wayground logo

Free Printable Worksheets

Font size

S
M
L
XL
Worksheets

ಯುದ್ಧ - ಸಾರಾ ಅಬೂಬಕ್ಕರ್

Total questions: 20

Worksheet time: 20mins

Name
Class
Date
1.

ಯುದ್ಧ ಗದ್ಯ ಭಾಗವು ಸಾಹಿತ್ಯದ ಯಾವ ಪ್ರಕಾರಕ್ಕೆ ಸೇರಿದೆ?

a)

ಪ್ರವಾಸ ಸಾಹಿತ್ಯ

b)

ಕಾದಂಬರಿ

c)

ಸಣ್ಣಕಥೆ

d)

ಪ್ರಬಂಧ

2.

ಸಾರಾರ ಸ್ಥಳ ಯಾವುದು?

a)

ಶಿಕಾರಿಪುರ

b)

ದೇವನೂರು

c)

ಕಾಸರಗೋಡು

3.

ಅಬೂಬಕ್ಕರ್ ರವರ ಕಾಲವನ್ನು ಗುರುತಿಸಿ.

a)

ಕ್ರಿ.ಶ. ೧೯೩೬

b)

ಕ್ರಿ.ಶ. ೧೯೨೬

c)

ಕ್ರಿ.ಶ. ೧೮೯೬

d)

ಕ್ರಿ.ಶ. ೧೦೩೧

4.

ಅಬೂಬಕ್ಕರ್ ರವರಿಗೆ ಈ ಪ್ರಶಸ್ತಿ ಲಭಿಸಿದೆ?

a)

ಪಂಪ ಪ್ರಶಸ್ತಿ.

b)

ನೄಪತುಂಗ ಪ್ರಶಸ್ತಿ

c)

ಕೇಂದ್ರ ಸಾಹಿತ್ಯ ಅಕಾಡೆಮಿ

d)

ರಾಜ್ಯ ಪ್ರಶಸ್ತಿ

5.

ತಪ್ಪಾಗಿರುವುದನ್ನು ಗುರುತಿಸಿ.

a)

ರೋದನ = ಅಳುವಿಕೆ

b)

ಸಾಂತ್ವನ = ಸಮಾಧಾನಪಡಿಸು

c)

ಹತಾಶೆ = ನಿರಾಶೆ, ಆಶಾಭಂಗ

d)

ಸೂಲಗಿತ್ತಿ = ಸರದಿ

6.

" ಡಾಕ್ಟರ್ ರೇಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ. ಗ್ರೌಂಡಿನೊಡನೆ ಸಂಪರ್ಕ ಬೆಳೆಸಲು ಸಾಧ್ಯವಾಗುತ್ತಿಲ್ಲ. ಹೇಗಾದರೂ ಇಳಿಯೋಣವೆಂದರೆ ಈ ಕತ್ತಲೆಯಲ್ಲಿ ಏನೂ ಕಾಣಿಸ್ತಾ ಇಲ್ಲವಲ್ಲ" ಎಂದು ಯಾರು ಯಾರಿಗೆ ಹೇಳಿದರು?

a)

ರಾಹಿಲ್ - ಪೈಲೆಟ್ ಗೆ

b)

ಮುದುಕಿ ರಾಹಿಲನಿಗೆ

c)

ಪೈಲೆಟ್ ರಾಹಿಲನಿಗೆ

d)

ಸೈನಿಕರು ಮುದುಕಿಗೆ

7.

ರಾಹಿಲ್ ಮತ್ತಷ್ಟು ಭದ್ರವಾಗಿ ಹಿಡಿದುಕೊಂಡಿದ್ದೇನು?

a)

ಬಟ್ಟೆಗಳು

b)

ಔಷಧ ಮತ್ತು ಶಸ್ತ್ರಾ ಚಿಕಿತ್ಸಾ ಪೆಟ್ಟಿಗೆ

c)

ವಿಮಾನದ ಬಾಗಿಲು

d)

ಎದೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದನು.

8.

ರಾಹಿಲ್ ಮತ್ತಷ್ಟು ಭದ್ರವಾಗಿ ಹಿಡಿದುಕೊಂಡಿದ್ದೇನು?

a)

ಬಟ್ಟೆಗಳು

b)

ಔಷಧ ಮತ್ತು ಶಸ್ರ್ತಚಿಕಿತ್ಸಾ ಪೆಟ್ಟಿಗೆ

c)

ವಿಮಾನದ ಬಾಗಿಲು

d)

ಎದೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದನು.

9.

