wayground logo

Free Printable Worksheets

NEW

Font size

S
M
L
XL
Worksheets

ಭಾಗ್ಯಶಿಲ್ಪಿಗಳು - ಡಿ.ಎಸ್. ಜಯಪ್ಪಗೌಡ

Total questions: 44

Worksheet time: 44mins

Name
Class
Date
1.

ಡಿ. ಎಸ್. ಜಯಪ್ಪಗೌಡ ಅವರ ಪೂರ್ಣ ಹೆಸರೇನು?

a)

ದಾರದಹಳ್ಳಿ ಸುಬ್ಬೇಗೌಡ ಜಯಪ್ಪಗೌಡ

b)

ದಾರದಹಳ್ಳಿ ಸುಬ್ಬಣ್ಣ ಜಯಪ್ಪ

c)

ದಾರದಹಳ್ಳಿ ಸಣ್ಣಪ್ಪ ಜಯಣ್ಣ

d)

ದಾನಪ್ಪ ಸಣ್ಣಪ್ಪ ಜಯಪ್ಪ

2.

ಡಿ . ಎಸ್. ಜಯಪ್ಪಗೌಡ ಅವರ ಕಾಲ ಯಾವುದು?

a)

1947

b)

1909

c)

1896

d)

1926

3.

ಜಯಪ್ಪಗೌಡರವರ ಯಾವ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ?

a)

ಕರ್ನಾಟಕದ ಕಡಲಾಚೆಯ ಸಂಪರ್ಕಗಳು

b)

ಜನಪದ ಆಟಗಳು

c)

ಮೈಸೂರು ಒಡೆಯರು

d)

ಕರ್ನಾಟಕ ಗ್ರಾಮೀಣ ಸಂಸ್ಥೆಗಳು

4.

ಇವುಗಳಲ್ಲಿ ಯಾವುದು ಸರಿಯಾಗಿದೆ?

a)

ಹಂಬಲ = ಬಯಕೆ

b)

ಸಮುಚ್ಚಯ = ಸಮೂಹ

c)

ದೂಷಣೆ = ನಿಂದನೆ

d)

ಸುಪರ್ದಿ = ವಶ

e)

ಎಲ್ಲವೂ ಸರಿಯಾಗಿದೆ

5.

ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು?

a)

1895

b)

1916

c)

1917

d)

1920

6.

ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕಾಗಿ ಕಂಕಣಬದ್ಧರಾದರು?

a)

ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ

b)

ವಿಶ್ವೇಶ್ವರಯ್ಯ ರವರನ್ನು ದಿವಾನರಾಗಿ ಮಾಡಲು

c)

ಕೆ ಆರ್ ಎಸ್ ಜಲಾಶಯ ನಿರ್ಮಿಸಲು

d)

ಹೊಸ ಹೊಸ ಕಾನೂನುಗಳನ್ನು ಜಾರಿಗೆ ತರಲು

7.

ಏಷ್ಯಾ ಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲವಿದ್ಯುತ್ ಯೋಜನೆ ಯಾವುದು?

a)

ಭಾಕ್ರಾ ನಂಗಲ್ ಯೋಜನೆ

b)

ದಾಮೋದರ್ ಯೋಜನೆ

c)

ಶಿವನಸಮುದ್ರ ಜಲವಿದ್ಯುತ್ ಯೋಜನೆ

d)

ತಾರಾಪುರ ಅಣು ಸ್ಥಾವರ ಯೋಜನೆ

8.

ವಿಶ್ವೇಶ್ವರಯ್ಯನವರ ಹುಟ್ಟುಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು ಮಾಡಲಾಗುತ್ತಿದೆ?

a)

ಇಂಜಿನಿಯರ್ಸ್ ದಿನಾಚರಣೆ

b)

ಶಿಕ್ಷಕರ ದಿನಾಚರಣೆ

c)

ಕಾರ್ಮಿಕರ ದಿನಾಚರಣೆ

d)

ಪರಿಸರ ದಿನಾಚರಣೆ

9.

ನಾಲ್ವಡಿ ಕೃಷ್ಣರಾಜ ಒಡೆಯರ ಆಳ್ವಿಕೆ ಎಲ್ಲಿಂದ ಎಲ್ಲಿಯವರೆಗೆ ನಡೆಯಿತು?

a)

1902 - 1940

b)

1905 - 1944

c)

1909 - 1948

d)

1910 - 1947

10.

