wayground logo

Free Printable Worksheets

NEW

Font size

S
M
L
XL
Worksheets

METALS AND NON-METALS KANNADA MEDIUM

Total questions: 25

Worksheet time: 25mins

Name
Class
Date
1.

ಉಷ್ಣದ ಉತ್ತಮ ವಾಹಕಗಳ ಜೋಡಿ

a)

ಅಲ್ಯೂಮಿನಿಯಂ ಮತ್ತು ಬೆಳ್ಳಿ

b)

ತಾಮ್ರ ಮತ್ತು ಬೆಳ್ಳಿ

c)

ಬೆಳ್ಳಿ ಮತ್ತು ಸತು

d)

ಸತು ಮತ್ತು ಮೆಗ್ನೀಷಿಯಂ

2.

ಸೀಸ ಮತ್ತು ಪಾದರಸ

a)

ಉಷ್ಣದ ಉತ್ತಮ ವಾಹಕಗಳು

b)

ವಿದ್ಯುತ್ ನ ಉತ್ತಮ ವಾಹಕಗಳು

c)

ಉಷ್ಣದ ದುರ್ಬಲ ವಾಹಕಗಳು

d)

ವಿದ್ಯುತ್ ನ ದುರ್ಬಲ ವಾಹಕಗಳು

3.

ಉನ್ನತ ಮಟ್ಟದ ಉಷ್ಣತೆಯಲ್ಲೂ ಸಹ ಆಕ್ಸಿಜನ್ ನೊಂದಿಗೆ ವರ್ತಿಸಿದ ಲೋಹಗಳು

a)

ಬಂಗಾರ ಮತ್ತು ಬೆಳ್ಳಿ

b)

ಮೆಗ್ನೀಷಿಯಂ ಮತ್ತು ಅಲ್ಯೂಮಿನಿಯಂ

c)

ಸೋಡಿಯಂ ಮತ್ತು ಪೊಟಾಸಿಯಂ

d)

ತಾಮ್ರ ಮತ್ತು ಸತು

4.

ಸತು, ಕಬ್ಬಿಣ, ಅಲ್ಯೂಮಿನಿಯಂ ಮತ್ತು ಮೆಗ್ನೀಷಿಯಂ. ಈ ಧಾತುಗಳನ್ನು ಅವುಗಳ ಕ್ರಿಯಾಶೀಲತೆಯ ಸರಣಿಯ ಏರಿಕೆ ಕ್ರಮದಲ್ಲಿ ಜೋಡಿಸಿದಾಗ ಬರುವ ಸರಿಯಾದ ಆಯ್ಕೆ

a)

ಮೆಗ್ನೀಷಿಯಂ < ಅಲ್ಯೂಮಿನಿಯಂ < ಸತು < ಕಬ್ಬಿಣ

b)

ಅಲ್ಯೂಮಿನಿಯಂ < ಮೆಗ್ನೀಷಿಯಂ < ಕಬ್ಬಿಣ < ಸತು

c)

ಸತು < ಅಲ್ಯೂಮಿನಿಯಂ < ಮೆಗ್ನೀಷಿಯಂ< ಕಬ್ಬಿಣ

d)

ಕಬ್ಬಿಣ < ಸತು < ಅಲ್ಯೂಮಿನಿಯಂ < ಮೆಗ್ನೀಷಿಯಂ

5.

ನೈಟ್ರಿಕ್ ಆಮ್ಲವು ಲೋಹಗಳೊಂದಿಗೆ ವರ್ತಿಸಿದಾಗ ಲೋಹಗಳಿಂದ ಹೈಡ್ರೋಜನ್ ಅನಿಲ ಬಿಡುಗಡೆಯಾಗಲು ಅವಕಾಶ ಮಾಡಿಕೊಡುವುದಿಲ್ಲ. ಏಕೆಂದರೆ ನೈಟ್ರಿಕ್ ಆಮ್ಲವು

a)

ದುರ್ಬಲ ಉತ್ಕರ್ಷಣಕಾರಿ

b)

ಪ್ರಬಲ ಉತ್ಕರ್ಷಣಕಾರಿ

c)

ದುರ್ಬಲ ಅಪಕರ್ಷಣಕಾರಿ

d)

ಪ್ರಬಲ ಅಪಕರ್ಷಣಕಾರಿ

6.

