WorksheetsGovernment High school, Mandagadde ,Ravi Prakash H S
Total questions: 25
Worksheet time: 13mins
ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ಆಮ್ಲವನ್ನು ನೀರಿನಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ತೀವ್ರ ಅಂತರುಷ್ಣಕ
ಆಮ್ಲ ಅಥವಾ ಪ್ರತ್ಯಾಮ್ಲ ವನ್ನು ನೀರಿನಲ್ಲಿ ವಿಲೀನಗೊಳಿಸುವ ಕ್ರಿಯೆ ತೀವ್ರ ಅಂತರುಷ್ಣಕ ಅಥವಾ ಬಹಿರುಷ್ಣಕ
ಆಮ್ಲವನ್ನು ನೀರಿನಲ್ಲಿ ವಿಲೀನಗೊಳಿಸುವ ಕ್ರಿಯೆ ತೀವ್ರ ಬಹಿರುಷ್ಣಕ
ಪ್ರತ್ಯಾಮ್ಲ ವನ್ನು ನೀರಿನಲ್ಲಿ ವಿಲೀನಗೊಳಿಸುವ ಕ್ರಿಯೆ ತೀವ್ರ ಅಂತರುಷ್ಣಕ
ಇದು ಉಭಯ ವರ್ತಿ ಆಕ್ಸೈಡ್
ಅಲ್ಯೂಮಿನಿಯಂ ಆಕ್ಸೈಡ್
ಕಬ್ಬಿಣದ ಆಕ್ಸೈಡ್
ತಾಮ್ರದ ಆಕ್ಸೈಡ್
ಇಂಗಾಲದ ಡೈಯಾಕ್ಸೈಡ್
ಕೆಂಪು ಲಿಟ್ಮಸ್ ಕಾಗದವನ್ನು ನೀಲಿ ಬಣ್ಣಕ್ಕೆ ತಿರುಗಿಸುವ ದ್ರಾವಣ
ನೈಟ್ರಿಕ್ ಆಮ್ಲ
ಸೋಡಿಯಂ ಹೈಡ್ರಾಕ್ಸೈಡ್
ಸಲ್ಫ್ಯೂರಿಕ್ ಆಮ್ಲ
ಹೈಡ್ರೋಕ್ಲೋರಿಕ್ ಆಮ್ಲ
ಸತು ವಿನೊಂದಿಗೆ ಸಾರರಿಕ್ತ ಸಲ್ಫ್ಯೂರಿಕ್ ಆಮ್ಲ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ
ಸಾರಜನಕ
ಜಲಜನಕ
ಆಮ್ಲಜನಕ
ಇಂಗಾಲದ ಡೈಯಾಕ್ಸೈಡ್
ಬಾಯಿಯ ಪಿಎಚ್ ಮೌಲ್ಯ ಇದಕ್ಕಿಂತ ಕಡಿಮೆಯಾದಾಗ ಹಲ್ಲಿನ ಸವೆತ ಉಂಟಾಗುತ್ತದೆ
7
5.5
8
14
ಮೊಸರಿನಲ್ಲಿ ಯಥೇಚ್ಛವಾಗಿ ಕಂಡುಬರುವ ಆಮ್ಲ
ಲ್ಯಾಕ್ಟಿಕ್ ಆಮ್ಲ
ಮೆಥನೊಯಿಕ್ ಆಮ್ಲ
ಟಾರ್ಟಾರಿಕ್ ಆಮ್ಲ
ಸಿಟ್ರಿಕ್ ಆಮ್ಲ
ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಗೆ ಈ ಅನಿಲ ಹಾಯಿಸಿದಾಗ ಅದು ಬಿಳಿ ಹಾಲಿನ ಬಣ್ಣದ ಕ್ಯಾಲ್ಸಿಯಂ ಕಾರ್ಬೊನೇಟ್ ಆಗಿ ಪರಿವರ್ತಿಸುತ್ತದೆ.
