wayground logo

Free Printable Worksheets

NEW

Font size

S
M
L
XL
Worksheets

ಪ್ರ. ಭಾಷೆ ಕನ್ನಡ, ೧೦ನೇ ತರಗತಿ, ಪದ್ಯಪಾಠ-೧ ಸಂಕಲ್ಪ ಗೀತೆ.

Total questions: 15

Worksheet time: 8mins

Name
Class
Date
1.

1. ಪುರುಷಾರ್ಥಕ ಸರ್ವನಾಮದ ಮಧ್ಯಮ ಪುರುಷದ ಬಹುವಚನದಲ್ಲಿ ಧಾತುವಿಗೆ ಸೇರುವ ವಿಧ್ಯರ್ಥಕ ಆಖ್ಯಾತ ಪ್ರತ್ಯಯ --------------

( ಏಕವಚನದಲ್ಲಿ ಧಾತು ಮೂಲರೂಪದಲ್ಲೇ ಉಳಿಯುತ್ತದೆ.)

a)

1. ಉವೆ

b)

2. ಇರಿ

c)

3. ಏನು

d)

4. ಅರಿ

2.

2. " ನೀನು ಹಾಡು" , " ನೀವು ಹಾಡಿರಿ" ಈ ವಾಕ್ಯಗಳಲ್ಲಿ ---------- ಕ್ರಿಯಾಪದವು ಕಂಡು ಬರುತ್ತದೆ.

a)

1. ವಿಧ್ಯರ್ಥಕ

b)

2. ನಿಷೇಧಾರ್ಥಕ

c)

3. ಸಂಭವನಾರ್ಥಕ

d)

4. ಭೂತಕಾಲ

3.

3. ಪುರುಷಾರ್ಥಕ ಸರ್ವನಾಮದ ಪ್ರಥಮ ಪುರುಷದ ಎಲ್ಲಾ ಲಿಂಗಗಳು ಮತ್ತು ವಚನಗಳಲ್ಲಿ ಧಾತುವಿಗೆ ಸೇರುವ ಏಕೈಕ ಆಖ್ಯಾತ ಪ್ರತ್ಯಯ --------------

a)

1. ಅನು

b)

2. ಓಣ

c)

3. ಅಲಿ

d)

4. ಅವು

4.

4. ಈ ವಾಕ್ಯವು ವಿಧ್ಯರ್ಥಕ ಕ್ರಿಯಾಪದಕ್ಕೆ ಉದಾಹರಣೆಯಾಗಿದೆ;

a)

1. ನೀನು ನೋಡೀಯೆ.

b)

2. ಅವನು ನೋಡನು.

c)

3. ಅವನು ನೋಡಿಯಾನು.

d)

4. ಅವರು ನೋಡಲಿ.

5.

5. ಉವೆ, ಓಣ, ಇರಿ, ಅಲಿ- ಇವು ಧಾತುವಿಗೆ ಪುರುಷಾರ್ಥಕ ಸರ್ವನಾಮದ ಲಿಂಗ, ವಚನಗಳಿಗನುಗುಣವಾಗಿ ಸೇರುವ ------------ ಆಖ್ಯಾತ ಪ್ರತ್ಯಯಗಳು. ( ಪುರುಷಾರ್ಥಕ ಸರ್ವನಾಮದ ಮಧ್ಯಮ ಪುರುಷದ ಏಕವಚನ ರೂಪದಲ್ಲಿ ಧಾತು ಮೂಲರೂಪದಲ್ಲೇ ಉಳಿಯುತ್ತದೆ.)

a)

1. ಸಂಭವನಾರ್ಥಕ

b)

2. ನಿಷೇಧಾರ್ಥಕ

c)

1. ವಿಧ್ಯರ್ಥಕ

d)

2. ವರ್ತಮಾನ ಕಾಲ

6.

6. ಕ್ರಿಯೆಯ ನಡೆಯುವಿಕೆಯಲ್ಲಿ 'ಸಂಶಯ' ಅಥವಾ ' ಊಹೆ' ಯನ್ನು ತೋರುವಲ್ಲಿ ಧಾತುವಿಗೆ ಆಖ್ಯಾತ ಪ್ರತ್ಯಯಗಳು ಸೇರಿ --------------- ಕ್ರಿಯಾಪದಗಳಾಗುತ್ತವೆ.

a)

1. ಸಂಭವನಾರ್ಥಕ

b)

2. ನಿಷೇಧಾರ್ಥಕ

c)

3. ಭವಿಷ್ಯತ್ ಕಾಲ

d)

4. ವಿಧ್ಯರ್ಥಕ

7.

7. ಪುರುಷಾರ್ಥಕ ಸರ್ವನಾಮದ ಉತ್ತಮ ಪುರುಷದ ಏಕವಚನ ಮತ್ತು ಬಹುವಚನ ರೂಪಗಳಲ್ಲಿ ಧಾತುವಿಗೆ ಸೇರುವ ಸಂಭವನಾರ್ಥಕ ಆಖ್ಯಾತ ಪ್ರತ್ಯಯಗಳು ಕ್ರಮವಾಗಿ -------------

a)

1. ಎ, ಅರಿ

b)

2. ಅನು, ಅಳು

c)

3. ಆರು, ಆವು

d)

4. ಏನು, ಏವು

8.

