NEW
Font size
WorksheetsACID BASE AND SALT
Total questions: 16
Worksheet time: 8mins
ಮಾವಿನಹಣ್ಣು, ಲಿಂಬೆಹಣ್ಣು ಮತ್ತು ಮೊಸಂಬಿ ಹಣ್ಣುಗಳು ಹುಳಿಯಾಗಿರಲು ಕಾರಣ ಅವುಗಳಲ್ಲಿರುವ
ಅಸಿಟಿಕ್ ಆಮ್ಲ
ಸಿಟ್ರೀಕ್ ಆಮ್ಲ
ಲ್ಯಾಕ್ಟಿಕ್ ಆಮ್ಲ
ಆಕ್ಸಾಲಿಕ್ ಆಮ್ಲ
ಈ ಚಿತ್ರವು ಸಾರೀಕೃತ ಸಲ್ಫೂರಿಕ್ ಆಮ್ಲ ಮತ್ತು ಸೋಡಿಯಂ ಕ್ಲೋರೈಡ್ ವರ್ತಿಸಿದಾಗ ಹೈಡ್ರೋಕ್ಲೋರಿಕ್ ಆಮ್ಲ ಬಿಡುಗಡೆಯಾಗುವುದನ್ನು ತೋರಿಸುತ್ತದೆ.ನೀಲಿ ಲಿಟ್ಮಸ್ ಕಾಗದದಿಂದ ಬಿಡುಗಡೆಯಾದ ಅನಿಲವನ್ನು ಪರೀಕ್ಷಿಸಿದಾಗ ಬಣ್ಣದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಏಕೆಂದರೆ
ನೀಲಿ ಲಿಟ್ಮಸ್ ಕಾಗದ ಶುಷ್ಕವಾಗಿದೆ
ನೀಲಿ ಲಿಟ್ಮಸ್ ಕಾಗದ ಒದ್ದೆಯಾಗಿದೆ
ಆಮ್ಲದಲ್ಲಿ ನೀಲಿ ಲಿಟ್ಮಸ್ ಕಾಗದದ ಬಣ್ಣ ಬದಲಾಗುವುದಿಲ್ಲ
ನೀಲಿ ಲಿಟ್ಮಸ್ ಕಾಗದವನ್ನು ನಿರ್ಗಮನಾಳದ ಬಹಳಷ್ಟು ಸಮೀಪ ತರಲಾಗಿದೆ.
ಈ ಕೆಳಗಿನ ಯಾವ ಸೂಚಕ ಆಮ್ಲೀಯ ಮಾದ್ಯಮದಲ್ಲಿ ಕೆಂಪು ಬಣ್ಣಕ್ಕೆ ತಿರುಗುತ್ತದೆ.
ಫಿನಾಪ್ತಲೀನ್ ದ್ರಾವಣ
ನೀಲಿ ಲಿಟ್ಮಸ್ ಕಾಗದ
ಮಿಥೈಲ್ ಆರೆಂಜ್ ದ್ರಾವಣ
ನೀಲಿ ಲಿಟ್ಮಸ್ ಕಾಗದ ಮತ್ತು ಮಿಥೈಲ್ ಆರೆಂಜ್ ದ್ರಾವಣ
ಆಮ್ಲದೊಂದಿಗೆ ಲೋಹಗಳು ವರ್ತಿಸಿದಾಗ ಬಿಡುಗಡೆಯಾಗುವ ಅನಿಲ
ಕಾರ್ಬನ್ ಡೈ ಆಕ್ಸೈಡ್
ಹೈಡ್ರೋಜನ್
ಸಾರಜನಕ
ಆಮ್ಲಜನಕ
ಉರಿಯುತ್ತಿರುವ ಮೇಣದ ಬತ್ತಿಯನ್ನು ಬಿಡುಗಡೆಯಾದ ಅನಿಲದ ಹತ್ತಿರಕ್ಕೆ ಪರೀಕ್ಷಿಸಲು ತಂದಾಗ ಅದು ಪಾಪ್ ಶಬ್ದದೊಂದಿಗೆ ಉರಿದರೆ ಬಿಡುಗಡೆಯಾದ ಅನಿಲ
ಹೈಡ್ರೋಜನ್
ಆಕ್ಸಿಜನ್
ಕಾರ್ಬನ್ ಡೈ ಆಕ್ಸೈಡ್
ಸಲ್ಫರ್ ಡೈ ಆಕ್ಸೈಡ್
ರಾಸಾಯನಿಕ ಕ್ರಿಯೆಯಲ್ಲಿ ಬಿಡುಗಡೆಯಾದ ಅನಿಲ ಕಾರ್ಬನ್ ಡೈ ಆಕ್ಸೈಡ್ ಎಂಬುವುದನ್ನು ಈ ಕೆಳಗಿನ ಯಾವ ವಿಧಾನದಿಂದ ಪತ್ತೆ ಹಚ್ಚುವಿರಿ?
