NEW
Font size
Worksheets10ನೇ ತರಗತಿ, ಪ್ರಥಮ ಭಾಷೆ ಕನ್ನಡ, ಗದ್ಯ ಪಾಠ-೬ ವ್ಯಾಘ್ರಗೀತೆ
Total questions: 18
Worksheet time: 9mins
1. ತದ್ದಿತಾಂತಗಳು ಎಂದರೆ;
1. ನಾಮ ಪ್ರಕೃತಿಗಳಿಗೆ ಬೇರೆ ಬೇರೆ ಅರ್ಥ ದಲ್ಲಿ ಕಾಲ ಸೂಚಕ ಪ್ರತ್ಯಗಳು ಸೇರಿ ಆಗುವ ಪದಗಳು;
2. ನಾಮ ಪ್ರಕೃತಿಗಳಿಗೆ ವಿಭಕ್ತಿ ಪ್ರತ್ಯಯಗಳು ಸೇರಿ ಆಗುವ ಪದಗಳು;
3. ನಾಮ ಪ್ರಕೃತಿಗಳಿಗೆ ಬೇರೆ ಬೇರೆ ಅರ್ಥದಲ್ಲಿ ತದ್ಧಿತ ಪ್ರತ್ಯಯಗಳು ಸೇರಿ ಆಗುವ ಪದಗಳು;
4. ಧಾತುಗಳಿಗೆ ಪ್ರತ್ಯಯಗಳು ಸೇರಿ ಆಗುವ ಪದಗಳು.
2. ನಾಮ ಪ್ರಕೃತಿ + ಇಗ, ಇಕ, ಆಡಿಗ, ಕಾರ, ಕೋರ, ಗಾರ, ವಂತ, ವಾಳ, ವಳ, ಆಳಿ, ಗುಳಿ ಆರ, ಅನೆಯ ಇತ್ಯಾದಿ ತದ್ಧಿತ ಪ್ರತ್ಯಯಗಳಲ್ಲಿ ಯಾವುದಾದರೂ ಒಂದು= ----------------------
1. ತದ್ಧಿತಾಂತ ಅವ್ಯಯ
2. ತದ್ಧಿತಾಂತ ಭಾವನಾಮ
3. ಭಾವನಾಮ
4. ತದ್ಧಿತಾಂತ ನಾಮ
3. ಇದು ತದ್ಧಿತಾಂತ ನಾಮಕ್ಕೆ ಉದಾಹರಣೆಯಾದ ಪದ;
1. ಕನ್ನಡ +ಇಗ= ಕನ್ನಡಿಗ
2. ಒಂದು+ ಕಟ್ಟು= ಒಗ್ಗಟ್ಟು
3. ಮನೆ+ ಅಲ್ಲಿ = ಮನೆಯಲ್ಲಿ
4. ಹಚ್ಚು +ಓಣ = ಹಚ್ಚೋಣ
4. ಇದು ತದ್ಧಿತಾಂತ ನಾಮದ ಸ್ತ್ರೀಲಿಂಗ ರೂಪಕ್ಕೆ ಉದಾಹರಣೆಯಾಗಿದೆ;
1. ಗಂಗಮ್ಮ
2. ಗೊಲ್ಲತಿ
3. ರಮಾಬಾಯಿ
4. ಇಂದ್ರಾಣಿ
5. ನಾಮ ಪ್ರಕೃತಿಗಳಿಗೆ ಬೇರೆ ಬೇರೆ ಭಾವಾರ್ಥದಲ್ಲಿ ತನ, ಇಕೆ, ಉ, ಪು, ಮೆ ಮೊದಲಾದ ತದ್ಧಿತ ಪ್ರತ್ಯಯಗಳು ಸೇರಿ ಆಗುವ ಪದಗಳು ----------
1. ತದ್ಧಿತಾಂತ ನಾಮ
2. ತದ್ಧಿತಾಂತ ಭಾವನಾಮ
3.ಕೃದಂತ ಭಾವನಾಮ
4. ಕೃದಂತ ನಾಮ
6. ಈ ಕೆಳಗಿನವುಗಳಲ್ಲಿ ತದ್ಧಿತಾಂತ ಭಾವನಾಮಕ್ಕೆ ಉದಾಹರಣೆಯಲ್ಲದ ಪದ;
1. ಕುರುಡು
2. ಬಿಳುಪು
3. ನಂಬಿಕೆ
4. ಜಾಣ್ಮೆ
7. ನಾಮ ಪ್ರಕೃತಿ + ಅಂತೆ, ವೊಲ್, ವೊಲು, ವೋಲ್, ವೋಲು, ತನಕ, ವರೆಗೆ, ಮಟ್ಟಿಗೆ, ಓಸ್ಕರ, ಇಂತ , ಆಗಿ ಇತ್ಯಾದಿ ತದ್ಧಿತ ಪ್ರತ್ಯಯಗಳಲ್ಲಿ ಯಾವುದಾದರೂ ಒಂದು = ------------------
