NEW
Font size
Worksheets೧೦ನೇ ತರಗತಿ, ಗದ್ಯ ಪಾಠ- ೮ ಸುಕುಮಾರ ಸ್ವಮಿಯ ಕಥೆ
Total questions: 15
Worksheet time: 8mins
1. ನಾಮ ಪ್ರಕೃತಿ ಎಂದರೆ;
1. ನಾಮಪದದ ಮೂಲರೂಪ
2. ಕ್ರಿಯಾಪದದ ಮೂಲರೂಪ
3. ಸಂಧಿಪದದ ಮೂಲರೂಪ
4. ಸಮಾಸ ಪದದ ಮೂಲರೂಪ
2. ನಾಮ ಪ್ರಕೃತಿ + ವಿಭಕ್ತಿ ಪ್ರತ್ಯಯ = ----------------
1. ಕ್ರಿಯಾಪದ
2. ಸಂಧಿಪದ
3. ಸಮಾಸ ಪದ
4. ನಾಮಪದ
3. ಗಿರಿ + ಅನ್ನು = ಗಿರಿಯನ್ನು ಈ ಪದವು ---------- ಗೆ ಉದಾಹರಣೆಯಾಗಿದೆ.
1. ಕ್ರಿಯಾಪದ
2. ಅವ್ಯಯ
3. ತದ್ಭವ
4. ನಾಮಪದ
4.' ಕೆರೆ + ಅಲ್ಲಿ = ಕೆರೆಯಲ್ಲಿ' ಈ ನಾಮಪದದಲ್ಲಿ ಕೆರೆ ಎನ್ನುವುದು --------------
1. ಕ್ರಿಯಾ ಪ್ರಕೃತಿ
2. ನಾಮ ಪ್ರಕೃತಿ
3. ಧಾತು
4 .ಅವ್ಯಯ
5. ವಸ್ತು ವಾಚಕ ನಾಮಪದಗಳ ಪ್ರಮುಖ ಪ್ರಕಾರಗಳು -----------
1. ಗುಣ ವಾಚಕ, ಸಂಖ್ಯಾ ವಾಚಕ
2. ಪ್ರಕಾರ ವಾಚಕ, ಸಂಖ್ಯೇಯ ವಾಚಕ
3. ರೂಢ, ಅಂಕಿತ, ಅನ್ವರ್ಥ
4. ರೂಢ, ಅಂಕಿತ , ಸಂಖ್ಯಾ ವಾಚಕ
6. ರೂಢನಾಮವೆಂದರೆ ---------------
1. ಇಟ್ಟ ಹೆಸರುಗಳು
2. ಅರ್ಥಕ್ಕೆ ಅನುಗುಣವಾಗಿ ಬಂದ ಹೆಸರುಗಳು.
3. ರೂಢಿಯಿಂದ ಬಂದ ಹೆಸರುಗಳು.
4.ಬಿರುದುಗಳು
7. ಮನುಷ್ಯ, ಪರ್ವತ, ನದಿ - ಈ ಪದಗಳು -------------ಕ್ಕೆ ಉದಾಹರಣೆಯಾಗಿದೆ.
1. ಅನ್ವರ್ಥ ನಾಮ
2. ರೂಢ ನಾಮ
3. ಅಂಕಿತ ನಾಮ
4. ಸರ್ವನಾಮ
8. ವ್ಯವಹಾರದ ಉದ್ದೇಶಕ್ಕೆ ಇಟ್ಟ ಹೆಸರುಗಳು --------------
1. ಅಂಕಿತನಾಮಗಳು
2. ರೂಢನಾಮಗಳು
3. ಅನ್ವರ್ಥ ನಾಮಗಳು
4. ಸರ್ವನಾಮಗಳು
9. ಭೀಮ, ಬೆಂಗಳೂರು, ಹುಲಿ- ಈ ಪದಗಳು ---------- ಪದಗಳಿಗೆ ಉದಾಹರಣೆಯಾಗಿದೆ.
1. ರೂಢನಾಮ
2. ಸರ್ವನಾಮ
3. ಅಂಕಿತನಾಮ
4. ಅನ್ವರ್ಥನಾಮ
10. ವ್ಯಕ್ತಿಯ ಗುಣ ಸ್ವಭಾವಾದಿ ವಿಶೇಷವಾದ ಅರ್ಥವನ್ನು ತಿಳಿಸುವ ಹೆಸರುಗಳು ----------
1. ಅಂಕಿತನಾಮಗಳು
2. ಸರ್ವನಾಮಗಳು
3. ರೂಢನಾಮಗಳು
4. ಅನ್ವರ್ಥನಾಮಗಳು
11. ರೋಗಿ, ಬಡಗಿ, ವಿದ್ವಾಂಸ, ಶಿಕ್ಷಕ- ಈ ಪದಗಳು ---------------- ಪದಗಳಿಗೆ ಉದಾಹರಣೆಯಾಗಿದೆ.
1. ಅಂಕಿತನಾಮ
2. ಅನ್ವರ್ಥನಾಮ
3. ರೂಢನಾಮ
4. ಸರ್ವನಾಮ
12. ನಾಮವಾಚಕಗಳ ಗುಣಲಕ್ಷಣವನ್ನು ವರ್ಣಿಸುವ ಪದಗಳು -------------
1. ಗುಣವಾಚಕಗಳು
2. ಪರಿಮಾಣ ವಾಚಕಗಳು
3. ಸಂಖ್ಯಾವಾಚಕಗಳು
4. ನಾಮಪದಗಳು
13. ಒಳ್ಳೆಯ, ಕೆಟ್ಟ, ದೊಡ್ಡದು, ಹಳತು- ಈ ಪದಗಳು -------------
1. ನಾಮಪದಗಳು
2. ಅವ್ಯಯಗಳು
3. ಗುಣವಾಚಕಗಳು
4. ಸರ್ವನಾಮಗಳು
14. ಸಂಖ್ಯೆಯನ್ನು ಸೂಚಿಸುವ ಪದಗಳನ್ನು ಹೀಗೆನ್ನುವರು;
1. ಸಂಖ್ಯೇಯ ವಾಚಕಗಳು
2. ಸಂಖ್ಯಾವಾಚಕಗಳು
3. ದಿಗ್ವಾಚಕಗಳು
4. ಸಂಖ್ಯೆಗಳು
15. ಹನ್ನೆರಡು, ಲಕ್ಷ, ಕೋಟಿ- ಈ ಪದಗಳು ---------- ಪದಗಳಿಗೆ ಉದಾಹರಣೆಯಾಗಿದೆ.
1. ಸಂಖ್ಯಾವಾಚಕ
2. ಸಂಖ್ಯೇಯ ವಾಚಕ
3. ಗುಣವಾಚಕ
4. ದಿಗ್ವಾಚಕ