ಮಿಶ್ರಲೋಹಗಳೆಂದರೆ

a)

ಲೋಹ ಮತ್ತು ಅಲೋಹಗಳ ಅಸಮಾಂಗೀಯ ಮಿಶ್ರಣ

b)

ಎರಡು ಅಥವಾ ಎರಡಕ್ಕಿಂತ ಹೆಚ್ಚು ಲೋಹಗಳ ಅಸಮಾಂಗೀಯ ಮಿಶ್ರಣ

c)

ಲೋಹ ಮತ್ತು ಅಲೋಹಗಳ ಸಮಾಂಗೀಯ ಮಿಶ್ರಣ

d)

ಎರಡು ಅಥವಾ ಎರಡಕ್ಕಿಂತ ಹೆಚ್ಚು ಅಲೋಹಗಳ ಸಮಾಂಗೀಯ ಮಿಶ್ರಣ

7.

ಕೆಳಗಿನವುಗಳಲ್ಲಿ ಮೃದು ಲೋಹಗಳ ಸರಿಯಾದ ಗುಂಪು

a)

ಸೋಡಿಯಂ, ಅಲ್ಯೂಮಿನಿಯಂ ಮತ್ತು ತಾಮ್ರ

b)

ಸೋಡಿಯಂ, ಪೊಟಾಸಿಯಂ ಮತ್ತು ಲಿಥಿಯಂ

c)

ತಾಮ್ರ, ಮ್ಯಾಂಗನೀಸ್ ಮತ್ತು ಮೆಗ್ನೀಷಿಯಂ

d)

ಸತು, ಬೇರಿಯಂ ಮತ್ತು ಲಿಥಿಯಂ

8.

ಕೋಷ್ಟಕದಲ್ಲಿರುವ ಮಾಹಿತಿಯ ಆಧಾರದ ಮೇಲೆ ಧಾತುಗಳ ಸರಿಯಾದ ಹೆಸರುಗಳ ಆಯ್ಕೆಯನ್ನು ಗುರುತಿಸಿ.

ಧಾತು ಇಲೆಕ್ಟ್ರಾನ್ ಹಂಚಿಕೆ

K L M N

A 2 8 1 0

B 2 8 8 1

C 2 6 0 0

D 2 8 4 0

a)

A = ಸಿಲಿಕಾನ್, B = ಸೋಡಿಯಂ, C = ಪೊಟಾಸಿಯಂ

ಮತ್ತು D = ಆಕ್ಸಿಜನ್

b)

A = ಪೊಟಾಸಿಯಂ, B = ಆಕ್ಸಿಜನ್, C = ಸೋಡಿಯಂ

ಮತ್ತು D = ಸಿಲಿಕಾನ್

c)

A = ಆಕ್ಸಿಜನ್, B = ಸಿಲಿಕಾನ್, C = ಪೊಟಾಸಿಯಂ

ಮತ್ತು D = ಸೋಡಿಯಂ

d)

A = ಸೋಡಿಯಂ, B = ಪೊಟಾಸಿಯಂ, C = ಆಕ್ಸಿಜನ್ ಮತ್ತು D = ಸಿಲಿಕಾನ್

9.

ಸೋಡಿಯಂ ಕ್ಲೋರೈಡ್ ಮತ್ತು ತಾಮ್ರದ ಸಲ್ಫೇಟ್ ಸಂಯುಕ್ತಗಳು ಅಧಿಕ ದ್ರವನಬಿಂದು ಮತ್ತು ಅಧಿಕ ಕುದಿಬಿಂದುಗಳನ್ನು ಹೊಂದಿವೆ. ಇದಕ್ಕೆ ಕಾರಣ

a)

ಇವು ಸುಲಭವಾಗಿ ಜಲವಿಲೀನಗೊಂಡು ಜಲೀಯ ದ್ರಾವಣಗಳನ್ನು ಉಂಟುಮಾಡುತ್ತವೆ

b)

ಇವುಗಳಲ್ಲಿರುವ ಅಣುಗಳ ನಡುವಿನ ಪ್ರಬಲ ಅಯಾನಿಕ ಬಂಧಗಳನ್ನು ಪ್ರತ್ಯೇಕಿಸಲು ಸ್ವಲ್ಪ ಪ್ರಮಾಣದ ಶಕ್ತಿಯ ಅವಶ್ಯಕತೆಯಿದೆ

c)

