ಕರೆಯುವರು?

a)

ಸಂಯೋಗ ಕ್ರಿಯೆ

b)

ವಿಭಜನ ಕ್ರಿಯೆ

c)

ಸ್ಥಾನಪಲ್ಲಟ ಕ್ರಿಯೆ

d)

ದ್ವಿಸ್ಥಾನಪಲ್ಲಟ ಕ್ರಿಯೆ