wayground logo

Free Printable Worksheets

Font size

S
M
L
XL
Worksheets

KSEEB ೧ನೇ ಮಾದರಿ ಪ್ರಶ್ನೆಪತ್ರಿಕೆಯ ೨&೩ ಅಂಕದ ರಸಪ್ರಶ್ನೆ

Total questions: 16

Worksheet time: 12mins

Name
Class
Date
1.

ನಿರ್ಜೀವವಾಗಿದ್ದ ಮಗುವನ್ನು ನೋಡಿ ಮುದುಕಿ ನಿರಾಶೆಯಿಂದ ಹೇಳಿದ ಮಾತುಗಳನ್ನು ತಿಳಿಸಿ?

a)

ನಿರ್ಜೀವವಾಗಿರುವ ಮಗುವನ್ನು ನೋಡಿ ಮುದುಕಿ ನಿರಾಸೆಯಿಂದ ಇಷ್ಟು ವರ್ಷಗಳಿಂದಲೂ ಹಂಬಲಿಸಿ ಹುಟ್ಟಿದ ಮಗು ಕೊನೆಗೂ ದಕ್ಕಲಿಲ್ಲವಲ್ಲ?

b)

ಈ ಯುದ್ಧ ಇಲ್ಲದೆ ಹೋಗಿದ್ದರೆ ನನ್ನ ಮಗುವನ್ನು ಹೇಗಾದರೂ ಬದುಕಿಸಿ ಕೊಳ್ಳುತ್ತಿದ್ದೆವಲ್ಲ

c)

ಈ ಸತ್ತ ಮಗುವನ್ನುನೀವೇ ತೆಗೆದುಕೊಂಡು ಹೋಗಿ

d)

ದೇವರೇ! ಈ ಮನುಷ್ಯರಿಗೆ ಎಂತಹ ಬುದ್ಧಿ ಕೊಡುತ್ತೀಯಾ ಎಂದು ಹೇಳಿದಳು

2.

ಶಬರಿಯು ರಾಮ-ಲಕ್ಷ್ಮಣರನ್ನು ಉಪಚರಿಸಿದ ರೀತಿಯನ್ನು ತಿಳಿಸಿ

a)

ನೋಡಿದ ತಕ್ಷಣ ಅವನ ಕಾಲಿಗೆ ನೀರು ಹಾಕಿದಳು

b)

ರಾಮಲಕ್ಷ್ಮಣರನ್ನು ಕಂಡು ಬೆರಗಾಗಿ, ಹತ್ತಿರಕ್ಕೆ ಬಂದು, ಮೈಯನ್ನ ಮುಟ್ಟಿ ಕಾಲಿಗೆ ಬಿದ್ದು ನಮಸ್ಕರಿಸಿ ಕೈ ಕಣ್ಣಿಗೊತ್ತಿಕೊಂಡುಳು

c)

ಬಗೆಬಗೆಯ ಸುವಾಸನೆಯುಳ್ಳ ಹೂಮಾಲೆಯನ್ನು ಕೊರಳಿಗೆ ಹಾಕಿ ಸಂತಸಪಟ್ಟಳು

d)

ಜಗದಲ್ಲಿ ಇದರಷ್ಟು ರುಚಿಯಾದ ಹಣ್ಣೆ ಇಲ್ಲ ನಿಮಗೆಂದೇ ತಂದೆನು ಎಂದು ಹೇಳುತ್ತಾ ಸವಿಯಾದ ಹಣ್ಣುಗಳನ್ನು ನೀಡಿ ಉಪಚರಿಸಿದರು

3.

ಹಣಕಾಸು ನೀತಿಯಲ್ಲಿ ವಿಶ್ವೇಶ್ವರಯ್ಯ ಅವರು ಮಾಡಿದ ಮಾರ್ಪಾಡುಗಳಾವುವು?

a)

ವಿಶ್ವೇಶ್ವರಯ್ಯ ಅವರು ಕ್ರಿ ಶ 1913 ರಲ್ಲಿ ಮೈಸೂರು ಬ್ಯಾಂಕ್ ಅನ್ನು ಸ್ಥಾಪಿಸಿದರು. ಕೈಗಾರಿಕೆಗಳ ಅಭಿವೃದ್ಧಿಗೆ ಫೀಡರ್ ಬ್ಯಾಂಕ್ ಹಾಗೂ ಕೈಗಾರಿಕಾ ಹೂಡಿಕೆ ಮತ್ತು ಅಭಿವೃದ್ಧಿ ನಿಧಿಗಳು ರಚಿತಗೊಂಡವು

b)

