NEW
Font size
Worksheetsಕಾರ್ಬನ್ ಮತ್ತು ಅದರ ಸಂಯುಕ್ತಗಳು
Total questions: 30
Worksheet time: 11mins
ಇವುಗಳಲ್ಲಿ ಕಾರ್ಬನ ಸರಿಯಾದ ಎಲೆಕ್ಟ್ರಾನಿಕ್ ವಿನ್ಯಾಸ ಎಂದರೆ
1s2 2s2 2p4
1s2 2s2 2p6
1s2 2s2 2p2
1s2 2s2 2p1
ಕಾರ್ಬನ್ ಗೆ ಟೆಟ್ರಾ ವೇಲೆಂಟ್ ಧಾತು ಎಂದು ಕರೆಯಲು ಕಾರಣ
ಕಾರ್ಬನ್ ಅತ್ಯಂತ ಹೊರಕವಚದಲ್ಲಿ ಜೋಡಿ ಯಾಗದ 4 ಎಲೆಕ್ಟ್ರಾನುಗಳು ಇರುವುದರಿಂದ
ಕಾರ್ಬನ್ ನಲ್ಲಿ ಒಟ್ಟು 6 ಪ್ರೋಟಾನ್ಗಳು ನ್ಯೂಕ್ಲಿಯಸ್ ನಲ್ಲಿ ಇರುವುದರಿಂದ
ಕಾರ್ಬನ್ ನಲ್ಲಿ 6 ಪ್ರೋಟಾನ್ಗಳು ಮತ್ತು 6 ನ್ಯೂಟ್ರಾನುಗಳು ಇರುವುದರಿಂದ
ಕಾರ್ಬನ್ ಅತ್ಯಂತ ಹೊರಕವಚದಲ್ಲಿ ಜೋಡಿ ಯಾಗದ 6 ಎಲೆಕ್ಟ್ರಾನುಗಳು ಇರುವುದರಿಂದ
ಎರಡು ಕಾರ್ಬನ್ ಪರಮಾಣುಗಳ ನಡುವೆ ಇರುವ ಪ್ರಬಲ ಬಂಧ ಎಂದರೆ
ಅಯಾನಿಕ ಬಂಧ
ಹೈಡ್ರೋಜನ್ ಬಂಧ
ಸಹವೇಲೆನ್ಸೀಯ (ಕೋವ್ಯಾಲೆಂಟ್) ಬಂಧ
ಲೌಕಿಕ ಬಂಧ
ಎರಡು ಪರಮಾಣುಗಳ ನಡುವೆ ತ್ರಿ ಬಂಧ ಉಂಟಾಗಬೇಕಾದರೆ ಬೇಕಾಗುವ ಕನಿಷ್ಠ ಎಲೆಕ್ಟ್ರಾನ್ ಗಳ ಸಂಖ್ಯೆ ಎಂದರೆ
4
8
2
6
ಮೀಥೇನ್ ನ ಅಣುಸೂತ್ರ
C2H6
C3H8
CH4
CH6
ಕಾರ್ಬನ್ ಇತರೆ ಪರಮಾಣುಗಳ ಜೊತೆ ಬಂಧವನ್ನು ಏರ್ಪಡಿಸಿಕೊಂಡು ಬೃಹತ್ ಅಣುಗಳನ್ನು ಉಂಟುಮಾಡುವ ಕಾರ್ಬನ್ನ ಗುಣಕ್ಕೆ ಹೀಗೆನ್ನುವರು
ಕೆಟನೀಕರಣ
ಟೆಟ್ರಾ ವೇಲೆನ್ಸಿ
ಅನುರೂಪ ಶ್ರೇಣಿ
ಕ್ರಿಯಾಗುಂಪು
ಪರ್ಯಾಪ್ತ ಕಾರ್ಬನ್ ಸಂಯುಕ್ತಗಳು ಎಂದರೆ
ಎರಡು ಕಾರ್ಬನ್ ಪರಮಾಣುಗಳ ನಡುವೆ ಏಕ ಬಂಧ ಇರಬೇಕು
ಎರಡು ಕಾರ್ಬನ್ ಪರಮಾಣುಗಳ ನಡುವೆ ದ್ವಿ ಬಂಧ ಇರಬೇಕು
ಎರಡು ಕಾರ್ಬನ್ ಪರಮಾಣುಗಳ ನಡುವೆ ತ್ರಿ ಬಂಧ ಇರಬೇಕು
ಮೇಲಿನ ಯಾವುದೂ ಅಲ್ಲ