ನಾಲ್ವಡಿ ಕೃಷ್ಣರಾಜ ಒಡೆಯರ ರೀಜೆಂಟರಾಗಿ ಆಡಳಿತ ನಿರ್ವಹಿಸಿದವರು ಯಾರು?

a)

ಮಹಾರಾಣಿ ವಾಣಿವಿಲಾಸಮ್ಮ

b)

ಮಹಾರಾಣಿ ಶಾರದಮ್ಮ

c)

ಮಹಾರಾಣಿ ನೀಲಾಂಬಿಕೆ

d)

ಮಹಾರಾಣಿ ಯಶೋದಮ್ಮ

11.

ನಾಲ್ವಡಿ ಕೃಷ್ಣರಾಜ ಒಡೆಯರು ಎಷ್ಟರಲ್ಲಿ ಮೈಸೂರು ರಾಜ್ಯದ ನೇರ ಉಸ್ತುವಾರಿಯನ್ನು ವಹಿಸಿಕೊಂಡರು?

a)

1031

b)

1902

c)

1908

d)

1910

12.

ಕೃಷ್ಣರಾಜ ಒಡೆಯರ ಸಂಸ್ಥಾನಕ್ಕೆ ಯಾವ ಕೀರ್ತಿ ಪ್ರಾಪ್ತವಾಯಿತು?

a)

ಮಾದರಿ ಮೈಸೂರು

b)

ಮಾದರಿ ಆಡಳಿತ

c)

ಹೊಸ ಕಾನೂನುಗಳ ಹರಿಕಾರ

d)

ಮಾದರಿ ಅರಮನೆ

13.

1923ರಲ್ಲಿ ಹೊಸ ಕಾನೂನಿನ ಪ್ರಕಾರ ಯಾವುದನ್ನು ಶಾಸನಬದ್ಧ ಸಂಸ್ಥೆಯನ್ನಾಗಿ ಮಾಡಲಾಯಿತು?

a)

ನ್ಯಾಯ ವಿಧಾಯಕ ಸಭೆ

b)

ಪ್ರಜಾಪ್ರತಿನಿಧಿ ಸಭೆ

c)

ಬಾಲ್ಯ ವಿವಾಹ ನಿಷೇಧ ಕಾಯ್ದೆ

d)

ಉಚಿತ ಶಿಕ್ಷಣ

14.

ಪ್ರಜಾಪ್ರತಿನಿಧಿ ಸಭೆಯಲ್ಲಿ ಯಾವ ಸಂಸದೀಯ ಮಾದರಿಯ ನಡವಳಿಕೆಗಳು ನಡೆಯುತ್ತಿದ್ದವು?

a)

ಠರಾವುಗಳು

b)

ವಾರ್ಷಿಕ ಆಯವ್ಯಯ ಪರಿಶೀಲನೆ

c)

ಪ್ರಶ್ನೋತ್ತರಗಳು

d)

ಎಲ್ಲಾ ಆಯ್ಕೆಗಳು ಸರಿಯಾಗಿದೆ

15.

ಪ್ರಜಾಪ್ರತಿನಿಧಿ ಸಭೆಗೆ ಎಷ್ಟು ಜನರು ಜನರಿಂದ ಆಯ್ಕೆಯಾಗುತ್ತಿದ್ದರು?

a)

555

b)

245

c)

265

d)

275

16.

ನ್ಯಾಯ ವಿಧಾಯಕ ಸಭೆಯನ್ನು ಎಷ್ಟರಲ್ಲಿ ಸ್ಠಾಪಿಸಲಯಿತು?

a)

೧೯೧೦

b)

೧೯೦೮

c)

೧೯೦೭

d)

೧೯೨೩

17.

ನ್ಯಾಯ ವಿಧಾಯಕ ಸಭೆಯಲ್ಲಿದ್ದ ಸದಸ್ಯರ ಸಂಖ್ಯೆ ಎಷ್ಟು?

a)

೪೦

b)

೫೦

c)

೪೫

d)

೫೫

18.