1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು

c)

ಸಾರ್ವಜನಿಕ ಜೀವ ವಿಮಾ ಯೋಜನೆ ಜಾರಿಗೆ ತಂದರು ರೈತರಿಗೆ ಹಾಗೂ ಕರಕುಶಲ ಕೆಲಸಗಾರರಿಗೆ ಸಾಲದ ಸೌಲಭ್ಯಗಳನ್ನು ನೀಡಲು ಪ್ರಾಂತೀಯ ಸಹಕಾರಿ ಬ್ಯಾಂಕುಗಳನ್ನು ಸ್ಥಾಪಿಸಿದರು

d)

ರಾಜ್ಯದ ಆಸ್ತಿಯನ್ನು ಹೆಚ್ಚಿಸಿ ಆದಾಯ ತರುವುದರ ಮೂಲಕ ಅಭಿವೃದ್ಧಿ ಕಾರ್ಯಗಳ ಪ್ರಭಾವವನ್ನು ಅಳೆಯಲು ಅನುಕೂಲವಾಗುವಂತೆ ಆಯವ್ಯಯದಲ್ಲಿ ಹೊಸ ದೃಷ್ಟಿಕೋನವನ್ನು ಕಂಡುಕೊಂಡರು

4.

ಧರ್ಮಬುದ್ಧಿಗೆ ದುಷ್ಟಬುದ್ಧಿಯು ನೀಡಿದ ಸಲಹೆಯನ್ನು ತಿಳಿಸಿ

a)

ಅರ್ಧರಾತ್ರಿಯಲ್ಲಿ ಧರ್ಮ ಬುದ್ಧಿಯು ದುರ್ಬುದ್ಧಿ ಯಾದ ದುಷ್ಟಬುದ್ಧಿಯನ್ನು ಕರೆದು ಹೊನ್ನನ್ನು ಹಂಚಿಕೊಳ್ಳೋಣ ಎಂದಾಗ ದುಷ್ಟಬುದ್ಧಿಯು ಪಾಪಬುದ್ಧಿಯವನಾಗಿ ನಾವು ಈ ಹೊನ್ನನ್ನ ಹಂಚಿಕೊಂಡು ಮನೆಯಲ್ಲಿ ಸ್ವೇಚ್ಛೆಯಿಂದ ಇರುವವರಾಗುತ್ತೇವೆ.

b)

ಹೊನ್ನೆಲ್ಲ ಮುಗಿದರೆ ಮತ್ತೆ ವ್ಯಾಪಾರಕ್ಕೆ ಹೋಗಬೇಕಾಗುತ್ತದೆ

c)

ಇಬ್ಬರೂ ಈ ಹೊನ್ನನ್ನು ಸಮನಾಗಿ ಹಂಚಿಕೊಂಡು ತೆಗೆದುಕೊಂಡು ಹೋಗೋಣ

d)

ಆ ಕಾರಣದಿಂದ ನಿನಗೂ ನನಗೂ ಖರ್ಚಿಗೆ ತಕ್ಕಷ್ಟು ಹೊನ್ನನ್ನು ತೆಗೆದುಕೊಂಡು ಉಳಿದ ಹೊನ್ನೆಲ್ಲವನ್ನು ಇಲ್ಲಿಯೇ ಇಟ್ಟುಬಿಡೋಣ ಎಂದು ಸಲಹೆ ನೀಡಿದನು

5.

