NEW
Font size
Worksheets೧೦ನೇ ತರಗತಿ, ಪ್ರ ಭಾಷೆ ಕನ್ನಡ, ಗದ್ಯ ಪಾಠ-೮ ಸುಕುಮಾರ ಸ್ವಾಮಿಯ ಕಥೆ
Total questions: 17
Worksheet time: 9mins
1. ಸಂಖ್ಯೆಯಿಂದ ಕೂಡಿದ ವಸ್ತುಗಳನ್ನು ಹೇಳುವ ಪದಗಳನ್ನು --------- ಎನ್ನುವರು.
1. ಸಂಖ್ಯಾವಾಚಕಗಳು
2. ಸಂಖ್ಯೇಯವಾಚಕಗಳು
3. ಪರಿಮಾಣ ವಾಚಕಗಳು
4. ಪ್ರಕಾರ ವಾಚಕಗಳು
2. ಇಪ್ಪತ್ತನೆಯ, ಮೂವರು, ನಾಲ್ಕನೆಯ- ಈ ಪದಗಳು ------------ ವಾಚಕಗಳಾಗಿವೆ.
1. ಸಂಖ್ಯೇಯ
2. ಪರಿಮಾಣ
3. ಪ್ರಕಾರ
4. ಸಂಖ್ಯಾ
ಪ್ರಮಾಣವನ್ನು ಸೂಚಿಸುವ ಪದಗಳು ---------------
1. ಹತ್ತು, ಹನ್ನೆರಡು, ಹದಿನೈದು
2. ಮೂರನೆಯ, ಐದನೆಯ, ಐವತ್ತನೆಯ
3. ಅಷ್ಟು, ಹಲವು, ಅನಿತು
4. ಹಾಗೆ, ಹೀಗೆ, ಹೇಗೆ
4. ರೀತಿಯನ್ನು ಸೂಚಿಸುವ ಪದಗಳು -------------
1. ಪರಿಮಾಣ ವಾಚಕಗಳು
2. ಭಾವನಾಮಗಳು
3. ಗುಣವಾಚಕಗಳು
4. ಪ್ರಕಾರ ವಾಚಕಗಳು
5. ಈ ಕೆಳಗಿನ ಪದಗಳು ಪ್ರಕಾರ ವಾಚಕಗಳಿಗೆ ಉದಾಹರಣೆಯಾಗಿದೆ;
1. ಇಂತಹ, ಎಂತಹದು, ಹೀಗೆ
2. ಒಳ್ಳೆಯ, ಕೆಟ್ಟ, ದೊಡ್ಡದು
3. ಇಷ್ಟು, ಹಲವು, ಎನಿತು
4. ಪೂರ್ವ, ಮೇಲೆ, ಕೆಳಗೆ
6. ದಿಗ್ವಾಚಕಗಳೆಂದರೆ;
1. ಗುಣ ಸ್ವಭಾವವನ್ನು ತಿಳಿಸುವ ಪದಗಳು.
2. ದಿಕ್ಕುಗಳನ್ನು ಸೂಚಿಸುವ ಪದಗಳು.
3. ಪ್ರಮಾಣವನ್ನು ಸೂಚಿಸುವ ಪದಗಳು.
4. ರೂಢಿಯಿಂದ ಬಂದಿರುವ ಪದಗಳು.
7. ದಿಗ್ವಾಚಕ ಪದಗಳಿಗೆ ಉದಾಹರಣೆಯಾದ ಪದಗಳಿವು;
1. ಬಿಳುಪು, ಬಡತನ, ಸಿರಿತನ
2. ಹನ್ನೆರಡು , ಐವತ್ತು, ಎಂಬತ್ತು
3. ಮೂಡಣ, ಪೂರ್ವ, ಕೆಳಗೆ
4. ಹಲವು, ಕೆಲವು, ಅಷ್ಟು
8. ಒಂದು ವಸ್ತುವಿನ ಗುಣ ಸ್ವಭಾವವನ್ನು ತಿಳಿಸುವ ನಾಮವಾಚಕಗಳನ್ನು ----------- ಎನ್ನುವರು.