ರಾಹಿಲನಿಗೆ ಹೊಸರಕ್ತ ಸಂಚಾರವಾದಂತಾಗಿದ್ದು ಹೇಗೆ?

a)

ತಾನೂ ದೇಶಕ್ಕೆ ಬಂದೆನೆಂಬ ಸಂತಸದಿಂದ

b)

ಮಿಂಚಿನ ಬೆಳಕಿನಲ್ಲಿ ತೀರ ಕಣ್ಣಿಗೆ ಬಿದ್ದಾಗ

c)

ಮಳೆ ಬೀಳುತ್ತಿದ್ದರಿಂದ

d)

ಕತ್ತಲಾಗಿದ್ದರಿಂದ

10.

’ ಬ್ಲಾಕ್ ಔಟ್ ’ ನಿಯಮವೆಂದರೆ.

a)

ಗಡಿ ಪ್ರದೇಶದಲ್ಲಿ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳವ ನಿಯಮ.

b)

ಮಳೆಯಿಂದ ರಕ್ಷಿಸಿಕೊಳ್ಳುವ ನಿಯಮ

c)

ಮುದುಕಿಯಿಂದ ರಕ್ಷಿ಼ಸಿಕೊಳ್ಳುವ ನಿಯಮ

d)

ಕತ್ತಲೆಯಿಂದ ರಕ್ಷಿಸಿಕೊಳ್ಳುವ ನಿಯಮ

11.

ಮುದುಕಿಯು ಏನೆಂದು ಗೊಣಗುತ್ತಾ ಬಾಗಿಲು ತೆರೆದಳು?

a)

" ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದೇ ಯುದ್ಧದ ಪರಿ ತಾನೇ?" ಎಂದು ಹೇಳುತ್ತಾ

b)

ಯಾರಾದರೂ ಸಹಾಯಕ್ಕೆ ಸಿಗುವರೋ ಎಂದು ಹೇಳುತ್ತಾ.

12.

" ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ. ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು " ಎಂದು ಗಂಭೀರವಾಗಿ ಯಾರು ಯಾರಿಗೆ ಹೇಳಿದರು?

a)

ರಾಹಿಲ್ ಮುದುಕಿಗೆ

b)

ಮುದುಕಿ ರಾಹಿಲನಿಗೆ

c)

ಸೈನಿಕರು ಮುದುಕಿಗೆ

d)

ಮುದುಕಿ ಸೈನಿಕರಿಗೆ

13.

ಮುದುಕಿಯು ರಾಹಿಲನ ಬಳಿ ಯುದ್ಧದ ಬಗ್ಗೆ ತಿರಸ್ಕಾರದಿಂದ ನೋಡಿದ ಮಾತುಗಳೇನು?

a)

'' ಇಷ್ಟು ವರ್ಷಗಳಿಂದಲೂ ಹಂಬಲಿಸಿ ಹುಟ್ಟಿದ ಮಗು ಕೊನೆಗೂ ದಕ್ಕಲಿಲ್ಲವಲ್ಲ. ಈ ಯುದ್ಧವಲ್ಲದೆ ಹೋಗಿದ್ದರೆ ನನ್ನ ಮಗುವನ್ನು ಹೇಗಾದರೂ ಬದುಕಿಸಿಕೊಳ್ಳುತ್ತಿದ್ದೆವಲ್ಲ ದೇವರೆೀ ಈಿ ಮನುಷ್ಯರಿಗೆ ಎಂತಹ ಬುದ್ಧಿ ಕೊಡುತ್ತೀಯಾ''

b)

'' ನೋಡಿ ನನ್ನ ಮೊಮ್ಮಗುವಿನ ಹೆಣವಿದೆ ಅಲ್ಲಿ . ಅದನ್ನು ನೋಡಿ! ಯುದ್ಧ ಮೊಮ್ಮಗುವನ್ನು ಉಳಿಸಲಿಲ್ಲ ವಲ್ಲ ಯಾರಿಗಾಗಿ, ಯಾತಕ್ಕಾಗಿ ಯುದ್ಧ ಅದನ್ನಾದರೂ ಹೇಳಿರಲ್ಲ''

14.