ನಾಳಿನ ಕನಸನ್ನು ಬಿತ್ತ ಬೇಕಾದರೆ ನಾವು ಹೇಗೆ ಬದುಕಬೇಕು?

a)

ಎಲ್ಲಾ ಮತಧರ್ಮಗಳು ದಾರಿತೋರಿಸುವ ದೀಪಗಳಾಗಿರುವುದರಿಂದ ಎಲ್ಲಾ ಮತಗಳನ್ನು ಪುರಸ್ಕರಿಸುವ ಎಚ್ಚರಿಕೆಯಲ್ಲಿ ನಾವು ಬದುಕಬೇಕು

b)

ಭಯ ಮತ್ತು ಸಂಶಯಗಳಿಂದ ಮಸುಕಾಗಿರುವ ಮನದ ಕಣ್ಣಿನಲ್ಲಿ ಭವಿಷ್ಯದ ಕನಸನ್ನು ಬಿತ್ತುತ್ತ ಬದುಕು ನಡೆಸಬೇಕು

c)

ನಾಳಿನ ಕನಸನ್ನು ಬಿತ್ತ ಬೇಕಾದರೆ ನಾವು ಬದುಕಿರಬೇಕು

6.

ನಾನು ಹೋರಾಡುತ್ತಿರುವುದು ನೆಲಕಲ್ಲ ಛಲಕ್ಕೆ ಎಂಬುದನ್ನು ದುರ್ಯೋಧನ ಹೇಗೆ ವಿವರಿಸುತ್ತಾನೆ?

a)

ದುರ್ಯೋಧನನು ಅಜ್ಜ ಭೀಷ್ಮರಿಗೆ, ಅಜ್ಜಾ ಈ ನೆಲಕ್ಕಾಗಿ ಹೋರಾಟವೆಂದು ಭಾವಿಸಿದ್ದೀರಾ? ಇಲ್ಲ.ಛಲಕ್ಕಾಗಿಯೇ ಪಾಂಡುವಿನ ಮಕ್ಕಳಲ್ಲಿ ಹೋರಾಡುತ್ತೇನೆ

b)

ಪ್ರೀತಿಯ ಗೆಳೆಯ ಕರ್ಣ ಪ್ರೀತಿಯ ತಮ್ಮ ದುಶ್ಯಾಸನ ಎನ್ನ ನೂರು ಮಕ್ಕಳನ್ನು ಕೊಲಿಸಿದ ಈ ನೆಲ ನನಗೆ ಪಾಳುಬಿದ್ದಿರುವ ನೆಲ

c)

ಸತ್ತವರು ಮತ್ತೆ ಹುಟ್ಟಿ ಬರುವುದಿಲ್ಲ ಆದ್ದರಿಂದ ನಾನು ಛಲಕ್ಕಾಗಿ ಹೋರಾಡುತ್ತಿರುವುದು ಎಂದು ವಿವರಿಸುತ್ತಾನೆ

d)

ನನ್ನ ಈ ಹೋರಾಟದಲ್ಲಿ ಪಾಂಡವರನ್ನು ನಾಶಗೊಳಿಸುತ್ತೆನೆ ಎಂದು ವಿವರಿಸಿದನು

7.

ಜಾತಿ ವ್ಯವಸ್ಥೆಯ ಬಗ್ಗೆ ವಿವೇಕಾನಂದರ ಅಭಿಪ್ರಾಯವನ್ನು ತಿಳಿಸಿ?

a)

ಸ್ವಾಮಿ ವಿವೇಕಾನಂದರು ಜಾತಿಯನ್ನು ಕುರಿತು ಜಾತಿಯೇ ಎಲ್ಲದರ ಮೂಲ ಎಂಬುದಾಗಿ ಹೇಳಿದ್ದಾರೆ

b)

ಸ್ವಾಮಿ ವಿವೇಕಾನಂದರು ಜಾತಿ ವ್ಯವಸ್ಥೆಯನ್ನು ಕುರಿತು "ಜಾತಿಯೆಂಬುದು ಸಮಾಜದ ಒಂದು ಆಂತರಿಕ ಭಾಗವಾಗಿದೆ. ಹಿಂದೆ ಅದು ವಿಕಾಸ ವಾಗುತ್ತಿತ್ತು

c)

ಈಗ ಅದು ಘನೀಭೂತವಾಗಿದೆ

d)

ಅದರ ದುರ್ಗಂಧದಿಂದ ಭಾರತದ ವಾತಾವರಣವೆಲ್ಲ ತುಂಬಿದೆ" ಎಂದು ಹೇಳಿದ್ದಾರೆ

8.

