NEW
Font size
Worksheetsಕನ್ನಡ ರಸಪ್ರಶ್ನೆ.1
Total questions: 20
Worksheet time: 40mins
1.ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣಗಳ ಸಂಖ್ಯೆ..................
13
25
10
09
2.ಏಕೈಕ ಎಂಬುದು ಈ ಸಂಧಿಗೆ ಉದಾಹರಣೆಯಾಗಿದೆ .
ಸುವರ್ಣ ದೀರ್ಘ
ಗುಣ
ವೃದ್ಧಿಿ
ಯಣ್
3.ಗಮಕ ಸಮಾಸಕ್ಕೆ ಉದಾಹರಣೆಯಾದ ಪದವಿದು...
ಅರಮನೆ
ಮಾಡಿದಡುಗೆ
ಸಪ್ತಸ್ವರಗಳು
ಹಿಂದಲೆ
4.ನೆತ್ತಿಯೊಳ್ ಪದದಲ್ಲಿರುವ ವಿಭಕ್ತಿ ಪ್ರತ್ಯಯವಿದು...
ಒಳ್ - ದ್ವಿತೀಯ
ಒಳ್ - ಸಪ್ತಮಿ
ಒಳ್ - ತೃತೀಯ
ಒಳ್ - ಚತುರ್ಥಿ
5.ಈ ಕೆಳಗಿನವುಗಳಲ್ಲಿ ಅಂಕಿತನಾಮವಾದ ಪದವಿದು...
ಸೈನಿಕ
ತಪಸ್ವಿನಿ
ಶಬರಿ
ಮರ
6.ಅರ್ಕ ಪದದ ತದ್ಭವ ರೂಪ
ಅಕ್ಕ
ಎಕ್ಕ
ಅಂಕುಶ
ಕೊಠಾರ
7.ಕಂದ:ಮಾತ್ರೆಗಣ::ವೃತ್ತ:........
ಅಂಶಗಣ
ಸಂಯೋಗಗಣ
ಮಾತ್ರೆಗಣ
ಅಕ್ಷರಗಣ
8.ಮಾಡು ಪದದ ನಿಷೇದಾರ್ಥಕ ರೂಪವಿದು....
ಮಾಡಲಿ
ಮಾಡುವನು
ಮಾಡನು
ಮಾಡಿಯಾನು
9.ಕಾರವಾರದಲ್ಲಿ ಮಲೇರಿಯಾ ಹಬ್ಬಿತು. ಈ ವಾಕ್ಯವು
ಸಂಯೋಜಿತ
ಸಾಮಾನ್ಯ
ಮಿಶ್ರ
ಕ್ರಿಯಾತ್ಮಕ
10.ನಂಬಿಕೆ... ಪದವು ಈ ವ್ಯಾಕರಣಾಂಶವಾಗಿದೆ...
ತದ್ದಿತಾಂತ ಭಾವನಾಮ
ಕೃದಂತ ಭಾವನಾಮ
ತದ್ದಿತಾಂತ ಅವ್ಯಯ
ಕೃದಂತ ಅವ್ಯಯ
11.ಇವುಗಳಲ್ಲಿ ಅಕರ್ಮಕ ಧಾತುವಿದು...
ಮಾಡು
ನೋಡು
ಮಲಗು
ತಿನ್ನು
12.ತಲೆ-ಗಿಲೆ: ಜೋಡುನುಡಿ:: ನಟ್ಟನಡುವೆ:...........
ಅನುಕರಣಾವ್ಯಯ
ಅವಧಾರಣಾರ್ಥಕಾವ್ಯಯ
ದ್ವಿರುಕ್ತಿ
ಕ್ರಿಯಾರ್ಥಕಾವ್ಯಯ
13.ಪಾರಿಭಾಷಿಕ ಪದಗಳನ್ನು ಬಳಸುವಾಗ ಈ ಲೇಖನ ಚಿಹ್ನೆಯನ್ನು ಬಯಸುತ್ತೇವೆ...
ಉದ್ಧರಣ
ವಾಕ್ಯವೇಷ್ಟನ
ಅರ್ಧವಿರಾಮ
ಅಲ್ಪವಿರಾಮ
14.ಅರ್ತಿ : ಪ್ರೀತಿ :: ಸುರಭಿ:............
ಕುರಿ
ಆನೆ
ಕುದುರೆ
ಕಾಮಧೇನು
15.ತ್ರಿಪದಿ: ಮೂರು ಸಾಲು:: ವೃತ್ತ:........
ಆರು
ನಾಲ್ಕು
ಹದಿನಾಲ್ಕು
ಎರಡು
16.ಗುರು ಲಘು ನಡುವಿರೆ.........
ಮನಗಣ
ಸತಗಣ
ಭಯಗಣ
ಜರಗಣ
17. ಕಂದಪದ್ಯ:64::ಭಾಮಿನಿ ಷಟ್ಪದಿ:.......
102
106
108
110
18.ಪ್ರೀತಿಯ ಹಣತೆ... ಇದು ಈ ಅಲಂಕಾರವಾಗಿದೆ
ಉಪಮಾ
ರೂಪಕ
ಉತ್ಷ್ರೇಕ್ಷೆ
ದೃಷ್ಟಾಂತ
19.ನಜಭಜಜಜರ: ಚಂಪಕಮಾಲೆ:: ಭರನಭಭರಲಗು:............
ಸ್ರಗ್ದರೆ
ಶಾರ್ದೂಲ
ಉತ್ಪಲಮಾಲೆ
ಮಾಹಾಸ್ರಗ್ದರೆ
20.ಈ ಕೆಳಗಿನವುಗಳಲ್ಲಿ ಸಂಬಂಧಾರ್ಥಕಾವ್ಯಯಕ್ಕೆ ಉದಾಹರಣೆಯಾದ ಪದವಿದು...
ಸಾಕು
ಆದ್ದರಿಂದ
ಸುಯ್ಯನೆ
ಅದುವೇ
