NEW
Font size
Worksheets"ಅಲಂಕಾರಗಳು ರಸಪ್ರಶ್ನೆ ಕಾರ್ಯಕ್ರಮ" ರಚನೆ:- ಎಫ್ ಜಿ ಜಾಡರ್ ಶಿಕ್ಷಕರು
Total questions: 20
Worksheet time: 10mins
ಶಬ್ದ ಅಥವಾ ಪದಗಳ ಜೋಡಣೆಯ ಮೂಲಕ ಕಾವ್ಯ ಅಥವಾ ಮಾತಿನ ಸೌಂದರ್ಯ ಹೆಚ್ಚಿದರೆ
ಉಪಮಾಲಂಕಾರ
ರೂಪಕ ಅಲಂಕಾರ
ಅರ್ಥಾಲಂಕಾರ
ಶಬ್ದಾಲಂಕಾರ
ಪದಗಳ ಅರ್ಥ ಚಮತ್ಕಾರದಿಂದ ಕಾವ್ಯದ ಅಥವಾ ಅರ್ಥದ ಸೌಂದರ್ಯ ಹೆಚ್ಚಿದರೆ
ಯಮಕ
ಚಿತ್ರಕವಿತ್ವ
ಅರ್ಥಾಲಂಕಾರ
ಅನುಪ್ರಾಸ
"ಎಳಗಿಳಿಗಳ ಬಳಗಗಳು ನಳನಳಿಸಿ ಬೆಳೆದ ಕಳವೆಯ ಎಳೆಯ ಕಾಳಿಗೆ ಎಳಸಿ ಬಂದವು" ಇದು ------- ಅಲಂಕಾರಕ್ಕೆ ಉದಾಹರಣೆ
ವೃತ್ತ್ಯನುಪ್ರಾಸ
ಛೇಕಾನುಪ್ರಾಸ
ಯಮಕ
ಚಿತ್ರಕವಿತ್ವ
ಎರಡೆರಡು ವ್ಯಂಜನಗಳು ಪುನರಾವರ್ತನೆಗೊಂಡರೆ---- ಎನ್ನುತ್ತಾರೆ
ಯಮಕ
ಚಿತ್ರಕವಿತ್ವ
ಶಬ್ದಾಲಂಕಾರ
ಛೇಕಾನುಪ್ರಾಸ
ಕೆಲದೊಳ್ ಪುಳಿಂದಿಯಿರಿ ಪ
ರ್ಬುಲಿ ಬಂದೊಡಮಂಜನಳ್ಕ ನೋಡಂನೋಡಂ
ಚಲದಿಂ ಕಾಡಂಕಾಡಂ
ಸಲೆ ಪಸಿವಂ ಮರೆದು ತಣಿದು ಬೇಡಂಬೇಡಂ ಇದು ----- ಅಲಂಕಾರಕ್ಕೆ ಉದಾಹರಣೆ
ಛೇಕಾನುಪ್ರಾಸ
ಉಪಮಾ
ರೂಪಕ
ಯಮಕ
ಮೂರು ಅಥವಾ ಅದಕ್ಕಿಂತ ಹೆಚ್ಚು ಅಕ್ಷರಗಳುಳ್ಳ ಪದವಾಗಲಿ, ಪದ ಭಾಗವಾಗಲಿ ಒಂದು ಪದ್ಯದ ಆದಿ , ಮಧ್ಯ ಅಥವಾ ಅಂತ್ಯದಲ್ಲಿ ನಿಯತವಾಗಿ ಬಂದರೆ ಅದು
ಯಮಕ
ಚಿತ್ರಕವಿತ್ವ
ಅನುಪ್ರಾಸ
ಅರ್ಥಾಲಂಕಾರ
ನಿರೋಷ್ಠ್ಯ, ತಾಲವ್ಯ, ಏಕಾಕ್ಷರ, ದ್ವ್ಯಕ್ಷರ, ತ್ರ್ಯಕ್ಷರ, ಹಾರಬಂಧ, ಮುರಜಬಂಧ ಇತ್ಯಾದಿ ಪ್ರಕಾರಗಳು ಕಂಡುಬರುವುದು
ದೃಷ್ಟಾಂತ ಅಲಂಕಾರ
ಚಿತ್ರಕವಿತ್ವ
ರೂಪಕ
ವೃತ್ತ್ಯನುಪ್ರಾಸ
ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಹೇಳುವುದೇ
ರೂಪಕಾಲಂಕಾರ
ದೃಷ್ಟಾಂತ ಅಲಂಕಾರ
ಉತ್ಪ್ರೇಕ್ಷಾಲಂಕಾರ
ಉಪಮಾಲಂಕಾರ
ಅತಿ ಸಾಮ್ಯದಿಂದದಿಂದಾಗಿ ಉಪಮೇಯ ಉಪಮಾನಗಳಲ್ಲಿ ಅಭೇದವನ್ನು ಹೇಳಿ ವರ್ಣಿಸಿದಾಗ ಅದು-
ಉಪಮಾಲಂಕಾರ
ರೂಪಕ ಅಲಂಕಾರ
ದೃಷ್ಟಾಂತ ಅಲಂಕಾರ
ಅರ್ಥಾಂತರನ್ಯಾಸಾಲಂಕಾರ
ಎರಡು ಬೇರೆ ಬೇರೆ ವಾಕ್ಯಗಳಲ್ಲಿ ಅರ್ಥ ಸಾದೃಶ್ಯದಿಂದ ಬಿಂಬ ಪ್ರತಿಬಿಂಬ ಭಾವವು ತೋರಿ ಬಂದರೆ ಅದು
ಅರ್ಥಾಂತರನ್ಯಾಸಾಲಂಕಾರ
ಉಪಮಾಲಂಕಾರ
ರೂಪಕಾಲಂಕಾರ
ದೃಷ್ಟಾಂತಾಲಂಕಾರ
ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದ ಅಥವಾ ಸಾಮಾನ್ಯ ವಾಕ್ಯವನ್ನು ವಿಶೇಷ ವಾಕ್ಯದಿಂದ ಸಮರ್ಥನೆ ಮಾಡುವುದೇ
ಅರ್ಥಾಂತರನ್ಯಾಸಾಲಂಕಾರ
ಶ್ಲೇಷಾಲಂಕಾರ
ಯಮಕ
ಚಿತ್ರಕವಿತ್ವ
ಒಂದು ಪದವು ಒಂದಕ್ಕಿಂತ ಹೆಚ್ಚು ಅರ್ಥ ಕೊಡುವಂತಿದ್ದರೆ ಅಂತಹ ಪದಕ್ಕೆ 'ಶ್ಲೇಷ' ಪದ ಎಂದು ಹೆಸರು, ಇಂತಹ ಶ್ಲೇಷಾರ್ಥಗಳನ್ನು ನೀಡಬಲ್ಲ ಪದಗಳಿರುವ ಅಲಂಕಾರವನ್ನು
ಶ್ಲೇಷಾಲಂಕಾರ
ಅರ್ಥಾಂತರನ್ಯಾಸಾಲಂಕಾರ
ಉತ್ಪ್ರೇಕ್ಷಾಲಂಕಾರ
ರೂಪಕಾಲಂಕಾರ
ಆತನು ಪರೀಕ್ಷೆಯಲ್ಲಿ ಪ್ರಥಮಸ್ಥಾನ ಪಡೆದು ಉತ್ತೀರ್ಣರಾದನು. ಬುದ್ಧಿವಂತರಾದ ಮಕ್ಕಳಿಗೆ ಪರೀಕ್ಷೆಯೊಂದು ಲೆಕ್ಕವೇ? ಈ ವಾಕ್ಯ ----- ಅಲಂಕಾರಕ್ಕೆ ಉದಾಹರಣೆ
ಉಪಮಾ
ರೂಪಕಾಲಂಕಾರ
ಅರ್ಥಾಂತರನ್ಯಾಸಾಲಂಕಾರ
ಶ್ಲೇಷಾಲಂಕಾರ
ಉಪಮೇಯವಾದ ವಸ್ತುವನ್ನು ಅಥವಾ ಸನ್ನಿವೇಶವನ್ನು ಉಪಮಾನವಾದ ವಸ್ತುವನ್ನಾಗಿ ಅಥವಾ ಸನ್ನಿವೇಶವನ್ನಾಗಿ ಕಲ್ಪಿಸುವುದೇ........