ಇವುಗಳಲ್ಲಿ ಯಾವ ಸಂಯುಕ್ತಗಳು ಹೆಚ್ಚು ಕ್ರಿಯಾಶೀಲವಾಗಿವೆ
ಪರ್ಯಾಪ್ತ ಸಂಯುಕ್ತಗಳು
ಅಪರ್ಯಾಪ್ತ ಸಂಯುಕ್ತಗಳು
ಮೇಲಿನ ಎರಡು ಸರಿ
ಯಾವುದು ಅಲ್ಲ
ಆಲ್ಕೀನ್ ಗಳಲ್ಲಿ ಕಂಡುಬರುವ ಬಂಧದ ಪ್ರಕಾರ
ಏಕ ಬಂಧ
ದ್ವಿ ಬಂಧ
ತ್ರಿ ಬಂಧ
ಮೇಲಿನ ಎಲ್ಲವೂ ಸರಿ
ಆಲ್ಕೇನು ಗಳ ಸಾಮಾನ್ಯ ಸೂತ್ರ
Cn Hn
Cn H2n+2
Cn H2n-2
Cn Hn
ಅತ್ಯಂತ ಸರಳ ಹೈಡ್ರೋಕಾರ್ಬನ್ ಎಂದರೆ
ಮಿಥೇನ್
ಈಥೇನ್
ಪ್ರೋಪೇನ್
ಬ್ಯೂಟೇನ್
ಅತ್ಯಂತ ಸರಳ ರಚನಾ ಸಮಾಂಗಿ ಎಂದರೆ
ಮಿಥೇನ್
ಈಥೇನ್
ಪ್ರೋಪೇನ್
ಬ್ಯೂಟೇನ್
ಸೈಕ್ಲೋ ಹೆಕ್ಸೇನ ನ ಅಣುಸೂತ್ರ
C6H6
C6H12
C6H8
C2H6
ಬೆಂಜೀನ್ ನ ಅಣುಸೂತ್ರ
C6H6
C6H12
C6H8
C2H6
ಎರಡು ಕ್ರಮಾನುಗತ ಕಾರ್ಬನ್ ಸಂಯುಕ್ತಗಳ ನಡುವೆ -CH2 ವ್ಯತ್ಯಾಸ ಇದ್ದರೆ ಅಂತಹ ಸಂಯುಕ್ತಗಳನ್ನು ಹೀಗೆಂದು ಕರೆಯುತ್ತಾರೆ
ಕೆಟನೀಕರಣ
ಟೆಟ್ರಾ ವೇಲೆನ್ಸಿ
ಅನುರೂಪ ಶ್ರೇಣಿ
ಕ್ರಿಯಾಗುಂಪು
ಆಲ್ಕೋಹಾಲ್ ಸಂಯುಕ್ತಗಳಲ್ಲಿ ಕಂಡುಬರುವ ಕ್ರಿಯಾ ಗುಂಪಿನ ಅಣುಸೂತ್ರ
-OH
-COOH
-CHO
-CO
ಕಾರ್ಬಾಕ್ಸಿಲಿಕ್ ಆಮ್ಲ ಸಂಯುಕ್ತಗಳಲ್ಲಿ ಕಂಡುಬರುವ ಕ್ರಿಯಾ ಗುಂಪಿನ ಅಣುಸೂತ್ರ
-OH
-COOH
-CHO
-CO
ಕ್ಲೋರೋ ಬ್ರೋಮೋ ಇದು ಯಾವ ಸಂಯುಕ್ತಗಳ ಪೂರ್ವಪ್ರತ್ಯಯ ವಾಗಿದೆ
ಆಲ್ಡಿಹೈಡ್
ಕೀಟೋನ್
ಹ್ಯಾಲೋ ಅಲ್ಕೆನ್
ಮೇಲಿನ ಯಾವುದೂ ಅಲ್ಲ
CH3CH2COOH ನ ಹೆಸರು
ಪ್ರೋಪನೊಯಿಕ್ ಆಮ್ಲ
ಪ್ರೋಪನಲ್
ಎಥನೋಯಿಕ್ ಆಮ್ಲ
ಎಥನಾಲ್
ಇವುಗಳು ಉರಿದು ಸ್ವಚ್ಛವಾದ ಜ್ವಾಲೆಯನ್ನು ನೀಡುತ್ತವೆ
ಪರ್ಯಾಪ್ತ ಸಂಯುಕ್ತಗಳು
ಅಪರ್ಯಾಪ್ತ ಸಂಯುಕ್ತಗಳು
ಮೇಲಿನ ಎರಡು ಸರಿ
ಯಾವುದು ಅಲ್ಲ
ಆಲ್ಕೋಹಾಲ್ ಗಳನ್ನು ಕಾರ್ಬಾಕ್ಸಿಲಿಕ್ ಆಮ್ಲಗಳ ನ್ನಾಗಿ ಪರಿವರ್ತಿಸಲು ಅವುಗಳನ್ನು ಈ ವಿಧಾನಕ್ಕೆ ಒಳಪಡಿಸಬೇಕು
