Worksheets೧೦ನೇ ತರಗತಿ, ಪ್ರಥಮ ಭಾಷೆ ಕನ್ನಡ, ಗದ್ಯ ಪಾಠ-೭ ವೃಕ್ಷ ಸಾಕ್ಷಿ
Total questions: 20
Worksheet time: 10mins
1. ಛಂದಸ್ಸಿನಲ್ಲಿ ಪದ್ಯದ ಪ್ರತಿ ಪಾದಕ್ಕೆ ಪ್ರಸ್ತಾರ ಹಾಕಿ, ನಿರ್ದಿಷ್ಟ ಸಂಖ್ಯೆಗೆ ಅನುಗುಣವಾಗಿ ಅಕ್ಷರಗಳ, ಅಂಶಗಳ ಅಥವಾ ಮಾತ್ರೆಗಳ ಆಧಾರದ ಮೇಲೆ ಮಾಡಿದ ಗುಂಪನ್ನು -----------ಎನ್ನುವರು.
1. ಯತಿ
2. ಅಂಶ ಗಣ
3. ಅಕ್ಷರ ಗಣ
4. ಗಣ
2. ಲಘುವಂದರೆ;
1. ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರ.
2. ಲಘು ಮತ್ತು ಗುರು
3. ಎರಡು ಮಾತ್ರಾ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರ.
4. ಮೂರು ಮಾತ್ರಾ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರ.
3. ಎರಡು ಅಥವಾ ಎರಡಕ್ಕಿಂತ ಹೆಚ್ಚು ಮಾತ್ರಾ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರವನ್ನು ಹೀಗೆನ್ನುವರು;
1. ಲಘು
2. ಗುರು
3. ಹೃಸ್ವ ಸ್ವರ
4. ಸ್ವರ
4.ಇವು ಗಣದ 3 ವಿಧಗಳಾಗಿವೆ;
1. ಹೃಸ್ವ ಸ್ವರ, ದೀರ್ಘ ಸ್ವರ, ಪ್ಲುತ ಸ್ವರ
2. ಪಾದ, ಪ್ರಾಸ, ಯತಿ
3. ಅಕ್ಷರ ಗಣ, ಅಂಶ ಗಣ, ಮಾತ್ರಾಗಣ
4. ಯ ಗಣ, ಮ ಗಣ, ರ ಗಣ
5. ಇವು ಮಾತ್ರಾಗಣ ಆಧಾರಿತ ಛಂದಸ್ಸುಗಳು;
1. ಕಂದ, ರಗಳೆ, ಷಟ್ಪದಿ
2. ಸಾಂಗತ್ಯ, ತ್ರಿಪದಿ, ಚಂಪೂ
3. ಸಾಂಗತ್ಯ, ತ್ರಿಪದಿ, ಷಟ್ಪದಿ
4. ಕಂದ, ರಗಳೆ, ತ್ರಿಪದಿ
6. ಕಂದ ಪದ್ಯದಲ್ಲಿರುವ ಸಾಲುಗಳ ಸಂಖ್ಯೆ;
1. 3
2. 4
3. 6
4. 2
7. ಕಂದ ಪದ್ಯದಲ್ಲಿ ಈ ಸಾಲುಗಳು ಪರಸ್ಪರ ಸಮನಾಗಿರುತ್ತವೆ;
1. 1 ಮತ್ತು 4, 2 ಮತ್ತು 3
2. 1 ಮತ್ತು 2, 3 ಮತ್ತು 4
3. 3 ಮತ್ತು 6, 2 ಮತ್ತು 4
4. 1 ಮತ್ತು 3, 2 ಮತ್ತು 4
8. ಕಂದ ಪದ್ಯದ 1 ಮತ್ತು 3ನೇ ಸಾಲಿನಲ್ಲಿ -------ಮಾತ್ರೆಯ 3 ಗಣಗಳು ಬಂದು -------ಮಾತ್ರೆಗಳನ್ನು ಹೊಂದಿರುತ್ತದೆ;
1. 2, 6
2. 3, 9
3. 4, 12
4. 5, 15
9. ಕಂದ ಪದ್ಯದ 2 ಮತ್ತು 4ನೇ ಸಾಲಿನಲ್ಲಿ -------ಮಾತ್ರೆಯ 5 ಗಣಗಳು ಬಂದು ----------ಮಾತ್ರೆಗಳನ್ನು ಹೊಂದಿರುತ್ತದೆ;
1. 3, 15
2. 4, 20
3. 5, 25
