NEW
Font size
Worksheets10ನೇ ತರಗತಿ, ಪ್ರಥಮ ಭಾಷೆ ಕನ್ನಡ, ಗದ್ಯಪಾಠ -3 ಲಂಡನ್ ನಗರ
Total questions: 17
Worksheet time: 9mins
1. ಕ್ರಿಯೆಯು ನಡೆದ ಕಾಲವನ್ನು ಸೂಚಿಸುವದಕ್ಕಾಗಿ ಧಾತು ಮತ್ತು ಆಖ್ಯಾತ ಪ್ರತ್ಯಯಗಳ ನಡುವೆ ಬರುವ ಪ್ರತ್ಯಯವನ್ನು ----------- ಪ್ರತ್ಯಯ ಎನ್ನುವರು.
1. ಅರ್ಥರೂಪಿ ಕಾಲಸೂಚಕ ಪ್ರತ್ಯಯ
2. ವಿಧ್ಯರ್ಥಕ ಪ್ರತ್ಯಯ
3. ಸಂಭವನಾರ್ಥಕ ಪ್ರತ್ಯಯ
4. ಕಾಲ ಸೂಚಕ ಪ್ರತ್ಯಯ
2. ಕ್ರಿಯೆಯು ನಡೆದು ಹೋದ(ಹಿಂದಿನ) ಕಾಲವನ್ನು -------------- ಎನ್ನುವರು.
1. ಭೂತ ಕಾಲ
2. ಭವಿಷ್ಯತ್ ಕಾಲ
3. ವರ್ತಮಾನ ಕಾಲ
4. ಮೊದಲ ಕಾಲ
3. ಇದು ಭೂತಕಾಲಕ್ಕೆ ಉದಾಹರಣೆಯಾದ ವಾಕ್ಯವಾಗಿದೆ;
1. ರಾಮನು ಪೇಟೆಗೆ ಹೋಗುತ್ತಾನೆ.
2. ಶೈಕ್ಷಣಿಕ ಅಧ್ಯಯನದ ದೃಷ್ಟಿಯಿಂದ ಶೈಕ್ಷಣಿಕ ಪ್ರವಾಸ ಮಾಡುವರು.
3. ಹೆಜ್ಜೆ ಹೆಜ್ಜೆಗೆ ಇತಿಹಾಸದ ಅಡಿಗಲ್ಲುಗಳು ದೊರೆತವು.
4. ಹೆಜ್ಜೆ ಹೆಜ್ಜೆಗೆ ಇತಿಹಾಸದ ಅಡಿಗಲ್ಲುಗಳು ದೊರೆಯುತ್ತವೆ.
4. ಧಾತು+ ದ+ ಎನು, ಎವು, ಎ, ಇರಿ, ಅನು, ಅಳು, ಇತು, ಅರು, ಅವು(ಇವುಗಳಲ್ಲಿ ಯಾವುದಾದರೂ ಒಂದು ಆಖ್ಯಾತ ಪ್ರತ್ಯಯ ಸೇರಿದರೆ)= ------------
1. ಭವಿಷ್ಯತ್ ಕಾಲ
2. ಭೂತ ಕಾಲ
3. ವರ್ತಮಾನ ಕಾಲ
4. ಸಂಭವನಾರ್ಥಕ ರೂಪ
5. ಭೂತ ಕಾಲದ ಕಾಲಸೂಚಕ ಪ್ರತ್ಯಯ -------
1. ಉತ್ತ
2. ವ
3. ದ
4. ಉವ
6. ವರ್ತಮಾನ ಕಾಲವೆಂದರೆ -------------
1. ಕಳೆದು ಹೋಗಿರುವ ಕಾಲ
2. ಕ್ರಿಯೆಯು ಮುಂದೆ ನಡೆಯುವ ಕಾಲ
3. ಕ್ರಿಯೆಯು ನಡೆದು ಹೋದ ಕಾಲ
4. ಕ್ರಿಯೆಯು ಸದ್ಯ ನಡೆಯುತ್ತಿರುವ ಕಾಲ
'ಉತ್ತ' ಎಂಬುದು ಈ ಕಾಲದ ಕಾಲ ಸೂಚಕ ಪ್ರತ್ಯಯವಾಗಿದೆ.
