wayground logo

Free Printable Worksheets

NEW

Font size

S
M
L
XL
Worksheets

ಸಂಸ್ಕೃತ ವ್ಯಂಜನ ಸಂಧಿ

Total questions: 15

Worksheet time: 8mins

Name
Class
Date
1.

ಸಂಸ್ಕೃತ ವ್ಯಂಜನ ಸಂಧಿಯಾಗುವ ರೀತಿಗಳು?

a)

ವ್ಯಂಜನ + ವ್ಯಂಜನ

b)

ವ್ಯಂಜನ + ವ್ಯಂಜನ / ವ್ಯಂಜನ + ಸ್ವರ

c)

ವ್ಯಂಜನ + ವ್ಯಂಜನ / ಸ್ವರ + ವ್ಯಂಜನ

d)

ವ್ಯಂಜನ + ಸ್ವರ

2.

ಇದು ಸಂಸ್ಕೃತ ವ್ಯಂಜನ ಸಂಧಿಗೆ ಉದಾಹರಣೆ?

a)

ಅಜಂತ

b)

ದೇವಾಲಯ

c)

ಚಂದ್ರೋದಯ

d)

ಊರೂರು

3.

ಸಂಸ್ಕೃತ ವ್ಯಂಜನ ಸಂಧಿಯ ಪ್ರಕಾರವಿದು?

a)

ಜಶ್ತ್ವಸಂಧಿ

b)

ಶ್ಚುತ್ವಸಂಧಿ

c)

ಅನುನಾಸಿಕ ಸಂಧಿ

d)

ಮೇಲಿನ ಎಲ್ಲವೂ

4.

ಸಂಸ್ಕೃತದಲ್ಲಿ ಗ ಜ ಡ ದ ಬ ಗಳು ತಿಳಿಸುವ ಸಂಜ್ಞೆ?

a)

ಜತ್

b)

ಜಶ್

c)

ಯಣ್

d)

ಜಸ್

5.

ಕಚಟತಪ ಗಳಿಗೆ ಕ್ರಮವಾಗಿ ಗಜಡದಬ ಗಳು ಆದೇಶವಾಗಿ ಬರುವ ಸಂಧಿ?

a)

ಗದಬಾದೇಶ ಸಂಧಿ

b)

ಜಶ್ತ್ವಸಂಧಿ

c)

ಶ್ಚುತ್ವ ಸಂಧಿ

d)

ಯಣ್‌ ಸಂಧಿ

6.

ಇದು ಜಶ್ತ್ವ ಸಂಧಿಗೆ ಉದಾಹರಣೆ.

a)

ಅಜಂತ

b)

ವಾಗ್ದೇವಿ

c)

ಅಬ್ದಿ

d)

ಎಲ್ಲವೂ

7.

ʼಅಬ್ಜʼ ಪದ ಬಿಡಿಸಿ ಬರೆದರೇ?

a)

ಅಬ್‌ + ಅಜ

b)

ಅಪ್‌ + ಅಜ

c)

ಅಪ್‌ + ಜ

d)

ಅಬ್‌ + ಜ

8.

ಸತ್‌ + ಆನಂದ = ___________

a)

ಸದಾನಂದ

b)

ಸತಾನಂದ

c)

ಸದನಂದಾ

d)

ಸದಾನಂದಾ

9.

ಸಂಸ್ಕೃತದಲ್ಲಿ ʼಶ್ಚುʼ ಈ ಸಂಜ್ಞೆ ಯಾವ ಅಕ್ಷರಗಳನ್ನು ಸೂಚಿಸುತ್ತದೆ?

a)

ಶ ಕಾರ

b)

ಚ ವರ್ಗಾಕ್ಷರ

c)

ಸ ಕಾರ

d)

ಶಕಾರ ಮತ್ತು ಚ ವರ್ಗಾಕ್ಷರ

10.

ಶ್ಚುತ್ವ ಸಂಧಿಗೆ ಉದಾಹರಣೆಯಾದ ಪದ?

a)

ಅಬ್ದಿ

b)

ಷಟ್ಪದಿ

c)

ಮನಶ್ಚಂಚಲ

d)

ಜನೌಷಧ

11.

ಮನಸ್‌ + ಶುದ್ಧಿ = ಮನಶ್ಶುದ್ಧಿ : : ಶರತ್‌ + ಚಂದ್ರ = ?

a)

ಶರಚ್ಚಂದ್ರ

b)

ಶರಶ್ಚಂದ್ರ

c)

ಶರತ್‌ಚಂದ್ರ

d)

ಶರತಚಂದ್ರ

12.

ಕ್‌,ಚ್‌,ಟ್‌,ತ್‌,ಪ್‌ ಗಳಿಗೆ ಕ್ರಮವಾಗಿ ಙ್‌,ಞ್‌,ಣ್‌,ನ್‌,ಮ್‌ ಗಳು ಆದೇಶವಾಗಿ ಬರುವ ಸಂಧಿ?

a)

ಗದಬಾದೇಶ ಸಂಧಿ

b)

ವಕಾರಾದೇಶಸಂಧಿ

c)

ಅನುನಾಸಿಕ ಸಂಧಿ

d)

ಜಶ್ತ್ವಸಂಧಿ

13.

ವಾಕ್‌ + ಮಯ = ______ ?

a)

ವಾಙ್ಮಯ

b)

ವಾಕ್ಮಯ

c)

ವಾಜ್ಮಯ

d)

ವಾಕಮಯ

14.

ಇವುಗಳಲ್ಲಿ ಗುಂಪಿಗೆ ಸೇರದ ಪದ ಗುರುತಿಸಿ.

a)

ಷಟ್ಪದಿ

b)

ಸನ್ಮಾನ

c)

ಷಣ್ಮುಖ

d)

ಅತ್ಯಂತ

15.

ಇದು ಅನುನಾಸಿಕ ಸಂಧಿಗೆ ಉದಾಹರಣೆ.

a)

ಸನ್ಮಾನ

b)

ಚಿನ್ಮಯ

c)

ತನ್ಮಯ

d)

ಮೇಲಿನ ಎಲ್ಲವೂ