wayground logo

Free Printable Worksheets

Font size

S
M
L
XL
Worksheets

ಮೆದುಳಿಗೆ ಕಸರತ್ತು ನೀಡುವ ಒಗಟುಗಳು

Total questions: 17

Worksheet time: 13mins

Name
Class
Date
1.

ಗೂಡಿನಲ್ಲಿನ ಪಕ್ಷಿ ನಾಡೆಲ್ಲ ನೋಡುತ್ತದೆ

a)

ಕಣ್ಣು

b)

ಕಾಲು

c)

ಕೈ

d)

ಕ್ಯಾಮರ

2.

ಎಲೆ ಇಲ್ಲ, ಸುಣ್ಣ ಇಲ್ಲ, ಬಣ್ಣವಿಲ್ಲ ತುಟಿ ಕೆಂಪಗಾಗಿದೆ, ಮಳೆಯಿಲ್ಲ , ಬೆಲೆಯಿಲ್ಲ , ಮೈ ಹಸಿರಾಗಿದೆ

a)

ನವಿಲು

b)

ಕಾಗೆ

c)

ಗಿಳಿ

d)

ಪಾರಿವಾಳ

3.

ಸುತ್ತ ಮುತ್ತ ಸುಣ್ಣದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ ಇದು ಏನು

a)

ಗೋಡೆ

b)

ಮೊಟ್ಟೆ

c)

ಸುಣ್ಣ

d)

ಅಂಗಿ

4.

ಊಟಕ್ಕೆ ಕುಳಿತವರು ಹನ್ನೆರಡು ಜನರು, ಬಡಿಸುವವರು ಇಬ್ಬರು, ಒಬ್ಬನು ಒಬ್ಬರಿಗೆ ಬಡಿಸುವಸ್ಟರಲ್ಲಿ ಇನ್ನೊಬ್ಬನು ಹನ್ನೆರಡು ಜನಕ್ಕೂ ಬಡಿಸಿರುತ್ತಾನೆ

a)

ನೀರು

b)

ಅಕ್ಕಿ

c)

ನದಿ

d)

ಗಡಿಯಾರ

5.

ಸಾಗರ ಪುತ್ರ ,ಸಾರಿನ ಮಿತ್ರ ನಾನ್ಯಾರು?

a)

ಸರೋವರ

b)

ನೀರು

c)

ಉಪ್ಪು

d)

ನದಿ

6.

ಕಡಿದರೆ ಕಚ್ಚೋಕೆ ಆಗೋಲ್ಲ , ಹಿಡದ್ರೆ ಮುಟ್ಟೋಕೆ ಸಿಗೋಲ್ಲ ನಾನ್ಯಾರು ಗೊತ್ತೆ?

a)

ನೀರು

b)

ಹಣ್ಣು

c)

ಕಾಯಿ

d)

ಸೇಬು

7.

ಹಾರಿದರೆ ಹನುಮಂತ, ಕೂತರೆ ಮುನಿ, ಕೂಗಿದರೆ ಕಾಡಿನ ಒಡೆಯ ನಾನ್ಯಾರು?

a)

ಹದ್ದು

b)

ಮುಗುಂಸಿ

c)

ಹಾವು

d)

ಕಪ್ಪೆ

8.

ನೀರಿಲ್ಲದ ಸಮುದ್ರ, ಜನರಿಲ್ಲದ ಪಟ್ಟಣ, ಸಂಚಾರವಿಲ್ಲದ ಮಾರ್ಗಗಳು ಎಲ್ಲಿ?

a)

ಭೂಮಿ

b)

ನಕ್ಷೆ

c)

ರಸ್ತೆ

d)

ಆಕಾಶ

9.

ಅಂಗಡಿಯಿಂದ ತರೋದು ಮುಂದಿಟ್ಟುಕೊಂಡು ಅಳೋದು ನಾನ್ಯಾರು?

a)

ಬೆಳುಳ್ಳಿ

b)

ಮೆಣಸಿನಕಾಯಿ

c)

ಈರುಳ್ಳಿ

d)

ಸೊಪ್ಪು

10.

ಕಪ್ಪು ಕಂಬಳಿ ನೆಂಟ ಎಲ್ಲವನು ನಾಶ ಮಾಡೋಕೆ ಹೊಂಟ ನನ್ಯಾರು?

a)

ಹಲ್ಲಿ

b)

ಇಲಿ

c)

ಬೆಕ್ಕು

d)

ನಾಯಿ

11.

ಅಕ್ಷರಗಳಿದ್ದರೂ ಪುಸ್ತಕವಲ್ಲ,ಸಿಂಹವಿದ್ದರೂ ಅರಣ್ಯವಲ್ಲ,ದುಂಡಾಗಿದ್ದರೂ ಚಕ್ರವಲ್ಲ,ನಾನ್ಯಾರು?

a)

ಭೂಪಟ

b)

ಸಿಂಹ

c)

ನಾಣ್ಯ

d)

ಕಾಡು

12.

ಬಾಯಲ್ಲಿ ಹಲ್ಲಿಲ್ಲ, ಮಯಲ್ಲಿ ಶಕ್ತಿ ಇಲ್ಲ , ತಲೆಯಲ್ಲಿ ಕೂದಲಿಲ್ಲ , ಆದ್ರೂ ಎಲ್ರುನ್ನು ಕಾಡತಿನಿ ನಾನ್ಯಾರು?

a)

ನೊಣ

b)

ಕೀಟ

c)

ಸೊಳ್ಳೆ

d)

ತಿಗಣೆ

13.

ಹಗಲಲ್ಲಿ ಮಾಯಾ ರಾತ್ರಿಯಲ್ಲಿ ಪ್ರತ್ಯಕ್ಷ ?ನಾನ್ಯಾರು ಹೇಳಿ?

a)

ಆಕಾಶ

b)

ಸೂರ್ಯ

c)

ಚಂದ್ರ

d)

ನಕ್ಷತ್ರ

14.

ಹೊಂಚು ಹಾಕಿದ ದೆವ್ವ, ಬೇಡ ಬೇಡ ಎಂದರೂ ಜೂತೆಯೇ ಬರುತ್ತೆ

a)

ಗಾಡಿ

b)

ದೆವ್ವ

c)

ನೆರಳು

d)

ಮನುಷ್ಯ

15.

ನೋಡಿದರೆ ನೋಟಗಳು ,ನಕ್ಕರೆ ನಗುಗಳು ,ಒಡೆದರೆ ತುಂಡುಗಳು.

a)

ಗರಗಸ

b)

ಪಾತ್ರೆ

c)

ರೊಟ್ಟಿ

d)

ಕನ್ನಡಿ

16.

ತಮ್ಮಂಗೆ ಮೂರು ಕಣ್ಣು ಅಮ್ಮಂಗೆ ಒಂದೇ ಕಣ್ಣು

a)

ಮೆಣಸಿನಕಾಯಿ

b)

ತೆಂಗಿನಕಾಯಿ

c)

ಮಾವಿನಕಾಯಿ

d)

ಕುಂಬಳಕಾಯಿ

17.

ಒಂದು ಹಸ್ತಕ್ಕೆ ನೂರೆಂಟು ಬೆರಳು

a)

ಸೀಬೆಕಾಯಿ

b)

ಮರ

c)

ಬಾಳೆಗೊನೆ

d)

ಎಲೆ