NEW
Font size
Worksheetsಪ್ರ. ಭಾಷೆ ಕನ್ನಡ, ೧೦ನೇ ತರಗತಿ, ಪದ್ಯ ಪಾಠ-೧ ಸಂಕಲ್ಪಗೀತೆ
Total questions: 15
Worksheet time: 8mins
1. ಕರ್ಮಪದವನ್ನು ಬಯಸದೇ ಇರುವ ಧಾತುಗಳಿಗೆ ---------- ಧಾತುಗಳು ಎನ್ನುವರು.
1. ಸಹಜ
2. ಸಾಧಿತ
3. ಸಕರ್ಮಕ
4. ಅಕರ್ಮಕ
2. ಧಾತುವಿನ ಹಿಂಭಾಗದಲ್ಲಿ 'ಏನನ್ನು' ಎಂದು ಪ್ರಶ್ನೆ ಮಾಡಿದಾಗ ಉತ್ತರ ಬಯಸದೇ ಇದ್ದರೆ ಆ ಧಾತುವು ---------- ಧಾತು.
1. ಅಕರ್ಮಕ
2. ಸಕರ್ಮಕ
3. ಸಹಜ
4. ಸಾಧಿತ
3. ಇವು ಅಕರ್ಮಕ ಧಾತುಗಳಿಗೆ ಉದಾಹರಣೆ;
1. ಕೊಡು, ಬಿಡು, ಉಣ್ಣು
2. ಮಲಗು, ಓಡು, ಬದುಕು, ಹೋಗು, ನಾಚು
2. ಉಜ್ಜು, ತಿದ್ದು , ಮುಚ್ಚು
4. ರಾಮ, ರವಿ, ರಾಷ್ಟ್ರ
4. ಅಕರ್ಮಕ ಧಾತುಗಳಿಗೆ ಪ್ರೇರಣಾರ್ಥದಲ್ಲಿ 'ಇಸು' ಪ್ರತ್ಯಯ ಸೇರಿದಾಗ -------- ಧಾತುವಾಗುತ್ತದೆ.
ಉದಾಹರಣೆ: ಮಲಗು+ ಇಸು = ಮಲಗಿಸು
1. ಸಕರ್ಮಕ
2. ಸಹಜ
3. ಅಕರ್ಮಕ
4. ಕ್ರಿಯಾ ಪ್ರಕೃತಿ
5. ಧಾತುಗಳಿಗೆ ಲಿಂಗವಾಚಕ ಮತ್ತು ವಚನ ವಾಚಕಗಳು ಸೇರಿ ಒಂದು ಪೂರ್ಣ ವಾಕ್ಯವಾದಾಗ ಅದು --------- ವಾಕ್ಯವೆನಿಸುತ್ತದೆ.
1. ಮಿಶ್ರ ವಾಕ್ಯ
2. ಸಂಯೋಜಿತ ವಾಕ್ಯ
3. ಕರ್ತೃರಿ ಪ್ರಯೋಗದ ವಾಕ್ಯ
4. ಕರ್ಮಣಿ ಪ್ರಯೋಗದ ವಾಕ್ಯ
6. " ಭೀಮನು ಅನ್ನವನ್ನು ಉಂಡನು."- ಈ ವಾಕ್ಯವು ------------ ವಾಕ್ಯಕ್ಕೆ ಉದಾಹರಣೆಯಾಗಿದೆ.
1. ಕರ್ತೃರಿ ಪ್ರಯೋಗದ ವಾಕ್ಯ
2. ಕರ್ಮಣಿ ಪ್ರಯೋಗದ ವಾಕ್ಯ
3. ಮಿಶ್ರ ವಾಕ್ಯ
4. ಸಂಯೋಜಿತ ವಾಕ್ಯ
7. ಸಕರ್ಮಕ ಧಾತುಗಳ ಮೇಲೆ 'ಅಲ್ಪಡು' ಪ್ರತ್ಯಯ ಸೇರಿ ಕಾಲಸೂಚಕ ಮತ್ತು ಆಖ್ಯಾತ ಪ್ರತ್ಯಯಗಳು ಸೇರಿದಾಗ ---------- ಆಗುತ್ತದೆ.
1. ಕರ್ತೃರಿ ಪ್ರಯೋಗದ ವಾಕ್ಯ
2. ಕರ್ಮಣಿ ಪ್ರಯೋಗದ ವಾಕ್ಯ
3. ಸಂಯೋಜಿತ ವಾಕ್ಯ
4. ಮಿಶ್ರ ವಾಕ್ಯ
8. ಈ ವಾಕ್ಯವು ಕರ್ಮಣಿ ಪ್ರಯೋಗದ ವಾಕ್ಯಕ್ಕೆ ಉದಾಹರಣೆಯಾಗಿದೆ.