ಮೈಸೂರು ಸಂಸ್ಠಾನಕ್ಕೆ ಹೊಸ ಕಾನೂನುಗಳನ್ನು ಜಾರಿಗೊಳಿಸಬೇಕಾದರೆ ಯಾವುದರ ಅನುಮತಿ ಅಗತ್ಯವಾಗಿತ್ತು?

a)

ಮಹಾರಾಜರ

b)

ಪ್ರಜಾಪ್ರತಿನಿಧಿ ಸಭೆ

c)

ನ್ಯಾಯ ವಿಧಾಯಕ ಸಭೆ

d)

ದಿವಾನರ

19.

ನಾ.ಕೄ.ಒ. ಕಾಲದಲ್ಲಿ ಸ್ವಯಂ ಯಾವುವು ಸ್ವಯಂ ಅಡಳಿತ ಕ್ಷೇತ್ರಗಳಾದವು?

a)

ಗ್ರಾಮ ನಿರ್ಮಲೀಕರಣ

b)

ವೈದ್ಯ ಸಹಾಯ

c)

ವಿದ್ಯಾಪ್ರಚಾರ

d)

ನೀರಿನ ಸೌಕರ್ಯ ಮತ್ತು ಪ್ರಯಾಣ ಸೌಲಭ್ಯ

e)

ಎಲ್ಲ ಅಂಶಗಳು

20.

’ ಸಾಮಾಜಿಕ ಕಾನೂನುಗಳ ಹರಿಕಾರ ’ ಎಂದರೆ ಯಾರು?

a)

ಕೆ. ಶೇಷಾದ್ರಿ ಅಯ್ಯರ್

b)

ವಿಶ್ವೇಶ್ವರಯ್ಯ

c)

ನಾ. ಕೄ. ಒಡೆಯರ್

d)

ವಾಣಿ ವಿಲಾಸಮ್ಮ

21.

ಶಿವನಸಮುದ್ರದ ಜಲವಿದ್ಯುತ್ ಉತ್ಪಾದನೆ ಆರಂಭವಾಗಿದ್ದು ಎಷ್ಟರಲ್ಲಿ?

a)

೧೯೦೦

b)

೧೮೦೦

c)

೧೯೧೦

d)

೧೮೧೦

22.

ಶಿವನಸಮುದ್ರದ ಬಳಿ ಯಾವ ನದಿ ನೀರಿನಿಂದ ಜಲವಿದ್ಯುತ್ ಉತ್ಪಾದನೆ ಮಾಡಲಾಯಿತು?

a)

ಗೋದಾವರಿ

b)

ಗಂಗಾ

c)

ಕಾವೇರಿ

d)

ತುಂಗ

23.

ಏಷ್ಯಾ ಖಂಡದಲ್ಲಿಯೇ ಮೊದಲ ಜಲವಿದ್ಯುತ್ ಯೋಜನೆ ಯಾವುದು?

a)

ಥಾರಾಪುರ ಯೋಜನೆ

b)

ಶಿವನಸಮುದ್ರ ಯೋಜನೆ

c)

ಬಾಕ್ರನಂಗಲ್ ಯೋಜನೆ

d)

ಭದ್ರ ಯೋಜನೆ

24.

ನಾ. ಕೄ. ಒಡೆಯರು ಸ್ಠಾಪಿಸಿದ ಮೊತ್ತಮೊದಲ ವಿ.ವಿ. ಯಾವುದು?

a)

ಮೈಸೂರು ವಿ.ವಿ.

b)

ಕುವೆಂಪು ವಿ.ವಿ.

c)

ಮಂಗಳೂರು ವಿ.ವಿ.

d)

ಕನ್ನಡ ವಿ.ವಿ.

25.

ನಾ. ಕೄ. ಒ. ಜಾರಿಗೊಳಿಸಿದ ಕಾನೂನುಗಳಲ್ಲಿ ಯಾವುದು ಸರಿಯಾಗಿದೆ?

a)

೧೯೨೭ - ಮೊದಲ ಬಾರಿಗೆ ಮಹಿಳೆಯರಿಗೆ ಮತದಾನದ ಹಕ್ಕು

b)

೧೯೧೯ - ಮಾಧ್ಯಮಿಕ ಶಿಕ್ಷಣ ಶುಲ್ಕ ರದ್ಧತಿ

c)

೧೯೦೯ - ದೇವದಾಸಿ ಪದ್ಧತಿ ನಿಷೇಧ

d)

೧೯೧೮ - ಗ್ರಾಮ ಪಂಚಾಯಿತಿಗಳ ಕಾಯ್ದೆ

e)

ಎಲ್ಲವೂ ಸರಿಯಾಗಿದೆ

26.