ಇವು ಅಯಾನೀಕರಣ ಕ್ರಿಯೆಯ ಮೂಲಕ ಧನ ಹಾಗೂ ಋಣ ಅಯಾನುಗಳನ್ನು ಉಂಟುಮಾಡುತ್ತವೆ

d)

ಇವುಗಳ ಅಯಾನುಗಳು ಸ್ವತಂತ್ರವಾಗಿ ಚಲಿಸುತ್ತವೆ ಮತ್ತು ವಿದ್ಯುತ್ ಪ್ರವಹಿಸುತ್ತವೆ

10.

ಅಯಾನಿಕ ಸಂಯುಕ್ತಗಳಲ್ಲಿರುವ ಧನ ಮತ್ತು ಋಣ ಅಯಾನುಗಳ ನಡುವಿನ ಪ್ರಬಲ ಆಕರ್ಷಣ ಬಲವು ಪ್ರದರ್ಶಿಸುವುದು

a)

ಕಠಿಣತೆ

b)

ವಿಲೀನತೆ

c)

ವಿದ್ಯುತ್ ಪ್ರವಾಹ

d)

ಉಷ್ಣದ ಪ್ರವಾಹ

11.

ಕಾರ್ಬನ್ ಧಾತುವನ್ನು ಬಳಕೆ ಮಾಡಿ ಅಪಕರ್ಷಣೆಗೊಳಿಸಬಹುದಾದ ಧಾತುಗಳು

a)

ಬೆಳ್ಳಿ, ತಾಮ್ರ, ಪೊಟಾಸಿಯಂ ಮತ್ತು ಮೆಗ್ನೀಷಿಯಂ

b)

ಸತು, ಬೆಳ್ಳಿ, ಬಂಗಾರ ಮತ್ತು ಸೀಸ

c)

ಮೆಗ್ನೀಷಿಯಂ, ಅಲ್ಯೂಮಿನಿಯಂ, ಕಬ್ಬಿಣ ಮತ್ತು ಸೀಸ

d)

ತಾಮ್ರ, ಸೀಸ, ಕಬ್ಬಿಣ ಮತ್ತು ಸತು

12.

ಲೋಹಗಳ ಕಾಸುವಿಕೆ

a)

ಲೋಹದ ಅದಿರುಗಳನ್ನು ಅವುಗಳ ಕರಗುವ ಬಿಂದುವಿಗಿಂತ ಕಡಿಮೆ ಮಟ್ಟದಲ್ಲಿ ಆಮ್ಲಜನಕದ ಉಪಸ್ಥಿತಿಯಲ್ಲಿ ಕಾಸುವುದು

b)

ಲೋಹದ ಅದಿರುಗಳನ್ನು ಅವುಗಳ ಕರಗುವ ಬಿಂದುವಿಗಿಂತ ಕಡಿಮೆ ಮಟ್ಟದಲ್ಲಿ ಆಮ್ಲಜನಕದ ಅನುಪಸ್ಥಿತಿಯಲ್ಲಿ ಕಾಸುವುದು

c)

ಲೋಹದ ಅದಿರುಗಳನ್ನು ಅವುಗಳ ಕರಗುವ ಬಿಂದುವಿಗಿಂತ ಕಡಿಮೆ ಮಟ್ಟದಲ್ಲಿ ಅತ್ಯಲ್ಪ ಪ್ರಮಾಣದ ಗಾಳಿಯಲ್ಲಿ ಕಾಸುವುದು

d)

ಲೋಹದ ಅದಿರುಗಳನ್ನು ಅವುಗಳ ಕರಗುವ ಬಿಂದುವಿಗಿಂತ ಕಡಿಮೆ ಮಟ್ಟದಲ್ಲಿ ಅತ್ಯಧಿಕ ಗಾಳಿಯಲ್ಲಿ ಕಾಸುವುದು

13.