1. ಕೃದಂತ ಅವ್ಯಯ
2. ಭಾವನಾಮ
3. ವಿಭಕ್ತಿ ಪ್ರತ್ಯಯ
4. ತದ್ಧಿತಾಂತ ಅವ್ಯಯ
ಈ ಕೆಳಗಿನವುಗಳಲ್ಲಿ ತದ್ಧಿತಾಂತ ಅವ್ಯಯಕ್ಕೆ ಉದಾಹರಣೆಯಾದ ಪದ;
1. ಬೆಕ್ಕಿಗೋಸ್ಕರ
2. ಚೆಲುವಿಕೆ
3. ಉಡುಗೆ
4. ಮಾಡಲಿಕ್ಕೆ
' ಶಾನುಭೋಗರ ವದನಾರವಿಂದದಲ್ಲಿ ಮುಗುಳುನಗೆ ಮೂಡಿತು' - ಈ ವಾಕ್ಯದಲ್ಲಿರುವ ಅಲಂಕಾರ;
1.ದೀಪಕ
2. ರೂಪಕ
3. ಉಪಮಾ
ಉತ್ಪ್ರೇಕ್ಷೆ
10. 'ಇರಸಾಲು' ಎಂದರೆ;
1. ಇಟ್ಟಿಗೆ
2. ಖಜಾನೆ
3. ರೈತರಿಂದ ಸಂಗ್ರಹಿಸಿದ ಕಂದಾಯದ ಮೊತ್ತವನ್ನು ಖಜಾನೆಗೆ ಸಲ್ಲಿಸುವುದು.
4. ಕಂದಾಯ ವಸೂಲಿ ಮಾಡುವಾಗ ರೈತರಿಂದ ಪಡೆಯುತ್ತಿದ್ದ ಕಿರು ಕಾಣಿಕೆ.
11. ವ್ಯಾಘ್ರ- ಪದದ ತದ್ಭವ ಪದ;
1. ವಾಘ
2. ಹುಲಿ
3. ಬಡಗ
4. ಬಗ್ಗ
ಕಾಡು ದಾರಿ, ರಾಜಭಕ್ತಿ- ಈ ಪದಗಳು ಈ ಸಮಾಸಕ್ಕೆ ಉದಾಹರಣೆ ಯಾಗಿದೆ;
1. ತತ್ಪುರುಷ
2. ಕರ್ಮಧಾರಯ
3. ಗಮಕ
4. ದ್ವಂದ್ವ
13.ಘ್ರಾಣೇಂದ್ರಿಯ- ಈ ಪದವು ಈ ಸಂಧಿಗೆ ಉದಾಹರಣೆಯಾಗಿದೆ;
1. ಗುಣ
2. ವೃದ್ಧಿ
3. ಲೋಪ
4. ಸವರ್ಣ ದೀರ್ಘ
14. ಸದ್ವಂಶ, ಭಗವದ್ಗೀತೆ ಇವು ಈ ಸಂಧಿಗೆ ಉದಾ: ;
1. ಆದೇಶ
2.ಯಣ್
3. ಜಶ್ತ್ವ
4. ಆಗಮ
15. ಈ ಕೆಳಗಿನವುಗಳಲ್ಲಿ ಸವರ್ಣ ದೀರ್ಘ ಸಂಧಿಗೆ ಉದಾಹರಣೆಯಾದ ಪದಗಳ ಗುಂಪು;
1. ಮನದಲ್ಲಿ, ಊರೂರು, ಕತ್ತಲ್ಲಿ
2. ವೇದಿಯಲ್ಲಿ, ಮನೆಯಲ್ಲಿ, ಮನವಿಲ್ಲ
3. ಅತ್ಯಂತ, ಅತ್ಯವಸರ, ಅತ್ಯಾನಂದ
4. ಧರ್ಮಾಧರ್ಮ, ಪರಮಾನಂದ, ಸುವರ್ಣಾಕ್ಷರ
16. ಹುಲಿಯೆಂದರೆ ಭಯವಲ್ಲವೆ- ವಾಕ್ಯದ ಕೊನೆಯಲ್ಲಿರಬೇಕಾದ ಲೇಖನ ಚಿಹ್ನೆ;
1. ಪ್ರಶ್ನಾರ್ಥಕ
2. ಭಾವಸೂಚಕ
3. ಪೂರ್ಣ ವಿರಾಮ
4. ಅಲ್ಪ ವಿರಾಮ
17. ಕತ್ತೆತ್ತಿ - ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ;
1. ಕ್ರಿಯಾ
2. ದ್ವಿಗು
3. ಅಂಶಿ
4. ಗಮಕ
' ಮಡಿಯ ಬೇಕಾದರೆ ಮಾಡಿಯೇ ಮಡಿಯುತ್ತೇನೆ' -ಈ ವಾಕ್ಯವು ಈ ಕಾಲದಲ್ಲಿದೆ;
1. ಭೂತ
2. ಭವಿಷ್ಯತ್
3. ವರ್ತಮಾನ
4. ಸಂಧ್ಯಾಕಾಲ