ವಸಂತನ ವಿಚಾರದಲ್ಲಿ ಪುಟ್ಟಿಯ ಪ್ರಶ್ನೆಗಳಾವುವು?

a)

ಗುಡಿಸಲೊಳಗೆ ಬರಲು ವಸಂತ ಹೆದರಿದರನೆ?

b)

ಹರಿದ ಚಿಂದಿ ಬಟ್ಟೆಗಳ ಕಂಡು ಅವನು ಮರುಗಿದನೆ?

c)

ನಾವು ವಸಂತನ ಕಣ್ಣಿಗೆ ಕಾಣುತ್ತಿಲ್ಲವೇ?

d)

ಪುಟ್ಟಿ ಮತ್ತೆ ಮತ್ತೆ ನೆಲವ ತಟ್ಟಿ !ಪ್ರಶ್ನಿಸಿಕೊಳ್ಳುತ್ತಾಳೆ.

9.

ಜಲಿಯನ್ ವಾಲಾಬಾಗ್ ನಲ್ಲಿರುವ ಒಕ್ಕಣಿ ಏನು ಹೇಳುತ್ತದೆ?

a)

ಜಲಿಯನ್ ವಾಲಾಬಾಗ್ ನಲ್ಲಿರುವ ಒಕ್ಕಣೆ ಹೀಗಿದೆ: ಏಪ್ರಿಲ್- 13- 1919 ರಂದು ಬ್ರಿಟೀಷರ ಗುಂಡುಗಳಿಗೆ ಆಹುತಿಯಾದ ಸುಮಾರು 2000 ಮುಗ್ಧ ಹಿಂದೂ, ಸಿಖ್ ಮತ್ತು ಮುಸಲ್ಮಾನರ ಸಮ್ಮಿಳಿತ ರಕ್ತದಿಂದ ಈ ಪ್ರದೇಶ ಪಾವನವಾಗಿದೆ

b)

ಒಂದೇ ಒಂದು ಗುಂಡು ಸಹ ದಂಡವಾಗಲಿಲ್ಲ

c)

ಸುಖದೇವ್, ರಾಜಗುರು, ಬಟುಕೇಶ್ವರ ದತ್ತ ರೊಂದಿಗೆ ಹಸನ್ಮುಖಿಯಾಗಿ ತಾಯಿ ಭಾರತಾಂಬೆಯ ಸ್ವಾತಂತ್ರ್ಯದ ಹಣತೆಗೆ ತೈಲವೆಂಬಂತೆ ವೀರಯೋಧನಾಗಿ ಅಮರನಾದನು.

d)

ಇಂಕ್ವಿಲಾಬ್ ಜಿಂದಾಬಾದ್

10.

ಉತ್ತರಾಣಿ ಗಿಡದ ವಿಶೇಷತೆ ಒಗಟಿನಲ್ಲಿ ಹೇಗೆ ವ್ಯಕ್ತವಾಗಿದೆ?

a)

ಜನಪದ ಒಗಟಿನಲ್ಲಿ ಉತ್ತರಾಣಿ ಗಿಡವು ಹೊಲದ ಬದುವಿನಲ್ಲಿ ಹುಟ್ಟುತ್ತದೆ

b)

ಹೊಲದಲ್ಲಿ ಬೆಳೆಯುವುದು ಉಳುವ ಕಂಡು ನಗುವುದು

c)

ಆ ಬದುವಿನಲ್ಲಿ ಓಡಾಡುವವರ ಬಟ್ಟೆಯನ್ನು ಅದರ ಮುಳ್ಳುಗಳು ಹಿಡಿಯುತ್ತವೆ

d)

ಆದ್ದರಿಂದ " ಬದಿನಲ್ಲಿ ಹುಟ್ಟೋದು ಬದಿನಲ್ಲಿ ಬೆಳೆಯೋದು ಹೋಗೋರ ಮುಂಜೆರಗ ಹಿಡಿಯೋದು " ಎಂದು ಹೇಳಲಾಗಿದೆ

11.

"ತಾವು ಕಡಿಮೆ ಮಾತನಾಡಿದ್ದೀರಿ ಹೆಚ್ಚು ಕೆಲಸ ಮಾಡಿದ್ದೀರಿ" ಈ ವಾಕ್ಯದ ಸ್ವಾರಸ್ಯ ತಿಳಿಸಿ

a)

ವಿಶ್ವೇಶ್ವರಯ್ಯನವರ ಮಾತುಗಾರಿಕೆಯನ್ನು ಅಭಿವ್ಯಕ್ತಗೊಳಿಸಿದೆ

b)

ವಿಶ್ವೇಶ್ವರಯ್ಯನವರ ಕಾರ್ಯಕ್ಷಮತೆಯನ್ನು ಅಭಿವ್ಯಕ್ತಗೊಳಿಸಿದೆ

12.