1. ರೂಢನಾಮ
2. ಭಾವನಾಮ
3. ಅಂಕಿತನಾಮ
4. ಅನ್ವರ್ಥ ನಾಮ
9. ಈ ಕೆಳಗಿನ ಪದಗಳಲ್ಲಿ ಭಾವನಾಮವಾಗಿರುವ ಪದಗಳ ಗುಂಪು;
1. ಹಾಗೆ, ಹೀಗೆ, ಹೇಗೆ
2. ಪೂರ್ವ, ಮೇಲೆ, ಕೆಳಗೆ
3. ಆಟ, ಬಿಳುಪು, ಸಿರಿತನ
4. ಅಷ್ಟು, ಇಷ್ಟು, ಎಷ್ಟು
10. ನಾಮಪದಗಳ ಸ್ಥಾನದಲ್ಲಿ ಬಂದು ಅವುಗಳ ಪ್ರತಿನಿಧಿಯಾಗಿ ಬಳಸುವ ಪದಗಳು -------------
1. ಭಾವನಾಮಗಳು
2. ರೂಢನಾಮಗಳು
3. ಅಂಕಿತನಾಮಗಳು
4. ಸರ್ವನಾಮಗಳು
11. ಸರ್ವನಾಮಗಳ 4 ಪ್ರಕಾರಗಳೆಂದರೆ;
1. ಪುರುಷಾರ್ಥಕ, ಆತ್ಮಾರ್ಥಕ, ಪ್ರಶ್ನಾರ್ಥಕ, ನಿರ್ದೇಶಾತ್ಮಕ
2. ಪುರುಷಾರ್ಥಕ, ಸಾರ್ಥಕ, ಪ್ರಶ್ನಾರ್ಥಕ, ನಿರ್ದೇಶಾತ್ಮಕ
3. ಪ್ರಶ್ನಾರ್ಥಕ, ನಿರ್ದೇಶಾತ್ಮಕ, ಸಾರ್ಥಕ, ಪುರುಷಾರ್ಥಕ
ಪುರುಷಾರ್ಥಕ, ಆತ್ಮಾರ್ಥಕ, ಪ್ರಶ್ನಾರ್ಥಕ, ಸಾರ್ಥಕ
12. "ನಾನು ರಾಮನ ಜೊತೆಗೆ ಪೇಟೆಗೆ ಹೋದೆನು"- ಈ ವಾಕ್ಯದಲ್ಲಿರುವ ಪುರುಷಾರ್ಥಕ ಸರ್ವನಾಮದ ಉತ್ತಮ ಪುರುಷಕ್ಕೆ ಉದಾಹರಣೆಯಾದ ಪದ;
1. ಪೇಟೆಗೆ
2. ನಾನು
3. ರಾಮನ
4. ಜೊತೆಗೆ
13. "ನೀವು ಯಾವಾಗ ಊರಿಗೆ ಬರುತ್ತೀರಿ?"- ಈ ವಾಕ್ಯದಲ್ಲಿ ಮಧ್ಯಮ ಪುರುಷಕ್ಕೆ ಉದಾಹರಣೆಯಾದ ಪದ;
1. ಬರುತ್ತೀರಿ?
2. ಯಾವಾಗ
3. ಊರಿಗೆ
4. ನೀವು
14. ಅವನು/ ಇವನು-ಅವರು/ಇವರು, ಅವಳು/ಇವಳು- ಅವರು/ಇವರು, ಅದು /ಇದು- ಅವು/ಇವು - ಈ ಪದಗಳು ಪುರುಷಾರ್ಥಕ ಸರ್ವನಾಮದ ---------- ಗಳಾಗಿವೆ.
1. ಪ್ರಥಮ ಪುರುಷ
2. ಉತ್ತಮ ಪುರುಷ
3. ಮಧ್ಯಮ ಪುರುಷ
4. ತೃತೀಯ ಪುರುಷ
ತಾನು/ ತಾವು, ತನ್ನ/ ತಮ್ಮ- ಇವು ಈ ಸರ್ವನಾಮಕ್ಕೆ ಉದಾಹರಣೆಗಳಾಗಿವೆ;
1. ಪುರುಷಾರ್ಥಕ ಸರ್ವನಾಮ
2. ಪ್ರಶ್ನಾರ್ಥಕ ಸರ್ವನಾಮ
3. ಆತ್ಮಾರ್ಥಕ ಸರ್ವನಾಮ
4. ನಿರ್ದೇಶಾತ್ಮಕ ಸರ್ವನಾಮ
1.2. ನಾಮವಾಚಕಗಳ ಗುಣ ವಿಶೇಷವನ್ನು ಕುರಿತು ವರ್ಣಿಸುವ ಪದಗಳನ್ನು ---- ಎನ್ನುವರು.
1. ಗುಣವಾಚಕಗಳು
2. ಸಂಖ್ಯಾವಾಚಕಗಳು
3. ಸಂಖ್ಯೇಯ ವಾಚಕಗಳು
4. ದಿಗ್ವಾಚಕಗಳು
1.2. ಒಳ್ಳೆಯ ಕೆಟ್ಟ, ದೊಡ್ಡದು -ಇವು ------- ಗಳಿಗೆ ಉದಾಹರಣೆಯಾಗಿವೆ.
1. ಗುಣವಾಚಕ
2. ಸಂಖ್ಯಾವಾಚಕ
3. ಸಂಖ್ಯೇಯ ವಾಚಕ
4. ದಿಗ್ವಾಚಕ
