Wayground logo

Free Printable Worksheets

Font size

S
M
L
XL
Worksheets

ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು

Total questions: 20

Worksheet time: 10mins

Name
Class
Date
1.

ಆಮ್ಲಗಳು ಯಾವ ರುಚಿಯನ್ನು ಹೊಂದಿರುತ್ತವೆ?

a)

ಸಿಹಿ

b)

ಕಹಿ

c)

ಹುಳಿ

d)

ಉಪ್ಪು

2.

ಒಂದು ದ್ರಾವಣ ಕೆಂಪು ಲಿಟ್ಮಸ್ ಅನ್ನು ನೀಲಿ ಬಣ್ಣಕ್ಕೆ ಬದಲಾಯಿಸಿದರೆ ಅದರ PH ಮೌಲ್ಯ

a)

1

b)

4

c)

5

d)

10

3.

ಮಳೆ ನೀರಿನ PH -------- ಕ್ಕಿಂತ ಕಡಿಮೆಯಾದಾಗ ಅದನ್ನು ಆಮ್ಲಮಳೆ ಎನ್ನುವರು.

a)

5.6

b)

7.4

c)

5.7

d)

6.7

4.

ಕ್ಲೋರ್ - ಅಲ್ಕಲಿ ಪ್ರಕ್ರಿಯೆಯಿಂದ ಉತ್ಪತ್ತಿಯಾದ ಕ್ಲೋರಿನ್ ನ ಒಂದು ಉಪಯೋಗ

a)

ಕ್ರತಕ ಬೆಣ್ಣೆ ತಯಾರಿಕೆ

b)

ಲೋಹಗಳ ಜಿಡ್ಡು ನಿವಾರಣೆ

c)

ಕಾಗದ ತಯಾರಿಕೆ

d)

ನೀರಿನ ಶುದ್ಧೀಕರಣ

5.

CaOCl2 ಸಂಯುಕ್ತದ ಸಾಮಾನ್ಯ ಹೆಸರೇನು?

a)

ಅರಳಿದ ಸುಣ್ಣ

b)

ಸುಟ್ಟ ಸುಣ್ಣ

c)

ಚೆಲುವೆಪುಡಿ

d)

ಅಡುಗೆ ಉಪ್ಪು

6.

ಇವುಗಳಲ್ಲಿ ಪ್ರತ್ಯಾಮ್ಲ ಯಾವುದು?

a)

NaOH

b)

HCl

c)

H2SO4

d)

HNO3

7.

ನೀರಿನಲ್ಲಿ ವಲೀನವಾಗುವ ಪ್ರತ್ಯಾಮ್ಲಗಳನ್ನು ------ ಎನ್ನುವರು.

a)

ಉಭಯವರ್ತಿ ಆಕ್ಸೈಡಗಳು

b)

ಲವಣಗಳು

c)

ಅಯಾನುಗಳು

d)

ಕ್ಷಾರಗಳು

8.

ಬೆಂಕಿ ಆರಿಸುವ ಸೋಡಾ ಆ್ಯಸಿಡ್ ಉಪಕರಣಗಳಲ್ಲಿ ಉಪಯೋಗಿಸುವ ಲವಣ

a)

ಅಡುಗೆ ಸೋಡಾ

b)

ಚೆಲುವೆ ಪುಡಿ

c)

ವಾಷಿಂಗ್ ಸೋಡಾ

d)

ಪ್ಲಾಸ್ಟರ್ ಆಫ್ ಪ್ಯಾರಿಸ್

9.

ಅಜೀರ್ಣತೆಯ ಚಿಕಿತ್ಸೆಗೆ ಬಳಸುವ ಔಷಧ ಯಾವುದು?

a)

ಜೀವನಿರೋಧಕ

b)

ನೋವು ನಿವಾರಕ

c)

ಆಮ್ಲಶಾಮಕ

d)

ನಂಜು ನಿವಾರಕ

10.

ಹಲ್ಲಿನ ಸವೆತ ಬಾಯಿಯ PH ----- ಕ್ಕಿಂತ ಕಡಿಮೆಯಾದಾಗ ಪ್ರಾರಂಭವಾಗುತ್ತದೆ.

a)

11

b)

5.5

c)

5.6

d)

7

11.

ಕೆಳಗಿನ ಲವಣದಲ್ಲಿ ಸ್ಪಟಕೀಕರಣದ ನೀರನ್ನು ಹೊಂದಿರುವುದಿಲ್ಲ?

a)

ನೀಲಿ ವಿಟ್ರಿಯಾಲ್

b)

ಅಡುಗೆ ಸೋಡಾ

c)

ವಾಷಿಂಗ್ ಸೋಡಾ

d)

ಜಿಪ್ಸಂ

12.

