NEW
Font size
Worksheets"ಮೋಜಿನ ಆಟ ಕಲಿಕೆಯ ಪಾಠ"
Total questions: 20
Worksheet time: 10mins
ಕನ್ನಡ ವರ್ಣಮಾಲೆಯಲ್ಲಿ ಒಟ್ಟು .............ಅಕ್ಷರಗಳಿವೆ.
೪೮
೪೬
೪೯
ಥ ಅಕ್ಷರವನ್ನು ..........ಅಕ್ಷರ ಎಂದು ಕರೆಯುತ್ತೇವೆ.
ಅಲ್ಪಪ್ರಾಣ
ಮಹಾಪ್ರಾಣ
ಅನುನಾಸಿಕ
ಅಂ ಮತ್ತು ಅಃ ಅಕ್ಷರಗಳನ್ನು ............... ಎಂದು ಕರೆಯಲಾಗುತ್ತದೆ
ಯೋಗವಾಹಗಳು
ಸ್ವರಗಳು
ವ್ಯಂಜನಗಳು
ಗಣಪ ಈ ಪದದಲ್ಲಿರುವ ಅನುನಾಸಿಕ ಅಕ್ಷರ .........
ಗ
ಣ
ಪ
ಊ ಅಕ್ಷರವು ............. ಸ್ವರಕ್ಕೆ ಉದಾಹರಣೆ.
ದೀರ್ಘಸ್ವರ
ಹ್ರಸ್ವಸ್ವರ
ಅವರ್ಗೀಯ ವ್ಯಂಜನ
ಕನ್ನಡ ವರ್ಣಮಾಲೆಯಲ್ಲಿರುವ ವರ್ಗೀಯ ವ್ಯಂಜನಾಕ್ಷರಗಳ ಸಂಖ್ಯೆ .............
೨೫
೨೨
೨೩
ಅವನು ಈ ಪದದಲ್ಲಿರುವ ಅವರ್ಗೀಯ ವ್ಯಂಜನಾಕ್ಷರ ..............
ವ
ಅ
ನು
ಡ್ + ಋ = ...........
ಡು
ಡೃ
ಡೂ
ಜನ್ಮ ಪದ ..........ಒತ್ತಕ್ಷರಕ್ಕೆ ಉದಾಹರಣೆ
ಸಜಾತೀಯ
ವಿಜಾತೀಯ
ಸಜಾತೀಯ ಮತ್ತು ವಿಜಾತೀಯ
ಮನೆ + ಅಲ್ಲಿ = .............
ಮನೆಯಲ್ಲಿ
ಮನೆಅಲ್ಲಿ
ಮನೆನಲ್ಲಿ
ನೆಲ + ಅನ್ನು = .........
ನೆಲಅನ್ನು
ನೆಲೆಯನ್ನು
ನೆಲವನ್ನು
ನೀನು ಪದದ ಬಹುವಚನ ರೂಪ
ನೀನೂ
ನೀವು
ಅವರು
ರಾಜ ಪದದ ಸ್ತ್ರೀರೂಪ ...........
ರಾಜರು
ರಾಣಿ
ರಾಜಗಳು
ಮುನಿ ಪದದ ನಾನಾರ್ಥ ........
ಕೋಪ ಮತ್ತು ಋಷಿ
ನಗು ಮತ್ತು ಅಳು
ಕೋಪ ಮತ್ತು ನಗು
ಬೆಳ್ಳಗಿರುವುದೆಲ್ಲ ..........
ಮೊಸರಲ್ಲ
ಮಜ್ಜಿಗೆಯಲ್ಲ
ಹಾಲಲ್ಲ
ಕಾಯಕ ಪದದ ಸಮಾನಾರ್ಥಕ ಪದ.............
ಕೆಲಸ
ಕೆಲಸ ಮಾಡದಿರುವುದು
ಯಾವುದೂ ಅಲ್ಲ
ಶಬ್ದ ಪದದ ವಿರುದ್ಧ ಪದ ..........
ಅಶಬ್ದ
ನಿಶಬ್ದ
ಅಪಶಬ್ದ
ಕಸಕಡ್ಡಿ ಇದು .......... ಪದಕ್ಕೆ ಉದಾಹರಣೆ
ಜೋಡಿಪದ
ದ್ವಿರುಕ್ತಿ
ವಿರುದ್ಧಾರ್ಥಕ
ಅಯ್ಯೋ! ಎಷ್ಟು ದೊಡ್ಡ ಹಾವು ಈ ವಾಕ್ಯದಲ್ಲಿರುವ ಚಿಹ್ನೆ..........
ಪ್ರಶ್ನಾರ್ಥಕ
ಭಾವಸೂಚಕ
ಅಲ್ಪವಿರಾಮ
ಈ ಮಣ್ಣಿನ ಕಣಕಣದಲ್ಲೂ ಶೌರ್ಯ ಅಡಗಿದೆ. ಈ ವಾಕ್ಯದಲ್ಲಿರುವ ದ್ವಿರುಕ್ತಿ ಪದ...........
ಮಣ್ಣಿನ
ಶೌರ್ಯ
ಕಣಕಣ