ಅಧಿಕ ಪ್ರಮಾಣದ ಗಾಳಿಯಲ್ಲಿ ಸಲ್ಫೈಡ್ ಅದಿರುಗಳನ್ನು ಪ್ರಬಲವಾಗಿ ಕಾಸುವುದರ ಮೂಲಕ ಅದರ ಆಕ್ಸೈಡ್ ರೂಪಕ್ಕೆ ಪರಿವರ್ತಿಸುವ ಪ್ರಕ್ರಿಯೆ

a)

ಹುರಿಯುವಿಕೆ

b)

ಕಾಸುವಿಕೆ

c)

ವಿದ್ಯುದ್ವಿಭಜನೆ

d)

ಸಾರವರ್ಧಿಸುವಿಕೆ

14.

ಥರ್ಮೈಟ್ ಪ್ರಕ್ರಿಯೆಯ ಪ್ರಮುಖ ಅನ್ವಯ

a)

ಕಾಸುವಿಕೆ ಮತ್ತು ಹುರಿಯುವಿಕೆ ಕ್ರಿಯೆ

b)

ಹರಿಯುವ ನೀರಿನಲ್ಲಿ ಅದಿರನ್ನು ತೊಳೆದು ಸಾರವರ್ಧಿಸುವುದು

c)

ರೈಲು ಕಂಬಿಗಳ ಅಥವಾ ಯಂತ್ರಗಳ ಭಾಗಗಳ ಜೋಡಣೆ

d)

ತಾಮ್ರದ ಅದಿರಿನಿಂದ ತಾಮ್ರವನ್ನು ಶುದ್ಧೀಕರಿಸುವುದು

15.

ನಿರ್ಜಲೀಯ ಕ್ಯಾಲ್ಸಿಯಂ ಕ್ಲೋರೈಡ್ ಇರುವ ಪ್ರನಾಳದಲ್ಲಿ ಕಬ್ಬಿಣದ ಹೊಸ ಮೊಳೆಗಳನ್ನು ಇಟ್ಟಾಗ ಅವು ತುಕ್ಕು ಹಿಡಿಯುವುದಿಲ್ಲ. ಆದರೆ ಅದೇ ರೀತಿಯ ಹೊಸ ಮೊಳೆಗಳನ್ನು ತಾಮ್ರದ ಸಲ್ಫೇಟ್ ಹೊಂದಿರುವ ಪ್ರನಾಳದಲ್ಲಿ ಇರಿಸಿದಾಗ ಅವು ತುಕ್ಕು ಹಿಡಿಯುತ್ತವೆ. ಏಕೆಂದರೆ

a)

ನಿರ್ಜಲೀಯ ಕ್ಯಾಲ್ಸಿಯಂ ಕ್ಲೋರೈಡ್ ಉತ್ಕರ್ಷಣಕಾರಿಯಾಗಿ ಕೆಲಸ ಮಾಡುತ್ತದೆ

b)

ನಿರ್ಜಲೀಯ ಕ್ಯಾಲ್ಸಿಯಂ ಕ್ಲೋರೈಡ್ ಶುಷ್ಕಕಾರಿಯಾಗಿ ಕೆಲಸ ಮಾಡುತ್ತದೆ

c)

ನಿರ್ಜಲೀಯ ಕ್ಯಾಲ್ಸಿಯಂ ಕ್ಲೋರೈಡ್ ಅಪಕರ್ಷಣಕಾರಿಯಾಗಿ ಕೆಲಸ ಮಾಡುತ್ತದೆ

d)

ತಾಮ್ರದ ಸಲ್ಫೇಟ್ ದ್ರಾವಣವು ಶುಷ್ಕಕಾರಿಯಾಗಿ ಕೆಲಸ ಮಾಡುತ್ತದೆ

16.

ಶುದ್ಧ ಕಬ್ಬಿಣವು ಅತ್ಯಂತ ಮೃದುತ್ವವನ್ನು ಹೊಂದಿದೆ. X ಎಂಬ ಧಾತುವನ್ನು ಇದಕ್ಕೆ ಸೇರಿಸಿದಾಗ ಕಬ್ಬಿಣವು ಗಟ್ಟಿ ಮತ್ತು ಪ್ರಬಲವಾಗುತ್ತದೆ. ಹಾಗಾದರೆ X

a)

ತಾಮ್ರ

b)

ಕೋಬಾಲ್ಟ್

c)

ನಿಕ್ಕಲ್

d)

ಕಾರ್ಬನ್

17.

