wayground logo

Free Printable Worksheets

NEW

Font size

S
M
L
XL
Worksheets

ಜೀವಕ್ರಿಯೆಗಳು

Total questions: 30

Worksheet time: 10mins

Name
Class
Date
1.

ಕೆಳಗಿನವುಗಳಲ್ಲಿ ಜೀವಕ್ರಿಯೆ ಅಲ್ಲ

a)

ಪೋಷಣೆ

b)

ಬಾಷ್ಪವಿಸರ್ಜನೆ

c)

ವಿಸರ್ಜನೆ

d)

ಸಾಗಾಣಿಕೆ

2.

ದ್ಯುತಿ ಸಂಶ್ಲೇಷಣೆ ಕ್ರಿಯೆಯಲ್ಲಿ ಸಸ್ಯಗಳಿಂದ ವಿಸರ್ಜಿಸಲ್ಪಡುವ ಅನಿಲ

a)

ಕಾರ್ಬನ್ ಡೈ ಆಕ್ಸೈಡ್

b)

ಹೈಡ್ರೋಜನ್

c)

ನೈಟ್ರೋಜನ್

d)

ಆಕ್ಸಿಜನ್

3.

ಜೀವಕೋಶಗಳಲ್ಲಿ ಶಕ್ತಿ ಬಿಡುಗಡೆಯಾಗುವ ಕ್ರಿಯೆ ಯಾವುದೆಂದರೆ

a)

ಉಸಿರಾಟ

b)

ಪೋಷಣೆ

c)

ಸಾಗಾಣಿಕೆ

d)

ವಿಸರ್ಜನೆ

4.

ಮೇಲಿನ ಹೃದಯದ ನೀಳ ಛೇದ ನೋಟದ ಚಿತ್ರದಲ್ಲಿ ಆಕ್ಸಿಜನ್ ಸಹಿತ ರಕ್ತವನ್ನು ದೇಹದ ಎಲ್ಲ ಭಾಗಗಳಿಗೆ ಕೊಂಡೊಯ್ಯುವ ರಕ್ತನಾಳ ಯಾವುದು?

a)

ಮಹಾಪಧಮನಿ(ಅಯೋರ್ಟಾ)

b)

ಪುಪ್ಪುಸಕ ಅಪಧಮನಿ

c)

ಉಚ್ಛ ಅಭಿದಮನಿ

d)

ನೀಚ ಅಭಿದಮನಿ

5.

ಮೂತ್ರಪಿಂಡಗಳಲ್ಲಿ ರಕ್ತ ಶೋಧಿಸುವ ಘಟಕಗಳೆಂದರೆ

a)

ನ್ಯೂರಾನ್

b)

ನೆಫ್ರಾನ್

c)

ಮೂತ್ರನಾಳಗಳು

d)

ಮೂತ್ರಕೋಶ

6.

ಸಸ್ಯಗಳಲ್ಲಿ ನೀರು ಸಾಗಾಣಿಕಾ ಅಂಗಾಂಶ

a)

ಫ್ಲೋಯೆಮ್

b)

ಕ್ಸೈಲಮ್

c)

ಪೇರಂಕೈಮಾ

d)

ಕೋಲೆಂಕೈಮಾ

7.

ಸಸ್ಯಗಳಲ್ಲಿ ದ್ಯುತಿಸಂಶ್ಲೇಷಣೆಯಿಂದ ತಯಾರಾದ ಆಹಾರವನ್ನು ಸಸ್ಯದ ಇತರ ಭಾಗಗಳಿಗೆ ಸಾಗಿಸುವ ಅಂಗಾಂಶ

a)

ಪೇರೆಂಕೈಮಾ

b)

ಕ್ಸೈಲಮ್

c)

ಫ್ಲೋಯೆಮ್

d)

ಎಲೆಗಳು

8.

ಬಾಷ್ಪವಿಸರ್ಜನೆಯು ಸಸ್ಯದ ಈ ಭಾಗಗಳಲ್ಲಿ ಜರುಗುತ್ತದೆ

a)

ಬೇರುಗಳು

b)

ಪತ್ರರಂಧ್ರಗಳು

c)

ಎಲೆಗಳು

d)

ಕಾಂಡ

9.