ಹೈಡ್ರೋಜನ್
ನೈಟ್ರೋಜನ್
ಕಾರ್ಬನ್ ಡೈಯಾಕ್ಸೈಡ್
ಕಾರ್ಬನ್ ಮೊನಾಕ್ಸೈಡ್
ಆಮ್ಲ ಅಥವಾ ಪ್ರತ್ಯಾಮ್ಲ ಎಷ್ಟು ಪ್ರಬಲವಾಗಿದೆ ಎಂಬುದನ್ನು ಕ್ರಮವಾಗಿ ಸೂಚಿಸುವ ಅಯಾನುಗಳು
ಹೈಡ್ರಾಕ್ಸಿಲ್ ಅಯಾನ್ ಮತ್ತು ಹೈಡ್ರೋಜನ್ ಅಯಾನ್
ಆಮ್ಲಜನಕದ ಅಯಾನ್ ಮತ್ತು ಪೊಟಾಶಿಯಂ ಅಯಾನ್
ಯಾವುದೂ ಅಲ್ಲ
ಹೈಡ್ರೋಜನ್ ಅಯಾನ್ ಮತ್ತು ಹೈಡ್ರಾಕ್ಸಿಲ್ ಅಯಾನ್
ಪಿಎಚ್ ಕಾಗದವನ್ನು ನೀಲಿ ಅಥವಾ ನೇರಳೆ ಬಣ್ಣಕ್ಕೆ ಬದಲಿ ಸುವ ದ್ರಾವಣ
ಸಕ್ಕರೆ ದ್ರಾವಣ
ಸಾಬೂನಿನ ದ್ರಾವಣ
ನೀರು
ನಿಂಬೆರಸ
ಆಮ್ಲೀಯ ಗುಣ ಹೊಂದಿರದ ವಸ್ತು
ಸಾಬೂನು ದ್ರಾವಣ
ನಿಂಬೆರಸ
ವಿನೆಗರ್
ಟೊಮೊಟೊ ರಸ
ತಟಸ್ಥ ದ್ರಾವಣದ ಪಿಎಚ್ ಮೌಲ್ಯ
8
14
7
2
ಹಲ್ಲಿನ ಎನಾಮಲ್ ಇದರಿಂದ ಆಗಿದೆ
ಕ್ಯಾಲ್ಸಿಯಂ ಮತ್ತು ವಿಟಮಿನ್
ಕ್ಯಾಲ್ಸಿಯಂ ಹೈಡ್ರಾಕ್ಸೈಡ್
ಕ್ಯಾಲ್ಸಿಯಂ ಹೈಡ್ರಾಕ್ಸಿ ಅಪಟೈಟ್
ಕ್ಯಾಲ್ಶಿಯಂ ಕಾರ್ಬೋನೇಟ್
ದ್ರಾವಣದಲ್ಲಿ ಹೈಡ್ರೋನಿಯಂ ಅಯಾನ್ ಗಳ ಪ್ರಮಾಣ ಹೆಚ್ಚಾದರೆ
ಆಮ್ಲೀಯತೆ ಕಡಿಮೆಯಾಗುತ್ತದೆ
ಆಮ್ಲೀಯತೆ ಹೆಚ್ಚುತ್ತದೆ
ಪ್ರತ್ಯಾಮ್ಲೀಯ ತೆ ಕಡಿಮೆಯಾಗುತ್ತದೆ
ಪ್ರತ್ಯಾಮ್ಲೀಯ ತೆ ಹೆಚ್ಚಾಗುತ್ತದೆ
ಆಮ್ಲ ಪ್ರತ್ಯಾಮ್ಲ ದೊಂದಿಗೆ ವರ್ತಿಸಿದಾಗ ಉಂಟಾಗುವ ಉತ್ಪನ್ನಗಳು
ನೀರು ಮತ್ತು ಭಾರಜಲ
ಲವಣ
ಲವಣ ಮತ್ತು ನೀರು
ಲೋಹ ಮತ್ತು ನೀರು
ಇವುಗಳಲ್ಲಿ ಯಾವ ಜೋಡಿ ಸರಿಹೊಂದುವುದಿಲ್ಲ
ಹುಣಸೆ -ಆಕ್ಸಾಲಿಕ್ ಆಮ್ಲ
ವಿನೆಗರ್- ಅಸಿಟಿಕ್ ಆಮ್ಲ
ಇರುವೆ ಕಡಿತ -ಮೆಥನೊಯಿಕ್ ಆಮ್ಲ
ಕಿತ್ತಳೆ -ಸಿಟ್ರಿಕ್ ಆಮ್ಲ
ಸಾಮಾನ್ಯವಾಗಿ ಪ್ರತ್ಯಾಮ್ಲಗಳು ಈ ರುಚಿ ಹೊಂದಿರುತ್ತವೆ