" ದುರದೄಷ್ಟವಶಾತ್ ಭಾರತೀಯರಾದ ನಾವು ಹೆಚ್ಚು ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರದವರೆಂಬ ದೂಷಣೆಗೆ ಒಳಗಾಗಿದ್ದೇವೆ. ತಾವು ಈ ಮಾತಿಗೆ ಬಹುದೊಡ್ಡ ರೀತಿಯಲ್ಲಿ ಹೊರತಾಗಿದ್ದೀರಿ. ಕಡಿಮೆ ಮಾತನಾಡಿದ್ದೀರಿ, ಹೆಚ್ಚು ಕೆಲಸ ಮಾಡಿದ್ದೀರಿ. ಅದನ್ನು ನಾವು ನಿಮ್ಮಿಂದ ಕಲಿಯೋಣ ” ಎಂದು ಯಾರು ಯಾರಿಗೆ ಹೇಳಿದರು?

a)

ನೆಹರುರವರು - ವಿಶ್ವೇಶ್ವರಯ್ಯನವರ ಬಗ್ಗೆ ಹೇಳಿದ್ದು

b)

ನೆಹರುರವರು - ನಾ. ಕೄ. ಒ. ಬಗ್ಗೆ ಹೇಳಿದ್ದು.

27.

ವಿ. ನವರ ತಂದೆ-ತಾಯಿಯರ ಹೆಸರೇನು?

a)

ಶ್ರೀನಿವಾಸಶಾಸ್ತ್ರಿ - ವೆಂಕಟಲಕ್ಷ್ಮಮ್ಮ

b)

ಶೇಷಾದ್ರಿ ಅಯ್ಯರ್ - ಗುಂಡಮ್ಮ

c)

ಸುಬ್ಬೇಗೌಡ - ನೀಲಮ್ಮ

28.

ವಿ. ನವರ ಪೂರ್ವಜರು ಮೂಲ ಯಾವುದು?

a)

ಚಿಕ್ಕಬಳ್ಳಾಪುರ

b)

ಮೋಕ್ಷಗೊಂಡಂ

c)

ಮೈಸೂರು

d)

ತಮಿಳುನಾಡು

29.

ವಿ. ನವರ ಪೂರ್ವಜರು ವಲಸೆ ಬಂದು ಕರ್ನಾಟಕದ ಯಾವ ಸ್ಥಳದಲ್ಲಿ ನೆಲೆಸಿದ್ದರು?

a)

ಕೋಲಾರದ ಮುಳಬಾಗಿಲು

b)

ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ

c)

ಮೈಸೂರು

d)

ದೊಡ್ಡಬಳ್ಳಾಪುರ

30.

ಪೂನಾದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿ. ನವರು ಡಿಪ್ಲೊಮ ಶಿಕ್ಷಣವನ್ನು ಪ್ರಥಮ ಸ್ಥಾನದಲ್ಲಿ ಪಡೆದು ಯಾವ ಬಹುಮಾನಕ್ಕೆ ಪಾತ್ರರಾದರು?

a)

ಸಿ. ರಂಗಚಾರ್ಲು ಪುರಸ್ಕಾರ

b)

ಜೇಮ್ಸ್ ಬರ್ಕ್ಲಿ ಬಹುಮಾನ

c)

ಸರ್ ಪದವಿ

d)

ಭಾರತ ರತ್ನ ಪದವಿ

31.

ವಿ. ನವರು ಮುಂಬೈ ಪ್ರಾಂತ್ಯದಲ್ಲಿ ಮಾಡಿದ ಯಾವ ಕಾರ್ಯಕ್ಕಾಗಿ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾದರು?

a)

ಖಾನ್ ದೇಶ ಮತ್ತು ನಾಸಿಕ್ ಜಿಲ್ಲೆಗಳಲ್ಲಿ ಹರಿಯುತ್ತಿದ್ದ ಪಂಜ್ರಾ ನದಿಗೆ ತೂಬು ಮೇಲ್ಗಾಲುವೆ ನಿರ್ಮಿಸಿದ್ದರಿಂದ

b)

ಕೆ.ಅರ್.ಎಸ್. ಜಲಾಶಯದ ನಿರ್ಮಾಣಕ್ಕಾಗಿ

c)

ಮೈಸೂರು ಬ್ಯಾಂಕ್ ಸ್ಠಾಪನೆಗಾಗಿ

d)

ಕನ್ನಡ ಸಾಹಿತ್ಯ ಪರಿಷತ್ ನಿರ್ಮಾಣಕ್ಕಗಿ

32.