ರಕ್ತದಿಂದ ದ್ರವವನ್ನು ಪ್ರತ್ಯೇಕಿಸುವ/ಶೋಧಿಸುವ ನೆಫ್ರಾನಿನ ಭಾಗವೆಂದರೆ

a)

ಗ್ಲಾಮೆರುಲಸ್

b)

ಬೌಮನ್ನನ ಕೋಶ

c)

ಸಂಗ್ರಾಹಕ ನಾಳ

d)

ಹೆನ್ಲೆಯ ಭಾಗ

10.

ಮಾನವನ ಹ್ರದಯದಲ್ಲಿ ಆಕ್ಸಿಜನ್ ಸಹಿತ ಮತ್ತು ಆಕ್ಸಿಜನ್ ರಹಿತ ರಕ್ತವು ಪ್ರತ್ಯೇಕವಾಗಿ ಸಂಗ್ರಹಿಸಿ ಪಂಪ್ ಮಾಡುವ ಹೃದಯದ ಭಾಗವು ಕಾರಣ

a)

ಸೆಪ್ಟಮ್

b)

ನಾಲ್ಕು ಕೋಣೆಯ ಹ್ರದಯ

c)

ಕವಾಟಗಳು

d)

ರಕ್ತನಾಳಗಳು

11.

ವಿಲೀನಗೊಳ್ಳಬಲ್ಲ ದ್ಯುತಿಸಂಶ್ಲೇಷಣೆಯ ಉತ್ಪನ್ನಗಳ ಸಾಗಾಣಿಕೆಯನ್ನು ಹೀಗೆನ್ನುತ್ತಾರೆ.

a)

ಬಾಷ್ಪವಿಸರ್ಜನೆ

b)

ವಸ್ತು ಸ್ತಾನಾಂತರಣ

c)

ಸಾಗಾಣಿಕೆ

d)

ವಿಸರ್ಜನೆ

12.

ಯೀಸ್ಟ್ ಕೋಶಗಳ ಉಸಿರಾಟ ಕ್ರಿಯೆಯಲ್ಲಿ ಆಕ್ಸಿಜನ್ ಅನುಪಸ್ಥಿತಿಯಲ್ಲಿ ಗ್ಲುಕೋಸ್ ಇದಾಗಿ ವಿಭಜಿಸಲ್ಪಡುವುದು

a)

ಈಥೈಲ್ ಆಲ್ಕೋಹಾಲ್

b)

ಲ್ಯಾಕ್ಟಿಕ್ ಆಮ್ಲ

c)

ಕಾರ್ಬನ್ ಡೈಆಕ್ಸೈಡ್

d)

ನೀರು

13.

ಸ್ನಾಯುಕೋಶಗಳಲ್ಲಿ ಆಕ್ಸಿಜನ್ ಅನುಪಸ್ಥಿತಿಯಲ್ಲಿ ಗ್ಲುಕೋಸ್ ಏನಾಗಿ ವಿಭಜಿಸಲ್ಪಡುತ್ತದೆ

a)

ಲ್ಯಾಕ್ಟಿಕ್ ಆಮ್ಲ

b)

ಕಾರ್ಬನ್ ಡೈ ಆಕ್ಸೈಡ್

c)

ಈಥೈಲ್ ಆಲ್ಕೋಹಾಲ್

d)

ನೀರು

14.

ಪಿತ್ತರಸದಲ್ಲಿರುವ ಕಿಣ್ವಗಳ ಕಾರ್ಯಗಳನ್ನು ಸರಿಯಾದ ಕ್ರಮದಲ್ಲಿ ಗುರ್ತಿಸಿ.