ಕಾರ
ಹುಳಿ
ಸಿಹಿ
ಕಹಿ
ಆಮ್ಲದ ರುಚಿ
ಸಿಹಿ
ಕಹಿ
ಹುಳಿ
ಸಿಹಿಕಹಿ
ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ಆಮ್ಲವು ನೀಲಿ ಲಿಟ್ಮಸ್ ಅನ್ನು ಕೆಂಪು ಬಣ್ಣಕ್ಕೆ ಬದಲಿಸುತ್ತದೆ
ಆಮ್ಲವು ಕೆಂಪು ಲಿಟ್ಮಸ್ ಅನ್ನು ನೀಲಿ ಬಣ್ಣಕ್ಕೆ ಬದಲಿಸುತ್ತದೆ
ಆಮ್ಲವು ಲಿಟ್ಮಸ್ ಕಾಗದದ ಬಣ್ಣವನ್ನು ಬದಲಿಸುವುದಿಲ್ಲ
ಶುದ್ದ ನೀರು ನೀಲಿ ಲಿಟ್ಮಸ್ ಅನ್ನು ಕೆಂಪು ಬಣ್ಣಕ್ಕೆ ಬದಲಿಸುತ್ತದೆ
ಇದು ಒಂದು ಆಮ್ಲ ಶಾಮಕ
ವಿನೆಗರ್
ಮೆಗ್ನೀಷಿಯಾದ ಹಾಲು
ಕ್ಯಾಲ್ಸಿಯಂ ಹೈಡ್ರಾಕ್ಸೈಡ್
ಸೋಡಿಯಂ ಹೈಡ್ರಾಕ್ಸೈಡ್
ಸೋಡಿಯಂ ಜಿಂಕೆಟ್ ನ ಸೂತ್ರ
NaZnO
Na2ZnO
Na2ZnO2
NaZnO2
ಪ್ರತ್ಯಾಮ್ಲ ವನ್ನು ಗುಲಾಬಿ ಬಣ್ಣಕ್ಕೆ ಬದಲಿಸುವ ವಸ್ತು
ಆಮ್ಲ
ಫಿನಾಫ್ತಲೀನ್
ಸೋಡಿಯಂ
ಸೋಡಿಯಂ ಕ್ಲೋರೈಡ್
ಈ ಅನಿಲದ ಬಳಿ ಉರಿಯುತ್ತಿರುವ ಬೆಂಕಿ ಕಡ್ಡಿಯನ್ನು ಹಿಡಿದಾಗ 'ಪಪ್' ಎಂಬ ಶಬ್ದ ಉಂಟಾಗುತ್ತದೆ
ಆಕ್ಸಿಜನ್
ಹೈಡ್ರೋಜನ್
ಕಾರ್ಬನ್ ಡೈಯಾಕ್ಸೈಡ್
ನೈಟ್ರೋಜನ್
ಲೋಹದ ಕಾರ್ಬೋನೇಟ್ ಗಳು ಆಮ್ಲಗಳೊಂದಿಗೆ ವರ್ತಿಸಿದಾಗ ಉಂಟಾಗುವ ಉತ್ಪನ್ನಗಳು
ಲವಣ ಮತ್ತು ನೀರು
ಲವಣ ಮತ್ತು ಕಾರ್ಬನ್ ಡೈಯಾಕ್ಸೈಡ್
ಲವಣ, ನೀರು ಮತ್ತು ಕಾರ್ಬನ್ ಡೈಆಕ್ಸೈಡ್
ಕಾರ್ಬನ್ ಡೈಆಕ್ಸೈಡ್ ಮತ್ತು ನೀರು
ಕ್ಯಾಲ್ಸಿಯಂ ಕಾರ್ಬೋನೇಟ್ ಇಲ್ಲದ ವಸ್ತು
ಸುಣ್ಣದಕಲ್ಲು
ಸೀಮೆಸುಣ್ಣ
ಅಮೃತಶಿಲೆ
ಮರಳು
ತುರಿಕೆ ಎಲೆಯಲ್ಲಿರುವ ಆಮ್ಲ
ಆಕ್ಸಾಲಿಕ್ ಆಮ್ಲ
ಸಿಟ್ರಿಕ್ ಆಮ್ಲ
ಮೆಥನೋಯಿಕ್ ಆಮ್ಲ
ಅಸಿಟಿಕ್ ಆಮ್ಲ