"ಯಾವ ಜೀವಿಯು ತನ್ನಷ್ಟಕ್ಕೆ ತಾನಿಲ್ಲ" ಈ ವಾಕ್ಯದ ಸಂದರ್ಭ ತಿಳಿಸಿ

a)

ಹುಲಿಗಳು ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವಾಗ ಯಾವುದಾದರೊಂದು ಧರ್ಮವನ್ನು ಅನುಸರಿಸಿ ಕೊಲ್ಲುತ್ತದಯೇ ಅಥವಾ ಧರ್ಮ-ಅಧರ್ಮಗಳ ಲೆಕ್ಕವನ್ನೇ ಇಡದೆ ಸ್ವಚ್ಛಂದಿಂದ ವರ್ತಿಸುತ್ತದಯೇ? ಹಾಗೆಯೇ ಭರತ ಖಂಡದ ಹುಲಿಗಳ ಕೊಲ್ಲುವ ಧರ್ಮದ ಕುರಿತು ಹೇಳುವಾಗ ಭಗವದ್ಗೀತೆಯಲ್ಲಿ ಹೇಳಿದ ಮಾತನ್ನು ನೆನಪಿಸಿಕೊಳ್ಳುವಾಗ ಈ ಮೇಲಿನ ಮಾತು ಬಂದಿದೆ

b)

ಲೇಖಕರಾದ ದೇವನೂರು ಮಹಾದೇವ ಅವರು ಡಾಕ್ಟರ್ ಅಶೋಕ ಪೈ ಅವರ ಸಂಶೋಧನಾ ಸತ್ಯ ಕತೆಯನ್ನು ಉದಾಹರಣೆ ನೀಡುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ

13.

"ಪ್ರಕೃತಿ ವಿಕೃತಿಯಾದ ಮನುಷ್ಯನಾಯುಷ್ಯಂ ಕುಂದುಗುಂ" ಈ ವಾಕ್ಯದ ಆಯ್ಕೆಯನ್ನು ತಿಳಿಸಿ

a)

ಈ ಮಾತನ್ನು ಕವಿ ದುರ್ಗಸಿಂಹನು ರಚಿಸಿರುವ "ಕರ್ನಾಟಕ ಪಂಚತಂತ್ರಂ" ಕೃತಿಯಿಂದ ಆಯ್ದ" ವೃಕ್ಷಸಾಕ್ಷಿ " ಎಂಬ ಗದ್ಯ ಪಾಠದಿಂದ ಆರಿಸಲಾಗಿದೆ

b)

ಈ ವಾಕ್ಯವನ್ನು ಎ ಎನ್ ಮೂರ್ತಿರಾವ್ ಅವರು ರಚಿಸಿರುವ "ಸಮಗ್ರ ಲಲಿತ ಪ್ರಬಂಧಗಳು" ಕೃತಿಯಿಂದ ಆಯ್ದ "ವ್ಯಾಘ್ರಗೀತೆ" ಎಂಬ ಗದ್ಯಭಾಗ ದಿಂದ ಆರಿಸಿಕೊಳ್ಳಲಾಗಿದೆ

14.

"ಮುಂಗಾರಿನ ಮಳೆಯಾಗೋಣ" ಈ ವಾಕ್ಯದ ಸ್ವಾರಸ್ಯ ತಿಳಿಸಿ

a)

ಹಸುರು ಸರ್ವೇಂದ್ರಿಯಗಳನ್ನು ವ್ಯಾಪಿಸಿದೆ ಎಂದು ವರ್ಣಿಸುವ ಕವಿಯ ಕಲ್ಪನೆ ಇಲ್ಲಿ ಸ್ವಾರಸ್ಯ ಪೂರ್ಣವಾಗಿ ಮೂಡಿಬಂದಿದೆ

b)

ನಾವು ಮುಂಗಾರಿನ ಮಳೆಯಂತೆ ಪರಿಸರ ಸಂರಕ್ಷಿಸುವ ಸಂಕಲ್ಪ ಕೈಗೊಳ್ಳುವುದರಿಂದ ನದೀಜಲಗಳನ್ನು ಶುದ್ಧವಾಗಿ ಇಟ್ಟುಕೊಳ್ಳಬಹುದು ಎಂಬುದು ಕವಿಯ ಈ ಮಾತಿನಲ್ಲಿ ಸ್ವಾರಸ್ಯ ಪೂರ್ಣವಾಗಿ ಅಭಿವ್ಯಕ್ತಗೊಂಡಿದೆ

15.