1)ಪ್ರೋಟೀನ್____X______> ಅಮೈನೋ ಆಮ್ಲಗಳು

2)ಕಾರ್ಬೊ ಹೈಡ್ರೇಟುಗಳು ___Y_____> ಸರಳ ಸಕ್ಕರೆಗಳು

3)ಕೊಬ್ಬುಗಳು ____Z____> ಕೊಬ್ಬಿನಾಮ್ಲ+ ಗ್ಲಿಸರಾಲ್

ಮೇಲಿನ ಕಾರ್ಯಗಳಲ್ಲಿ X,Y ಮತ್ತು Z ಗಳಲ್ಲಿ ಕ್ರಮವಾಗಿ ಪಿತ್ತರಸದ ಕಿಣ್ವಗಳೆಂದರೆ

a)

ಲೈಪೇಸ್,ಅಮೈಲೇಸ್ ಮತ್ತು ಟ್ರಪ್ಸಿನ್

b)

ಟ್ರಿಪ್ಸಿನ್,ಅಮೈಲೇಸ್ ಮತ್ತು ಲೈಪೇಸ್

c)

ಅಮೈಲೇಸ್,ಲೈಪೇಸ್ ಮತ್ತು ಟ್ರಿಪ್ಸಿನ್

15.

A ಮತ್ತು B ಎಂಬ ಇಬ್ಬರು ವ್ಯಕ್ತಿಗಳಲ್ಲಿ ರಕ್ತದ ಹೀಮೋಗ್ಲೋಬಿನ್ ಪ್ರಮಾಣ ಕ್ರಮವಾಗಿ 9 ಮತ್ತು 13 ಕಂಡು ಬಂದಿದೆ.ಅವರ ದೇಹಗಳಲ್ಲಿ ಆಕ್ಸಿಜನ್ ನ ಸರಬರಾಜಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾದ ಹೇಳಿಕೆಯಾಗಿದೆ.

a)

B ವ್ಯಕ್ತಿಯಲ್ಲಿ A ವ್ಯಕ್ತಿಗಿಂತ ಹೆಚ್ಚಾಗಿದೆ

b)

A ವ್ಯಕ್ತಿಯಲ್ಲಿ B ವ್ಯಕ್ತಿಗಿಂತ ಹೆಚ್ಚಾಗಿದೆ.

c)

ಇಬ್ಬರೂ ವ್ಯಕ್ತಿಗಳಲ್ಲಿ ಆಕ್ಸಿಜನ್ ಸರಬರಾಜು ಸಮನಾಗಿರುತ್ತದೆ

d)

ಆಕ್ಸಿಜನ್ ಸರಬರಾಜು ಮತ್ತು ಹೀಮೊಗ್ಲೋಬಿನ್ ನ ಪ್ರಮಾಣಕ್ಕೂ ಯಾವುದೇ ಸಂಬಂಧವಿಲ್ಲ

16.

ರಕ್ತ ಹೆಪ್ಪುಗಟ್ಟುವಿಕೆ ಕ್ರಿಯೆಯಲ್ಲಿ ಪಾತ್ರವಹಿಸುವ ರಕ್ತದ ಘಟಕಗಳೆಂದರೆ

a)

ಬಿಳಿ ರಕ್ತ ಕಣ

b)

ರಕ್ತದ ಪ್ಲಾಸ್ಮಾ

c)

ಕೆಂಪು ರಕ್ತ ಕಣ

d)

ಕಿರುತಟ್ಟೆ( ಪ್ಲೇಟ್ ಲೆಟ್ ಗಳು)

17.

ಮೂತ್ರಪಿಂಡಗಳು ರಕ್ತದಿಂದ ಶೋಧಿಸಲ್ಪಡುವ ನೈಟ್ರೋಜನ್ ತ್ಯಾಜ್ಯ

a)

ಫಾಸ್ಫಾರಿಕ್ ಆಮ್ಲ

b)

ಹೈಡ್ರೋ ಕ್ಲೋರಿಕ್ ಆಮ್ಲ

c)

ಯೂರಿಯಾ ಮತ್ತು ಯೂರಿಕ್ ಆಮ್ಲ

d)

ಇವೆಲ್ಲವೂ

18.

ಈ ಸಮೀಕರಣವನ್ನು ಪೂರ್ಣಗೊಳಿಸಿ

6CO2+12H2O====>

a)

C6H12O6+3O2+3H2O

b)

C6H12O6+6O2+6H2O

c)

2C6H12O6+2O2+3H2O

d)

ಯಾವುದೂ ಅಲ್ಲ

19.

