Worksheetsಪ್ರಥಮ ಭಾಷೆ ಕನ್ನಡ, 8 ಮತ್ತು 9ನೇ ತರಗತಿಯ ವ್ಯಾಕರಣ
Total questions: 10
Worksheet time: 5mins
1. ಪೂರ್ವ ಪದದ ಅಂತ್ಯದಲ್ಲಿರುವ ವರ್ಗ ಪ್ರಥಮಾಕ್ಷರಗಳೊಡನೆ ( ಕ್ ಚ್ ಟ್ ತ್ ಪ್ ) ಉತ್ತರ ಪದದ ಆದಿಯಲ್ಲಿರುವ ಅನುನಾಸಿಕ ಅಕ್ಷರಗಳು ಸೇರಿ ಸಂಧಿಯಾಗುವಾಗ, ಪೂರ್ವ ಪದದ ಅಂತ್ಯದಲ್ಲಿರುವ ವರ್ಗ ಪ್ರಥಮಾಕ್ಷರಗಳಿಗೆ ( ಕ್ ಚ್ ಟ್ ತ್ ಪ್ )ಗಳಿಗೆ ಕ್ರಮವಾಗಿ ಅದೇ ವರ್ಗದ ಅನುನಾಸಿಕ ಅಕ್ಷರಗಳು (ಙ್ ಞ್ ಣ್ ನ್ ಮ್ )ಗಳು ಆದೇಶವಾಗಿ ಬರುವವು. ಈ ಸಂಧಿಯು ------- ಗೆ ಉದಾಹರಣೆಯಾಗಿದೆ.
1. ಅನುನಾಸಿಕ
2. ಜಶ್ತ್ವ
3. ಶ್ಚುತ್ವ
4. ಯಣ್
2. ಈ ಕೆಳಗಿನವುಗಳಲ್ಲಿ ಪೂರ್ವ ಪದಾಂತ್ಯದಲ್ಲಿ ವರ್ಗ ಪ್ರಥಮಾಕ್ಷರ ' ಕ್' ಬಂದಾಗ ಅದೇ ವರ್ಗದ ಅನುನಾಸಿಕ ಅಕ್ಷರ 'ಙ್' ಆದೇಶವಾಗಿ ಬರುವುದಕ್ಕೆ ಉದಾಹರಣೆಯಾದ ಸಂಧಿಪದಗಳು -----------
1. ಚಿನ್ಮಯ, ಸನ್ಮಾನ
2. ಪಯಶ್ಯಯನ, ಮನಶ್ಯಾಂತಿ
3.ವಾಙ್ಮಯ, ದಿಙ್ಮೂಢ
4. ಉನ್ಮಾದ, ತನ್ಮಯ
3. ವಾಙ್ಮಯ, ದಿಙ್ಮೂಢ ಈ ಪದಗಳನ್ನು ಬಿಡಿಸಿ ಬರೆದಾಗ ಆಗುವ ರೂಪ ---------
1. ವಾಙ್ + ಮಯ, ದಿಙ್ + ಮೂಢ
2. ವಾಕ್ +ಮಯ, ದಿಕ್ + ಮೂಢ
3. ವಾ+ ಙ್ಮಯ, ದಿ+ ಙ್ಮೂಢ
ವಾಙ್ಮ+ಯ, ದಿಙ್ಮೂ+ಢ
4. ಷಣ್ಮುಖ, ಷಣ್ಮಾಸ- ಈ ಪದಗಳಲ್ಲಿ ಪೂರ್ವ ಪದಾಂತ್ಯದ ------ ಅಕ್ಷರದ ಬದಲಿಗೆ 'ಣ್' ಆದೇಶವಾಗಿ ಬಂದಿದೆ.
1. ಮ್
2. ಣ್
3. ಠ್
4. ಟ್
5. ಷಟ್+ ಮಾಸ, ಷಟ್ + ಮುಖ- ಈ ಸಂಧಿಪದಗಳನ್ನು ಕೂಡಿಸಿ ಬರೆದಾಗ ಆಗುವ ರೂಪಗಳು ಅನುಕ್ರಮವಾಗಿ ----------
1. ಷಣ್ಮಾಸ, ಷಣ್ಮುಖ
2. ಷಟ್ಮಾಸ, ಷಟ್ಮುಖ
3. ಷಮ್ಮಾಸ, ಷಮ್ಮುಖ
4. ಷಮಾಸ, ಷಮುಖ
6. ಉನ್ಮಾದ, ತನ್ಮಯ, ಚಿನ್ಮಯ, ಸನ್ಮಾನ ಈ ಪದಗಳು ---------- ಸಂಧಿಗೆ ಉದಾಹರಣೆಯಾಗಿವೆ.
1. ಜಶ್ತ್ವ
2. ಶ್ಚುತ್ವ
3. ಅನುನಾಸಿಕ
4. ಯಣ್
7. ಉತ್+ ಮಾದ, ತತ್+ ಮಯ, ಚಿತ್ + ಮಯ, ಸತ್+ ಮಾನ ಈ ಪದಗಳನ್ನು ಕೂಡಿಸಿ ಬರೆದಾಗ ಆಗುವ ರೂಪಗಳು ಅನುಕ್ರಮವಾಗಿ ------------
1. ಉತ್ಮಾದ, ತತ್ಮಯ, ಚಿತ್ಮಯ, ಸತ್ಮಾನ
2. ಉಮಾದ, ತಮಯ, ಚಿಮಯ, ಸಮಾನ
3. ಉಮ್ಮಾದ, ತಮ್ಮಯ, ಚಿಮ್ಮಯ, ಸಮ್ಮಾನ
4. ಉನ್ಮಾದ, ತನ್ಮಯ, ಚಿನ್ಮಯ, ಸನ್ಮಾನ
8. ಈ ಕೆಳಗಿನವುಗಳಲ್ಲಿ ಅನುನಾಸಿಕ ಸಂಧಿಗೆ ಉದಾಹರಣೆಯಾದ ಸಂಧಿಪದ ------------
1. ಅಮ್ಮಯ
2. ಚಿದಾನಂದ
3. ಮನೆಯಲ್ಲಿ
4. ವಾಗ್ದೇವಿ
9. ಮನೆ + ಅನ್ನು = ಮನೆಯನ್ನು - ಈ ಪದದಲ್ಲಿರುವ ನಾಮ ಪ್ರಕೃತಿ -------
1. ಮನೆಯನ್ನು
2. ಮನೆ
3. ಮನೆಯ
4. ಮನೆ+ಅ
10. ನಾಮಪದದ ಮೂಲರೂಪ -------
1. ವಿಭಕ್ತಿ
2. ಅಂಕಿತ ನಾಮ
3. ವಿಭಕ್ತಿ ಪ್ರತ್ಯಯ
4. ನಾಮ ಪ್ರಕೃತಿ