ವಿ. ನವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿದ ಸಾಧನೆ ಯಾವುದು?

a)

ಕೆ.ಅರ್.ಎಸ್. ನಿರ್ಮಾಣ

b)

ತಿಗ್ರ ಜಲಾಶಯಕ್ಕೆ ಸ್ವಯಂಚಾಲಿತ ಬಾಗಿಲುಗಳ ಅನ್ವೇಷಣೆ

c)

ಈಸಿ ಮತ್ತು ಮೂಸಿ ನದಿಗಳಿಗೆ ಜಲಾಶಯದ ನಿರ್ಮಾಣ

d)

ಕೈಗಾರಿಕಾ ಅಭಿವೄದ್ಧಿ ಬ್ಯಾಂಕ್ ರಚನೆ

33.

ಹೈದರಾಬಾದ್ ನಗರವು ಯಾವ ಎರಡು ನದಿಗಳಿಂದ ಅಪಾರ ನಷ್ಟ ಸಂಭವಿಸುತ್ತಿತ್ತು?

a)

ಗಂಗಾ ಮತ್ತು ಕಾವೇರಿ

b)

ತುಂಗ ಮತ್ತು ಭದ್ರ

c)

ಕಾವೇರಿ ಮತ್ತು ಕಪಿಲ

d)

ಈಸಿ ಮತ್ತು ಮೂಸಿ

34.

ಮೈಸೂರು ಪ್ರಾಂತ್ಯದ ಪ್ರೌಢಶಾಲೆಗಳು ಯಾವ ವಿ.ವಿ.ದ ನಿಯಂತ್ರಣಕ್ಕೆ ಒಳಪಟ್ಟಿದ್ದವು?

a)

ಬೆಂಗಳೂರು ವಿ.ವಿ.

b)

ಮುಂಬೈ ವಿ.ವಿ.

c)

ಹೈದರಾಬಾದ್ ವಿ.ವಿ.

d)

ಮದ್ರಾಸ್ ವಿ.ವಿ.

35.

"ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಕೆಲವೇ ಜನರ ಸೊತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು" ಎಂದು ಹೇಳಿದವರು ಯಾರು?

a)

ನಾ.ಕೄ.ಒ.

b)

ಕೆ.ಶೇಷಾದ್ರಿ ಅಯ್ಯರ್

c)

ವಿಶ್ವೇಶ್ವರಯ್ಯ

d)

ನೆಹರು

36.

ಕನ್ನಡ ಭಾಷೆ ಮತ್ತು ಸಾಹಿತ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಉಂಟಾಗಿದ್ದ ಒಲವನ್ನು ಕಂಡು ವಿ. ನವರು ಸ್ಥಾಪಿಸಿದ ಸಂಸ್ಥೆ ಯಾವುದು?

a)

ಮೈಸೂರು ಬ್ಯಾಂಕ್

b)

ಕನ್ನಡ ಸಾಹಿತ್ಯ ಪರಿಷತ್ತು

c)

ಮೈಸೂರು ವಿ.ವಿ.

d)

ಪ್ರಾಥಮಿಕ ಶಿಕ್ಷಣ ನಿಬಂಧನೆ

37.

ಮೈಸೂರು ಬ್ಯಾಂಕ್ ಸ್ಥಾಪನೆಯಾದ ವರ್ಷ?

a)

೧೯೨೦

b)

೧೯೧೭

c)

೧೯೧೬

d)

೧೯೧೩

38.