ಬಿಡುಗಡೆಯಾದ ಅನಿಲದ ಸಮೀಪ ಮೇಣದ ಬತ್ತಿಯನ್ನು ತಂದಾಗ ಪಾಪ್ ಶಬ್ದದೊಂದಿಗೆ ಅನಿಲ ಉರಿಯುತ್ತದೆ
ಮೇಣದ ಬತ್ತಿ ಪ್ರಕಾಶಮಾನವಾಗಿ ಉರಿಯುತ್ತದೆ
ಬಿಡುಗಡೆಯಾದ ಅನಿಲವನ್ನು ಸುಣ್ಣದ ತಿಳಿ ನೀರಿನಲ್ಲಿ ಹಾಯಿಸಿದಾಗ ಹಾಲಿನಂತೆ ಬೆಳ್ಳಗಾಗುತ್ತದೆ.
ಸುಣ್ಣದ ತಿಳಿ ನೀರು ಕೆಂಪಗಾಗುತ್ತದೆ
ಆಮ್ಲ ಮತ್ತು ಪ್ರತ್ಯಾಮ್ಲಗಳು ವರ್ತಿಸಿದಾಗ ಬಿಡುಗಡೆಯಾಗುವ ವಸ್ತುಗಳು
ಲವಣ ಮತ್ತು ಆಮ್ಲ
ಆಮ್ಲ ಮತ್ತು ಲವಣ
ಆಮ್ಲ, ಲವಣ ಮತ್ತು ನೀರು
ಲವಣ ಮತ್ತು ನೀರು
ಶುದ್ದ ನೀರಿನ ಪಿ.ಎಚ್ ಮೌಲ್ಯ
6
7
5
1
ರಕ್ತದ ಪಿ.ಎಚ್ ಮೌಲ್ಯ
7
7.4
2.2
14
ನಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಬೇಕಾದ ಪಿ.ಎಚ್ ಮೌಲ್ಯ
7 ರಿಂದ 7.8
2 ರಿಂದ 2.4
5 ರಿಂದ 5.6
14
ಬಾಯಿಯಲ್ಲಿ ಪಿ.ಎಚ್ ಮೌಲ್ಯ 5.5 ಕ್ಕಿಂತ ಕಡಿಮೆಯಾದಾಗ
ಹಲ್ಲುಗಳು ಗಟ್ಟಿಯಾಗುತ್ತವೆ
ಹಲ್ಲಿನ ಸವೆತ ಉಂಟಾಗುತ್ತದೆ
ಹಲ್ಲುಗಳು ಉದುರುತ್ತವೆ
ಹಲ್ಲುಗಳು ಹೊಳೆಯುತ್ತವೆ
ಟೊಮ್ಯಾಟೋ ಹಣ್ಣಿನಲ್ಲಿರುವ ಆಮ್ಲ
ಸಿಟ್ರಿಕ್ ಆಮ್ಲ
ಆಸಿಟಿಕ್ ಆಮ್ಲ
ಟಾರ್ಟಾರಿಕ್ ಆಮ್ಲ
ಆಕ್ಸಾಲಿಕ್ ಆಮ್ಲ
ಹುಣಸೆ ಹಣ್ಣಿನಲ್ಲಿರುವ ಆಮ್ಲ
ಲ್ಯಾಕ್ಟಿಕ್ ಆಮ್ಲ
ಟಾರ್ಟಾರಿಕ್ ಆಮ್ಲ
ಸಿಟ್ರಿಕ್ ಆಮ್ಲ
ಮೆಥೆನೊಯಿಕ್ ಆಮ್ಲ
ಇರುವೆ ಕಡಿದಾಗ ಬಿಡುಗಡೆಯಾಗುವ ಅನಿಲ
ಸಿಟ್ರಿಕ್ ಆಮ್ಲ
ಲಾಕ್ಟಿಕ್ ಆಮ್ಲ
ಮೆಥೆನೊಯಿಕ್ ಆಮ್ಲ
ಆಕ್ಸಾಲಿಕ್ ಆಮ್ಲ
ತುರಿಕೆ ಗಿಡದ ಎಲೆಗಳ ಚುಚ್ಚುವ ಕೂದಲುಗಳಿಂದ ಬಿಡುಗಡೆಯಾಗುವ ಆಮ್ಲ
ಮೆಥೆನೊಯಿಕ್ ಆಮ್ಲ
ಸಿಟ್ರಿಕ್ ಆಮ್ಲ
ಅಸಿಟಿಕ್ ಆಮ್ಲ
ಆಕ್ಸಾಲಿಕ್ ಆಮ್ಲ
ಜೇನುನೋಣ ಕಡಿದಾಗ ಉಂಟಾಗುವ ಉರಿಯನ್ನು ಶಮನಗೊಳಿಸಲು ಲೇಪಿಸಬಹುದಾದ ವಸ್ತು
ಅಡುಗೆ ಉಪ್ಪು
ಸಕ್ಕರೆ
ಅಡುಗೆ ಸೋಡಾ
ವಾಷಿಂಗ್ ಸೋಡಾ