ಮಾನವನ ಶ್ವಾಸಕೋಶಗಳಲ್ಲಿ ಕಂಡುಬರುವ ಬಲೂನಿನಂತಹ ರಚನೆಗಳಿಗೆ ಹೀಗೆನ್ನುವರು

a)

ಗಾಳಿ ಗೂಡುಗಳು(ಅಲ್ವೆಯೋಲೈ)

b)

ಬ್ರಾಂಕೈಗಳು

c)

ಬ್ರಾಂಕಿಯೋಲ್ ಗಳು

d)

ಶ್ವಾಸನಾಳ

20.

ಜೀವಕೋಶಗಳ ಜೈವಿಕ ಚಟುವಟಿಕೆಗಳಿಗೆ ಇಂಧನವಾಗಿ ಬಳಸಲ್ಪಡುವ ಉಸಿರಾಟದ ಉತ್ಪನ್ನ

a)

ಎ ಟಿ ಪಿ

b)

ಎ ಡಿ ಪಿ

c)

ಎನ್ ಎ ಡಿ ಪಿ

d)

ಡಿ ಎನ್ ಎ

21.

ಮಾನವನ ದೇಹದಲ್ಲಿ ರಕ್ತದ ಒಂದು ಸಂಪೂರ್ಣ ಚಲನೆಯಾಗಬೇಕಾದರೆ ಹೃದಯವನ್ನು ಎರೆಡುಬಾರಿ ಹಾದು ಹೋಗುವುದನ್ನು ಹೀಗೆನ್ನುತ್ತಾರೆ.

a)

ಕ್ರಿಯಾತ್ಮಕ ಪರಿಚಲನೆ

b)

ಪುಪ್ಪುಸಕ ಪರಿಚಲನೆ

c)

ದೈಹಿಕ ಪರಿಚಲನೆ

d)

ಇಮ್ಮಡಿ ಪರಿಚಲನೆ

22.

ಈ ಕೆಳಗಿನವುಗಳಲ್ಲಿ ಯಾವುದು ದೇಹದ ಎಲ್ಲ ಜೀವಕೋಶಗಳಿಗೆ ಆಕ್ಸಿಜನ್ ಪೂರೈಸುತ್ತದೆ

a)

ಕಿರುತಟ್ಟೆಗಳು(ಪ್ಲೇಟ್ ಲೆಟ್ ಗಳು)

b)

ಬಿಳಿರಕ್ತ ಕಣಗಳು

c)

ಹೀಮೋಗ್ಲೋಬಿನ್

d)

ಪ್ಲಾಸ್ಮಾ

23.

ಈ ಜೀವಿಯು ತನ್ನ ತಾತ್ಕಾಲಿಕ ಬೆರಳಿನಂತಹ ಜೀವಕೋಶದ ಮೇಲ್ಮೈ ಹೊರಚಾಚಿಕೆಗಳನ್ನು ಬಳಸಿ ಆಹಾರವನ್ನು ಪಡೆದುಕೊಳ್ಳುತ್ತದೆ

a)

ಬ್ಯಾಕ್ಟೀರಿಯಾ

b)

ಯೂಗ್ಲಿನಾ

c)

ಪ್ಯಾರಾಮೇಸಿಯಮ್

d)

ಅಮೀಬಾ

24.

ಗಾಳಿಗೆ ತೆರೆದ ಸಸ್ಯದ ಭಾಗಗಳಿಂದ ನೀರು ಆವಿ ರೂಪದಲ್ಲಿ ನಷ್ಟವಾಗುವ ಭೌತಿಕ ಕ್ರಿಯೆಯನ್ನು ಹೀಗೆನ್ನುವರು

a)

ಜಲಚಕ್ರ

b)

ಸ್ಥಾನಾಂತರ

c)

ಬಾಷ್ಪ ವಿಸರ್ಜನೆ

d)

ಆವಿಕರಣ

25.

