NEW
Font size
Worksheetsಶಬ್ದಾಲಂಕಾರ
Total questions: 20
Worksheet time: 10mins
ಅಲಂಕಾರ ಎಂದರೇ?
ಕಾವ್ಯ ಸೌಂದರ್ಯ
ಶಬ್ದಾರ್ಥಗಳ ವೈಚಿತ್ರ್ಯ
ಶಬ್ದ, ಅರ್ಥಗಳ , ಹೋಲಿಕೆ ಇವುಗಳನ್ನೊಳಗೊಂಡ ಪದಾರ್ಥಗಳ ಜಾಲ
ಎಲ್ಲವೂ
ಈ ಕೆಳಗಿನವುಗಳಲ್ಲಿ ಅಲಂಕಾರಿಕ ವಾಕ್ಯ ಯಾವುದು?
ಪೂರ್ವ ದಿಕ್ಕಿನಲ್ಲಿ ಸೂರ್ಯ ಮೂಡಿದನು
ಪೂರ್ವದಿಕ್ಕಿನಲ್ಲಿ ಮೂಡಿದ ಸೂರ್ಯನು ಮುತ್ತೈದೆಯ ಹಣೆಯಲ್ಲಿರುವ ಕುಂಕುಮದಂತೆ ಕಂಡನು
ಸೂರ್ಯನು ಕೆಂಪಗೆ ಕಂಡನು
ಮುತ್ತೈದೆಯ ಹಣೆಯಲ್ಲಿ ಕುಂಕುಮವಿದೆ.
ಅಲಂಕಾರದ ಪ್ರಮುಖ ವಿಧಗಳು?
ಶಬ್ದಾಲಂಕಾರ
ಅರ್ಥಾಲಂಕಾರ
ಶಬ್ದಾಲಂಕಾರ ಮತ್ತು ಅರ್ಥಾಲಂಕಾರ
ಆದಿಪ್ರಾಸ
ಶಬ್ದ ಅಥವಾ ಪದಗಳ ಜೋಡಣೆಯ ಮೂಲಕ ಕಾವ್ಯ ಅಥವಾ ಮಾತಿನ ಸೌಂದರ್ಯ ಹೆಚ್ಚಿದರೆ ಅದನ್ನು ----------- ಎನ್ನುವರು?
ಶಬ್ದಾಲಂಕಾರ
ಅರ್ಥಾಲಂಕಾರ
ಉಪಮಾಲಂಕಾರ
ಚಿತ್ರಕವಿತ್ವ
ಪದಗಳ ಅರ್ಥ ಚಮತ್ಕಾರದಿಂದ ಕಾವ್ಯದ ಅಥವಾ ಅರ್ಥದ ಸೌಂದರ್ಯ ಹೆಚ್ಚಿದರೆ ಅದನ್ನು ---------------- ಎಂದು ಕರೆಯುತ್ತಾರೆ.
ಶಬ್ದಾಲಂಕಾರ
ಅರ್ಥಾಲಂಕಾರ
ಯಮಕಾಲಂಕಾರ
ಅನುಪ್ರಾಸ
ಇವುಗಳಲ್ಲಿ ಶಬ್ದಾಲಂಕಾರದ ಪ್ರಕಾರ ಯಾವುದು?
ಅನುಪ್ರಾಸ
ಯಮಕ
ಚಿತ್ರಕವಿತ್ವ
ಈ ಎಲ್ಲವೂ
ಒಂದು ಅಥವಾ ಎರಡು ಅಕ್ಷರಗಳು ಪದ್ಯದಲ್ಲಿ ಅಥವಾ ಪದ್ಯದ ಪಾದದಲ್ಲಿ ಮತ್ತೆ ಮತ್ತೆ ಬರುವದು?
ಅನುಪ್ರಾಸ
ಯಮಕ
ಚಿತ್ರಕವಿತ್ವ
ಮಧ್ಯಪ್ರಾಸ
ಅನುಪ್ರಾಸ ಎಂದರೇ?
ಮೂರು ಅಕ್ಷರಗಳು ಕೂಡಿ ಬರುವದು
ಪದಗಳ ವಿಚಿತ್ರ ಜೋಡಣೆ
ಅರ್ಥದ ಆವೃತ್ತಿ
ಅಕ್ಷರಗಳ ಆವೃತ್ತಿ
ಇವು ಅನುಪ್ರಾಸ ಅಲಂಕಾರದ ಪ್ರಕಾರಗಳು?