ಮುದುಕಿಯು ರಾಹುಲನ ಬಳಿ ತನ್ನ ಸೊಸೆಗೆ ಬಂದಿರುವ ನೋವನ್ನು ಹೇಗೆ ತೋಡಿಕೊಂಡಳು?

a)

''ಏನು ಹೇಳಲ್ಲಪ್ಪ? ನನ್ನ ಸೊಸೆ ಹೆರಿಗೆ ಬೇನೆ ತಿನ್ನುತ್ತಿದ್ದಾಳೆ . ಸಂಜೆಯಿಂದಲೇ ನೋವು ಪ್ರಾರಂಭವಾಗಿದೆ ಡಾಕ್ಟರ್ ಅಥವಾ ಸೂಲಗಿತ್ತಿ ಯನ್ನು ಕರೆಯೋಣ ವೆಂದರೆ ಬಾಂಬುಗಳು, ಬ್ಲಾಕ್ ಔಟ್. ಯಾರಿಗೆ ಬೇಕಾಗಿದೆ ಯುದ್ಧ? ನನ್ನ ಹುಡುಗಿಗೆ ಹೆರಿಗೆಯಾದರೆ ಸಾಕಾಗಿತ್ತು''

b)

''ಏನು ಮಾಡಲಿ ಮಗಳೇ ಈ ಮಳೆಯಲ್ಲಿ , ಕತ್ತಲಲ್ಲಿ ನಾನು ಯಾರನ್ನು ಕರೆಯಲಿ ಒಮ್ಮೆ ಬೆಳಗಾಗೆದ್ದರೆ ಸಾಕಾಗಿತ್ತು''

15.

'' ದಯವಿಟ್ಟು ಬಾಗಿಲು ತೆಗೆಯಿರಿ ನಾನು ಗಾಯಗೊಂಡಿದ್ದೆನೆ'' - ಈ ಮಾತನ್ನು ಯಾರು ಯಾರಿಗೆ ಹೇಳಿದರು?

a)

ಸೈನಿಕರು ಮುದುಕಿಗೆ ಹೇಳಿದರು

b)

ಮುದುಕಿ ರಾಹಿಲನಿಗೆ ಹೇಳಿದಳು

c)

ರಾಹಿಲ್- ಮುದುಕಿಗೆ ಹೇಳಿದನು

d)

ಪೈಲೆಟ್ ರಾಹಿಲನಿಗೆ ಹೇಳಿದನು

16.

'' ನನ್ನ ಮೊಮ್ಮಗುವಿನ ಹಣವಿದೆ ಅಲ್ಲಿ ಅದನ್ನು ನೋಡಿ '' - ಈ ಮಾತನ್ನು ಯಾರು ಯಾರಿಗೆ ಹೇಳಿದರು?

a)

ರಾಹಿಲನು ಮುದುಕಿಗೆ ಹೇಳಿದನು

b)

ಮುದುಕಿ ರಾಹುಲನಿಗೆ ಹೇಳಿದಳು

c)

ಮುದುಕಿ ತನ್ನ ದೇಶದ ಸೈನಿಕರಿಗೆ

d)

ಪೈಲೆಟ್ ಮುದುಕಿಗೆ ಹೇಳಿದನು

17.

ಯುದ್ಧ ಗದ್ಯಭಾಗವನ್ನು ಯಾವ ಕೃತಿಯಿಂದ ಆಲಿಸಲಾಗಿದೆ?

a)

ಖೆಡ್ಡ

b)

ಚಪ್ಪಲಿಗಳು

c)

ತಳ ಒಡೆದ ದೋಣಿಯಲಿ

d)

ಕದನವಿರಾಮ

18.

ಸಾರಾ ಅಬೂಬಕರ್ ರವರ ಕಾದಂಬರಿಗಳನ್ನು ಗುರುತಿಸಿ.

a)

ಚಪ್ಪಲಿಗಳು ಮತ್ತು ಪಯಣ

b)

ಪಯಣ ಮತ್ತು ಕದನವಿರಾಮ

c)

ಸಹನಾ ಮತ್ತು ವಜ್ರಗಳು

19.

'' ಆಗಲೂ ಯುದ್ಧವಾಗಿತ್ತು ಅಜ್ಜಿ'' - ಈ ಮಾತನ್ನು ಯಾರು ಯಾರಿಗೆ ಹೇಳಿದರು?

a)

ಮುದುಕಿ ರಾಹಿಲನಿಗೆ

b)

ರಾಹಿಲ್ ಮುದುಕಿಗೆ

c)

ಪೈಲೆಟ್ ರಾಹಿಲನಿಗೆ

20.

'' ಯಾರಾದರೂ ಗಾಯಗೊಂಡ ಸೈನಿಕರು ಈಕಡೆ ಬಂದಿದ್ದಾರೆ '' ? ಎಂದು ಯಾರು ಯಾರಿಗೆ ಹೇಳಿದರು?

a)

ಮುದುಕಿ ರಾಹಿಲನಿಗೆ

b)

ರಾಹಿಲ್ ಮುದುಕಿಗೆ

c)

ಸೈನಿಕರು ಮುದುಕಿಗೆ