ಉತ್ಕರ್ಷಣೆ
ಅಪಕರ್ಷಣೆ
ಮೇಲಿನ ಎರಡು ವಿಧಾನಗಳಿಂದ
ಮೇಲಿನ ಯಾವುದೂ ಅಲ್ಲ
ಕ್ರಿಯಾವರ್ಧಕ ದ ಸಹಾಯದಿಂದ ಅಪರ್ಯಾಪ್ತ ಹೈಡ್ರೋಕಾರ್ಬನ್ ಗಳಿಗೆ ಹೈಡ್ರೋಜನ್ ಅನ್ನು ಸೇರಿಸುವುದರ ಮೂಲಕ ಪರ್ಯಾಪ್ತ ಹೈಡ್ರೋಕಾರ್ಬನ್ ಗಳಾಗಿ ಪರಿವರ್ತಿಸುವ ಕ್ರಿಯೆಗೆ ಹೀಗೆನ್ನುವರು
ಕೆಟನೀಕರಣ
ಸಂಕಲನ ಕ್ರಿಯೆ
ಅನುರೂಪ ಶ್ರೇಣಿ
ಕ್ರಿಯಾಗುಂಪು
ಟಿಂಕ್ಚರ್ ಅಯೋಡಿನ್, ಕೆಮ್ಮಿನ ಔಷಧ ಮತ್ತು ಅನೇಕ ಔಷಧಿಗಳ ತಯಾರಿಕೆಯಲ್ಲಿ ಇವುಗಳನ್ನು ಬಳಸುತ್ತಾರೆ
ಆಲ್ಡಿಹೈಡ್ ಗಳು
ಕೀಟೋನ್ ಗಳು
ಹ್ಯಾಲೋ ಅಲ್ಕೆನ್ ಗಳು
ಆಲ್ಕೋಹಾಲ್ ಗಳು
ಇದನ್ನು ಉಪ್ಪಿನಕಾಯಿಯಲ್ಲಿ ಸಂರಕ್ಷಕವಾಗಿ ಬಳಸುತ್ತಾರೆ
ಅಸಿಟಿಕ್ ಆಮ್ಲ
ಪ್ರೋಪನಲ್
ಪ್ರೋಪೇನೋಯೇಟ್
ಎಥನಾಲ್
ಇವುಗಳನ್ನು ಸುವಾಸಿಕಾಗಳು ಹಾಗೂ ಸ್ವಾದ ಕಾರಕಗಳ ತಯಾರಿಕೆಗಳಲ್ಲಿ ಬಳಸುತ್ತಾರೆ
ಆಲ್ಡಿಹೈಡ್
ಆಲ್ಕೋಹಾಲ್ಗಳು
ಹ್ಯಾಲೋ ಅಲ್ಕೆನ್
ಎಸ್ಟರ್ ಗಳು
ಉದ್ದ ಸರಪಣಿಯ ಕಾರ್ಬಾಕ್ಸಿಲಿಕ್ ಆಮ್ಲಗಳ ಸೋಡಿಯಂ ಅಥವಾ ಪೊಟ್ಯಾಶಿಯಂ ಲವಣಗಳಿಗೆ ಹೀಗೆಂದು ಕರೆಯುತ್ತಾರೆ
ಸಾಬೂನು
ಮಾರ್ಜಕ
ಅಡಿಗೆ ಸೋಡಾ
ಜಿಪ್ಸಂ
ಇವು ಗಡಸು ನೀರಿನಲ್ಲಿಯು ಸಹ ಸ್ವಚ್ಛಗೊಳಿಸುತ್ತವೆ
ಸಾಬೂನು
ಮಾರ್ಜಕ
ಅಡಿಗೆ ಸೋಡಾ
ಜಿಪ್ಸಂ
ಸಾಬೂನು ನೀರು ಮತ್ತು ಜಿಡ್ಡು ನೊಂದಿಗೆ ವರ್ತಿಸಿ ಈ ರಚನೆಯನ್ನು ಉಂಟುಮಾಡುತ್ತದೆ
ಕವಲು ಸರಪಳಿ
ಮಿಸೆಲ್
ಉಂಗುರ ರಚನೆ
ಅಪರ್ಯಾಪ್ತ ರಚನೆ
ಈ ಕೆಳಗಿನ ಎಲ್ಲಾ ಆಲ್ಕೋಹಾಲ್ ಗಳಲ್ಲಿ ಇದು ಮಾತ್ರ ವಿಷಕಾರಿಯಾದ ಆಲ್ಕೋಹಾಲ್ ಆಗಿದೆ
ಮಿಥೆನಾಲ್
ಎಥನಾಲ್
ಪ್ರೋಪನಾಲ್
ಬ್ಯುಟೆನಾಲ್
ಈ ಸಮೀಕರಣವನ್ನು ಪೂರ್ಣಗೊಳಿಸಿ CH4 + Cl2 --> ______ + HCl
CH4Cl
CH3Cl
CH3Cl2
CH2Cl2