ಉತ್ಪ್ರೇಕ್ಷಾಲಂಕಾರ
ದೃಷ್ಟಾಂತ ಅಲಂಕಾರ
ರೂಪಕ ಅಲಂಕಾರ
ಉಪಮಾಲಂಕಾರ
ಮಾತು ಬಲ್ಲವನಿಗೆ ಜಗಳವಿಲ್ಲ; ಊಟ ಬಲ್ಲವನಿಗೆ ರೋಗವಿಲ್ಲ ಇದು ............. ಅಲಂಕಾರ
ಉತ್ಪ್ರೇಕ್ಷಾಲಂಕಾರ
ದೃಷ್ಟಾಂತಾಲಂಕಾರ
ಅರ್ಥಾಂತರನ್ಯಾಸಾಲಂಕಾರ
ಯಮಕಾಲಂಕಾರ
ಅಚ್ಛೋದ ಸರೋವರವು ತ್ರೈಲೋಕ್ಯಲಕ್ಷ್ಮಿಯು ತನ್ನ ಸೌಂದರ್ಯವನ್ನು ನೋಡಲು ಮಾಡಿಟ್ಟ ರನ್ನಗನ್ನಡಿಯೋ ಎಂಬಂತೆ ಶೋಭಿಸಿತು ಇದು
ಉಪಮಾಲಂಕಾರ
ರೂಪಕಾಲಂಕಾರ
ಅರ್ಥಾಂತರನ್ಯಾಸಾಲಂಕಾರ
ಉತ್ಪ್ರೇಕ್ಷಾಲಂಕಾರ
ಅಳ್ಳಿರಿಯುತಿಪ್ಪ ಎಮ್ಮ ಒಡಲಬೇಗೆಯ ಬೆಂಕಿಯುರಿ ನಿನ್ನನಿರಿಯದೆ ಪೇಳು ವಿಶ್ವಾಮಿತ್ರ ಇಲ್ಲಿ ಬಳಸಿದ ಅಲಂಕಾರ
ಉಪಮಾಲಂಕಾರ
ಶ್ಲೇಷಾಲಂಕಾರ
ರೂಪಕಾಲಂಕಾರ
ಉತ್ಪ್ರೇಕ್ಷಾಲಂಕಾರ
'ನೀಚರಿಗೆ ಮಾಡಿದ ಉಪಕಾರವು ಹಾವಿಗೆ ಹಾಲೆರೆದಂತೆ' ಇದು ....... ಅಲಂಕಾರಕ್ಕೆ ಉದಾಹರಣೆ
ಉಪಮಾಲಂಕಾರ
ರೂಪಕಾಲಂಕಾರ
ದೃಷ್ಟಾಂತ ಅಲಂಕಾರ
ಅರ್ಥಾಂತರನ್ಯಾಸಾಲಂಕಾರ
'ಮರವೇರಿದ ಮರ್ಕಟನಂತೆ' ಈ ವಾಕ್ಯದಲ್ಲಿ ಉಪಮೇಯವನ್ನು ಗುರುತಿಸಿ
ಮರ
ಮರ್ಕಟ
ಅಂತೆ
ಲುಪ್ತವಾಗಿದೆ(ಸ್ಪಷ್ಟವಾಗಿಲ್ಲ)
ಅತಿಶಯ ಪದಾರ್ಥ ನಿಕರ
ಪ್ರತೀತಿಯಂ ಪಡೆವ ಪಾದವಿನ್ಯಾಸಂ ಭೂ
ನುತಮಾಗದಲ್ತನಿರ್ದೋ
ಷತೆಯಿಂದಲ್ಲದೆ ಸಮಂತು ಕವಿಗಂ ರವಿಗಂ ಇದು .... ಅಲಂಕಾರಕ್ಕೆ ಉದಾಹರಣೆ
ಶ್ಲೇಷಾಲಂಕಾರ
ಚಿತ್ರಕವಿತ್ವ
ಯಮಕ
ಅನುಪ್ರಾಸ