"ಸಾರ್ವಭೌಮರಾ ನೆತ್ತಿಯ ಕುಕ್ಕಿ" ಈ ವಾಕ್ಯದ ಆಯ್ಕೆಯನ್ನು ತಿಳಿಸಿ

a)

ಈ ವಾಕ್ಯವನ್ನು ಕುಮಾರವ್ಯಾಸ ಎಂದು ಪ್ರಸಿದ್ಧರಾದ ಕವಿ ಗದುಗಿನ ನಾರಾಣಪ್ಪನು ರಚಿಸಿರುವ "ಕರ್ಣಾಟ ಭಾರತ ಕಥಾಮಂಜರಿ" ಎಂಬ ಮಹಾಕಾವ್ಯದ "ಕೌರವೇಂದ್ರನ ಕೊಂದೆ ನೀನು" ಎಂಬ ಪದ್ಯ ಪಾಠದಿಂದ ಆರಿಸಲಾಗಿದೆ

b)

ಈ ವಾಕ್ಯವನ್ನು ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಕವಿ ದ ರಾ ಬೇಂದ್ರೆ ವಿರಚಿತ "ಗರಿ" ಕವನ ಸಂಕಲನದಲ್ಲಿನ "ಹಕ್ಕಿ ಹಾರುತಿದೆ ನೋಡಿದಿರಾ" ಎಂಬಪದ್ಯಪಾಠದಿಂದ ಆರಿಸಲಾಗಿದೆ

16.

"ರವಿಸುತನ ಕಿವಿಯಲ್ಲಿ ಬಿತ್ತಿದನು ಭಯವ" ಈ ವಾಕ್ಯದ ಸಂದರ್ಭ ತಿಳಿಸಿ

a)

ಕೃಷ್ಣನು ಪಾಂಡವರ ಮತ್ತು ಕೌರವರ ನಡುವೆ ಸಂದಿ ಮಾಡಲು ಹೋಗುತ್ತಾನೆ ಆದರೆ ದುರ್ಯೋಧನನ ಹಠದಿಂದ ಕೃಷ್ಣಸಂಧಾನವು ತಿರಸ್ಕೃತವಾಗುತ್ತದೆ. ಆಗ ಯುದ್ಧ ಅನಿವಾರ್ಯವೆನಿಸಿ ಭೇಧತಂತ್ರವನ್ನು ಬಳಸಲು ಕೃಷ್ಣನು ಕರ್ಣನನ್ನು ಜೊತೆಯಲ್ಲಿ ಕರೆದುಕೊಂಡು ಬಂದು ಮೈದುನತನದ ಸರಸದಲ್ಲಿ ಮಾತನಾಡಿಸುತ್ತಾನೆ ಆ ಸಂದರ್ಭವನ್ನು ಕುರಿತು ಈ ಮಾತನ್ನು ಕವಿಯು ಹೇಳುತ್ತಾನೆ

b)

ಕರ್ಣ ನೀನು ಹಸ್ತಿನಾಪುರದ ರಾಜನಾದರೆ ನಿನಗೆ ಕೌರವರು ಮತ್ತು ಪಾಂಡವರು ಸೇವೆಯನ್ನು ಮಾಡುವರು ಅದನ್ನು ಬಿಟ್ಟು ನೀನು ದುರ್ಯೋಧನನ ಬಾಯೆಂಜಲಿಗೆ ಕೈಯೊಡ್ಡುವುದು ಸರಿಯೇ ಎಂದು ಹೇಳುವ ಸಂದರ್ಭದಲ್ಲಿ ಕೃಷ್ಣನು ರವಿಸುತನ ಕಿವಿಯಲ್ಲಿ ಭಯವನ್ನು ಬಿತ್ತಿದನು.