1. ವರ್ತಮಾನ ಕಾಲ
2. ಭೂತ ಕಾಲ
3. ಭವಿಷ್ಯತ್ ಕಾಲ
4. ಸಂಭವನಾರ್ಥಕ ಆಖ್ಯಾತ ಪ್ರತ್ಯಯ
8. ಧಾತು + ಉತ್ತ + ಏನೆ, ಏವೆ, ಈಯೆ, ಈರಿ, ಆನೆ ಆಳೆ, ಅದೆ, ಆರೆ, ಆವೆ(ಇವುಗಳಲ್ಲಿ ಯಾವುದಾದರೂ ಒಂದು ಆಖ್ಯಾತ ಪ್ರತ್ಯಯ ಸೇರಿದರೆ) = ------------
1. ಭವಿಷ್ಯತ್ ಕಾಲ
2. ಭೂತ ಕಾಲ
3. ವರ್ತಮಾನ ಕಾಲ
4. ಸಂಭವನಾರ್ಥಕ ಕ್ರಿಯಾರೂಪ
9. "ಲಂಡನ್ ನಗರದಲ್ಲಿನ 'ವೂಲವರ್ಥ' ಎಂಬ ಸ್ಟೇಷನರಿ ಅಂಗಡಿಯಲ್ಲಿ ಎಲ್ಲ ತರಹದ ಸಾಮಾನುಗಳು ದೊರೆಯುತ್ತದೆ."- ಈ ವಾಕ್ಯವು ಈ ಕಾಲದಲ್ಲಿದೆ.
1. ವರ್ತಮಾನ ಕಾಲ
2. ಭೂತ ಕಾಲ
3. ಭವಿಷ್ಯತ್ ಕಾಲ
4. ಸಂಭವನಾರ್ಥಕ ಕ್ರಿಯಾರೂಪ
10. ಭವಿಷ್ಯತ್ ಕಾಲವೆಂದರೆ --------------- ಕಾಲವಾಗಿದೆ.
1. ಕಳೆದು ಹೋದ ಕಾಲ
2. ಕ್ನಿಯೆಯು ಮುಂದೆ ನಡೆಯಲಿರುವ ಕಾಲ
3. ಕ್ರಿಯೆಯು ನಡೆದು ಹೋದ ಕಾಲ
4. ಕ್ರಿಯೆಯು ಸದ್ಯ ನಡೆಯುತ್ತಿರುವ ಕಾಲ
11. ಭವಿಷ್ಯತ್ ಕಾಲದ ಕಾಲ ಸೂಚಕ ಪ್ರತ್ಯಯವು ಇದಾಗಿದೆ.
1. ದ
2. ಅಲಿ
3. ವ
4. ಉತ್ತ
12. ಧಾತು + ವ +ಎನು, ಎವು, ಎ, ಇರಿ, ಅನು, ಅಳು, ಉದು, ಅರು, ಅವು( ಇವುಗಳಲ್ಲಿ ಯಾವುದಾದರೂ ಒಂದು ಪ್ರತ್ಯಯ ಸೇರಿದರೆ) =-------------
1. ವಿಧ್ಯರ್ಥಕ ಕ್ರಿಯಾರೂಪ
2. ಭವಿಷ್ಯತ್ ಕಾಲ
3.ಭೂತ ಕಾಲ
4. ವರ್ತಮಾನ ಕಾಲ
13. "ಪ್ರವಾಸವನ್ನು ಶಿಕ್ಷಣದ ಒಂದು ಭಾಗವೆಂದು ಕರೆಯುವರು." ಈ ವಾಕ್ಯವು -------- ಕಾಲದಲ್ಲಿದೆ.
1. ವರ್ತಮಾನ
2. ಭೂತ
3. ಭವಿಷ್ಯತ್
4. ಸಂಭವನಾರ್ಥಕ ಕ್ರಿಯಾರೂಪ
14. ಕರ್ತೃವಿನ ಲಿಂಗ, ಪುರುಷ ಹಾಗೂ ವಚನಗಳನ್ನು ಸೂಚಿಸುವುದಕ್ಕಾಗಿ ಧಾತುವಿಗೆ ಸೇರುವ ಪ್ರತ್ಯಯಗಳನ್ನು ----------- ಪ್ರತ್ಯಯ ಎನ್ನುವರು.