ಆದಿ ಪ್ರಾಸ & ಮಧ್ಯಪ್ರಾಸ
ಆದಿ ಪ್ರಾಸ & ಅಂತ್ಯಪ್ರಾಸ
ವೃತ್ತ್ಯನುಪಾಸ & ಛೇಕಾನುಪ್ರಾಸ
ವೃತ್ತ್ಯನುಪಾಸ & ಆದಿಪ್ರಾಶ
ಒಂದು ಅಥವಾ ಎರಡು ವ್ಯಂಜನಾಕ್ಷರಗಳು ಪದ್ಯದ ಸಾಲುಗಳಲ್ಲಿ ಮತ್ತೆ ಮತ್ತೆ ಬಂದರೆ ಅಂದರೆ ಪುನರಾವರ್ತನೆಗೊಂಡರೆ ಅದನ್ನು ------ ಎಂದು ಕರೆಯುತ್ತಾರೆ.
ವೃತ್ತ್ಯನುಪ್ರಾಸ
ಛೇಕಾನುಪ್ರಾಸ
ಆದಿಪ್ರಾಸ
ಅಂತ್ಯಪ್ರಾಸ
“ಎಳಗಿಳಿಗಳ ಬಳಗಗಳು ನಳನಳಿಸಿ ಬೆಳೆದ ಕಳವೆಯ ಎಳೆಯ ಕಾಳಿಗೆ ಎಳಸಿ ಬಂದವು” ಇದು ಈ ಅಲಂಕಾರಕ್ಕೆ ಉದಾಹರಣೆ.
ಚಿತ್ರಕವಿತ್ವ
ಯಮಕ
ವೃತ್ತ್ಯನುಪ್ರಾಸ
ಛೇಕಾನುಪ್ರಾಸ
ಛೇಕಾನುಪ್ರಾಸ ಎಂದರೇ?
ಎರಡೆರಡು ವ್ಯಂಜನಗಳು ಪುನರಾವರ್ತನೆಗೊಳ್ಳುವದು
ಒಂದು ಅಥವಾ ಎರಡು ವ್ಯಂಜನಾಕ್ಷರಗಳು ಪದ್ಯದ ಸಾಲುಗಳಲ್ಲಿ ಮತ್ತೆ ಮತ್ತೆ ಬಂದರೆ ಅಂದರೆ ಪುನರಾವರ್ತನೆಗೊಳ್ಳುವದು
ಅಕ್ಷರಗಳ ಆವೃತ್ತಿಯೇ
ಮೂರು ಅಥವಾ ಅದಕ್ಕಿಂತ ಹೆಚ್ಚು ಅಕ್ಷರಗಳುಳ್ಳ ಪದವಾಗಲಿ, ಪದಭಾಗವಾಗಲಿ ಒಂದು ಪದ್ಯದ ಆದಿ, ಮಧ್ಯ, ಅಥವಾ ಅಂತ್ಯದಲ್ಲಿ ನಿಯತವಾಗಿ ಪುನಃ ಪುನಃ ಬರುವದು
"ಹಾಡಿ ಹಾಡಿ ರಾಗ ಬಂತು ;
ಉಗುಳು ಉಗುಳಿ ರೋಗ ಬಂತು" ಇದು ಈ ಅಲಂಕಾರಕ್ಕೆ ಉದಾಹರಣೆ.
ವೃತ್ತ್ಯನುಪ್ರಾಸ
ಛೇಕಾನುಪ್ರಾಸ
ಯಮಕ
ಚಿತ್ರಕವಿತ್ವ
ಮೂರು ಅಥವಾ ಅದಕ್ಕಿಂತ ಹೆಚ್ಚು ಅಕ್ಷರಗಳುಳ್ಳ ಪದವಾಗಲಿ, ಪದಭಾಗವಾಗಲಿ ಒಂದು ಪದ್ಯದ ಆದಿ, ಮಧ್ಯ, ಅಥವಾ ಅಂತ್ಯದಲ್ಲಿ ನಿಯತವಾಗಿ ಪುನಃ ಪುನಃ ಬಂದರೆ ಅದು ------------ ಅಲಂಕಾರ.