ಮುಂಬೈ ಪ್ರಾಂತ್ಯದ ಗೌರ್ವನರ್ ಲಾರ್ಡ್ ಹರ್ಸ್ಟ್ ಅವರು ವಿ. ನವರನ್ನು ಮುಕ್ತಕಂಠದಿಂದ ಹೊಗಳಲು ಕಾರಣವೇನು?

a)

ಕೆ.ಅರ್.ಎಸ್. ನಿರ್ಮಾಣಕ್ಕಾಗಿ

b)

ಸಿಂಧ್ ಪ್ರಾಂತ್ಯದ ಸುಕ್ಕೂರು ಪಟ್ಟಣಕ್ಕೆ ಯಶಸ್ವಿಯಾಗಿ ಕುಡಿಯುವ ನೀರಿನ ಪೂರೈಕೆಗಾಗಿ

c)

ಮೈಸೂರು ಬ್ಯಾಂಕ್ ಸ್ಥಾಪನೆಗಾಗಿ

d)

ವಿ.ವಿ. ಸ್ಥಾಪನೆಗಾಗಿ

39.

ವಿ.ನವರ ಸಾಧನೆಗಳಲ್ಲಿ ಯಾವುದು ಸರಿಯಾಗಿದೆ?

a)

ಫೀಡರ್ ಬ್ಯಾಂಕ್ ಮತ್ತು ಕೈಗಾರಿಕಾ ಹೂಡಿಕೆ ಮತ್ತು ಅಭಿವೄದ್ಧಿ ನಿಧಿ ಸ್ಥಾಪನೆ

b)

ಜೀವವಿಮಾ ಯೋಜನೆಯ ಜಾರಿ

c)

ಮೈಸೂರಿನ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆ

d)

ಬೆಂಗಳೂರಿನ ಮೆಕಾನಿಕಲ್ ಇಂಜಿನಿಯರಿಂಗ್ ಶಾಲೆ

e)

ಎಲ್ಲವೂ ಸರಿಯಾಗಿದೆ.

40.

ವಿ.ನವರಿಗೆ ’ ಸರ್ ’ ಪದವಿಯನ್ನು ನೀಡಿ ಗೌರವಿಸಿದವರು ಯಾರು?

a)

ಭಾರತ ಸರ್ಕಾರ

b)

ಮೈಸೂರು ಸರ್ಕಾರ

c)

ಬ್ರಿಟಿಷ್ ಸರ್ಕಾರ

d)

ಮದ್ರಾಸ್ ಸರ್ಕಾರ

41.

ಭಾರತ ಸರ್ಕಾರ ವಿ. ನವರಿಗೆ ಯಾವ ಪ್ರಶಸ್ತಿ ನೀಡಿ ಗೌರವಿಸಿತು?

a)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

b)

ಪದ್ಮ ವಿಭೂಷಣ

c)

ಭಾರತ ರತ್ನ

d)

ಕರ್ನಾಟಕ ರತ್ನ

42.

ವಿ. ನವರು ಬರೆದ ಆತ್ಮಕಥೆಯ ಹೆಸರೇನು?

a)

ಮೆಮೋರಿಸ್ ಆಫ್ ಮೈ ವರ್ಕಿಂಗ್ ಲೈಫ್

b)

ರಿಕನ್ ಸ್ಟ್ರ್ಕ್ಟಿಂಗ್ ಇಂಡಿಯಾ

c)

ಪ್ಲಾನ್ಡ್ ಎಕಾನಮಿ ಫಾರ್ ಇಂಡಿಯ

d)

ನೇಷನ್ ಬಿಲ್ಡಿಂಗ್ ಪ್ಲಾನ್ ಫಾರ್ ಇಂಡಿಯಾ

43.

ವಿ. ನವರ ಜನ್ಮ ಶತಮಾನೋತ್ಸವ ಎಷ್ಟರಲ್ಲಿ ನಡೆಯಿತು?

a)

೧೯೬೦

b)

೧೯೬೧

c)

೧೯೫೯

d)

೧೯೭೦

44.

ವಿ. ನವರ ಹುಟ್ಟು ಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು ಮಾಡಲಾಗುತ್ತದೆ?

a)

ವಿಶ್ವ ಪರಿಸರ ದಿನ

b)

ಶಿಕ್ಷಕರ ದಿನಾಚರಣೆ

c)

ಎಂಜಿನಿಯರ್ಸ್ ದಿನಾಚರಣೆ

d)

ಕಾರ್ಮಿಕರ ದಿನಾಚರಣೆ