1.ಆಖ್ಯಾತ
2. ಕಾಲ ಸೂಚಕ
3. ವಿಭಕ್ತಿ
ಅವ್ಯಯ
15. " ವೆಸ್ಟ್ ಮಿನಿಸ್ಟರ್ ಅಬೆ ನೋಡಿಕೊಂಡು ಬಂದೆವು." ಈ ವಾಕ್ಯವನ್ನು ಭವಿಷ್ಯತ್ ಕಾಲಕ್ಕೆ ಪರಿವರ್ತಿಸಿದಾಗ ಆಗುವ ರೂಪ --------------
1.ವೆಸ್ಟ್ ವಿನಿಸ್ಟರ್ ಅಬೆ ನೋಡಿಕೊಂಡು ಬರುತ್ತೇವೆ.
2. ವೆಸ್ಟ್ ಮಿನಿಸ್ಟರ್ ಅಬೆ ನೋಡಿಕೊಂಡು ಬರುವೆವು.
3. ವೆಸ್ಟ್ ಮಿನಿಸ್ಟರ್ ಅಬೆ ನೋಡಿಯಾಯಿತು.
4. ವೆಸ್ಟ್ ಮಿನಿಸ್ಟರ್ ಅಬೆ ನೋಡಿಕೊಂಡು ಬರುವೆವು.
16. "ಚೇರಿಂಗ್ ಕ್ರಾಸ್ ಓಣಿಯಲ್ಲಿ ಆಂಗ್ಲರ ಸಾಮ್ರಾಜ್ಯ ವೈಭವವು ಕಂಡು ಬರುವುದು." ಈ ವಾಕ್ಯವನ್ನು ವರ್ತಮಾನ ಕಾಲಕ್ಕೆ ಪರಿವರ್ತಿಸಿದಾಗ ಆಗುವ ರೂಪ;
1. ಚೇರಿಂಗ್ ಕ್ರಾಸ್ ಓಣಿಯಲ್ಲಿ ಆಂಗ್ಲರ ಸಾಮ್ರಾಜ್ಯ ವೈಭವ ಕಂಡು ಬರುತ್ತದೆ.
2. ಚೇರಿಂಗ್ ಕ್ರಾಸ್ ಓಣಿಯಲ್ಲಿ ಆಂಗ್ಲರ ಸಾಮ್ರಾಜ್ಯ ವೈಭವ ಕಂಡು ಬಂದಿತು.
3. ಚೇರಿಂಗ್ ಕ್ರಾಸ್ ಓಣಿಯಲ್ಲಿ ಆಂಗ್ಲರ ಸಾಮ್ರಾಜ್ಯ ವೈಭವ ಕಂಡಿತು.
ಚೇರಿಂಗ್ ಕ್ರಾಸ್ ಓಣಿಯು ಆಂಗ್ಲರ ಸಾಮ್ರಾಜ್ಯ ವೈಭವದ ಕುರುಹಾಗಿದೆ.
17. "ಪ್ರವಾಸದಿಂದ ಮನಸ್ಸು ವಿಕಾಸ ಹೊಂದುತ್ತದೆ." ಈ ವಾಕ್ಯವನ್ನು ಭೂತ ಕಾಲಕ್ಕೆ ಪರಿವರ್ತಿಸಿದಾಗ ಆಗುವ ರೂಪ;
1. ಪ್ರವಾಸದಿಂದ ಮನಸ್ಸು ವಿಕಾಸ ಹೊಂದುವುದು.
2. ಪ್ರವಾಸದಿಂದ ಮನಸ್ಸು ವಿಕಾಸ ಹೊಂದಿದೆ.
ಪ್ರವಾಸದಿಂದಲೇ ಮನಸ್ಸಿನ ವಿಕಾಸ.
4. ಪ್ರವಾಸದಿಂದ ಮನಸ್ಸು ವಿಕಾಸ ಹೊಂದಲಿ.