ಈ ಕೆಳಗಿನವುಗಳಲ್ಲಿ ಯಾವುದು ಆಮ್ಲೀಯವಾಗಿದೆ?

a)

ನಿಂಬೆರಸ

b)

ಮಾನವನ ರಕ್ತ

c)

ನಿಂಬೆ ನೀರು

d)

ಅಂಟಾಸಿಡ್

13.

ಕೆಳಗಿನ ಸಂಯುಕ್ತಗಳಲ್ಲಿ ವಾಷಿಂಗ್ ಪೌಡರ್ ನ ಮುಖ್ಯ ಘಟಕ ಯಾವುದು?

a)

ಸೋಡಿಯಂ ಕ್ಲೋರೈಡ್

b)

ಸೋಡಿಯಂ ಕಾರ್ಬೋನೇಟ್

c)

ಸೋಡಿಯಂ ಬೈ ಕಾರ್ಬೋನೇಟ್

d)

ಸೋಡಿಯಂ ಹೈಡ್ರಾಕ್ಸೈಡ್

14.

ಎಲ್ಲಾ ಆಮ್ಲಗಳಲ್ಲಿರುವ ಸಾಮಾನ್ಯ ಧಾತು ಯಾವುದು?

a)

ಹೈಡ್ರೋಜನ್

b)

ಹೀಲಿಯಂ

c)

ಲಿಥಿಯಂ

d)

ಬೆರಿಲಿಯಂ

15.

ಮೊಸರಿನಲ್ಲಿರುವ ಆಮ್ಲ ಯಾವುದು?

a)

ಹೈಡ್ರೋಕ್ಲೋರಿಕ್ ಆಮ್ಲ

b)

ಸಲ್ಫ್ಯೂರಿಕ್ ಆಮ್ಲ

c)

ಲ್ಯಾಕ್ಟಿಕ್ ಆಮ್ಲ

d)

ಮೆಧನೋಯಿಕ್ ಆಮ್ಲ

16.

ಇವುಗಳಲ್ಲಿ ನೈಸರ್ಗಿಕ ಸೂಚಕ ಯಾವುದು?

a)

ಅರಿಷಿಣ

b)

ಲವಂಗ

c)

ಗುಲಾಬಿ ದಳಗಳು

d)

ಮೇಲಿನ ಎಲ್ಲವೂ

17.

ಇವುಗಳಲ್ಲಿ ಪ್ರಬಲ ಆಮ್ಲ ಯಾವುದು?

a)

ಸಿಟ್ರಿಕ್ ಆಮ್ಲ

b)

ಅಸಿಟಿಕ್ ಆಮ್ಲ

c)

ಹೈಡ್ರೋಕ್ಲೋರಿಕ್ ಆಮ್ಲ

d)

ಫಾರ್ಮಿಕ್ ಆಮ್ಲ

18.

ಕ್ಲೋರಿನ್ ನೊಂದಿಗೆ ವರ್ತಿಸಿದಾಗ ಚೆಲುವೆಪುಡಿ ಉತ್ಪತ್ತಿ ಮಾಡುವ ವಸ್ತು

a)

ಮ್ಯಾಂಗನೀಸ್ ಡೈಆಕ್ಸೈಡ್

b)

ಕಬ್ಬಿಣದ ಆಕ್ಸೈಡ್

c)

ಪಾದರಸದ ಸಲ್ಫೈಡ್

d)

ಕ್ಯಾಲ್ಸಿಯಂ ಹೈಡ್ರಾಕ್ಸೈಡ್

19.

ಗಡಸು ನೀರನ್ನು ಮೆದುಗೊಳಿಸಲು ಬಳಸುವ ಸೋಡಿಯಂ ಸಂಯುಕ್ತ ಯಾವುದು?

a)

ಅಡುಗೆ ಸೋಡಾ

b)

ವಾಷಿಂಗ್ ಸೋಡಾ

c)

ಪ್ಲಾಸ್ಟರ್ ಆಫ್ ಪ್ಯಾರಿಸ್

d)

ಚೆಲುವೆ ಪುಡಿ

20.

ಲೋಹದ ಜೊತೆಗೆ ಪ್ರತ್ಯಾಮ್ಲ ವರ್ತಿಸಿದಾಗ ಯಾವ ಅನಿಲ ಉತ್ಪತ್ತಿ ಯಾಗುತ್ತದೆ?

a)

ನೈಟ್ರೋಜನ್

b)

ಹೀಲಿಯಂ

c)

ಆಕ್ಸಿಜನ್

d)

ಹೈಡ್ರೋಜನ್