NEW
Font size
Worksheetsಪ್ರಥಮ ಭಾಷೆ ಕನ್ನಡ, ೮ ಮತ್ತು ೯ನೇ ತರಗತಿಯ ವ್ಯಾಕರಣ
Total questions: 10
Worksheet time: 5mins
1. ಧ್ವನಿ- ದನಿ, ಶ್ರೀ -ಸಿರಿ, ಕೋಕಿಲಾ - ಕೋಗಿಲೆ ಇತ್ಯಾದಿಗಳು ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಅಲ್ಪಸ್ವಲ್ಪ ಬದಲಾವಣೆ ಹೊಂದಿ ಬಂದ ----------- ಪದಗಳು.
1. ತತ್ಸಮ
2. ತದ್ಭವ
3. ಅನ್ಯದೇಶ್ಯ
4. ದೇಶ್ಯ
2. ಕುಠಾರ - ಕೊಡಲಿ, ವೈಶಾಖ - ಬೇಸಗೆ, ವಂಧ್ಯಾ -ಬಂಜೆ ಇವು ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಪೂರ್ಣ ಬದಲಾವಣೆ ಹೊಂದಿ ಬಂದ --------- ಪದಗಳು.
1. ತತ್ಸಮ
2. ಅನ್ಯದೇಶ್ಯ
3. ತದ್ಭವ
4. ದೇಶ್ಯ
3. ಮಾಲೀಕ- ಈ ಪದವನ್ನು ಗುಣಿತಾಕ್ಷರವಾಗಿ ಬಿಡಿಸಿ ಬರೆದಾಗ ಆಗುವ ರೂಪ --------------
1. ಮ್+ಆ+ ಲ್+ಈ+ಕ್+ಅ
2. ಮ್+ಆ+ಲ್+ಇ+ಕ್+ಅ
3. ಮ್+ ಆ+ಲ್+ಈ+ಕ್
4. ಮ್+ಅ+ಲ್+ಈ+ಕ್+ಅ
4. ಪ್+ಉ+ಣ್+ಯ್+ಆ+ತ್+ಮ್+ಅ - ಈ ಗುಣಿತಾಕ್ಷರವನ್ನು ಕೂಡಿಸಿ ಬರೆದಾಗ ಆಗುವ ರೂಪ ----------------
ಪುಣ್ಯಾತ್ಮಾ
2. ಪೂಣ್ಯಾತ್ಮ
3. ಪುಣ್ಯತ್ಮ
4. ಪುಣ್ಯಾತ್ಮ
5. ಅಮ್ಮ, ಮಣ್ಣು, ಪುಕ್ಕಟ್ಟೆ -ಇವು -------- ಸಂಯುಕ್ತಾಕ್ಷರಕ್ಕೆ ಉದಾಹರಣೆಯಾದ ಪದಗಳು.
1. ವಿಜಾತೀಯ
2. ಸಜಾತೀಯ
3. ಒತ್ತಕ್ಷರ
4. ನಾಮಪದ
6. ಸಂಸ್ಕೃತಿ, ಸಂಪ್ರದಾಯ, ನಿಲ್ದಾಣ - ಇವು ---------- ಸಂಯುಕ್ತಾಕ್ಷರಕ್ಕೆ ಉದಾಹರಣೆಯಾದ ಪದಗಳು.
1. ವಿಜಾತೀಯ
2. ಸಜಾತೀಯ
3. ಒತ್ತಕ್ಷರ
4. ಅನ್ಯದೇಶ್ಯ
7. ಕ್+ಅ+ ಜ್+ಜ್+ಆ +ಯ್+ಅ = ಈ ಪದದಲ್ಲಿ 'ಜ್' ಎಂಬ ಒಂದೇ ಜಾತಿಯ ಎರಡು ವ್ಯಂಜನಗಳಿಗೆ ಸ್ವರ ಸೇರಿರುವುದರಿಂದ ಇದು -------
1. ವ್ಯಂಜನ
2. ಸಂಯುಕ್ತಾಕ್ಷರ
3. ಸಜಾತೀಯ ಸಂಯುಕ್ತಾಕ್ಷರ
4. ವಿಜಾತೀಯ ಸಂಯುಕ್ತಾಕ್ಷರ
8. ಶ್ + ಅ + ಸ್ + ತ್ + ರ್ +ಅ = ಶಸ್ತ್ರ - ಈ ಪದದಲ್ಲಿ ಬೇರೆ ಬೇರೆ ಜಾತಿಯ 3 ವ್ಯಂಜನಗಳಿಗೆ ಸ್ವರ ಸೇರಿರುವುದರಿಂದ ಇದು -------------------
1. ಸಜಾತೀಯ ಸಂಯುಕ್ತಾಕ್ಷರ
2. ಗುಣಿತಾಕ್ಷರ
3. ವ್ಯಂಜನ
4. ವಿಜಾತೀಯ ಸಂಯುಕ್ತಾಕ್ಷರ
9. ವರ್ಷ, ಪ್ರಾಣ , ಶಕ್ತಿ, ಪುಣ್ಯ - ಈ ಪದಗಳ ತದ್ಭವ ರೂಪಗಳು ಕ್ರಮವಾಗಿ ---------------
1. ವರುಸ, ಪರಣ, ಶತ್ತಿ, ಪುಣ್ಯಾ
2. ವರ್ಸ, ಹರಣ, ಶಕುತಿ, ಪರಣ
3. ವರುಸ, ಹರಣ, ಶಕುತಿ, ಹೂನ್ಯ
2. ವರುಷಾ, ಪರಣ, ಶಕತಿ, ಪುಣ್ಯಾ
10. ದೊಡ್ಡದು, ಸಣ್ಣ, ಬರ್ಗರ್, ವಾಟರ್- ಈ ಪದಗಳಲ್ಲಿ ದೇಶ್ಯ ಪದಗಳು ---------------
1. ದೊಡ್ಡದು, ಸಣ್ಣ
2. ದೊಡ್ಡದು, ಬರ್ಗರ್
3. ಸಣ್ಣದು, ವಾಟರ್
4. ಬರ್ಗರ್, ವಾಟರ್