ಜೀವಿಗಳ ಜೈವಿಕ ಪ್ರಕ್ರಿಯೆಗಳು ನಿರಂತರವಾಗಿ ಇಡಲು ಅಗತ್ಯವಾದ ಆಹಾರವನ್ನು ತೆಗೆದುಕೊಳ್ಳುವ ಪ್ರಕ್ರಿಯೆ

a)

ಪೋಷಣೆ

b)

ವಿಸರ್ಜನೆ

c)

ಜೀರ್ಣಕ್ರಿಯೆ

d)

ಸಾಗಾಣಿಕೆ

26.

ಪರಪೋಷಕ ಜೀವಿಗಳೆಂದರೆ

a)

ತಮ್ಮ ಆಹಾರವನ್ನು ಇತರ ಜೀವಿಗಳಿಗೆ ಪೂರೈಸುವುದು.

b)

ತಮ್ಮ ಆಹಾರವನ್ನು ಇತರೆ ಜೀವಿಗಳ ಮೂಲಕ ತರಿಸಿಕೊಳ್ಳುವುದು

c)

ತಮ್ಮ ಆಹಾರಕ್ಕಾಗಿ ಇತರೆ ಜೀವಿಗಳನ್ನು ಅವಲಂಬಿಸಿರುವುದು

d)

ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವುದು

27.

ನೆಲವಾಸಿಗಳಿಗೆ ಹೋಲಿಸಿದರೆ ಜಲಚರ ಪ್ರಾಣಿಗಳಲ್ಲಿ ಉಸಿರಾಟದ ವೇಗ ಹಚ್ಚಾಗಿರಲು ಕಾರಣ

a)

ಜಲಚರಗಳ ರಕ್ತದ ಒತ್ತಡ ತುಂಬಾ ಹೆಚ್ಚಾಗಿರುವುದರಿಂದ

b)

ಅವು ಶ್ವಾಸಕೋಶಗಳು ಹೊಂದಿಲ್ಲ

c)

ವಾತಾವರಣದ ಆಕ್ಸಿಜನ್ ಪ್ರಮಾಣಕ್ಕಿಂತ ನೀರಿನಲ್ಲಿ ಕಡಿಮೆ ಪ್ರಮಾಣದ ಆಕ್ಸಿಜನ್ ಕರಗಿರುತ್ತದೆ

d)

ಅವುಗಳಿಗೆ ಎಲ್ಲಾ ರೀತಿಯ ಜೀವಕೋಶಗಳು ಇರುವುದಿಲ್ಲ

28.

ದ್ಯುತಿ ಸಂಶ್ಲೇಷಣೆಯ ಅಂತಿಮ ಉತ್ಪನ್ನವೆಂದರೆ

a)

ಪಿಷ್ಟ (ಕಾರ್ಬೊ ಹೈಡ್ರೇಟ್ ಗಳು)

b)

ಹೈಡ್ರೋಜನ್

c)

ಕಾರ್ಬನ್ ಡೈ ಆಕ್ಸೈಡ್

d)

ನೈಟ್ರೋಜನ್

29.

ಪೈರುವೇಟ್ ನ ವಿಭಜನೆಯಿಂದ ಕಾರ್ಬನ್ ಡೈ ಆಕ್ಸೈಡ್,ನೀರು ಮತ್ತು ಶಕ್ತಿಯು ಬಿಡುಗಡೆಯಾಗುವ ಜೀವಕೋಶದ ಭಾಗವೆಂದರೆ

a)

ಕೋಶ ದ್ರವ್ಯ

b)

ಮೈಟೊಕಾಂಡ್ರಿಯಾ

c)

ಕ್ಲೊರೊಪ್ಲಾಸ್ಟ್

d)

ನ್ಯೂಕ್ಲಿಯಸ್

30.

ಸ್ವಪೋಷಕ ಪೋಷಣಾ ವಿಧಾನದ ಅವಶ್ಯಕತೆಗಳೆಂದರೆ

a)

ಕಾರ್ಬನ್ ಡೈ ಆಕ್ಸೈಡ್ ಮತ್ತು ನೀರು

b)

ಕ್ಲೋರೊಫಿಲ್

c)

ಸೌರಬೆಳಕು

d)

ಮೇಲಿನ ಎಲ್ಲವೂ