ಡುರಾಲುಮಿನ್ ಮತ್ತು ಆಲ್ನಿಕೊ ಕೆಳಗಿನ ಧಾತುವಿನ ಮಿಶ್ರಲೋಹಗಳಾಗಿವೆ.

a)

ಅಲ್ಯೂಮಿನಿಯಂ

b)

ತಾಮ್ರ

c)

ಕಬ್ಬಿಣ

d)

ಮ್ಯಾಂಗನೀಸ್

18.

ಕಂಚಿನ ಮಿಶ್ರಲೋಹದಿಂದ ಮಾಡಲ್ಪಟ್ಟಿರುವ ಘಂಟೆಯಲ್ಲಿರುವ ಘಟಕಗಳು

a)

ಸೀಸ ಮತ್ತು ತವರ

b)

ಕಬ್ಬಿಣ, ಕಾರ್ಬನ್ ಮತ್ತು ನಿಕ್ಕಲ್

c)

ತಾಮ್ರ ಮತ್ತು ಸತು

d)

ತಾಮ್ರ ಮತ್ತು ತವರ

19.

ಕೆಳಗಿನ ಒಂದು ಮಿಶ್ರಲೋಹದ ಘಟಕಗಳು ಸೀಸ ಮತ್ತು ತವರಗಳಾಗಿವೆ.

a)

ಕಲೆರಹಿತ ಉಕ್ಕು

b)

ಬೆಸುಗೆ ಲೋಹ

c)

ಕಂಚು

d)

ಹಿತ್ತಾಳೆ

20.

ಆಹಾರದ ಡಬ್ಬಗಳ ಹೊರ ಮೇಲ್ಮೈಯನ್ನು ತವರದಿಂದ ಲೇಪಿಸಲಾಗಿರುತ್ತದೆಯೇ ಹೊರತು ಸತುವಿನಿಂದಲ್ಲ. ಏಕೆಂದರೆ

a)

ಸತುವು ತವರಕ್ಕಿಂತ ಕಡಿಮೆ ಕ್ರಿಯಾಶೀಲತೆಯನ್ನು ಹೊಂದಿದೆ

b)

ಸತುವು ತವರಕ್ಕಿಂತ ಬೆಲೆಯಲ್ಲಿ ದುಬಾರಿಯಾಗಿದೆ

c)

ಸತುವು ತವರಕ್ಕಿಂತ ಹೆಚ್ಚಿನ ಕರಗುವ ಬಿಂದುವನ್ನು ಹೊಂದಿದೆ

d)

ಸತುವು ತವರಕ್ಕಿಂತ ಹೆಚ್ಚಿನ ಕ್ರಿಯಾಶೀಲತೆಯನ್ನು ಹೊಂದಿದೆ

21.

ಸರಿಯಾದ ಹೊಂದಾಣಿಕೆಯನ್ನು ಆಯ್ಕೆಮಾಡಿ.

1. ಕಲೆರಹಿತ ಉಕ್ಕು

a) ವಿದ್ಯುತ್ ವಾಹಕ ತಂತಿಗಳನ್ನು ಬೆಸೆಯಲು ಬಳಸುತ್ತಾರೆ

2. ಹಿತ್ತಾಳೆ

b) ವಿಗ್ರಹಗಳು ಮತ್ತು ನಾಣ್ಯಗಳನ್ನು ತಯಾರಿಸಲು ಬಳಸುತ್ತಾರೆ

3. ಬೆಸುಗೆ ಲೋಹ

c) ಗೃಹಬಳಕೆಯ ವಸ್ತುಗಳ ತಯಾರಿಕೆಯಲ್ಲಿ ಬಳಸುತ್ತಾರೆ

4. ಕಂಚು

d) ಶಸ್ತ್ರಕ್ರಿಯಾ ಉಪಕರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ

a)

1 – a, 2 – b, 3 – c, 4 – d

b)

1 – a, 2 – c, 3 – b, 4 – d

c)

1 – d, 2 – c, 3 – a, 4 – b

d)

1 – d, 2 – c, 3 – b, 4 – a

22.