ಛೇಕಾನುಪ್ರಾಸ
ಚಿತ್ರಕವಿತ್ವ
ಅನುಪ್ರಾಸ
ಯಮಕಾಲಂಕಾರ
"ಅಮಳ್ಗಳ್ ನಯವಿಕ್ರಮಗುಣ |
ದಮಳ್ಗಳ್ ನೃಪಶಾಸ್ತ್ರ ಪರಿಣತರವರಂ ||
ಸಮರದೊಳಗಗ್ರ ಶೌರ್ಯಂ |
ಸಮರಸ ಸಂಪನ್ನನಾವನುದಾರನಪ್ಪನ್ ||" ಇದು ಈ ಅಲಂಕಾರಕ್ಕೆ ಉದಾಹರಣೆ.
ಅನುಪ್ರಾಸ
ಯಮಕ
ಚಿತ್ರಕವಿತ್ವ
ಛೇಕಾನುಪ್ರಾಸ
ಪ್ರೌಢಪಂಡಿತ ಕವಿಗಳು ತಮ್ಮ ಬುದ್ಧಿಕೌಶಲದಿಂದ ವೈಚಿತ್ರ್ಯಪೂರ್ಣವಾಗಿ ಅಕ್ಷರಗಳನ್ನೂ, ಪದಗಳನ್ನೂ ಜೋಡಿಸಿ ಪದ್ಯರಚಿಸಿದರೇ ಅದು ------------- .
ಈ ಎಲ್ಲವೂ
ವೃತ್ತ್ಯನುಪ್ರಾಸ
ಛೇಕಾನುಪ್ರಾಸ
ಚಿತ್ರಕವಿತ್ವ
ನಿರೋಷ್ಠ್ಯ, ತಾಲವ್ಯ, ಏಕಾಕ್ಷರ, ದ್ವ್ಯಕ್ಷರ, ತ್ರ್ಯಕ್ಷರ, ಹಾರಬಂಧ, ಮುರಜಬಂಧ ಇತ್ಯಾದಿ ಪ್ರಕಾರಗಳನ್ನು ಈ ಅಲಂಕಾರ ಒಳಗೊಂಡಿದೆ.
ಉಪಮಾಲಂಕಾರ
ಚಿತ್ರಕವಿತ್ವ
ಯಮಕ
ರೂಪಕಾಲಂಕಾರ
ಇದು ಚಿತ್ರಕವಿತ್ವಕ್ಕೆ ಉದಾಹರಣೆಯಾಗಿದೆ?
ಕೆಲದೊಳ್ ಪುಳಿಂದಿಯಿರೆ ಪೆ |
ರ್ಬುಲಿ ಬಂದೊಡಮಂಜನಳ್ಕ ನೋಡಂನೋಡಂ
ಯತಿ ಕೆಡುಗು ದುಸ್ಸಂಗದಲ್ಲಿ ಭೂ
ಪತಿ ಕೆಡುಗು ದುರ್ಮಂತ್ರದಲಿ ವರ
ನನ್ದನ ನನ್ದನ ನುನ್ನೊನ್ದನ
ಮೈ ಮುನ್ದೆ ನಿನ್ದೆದೆನ್ದೆನೆ ಮುದದಿ
ಎಳೆವಾಸೆ ತೊಡರ್ದುದೆನೆ ಮಿಸು
ಪೆಳೆವಾಸೆಯದೆಸೆಯ ನಿಂದಳಂ ಕೈವಿಡಿದೊ
ಗುಂಪಿಗೆ ಸೇರದ ಪದ ಗುರುತಿಸಿ.
ಆದಿಪ್ರಾಸ
ವೃತ್ತ್ಯನುಪ್ರಾಸ
ಛೇಕಾನುಪ್ರಾಸ
ಅನುಪ್ರಾಸ
"ಯತಿ ಕೆಡುಗು ದುಸ್ಸಂಗದಲ್ಲಿ ಭೂ
ಪತಿ ಕೆಡುಗು ದುರ್ಮಂತ್ರದಲಿ ವರ
ಸುತ ಕೆಡುಗು ಲಾಲನೆಗಳಲಿ ಕೃಷಿ ಕೆಡುಗುಪೇಕ್ಷೆಯಲಿ" ಇದು ಈ ಅಲಂಕಾರಕ್ಕೆ ಉದಾಹರಣೆ.
ಅನುಪ್ರಾಸ
ಯಮಕ
ಚಿತ್ರಕವಿತ್ವ
ದೃಷ್ಟಾಂತಾಲಂಕಾರ