1. ಭೀಮನು ಬಂದನು.
2. ಅನ್ನವನ್ನು ಭೀಮನು ಉಂಡನು.
3. ಭೀಮನಿಂದ ಅನ್ನವು ಉಣ್ಣಲ್ಪಟ್ಟಿತು.
4. ಭೀಮನು ಅನ್ನವನ್ನು ಉಂಡನು.
9. ಈ ಅಂಶವು ಅರ್ಥರೂಪ ಕ್ರಿಯಾಪದವನ್ನು ಗುರುತಿಸಲು ಸಹಕಾರಿಯಾಗಿದೆ;
1. ಧಾತುವಿಗೆ ನೇರವಾಗಿ ಆಖ್ಯಾತ ಪ್ರತ್ಯಯ ಸೇರುವುದು.
2. ಧಾತುವಿಗೆ ಕಾಲ ಸೂಚಕ ಪ್ರತ್ಯಯ ಮತ್ತು ಆಖ್ಯಾತ ಪ್ರತ್ಯಯಗಳು ಸೇರುವುದು.
3. ನಾಮ ಪ್ರಕೃತಿಗೆ ವಿಭಕ್ತಿ ಪ್ರತ್ಯಯಗಳು ಸೇರುವುದು.
4. ಧಾತುವು ಸಕರ್ಮಕ ಧಾತುವಾಗಿರುವುದು.
10. ಧಾತುಗಳ ಮೇಲೆ ಆಶೀರ್ವಾದ, ಹಾರೈಕೆ, ಸಮ್ಮತಿ, ಅಪ್ಪಣೆ, ಆಜ್ಞೆ ಇತ್ಯಾದಿ ವಿಧಿಗಳು ತೋರುವಾಗ ಧಾತುವಿಗೆ ವಿಧ್ಯರ್ಥಕ ಆಖ್ಯಾತ ಪ್ರತ್ಯಯಗಳು ಸೇರಿ --------- ಕ್ರಿಯಾಪದಗಳಾಗುತ್ತವೆ.
3. ವರ್ತಮಾನ ಕಾಲದ ಕ್ರಿಯಾಪದಗಳು
2. ನಿಷೇಧಾರ್ಥಕ ಕ್ರಿಯಾಪದಗಳು
3. ಸಂಭವನಾರ್ಥಕ ಕ್ರಿಯಾಪದಗಳು
4. ವಿಧ್ಯರ್ಥಕ ಕ್ರಿಯಾಪದಗಳು
11. ಅರ್ಥರೂಪ ಕ್ರಿಯಾಪದದ ವಿಧಗಳು ------
1. 4
2. 3
3. 2
4. 6
12. ವಿಧ್ಯರ್ಥಕ, ಸಂಭವನಾರ್ಥಕ, ನಿಷೇಧಾರ್ಥಕ ಇವು --------- ಕ್ರಿಯಾಪದದ 3 ವಿಧಗಳು;
1. ಕಾಲರೂಪ
2. ಅರ್ಥರೂಪ
3. ವರ್ತಮಾನ ಕಾಲ
4. ಭೂತಕಾಲ
13.ವಿಧ್ಯರ್ಥಕ ಕ್ರಿಯಾರೂಪವಾಗುವಾಗ ಪುರುಷಾರ್ಥಕ ಸರ್ವನಾಮದ ಉತ್ತಮ ಪುರುಷದ ಏಕವಚನ , ಬಹುವಚನ ರೂಪದಲ್ಲಿ ಧಾತುವಿಗೆ ಕ್ರಮವಾಗಿ ------- ಪ್ರತ್ಯಯಗಳು ಸೇರುತ್ತವೆ.
1. ಆನು , ಆಳು
2. ಅಲಿ, ಇರಿ
3. ಉವೆ, ಓಣ
4. ಎನು, ಎವು
14." ಪ್ರೀತಿಯ ಹಣತೆಯ ಹಚ್ಚೋಣ" ಇಲ್ಲಿರುವ ಕ್ರಿಯಾರೂಪ;
1. ಸಂಭವನಾರ್ಥಕ
2. ನಿಷೇಧಾರ್ಥಕ
3. ವಿಧ್ಯರ್ಥಕ
4. ಕಾಲರೂಪ
15. ತಿನ್ನು+ ಉವೆ = ತಿನ್ನುವೆ - ಇದು ------ ಕ್ರಿಯಾಪದಕ್ಕೆ ಉದಾಹರಣೆಯಾಗಿದೆ.
1. ವಿಧ್ಯರ್ಥಕ
2. ಸಂಭವನಾರ್ಥಕ
3. ನಿಷೇಧಾರ್ಥಕ
4. ಕಾಲರೂಪ