ತಾಮ್ರದ ವಿದ್ಯುದ್ವಿಭಜನೀಯ ಶುದ್ಧೀಕರಣ ಕ್ರಿಯೆಯಲ್ಲಿ ಉಪಯೋಗಿಸುವ ವಿದ್ಯುದ್ವಿಭಾಜ್ಯ

a)

ಮೆಗ್ನೀಷಿಯಂ ಸಲ್ಫೇಟ್ ದ್ರಾವಣ

b)

ಆಮ್ಲೀಯ ತಾಮ್ರದ ಸಲ್ಫೇಟ್ ದ್ರಾವಣ

c)

ಕ್ಯಾಲ್ಸಿಯಂ ಸಲ್ಫೇಟ್ ದ್ರಾವಣ

d)

ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣ

23.

ಸೋಡಿಯಂ ಮತ್ತು ಮೆಗ್ನೀಷಿಯಂ ಲೋಹಗಳ ಆಕ್ಸೈಡ್ ಗಳನ್ನು ಕಾರ್ಬನ್ ನಿಂದ ಅಪಕರ್ಷಿಸಲು ಸಾಧ್ಯವಿಲ್ಲ. ಕಾರಣ

a)

ಈ ಲೋಹಗಳು ಕಾರ್ಬನ್ ಗಿಂತ ಆಕ್ಸಿಜನ್ ಜೊತೆಗೆ ಹೆಚ್ಚಿನ ಮಿತೃತ್ವವನ್ನು ಹೊಂದಿವೆ

b)

ಈ ಲೋಹಗಳು ಕಾರ್ಬನ್ ಗಿಂತ ಆಕ್ಸಿಜನ್ ಜೊತೆಗೆ ಕಡಿಮೆ ಮಿತೃತ್ವವನ್ನು ಹೊಂದಿವೆ

c)

ಈ ಲೋಹಗಳು ಕಾರ್ಬನ್ ಮತ್ತು ಆಕ್ಸಿಜನ್ ನೊಂದಿಗೆ ಸಮಪ್ರಮಾಣದ ಮಿತೃತ್ವವನ್ನು ಹೊಂದಿವೆ

d)

ಈ ಲೋಹಗಳು ಆಕ್ಸಿಜನ್ ಮತ್ತು ಕಾರ್ಬನ್ ನೊಂದಿಗೆ ಯಾವುದೇ ರೀತಿಯ ಮಿತೃತ್ವವನ್ನು ಹೊಂದಿಲ್ಲ

24.

ಸತುವಿನ ತೆಳುವಾದ ಪದರವನ್ನು ಲೇಪಿಸುವುದರ ಮೂಲಕ ಉಕ್ಕು ಹಾಗೂ ಕಬ್ಬಿಣದಂತಹ ವಸ್ತುಗಳು ತುಕ್ಕುಹಿಡಿಯುವುದನ್ನು ಸಂರಕ್ಷಿಸುವ ವಿಧಾನವನ್ನು ಹೀಗೆ ಕರೆಯುತ್ತಾರೆ.

a)

ಮಿಶ್ರಲೋಹಗಳ ತಯಾರಿಕೆ

b)

ಗ್ಯಾಲ್ವನೀಕರಣ

c)

ಆನೋಡೀಕರಣ

d)

ಕ್ರೋಮಿಯಂ ಲೇಪನ

25.

ಬಿಸಿನೀರು ಅಥವಾ ತಣ್ಣೀರಿನೊಂದಿಗೆ ಪ್ರತಿಕ್ರಿಯಿಸದ, ಆದರೆ ಹಬೆಯೊಂದಿಗೆ ವರ್ತಿಸುವ ಲೋಹಗಳ ಗುಂಪು

a)

ಬೆಳ್ಳಿ, ಮೆಗ್ನೀಷಿಯಂ ಮತ್ತು ಅಲ್ಯೂಮಿನಿಯಂ

b)

ಕ್ಯಾಲ್ಸಿಯಂ, ಸೋಡಿಯಂ ಮತ್ತು ಪೊಟಾಸಿಯಂ

c)

ಸತು, ಕಬ್ಬಿಣ ಮತ್ತು ಅಲ್ಯೂಮಿನಿಯಂ

d)

ಸೀಸ, ಬೆಳ್ಳಿ, ತಾಮ್ರ ಮತ್ತು ಬಂಗಾರ