8. ಈ ವಾಕ್ಯಗಳು ಸಂಭವನಾರ್ಥಕ ಕ್ರಿಯಾಪದಕ್ಕೆ ಉದಾಹರಣೆಯಾಗಿವೆ;

a)

1. ನಾನು ನೋಡುವೆ, ಅವರು ನೋಡಲಿ.

b)

2. ನಾನು ನೋಡೇನು, ನಾವು ನೋಡೇವು.

c)

3. ನೀನು ನೋಡು, ನೀವು ನೋಡಿರಿ.

d)

4. ಅವಳು ನೋಡಳು, ಅವರು ನೋಡರು.

9.

9. ಪುರುಷಾರ್ಥಕ ಸರ್ವನಾಮದ ಮಧ್ಯಮ ಪುರುಷದಲ್ಲಿ ಲಿಂಗ ಮತ್ತು ವಚನಗಳಿಗನುಗುಣವಾಗಿ ಧಾತುವಿಗೆ ಸೇರುವ ಸಂಭವನಾರ್ಥಕ ಆಖ್ಯಾತ ಪ್ರತ್ಯಯಗಳು ------------

a)

1. ಈಯೆ, ಈರಿ

b)

2. ಆನು, ಆರು

c)

3. ಆರು, ಆವು

d)

4. ಅನು, ಅರು

10.

10. ಈ ಕೆಳಗಿನವುಗಳಲ್ಲಿ ಸಂಭವನಾರ್ಥಕ ಕ್ರಿಯಾರೂಪವನ್ನು ಹೊಂದಿರುವ ವಾಕ್ಯಗಳು ---------------

a)

1. ಅವನು ಹಾಡಲಿ, ಅವರು ಹಾಡಲಿ.

b)

2. ಅವನು ಹಾಡನು, ಅವರು ಹಾಡರು.

c)

3. ನಾನು ಹಾಡುವೆ, ನಾವು ಹಾಡೋಣ.

d)

4. ನೀನು ಹಾಡೀಯೆ, ನೀವು ಹಾಡೀರಿ.

11.

11. ಪುರುಷಾರ್ಥಕ ಸರ್ವನಾಮದ ಪ್ರಥಮ ಪುರುಷದಲ್ಲಿ ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕ ಲಿಂಗಗಳಿಗನುಗುಣವಾಗಿ ಏಕವಚನ ರೂಪದಲ್ಲಿ ಧಾತುವಿಗೆ ಕ್ರಮವಾಗಿ ಸೇರುವ ಸಂಭವನಾರ್ಥಕ ಆಖ್ಯಾತ ಪ್ರತ್ಯಯಗಳು ------------

a)

1. ಅಲಿ, ಅಲಿ, ಅಲಿ

b)

2. ಅನು, ಅಳು, ಅರು

c)

3. ಆನು, ಆಳು, ಈತು

d)

ಎನು, ಎವು, ಅರಿ

12.

12. ಏನು, ಏವು, ಈಯೆ, ಈರಿ, ಆನು, ಆಳು , ಈತು, ಆರು, ಆವು -ಈ ಆಖ್ಯಾತ ಪ್ರತ್ಯಯಗಳು ಪುರುಷಾರ್ಥಕ ಸರ್ವನಾಮದ ಎಲ್ಲಾ ಪುರುಷಗಳಲ್ಲಿ ಲಿಂಗ , ವಚನಗಳಿಗನುಗುಣವಾಗಿ ಸೇರುವ ---------- ಆಖ್ಯಾತ ಪ್ರತ್ಯಯಗಳಾಗಿವೆ;

a)

1. ಸಂಭವನಾರ್ಥಕ

b)

2. ವಿಧ್ಯರ್ಥಕ

c)

3. ನಿಷೇಧಾರ್ಥಕ

d)

4. ಭೂತ ಕಾಲ

13.

13. ಅವನು ನೋಡಿಯಾನು, ಅವಳು ನೋಡಿಯಾಳು, ಅದು ನೋಡೀತು -ಈ ವಾಕ್ಯಗಳು --------- ಕ್ರಿಯಾಪದವನ್ನು ಹೊಂದಿವೆ.

a)

1. ನಿಷೇಧಾರ್ಥಕ

b)

2. ವಿಧ್ಯರ್ಥಕ

c)

3. ಸಂಭವನಾರ್ಥಕ

d)

4. ವರ್ತಮಾನ ಕಾಲ

14.

14. ಪುರುಷಾರ್ಥಕ ಸರ್ವನಾಮದ ಪ್ರಥಮ ಪುರುಷ ದಲ್ಲಿ ಬಹುವಚನ ರೂಪದಲ್ಲಿ ಧಾತುವಿಗೆ ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕ ಲಿಂಗಗಳಿಗನುಗುಣವಾಗಿ ಕ್ರಮವಾಗಿ ಸೇರುವ ಸಂಭವನಾರ್ಥಕ ಆಖ್ಯಾತ ಪ್ರತ್ಯಯಗಳು -----------

a)

1. ಆನು , ಆಳು, ಈತು

b)

2. ಅರು, ಅರು, ಅವು

c)

3. ಅಲಿ, ಅಲಿ, ಅಲಿ

d)

4. ಆರು, ಆರು, ಆವು

15.

15. ಅವರು ನೋಡಿಯಾರು, ಅವು ನೋಡಿಯಾವು- ಈ ವಾಕ್ಯಗಳು ----------- ಕ್ರಿಯಾಪದವನ್ನು ಹೊಂದಿವೆ.

a)

1. ನಿಷೇಧಾರ್ಥಕ

b)

2. ಸಂಭವನಾರ್ಥಕ

c)

3. ವಿಧ್ಯರ್ಥಕ

d)

1. ಭೂತಕಾಲ