2, 10
10. ಕಂದ ಪದ್ಯದಲ್ಲಿ ಬರುವ ಒಟ್ಟು ಮಾತ್ರೆಗಳ ಸಂಖ್ಯೆ;
೧. 1. 32
2. 64
3. 102
4. 74
11. ಪರೀಕ್ಷೆಯಲ್ಲಿ ವಿದ್ಯಾರ್ಥಿ/ನಿಯರಿಗೆ ಪ್ರಸ್ತಾರ ಹಾಕಿ, ಗಣ ವಿಭಾಗಿಸಿ, ಛಂದಸ್ಸಿನ ಹೆಸರು ಬರೆಯಲು ನೀಡಲಾಗುವ ಕಂದ ಪದ್ಯದ ಸಾಲುಗಳ ಸಂಖ್ಯೆ ---------
1. 3
2. 1
3. 4
4. 2
12. ಪರೀಕ್ಷೆಯಲ್ಲಿ ವಿದ್ಯಾರ್ಥಿ/ನಿಯರು ಕಂದ ಪದ್ಯ ಛಂದಸ್ಸನ್ನು ಹೀಗೆ ಸುಲಭವಾಗಿ ಗುರುತಿಸಬಹುದು;
1. 2 ಸಾಲುಗಳನ್ನು ಪರೀಕ್ಷೆಗೆ ನೀಡುವುದರಿಂದ 'ಕಂದ' ಎಂದು ನೆನಪಿಟ್ಟುಕೊಳ್ಳುವ ಮೂಲಕ,
ಕಂದ ಪದ್ಯದಲ್ಲಿ ಬರುವ ಗಣಗಳ ಸಂಖ್ಯೆಯ ಮೂಲಕ,
2. ಕಂದ ಪದ್ಯದಲ್ಲಿ ಬರುವ ಒಟ್ಟು ಮಾತ್ರೆಗಳ ಸಂಖ್ಯೆಯ ಮೂಲಕ,
4. ವಿಷಮ ಗಣ ಸ್ಥಾನದಲ್ಲಿ ಮಧ್ಯ ಗುರುವಿನ ಗಣ ಬರುವುದಿಲ್ಲ ಎಂಬುದನ್ನು ನೆನಪಿಡುವ ಮೂಲಕ,
13. ಪದ್ಯದ ಪ್ರತಿ ಪಾದದಲ್ಲಿರುವ ಅಕ್ಷರಗಳನ್ನು ಮೂರು ಮೂರು ಅಕ್ಷರಗಳ ಒಂದೊಂದು ಗುಂಪಾಗಿ ವಿಂಗಡಿಸುವುದನ್ನು ---------ಎನ್ನುವರು.
1. ಮಾತ್ರಾ ಗಣ
2. ಅಕ್ಷರ ಗಣ
3. ಗಣ
4. ಅಂಶ ಗಣ
14. 'ಮನಸಿಗೆ ಭಯವಾಗಿ ಜರ ಬಂದು ಸತ್ತ' - ಈ ವಾಕ್ಯದ ಮೂಲಕ ಈ ಗಣದ 8 ವಿಧಗಳನ್ನು ನೆನಪಿಡಬಹುದು;
1. ಅಂಶ ಗಣ
2. ಮಾತ್ರಾ ಗಣ
3. ಅಕ್ಷರ ಗಣ
4. ಗಣ
15. ಗುರು ಮೂರು ಬಂದರೆ ------ ಗಣ; ಲಘು ಮೂರು ಬಂದರೆ ------- ಗಣ.
1. ಜ, ರ
2. ಸ, ತ
3. ಭ, ಯ
4. ಮ, ನ
16. ಗುರು ಮೊದಲಲ್ಲಿ ಬಂದರೆ ------ ಗಣ; ಲಘು ಮೊದಲಲ್ಲಿ ಬಂದರೆ ------- ಗಣ.
1. ಜ, ರ
2. ಭ, ಯ
3. ಮ, ನ
4. ಸ, ತ
17. ಗುರು ನಡುವೆ ಬಂದರೆ ----- ಗಣ; ಲಘು ನಡುವೆ ಬಂದರೆ ------ ಗಣವಾಗಿದೆ.
1. ಮ, ನ
2. ಸ, ತ
3. ಭ, ಯ
4. ಜ, ರ
18. ಗುರು ಕೊನೆಯಲ್ಲಿ ಬಂದರೆ -----ಗಣ; ಲಘು ಕೊನೆಯಲ್ಲಿ ಬಂದರೆ ------- ಗಣ;
1. ಸ, ತ
2. ಭ, ಯ
3. ಮ, ನ
4. ಜ, ರ
19. ಅಕ್ಷರ ಗಣದ ವೃತ್ತಗಳನ್ನು ಹೀಗೆನ್ನುವರು;
1. ಮಹಾ ವೃತ್ತಗಳು
2. ಖ್ಯಾತ ಕರ್ನಾಟಕ ವೃತ್ತಗಳು
3. ಕರ್ನಾಟಕ ವೃತ್ತಗಳು
4. ಅಕ್ಷರ ಗಣ ಆಧಾರಿತ ಛಂದಸ್ಸುಗಳು
ಖ್ಯಾತ ಕರ್ನಾಟಕ ವೃತ್ತಗಳ ಸಂಖ್ಯೆ --------
1. 4
2. 5
3. 6
4. 8
