wayground logo

Free Printable Worksheets

NEW

Font size

S
M
L
XL
Worksheets

''ವಾಕ್ಯ ಪ್ರಕಾರಗಳು ರಸಪ್ರಶ್ನೆ'' ರಚನೆ:- ಎಫ್ ಜಿ ಜಾಡರ್

Total questions: 10

Worksheet time: 5mins

Name
Class
Date
1.

ಕರ್ತೃ, ಕರ್ಮ, ಕ್ರಿಯಾಪದಗಳಿಂದ ಕೂಡಿರುವ ಪದ ಸಮೂಹ

a)

ಪದಗಳ ಗುಂಪು

b)

ಸರಳ ವಾಕ್ಯ

c)

ವಾಕ್ಯಗಳ ಗುಂಪು

d)

ಅಧ್ಯಾಹಾರ

2.

ಒಂದು ಪೂರ್ಣ ಕ್ರಿಯಾಪದದೊಂದಿಗೆ ಸ್ವತಂತ್ರವಾಗಿರುವ ವಾಕ್ಯ....

a)

ಸಾಮಾನ್ಯವಾಕ್ಯ

b)

ಸಂಯೋಜಿತ ವಾಕ್ಯ

c)

ಮಿಶ್ರವಾಕ್ಯ

d)

ಸಂಯೋಜಿತ ಮತ್ತು ಮಿಶ್ರವಾಕ್ಯ

3.

ಸ್ವತಂತ್ರ ವಾಕ್ಯಗಳಾಗಿ ನಿಲ್ಲಬಲ್ಲ ಅನೇಕ ಉಪವಾಕ್ಯಗಳೊಡನೆ ಒಂದು ಪೂರ್ಣಾಭಿಪ್ರಾಯದ ವಾಕ್ಯವಾಗಿದ್ದರೆ ಅದು

a)

ಮಿಶ್ರ ವಾಕ್ಯ

b)

ಸರಳ ವಾಕ್ಯ

c)

ಸಂಯೋಜಿತ ವಾಕ್ಯ

d)

ಯಾವುದು ಅಲ್ಲ

4.

ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನಗಳಾಗಿದ್ದರೆ ಅಂಥ ವಾಕ್ಯ

a)

ಸಾಮಾನ್ಯವಾಕ್ಯ

b)

ಸಂಯೋಜಿತವಾಕ್ಯ

c)

ಪದಗಳ ಸಮೂಹ

d)

ಮಿಶ್ರವಾಕ್ಯ

5.

ವೀರೇಶ್ವರ ಪಾಠಕರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಯಿತು. ಈ ವಾಕ್ಯ

a)

ಸಾಮಾನ್ಯ ವಾಕ್ಯ

b)

ಸಂಯೋಜಿತ ವಾಕ್ಯ

c)

ಮಿಶ್ರವಾಕ್ಯ

d)

ಅಧ್ಯಾಹಾರ

6.

ಕಾರವಾರದಲ್ಲಿ ಮಲೇರಿಯಾ ಹಬ್ಬಿ, ವೀರೇಶ್ವರ ಪಾಠಕ್ ಅವರ ಆರೋಗ್ಯದ ಮೇಲೆ ದುಷ್ಟ ಪರಿಣಾಮ ಬೀರಿ, ಅವರು ಅಲ್ಲಿಂದ ವರ್ಗಾವಣೆ ಹೊಂದುವಂತೆ ಆಯಿತು. ಈ ವಾಕ್ಯ

a)

ಮಿಶ್ರವಾಕ್ಯ

b)

ಸಾಮಾನ್ಯವಾಕ್ಯ

c)

ಸಂಯೋಜಿತ ವಾಕ್ಯ

d)

ಅಧ್ಯಾಹಾರ

7.

ಕಾರವಾರದಲ್ಲಿ ಮಲೇರಿಯಾ ಹಬ್ಬಿತ್ತು; ಆದ್ದರಿಂದ ವೀರೇಶ್ವರ ಪಾಠಕ್ ರವರು ಮಲೇರಿಯಾದಿಂದ ಬಳಲಬೇಕಾಯ್ತು; ಈ ಕಾರಣದಿಂದ ಅವರನ್ನು ಅಲ್ಲಿಂದ ವರ್ಗಾಯಿಸಲಾಯ್ತು. ಈ ವಾಕ್ಯ

a)

ಸಂಯೋಜಿತವಾಕ್ಯ

b)

ಮಿಶ್ರವಾಕ್ಯ

c)

ಸಾಮಾನ್ಯವಾಕ್ಯ

d)

ಅಧ್ಯಾಯಾರ

8.

ಏನಾದರೂ ಮಾಡಿ ಭಾರತದಲ್ಲಿ ಮೋಟಾರು ಕಾರ್ಖಾನೆಯನ್ನು ಸ್ಥಾಪಿಸಲು ವಿಶ್ವೇಶ್ವರಯ್ಯನವರು ನಿರ್ಧರಿಸಿದರಾದರೂ ಅವರ ನಿರ್ಧಾರಕ್ಕೆ ಬ್ರಿಟಿಷ್ ಸರಕಾರದ ಅಪ್ಪಣೆ ದೊರೆಯಲಿಲ್ಲವೆಂಬ ವಿಷಯ ತಿಳಿದಾಗ ಅವರು ಬಹುವಾಗಿ ಮರುಗಿದರು. ಈ ವಾಕ್ಯ.......

a)

ಮಿಶ್ರವಾಕ್ಯ

b)

ಸಾಮಾನ್ಯವಾಕ್ಯ

c)

ಸರಳವಾಕ್ಯ

d)

ಸಂಯೋಜಿತ ವಾಕ್ಯ

9.

ಹುಡುಗ ಬುದ್ಧಿವಂತ. ಈ ವಾಕ್ಯ ........ ಉದಾಹರಣೆ

a)

ಅಧ್ಯಾಹಾರ

b)

ಸರಳವಾಕ್ಯ

c)

ಮಿಶ್ರವಾಕ್ಯ

d)

ಸಾಮಾನ್ಯವಾಕ್ಯ

10.

ಈಗ ಬಂದನು. ಇದು

a)

ಪದ

b)

ಸರಳವಾಕ್ಯ

c)

ಸರ್ವನಾಮ

d)

ಅಧ್ಯಾಹಾರ