wayground logo

Free Printable Worksheets

Font size

S
M
L
XL
Worksheets

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಎರಡು ಅಂಕದ ಪ್ರಶ್ನೆಗಳು-೧

Total questions: 20

Worksheet time: 15mins

Name
Class
Date
1.
ಡಾಕ್ಟರ್‍ಗೆ ವಿಮಾನದ ಪೈಲಟ್ ಏನು ಹೇಳಿದನು?
a)
ಡಾಕ್ಟರ್! ರೇಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ.
b)
ಭೂಪ್ರದೇಶದೊಂದಿಗೆ ಸಂಪರ್ಕ ಬೆಳೆಸಲು ಸಾಧ್ಯವಾಗುತಿಲ್ಲ.
c)
ಎಲ್ಲಾದರೂ ಹೇಗಾದರೂ ಇಳಿಯೋಣ ಎಂದರೆ ಈ ಕತ್ತಲೆಯಲ್ಲಿ ಏನೂ ಕಾಣಿಸ್ತಾ ಇಲ್ಲವಲ್ಲ”
d)
ಈ ಎಲ್ಲಾ ರೀತಿಯಲ್ಲಿ
2.
ಮಹಿಳೆಯ ಆರ್ತನಾದ ಕೇಳಿ ರಾಹಿಲನ ಮನದಲ್ಲಿ ಮೂಡಿದ ಪ್ರಶ್ನೆಗಳಾವುವು?
a)
“ಅಯ್ಯೋ ಆ ಮಹಿಳೆ ಯಾವ ರೀತಿ ಅಪಾಯದಲ್ಲಿ ಸಿಲುಕಿದ್ದಾಳೆ? ಆ ಮನೆಯೊಳಗೆ ಏನು ಸಂಭವಿಸುತ್ತಿದೆ?
b)
ನಾನು ಈಗ ಆ ಮನೆಯ ಕದವನ್ನು ತಟ್ಟಿದರೆ ಪರಿಣಾಮ ಏನಾಗಬಹುದು?
c)
ಆ ಮನೆಯೊಳಗೆ ಯಾವ ರೀತಿಯ ಕ್ರೌರ್ಯ ನಡೆಯುತ್ತಿದೆ?
d)
ಈ ಎಲ್ಲಾ ರೀತಿಯಲ್ಲಿ
3.
“ಇಷ್ಟು ವರ್ಷಗಳಿಂದ ಹಂಬಲಿಸಿ ಹುಟ್ಟಿದ ಮಗು ಕೊನೆಗೂ ದಕ್ಕಲಿಲ್ಲವಲ್ಲ? ಈ ಯುದ್ಧವಲ್ಲದೆ ಹೋಗಿದ್ದರೆ ನನ್ನ ಮಗುವನ್ನು ಹೇಗಾದರೂ ಬದುಕಿಸಿಕೊಳ್ಳುತ್ತಿದ್ದೆವಲ್ಲ ದೇವರೇ? ಈ ಮನುಷ್ಯರಿಗೆ ಎಂತಹ ಬುದ್ಧಿ ಕೊಡುತ್ತೀಯಾ?” - ಈ ಉತ್ತರ ಬರುವ ಪ್ರಶ್ನೆ ಯಾವುದು ?
a)
ನಿರ್ಜೀವಾಗಿರುವ ಮಗುವನ್ನು ನೋಡಿ ಮುದುಕಿ ನಿರಾಶೆಯಿಂದ ಹೇಳಿದ್ದೇನು?
b)
ಮುದುಕಿಯು ರಾಹಿಲನ ಬಳಿ ಯುದ್ಧದ ಬಗ್ಗೆ ತಿರಸ್ಕಾರದಿಂದ ನುಡಿದ ಮಾತುಗಳೇನು?
c)
ಮುದುಕಿಯು ರಾಹಿಲನನ್ನು ಸೈನಿಕರಿಂದ ಹೇಗೆ ರಕ್ಷಿಸಿದಳು ?
d)
ಈ ಯಾವುದು ಅಲ್ಲ
4.
“ತಾಳಿಕೋ ಅಣ್ಣ ತಾಳಿಕೋ ಸೂರ್ಯನೇ ಕಾಂತಿ ಕಳೆದುಕೊಂಡರೆ ಕಾಂತಿಯನ್ನು ನೀಡುವವರು ಯಾರು? ರಾಮನೇ ಧೈರ್ಯ ಕಳೆದುಕೊಂಡರೆ ಈ ಲೋಕಕ್ಕೆ ಸ್ಥೈರ್ಯ ನೀಡುವವರು ಯಾರು? ಎಂದು ಯಾರು ಯಾರನ್ನು ಸಂತೈಸಿದರು ?
a)
ಲಕ್ಷ್ಮಣ - ರಾಮನಿಗೆ
b)
ರಾಮ - ಲಕ್ಷ್ಮಣನಿಗೆ
c)
ಭರತ - ರಾಮನಿಗೆ
d)
ಪೈಲೆಟ್ - ರಾಹಿಲನಿಗೆ
5.
“ಎಲೈ ಗಿರಿ ವನವೇ ನಾನು ನಿಮ್ಮನ್ನು ಬೇಡಿಕೊಳ್ಳತ್ತಿದ್ದೇನೆ ಹೇಳಿರಿ ನನ್ನ ಪ್ರೀತಿಯ ರಾಣಿ ಸೀತೆಯು ದೊರೆಯುವಳೇ? ದೊರೆಯುವುದಿಲ್ಲವೋ? ಅವಳು ಇರುವ ನೆಲೆ ಯಾರಾದರೂ ತಿಳಿದಿರು ವಿರಾ. ನನ್ನ ಹೃದಯದ ಈ ದುಃಖವು ನಾಶವಾಗುತ್ತಿಲ್ಲವಲ್ಲ.” - ಹೀಗೆಂದು ರಾಮ ಯಾರನ್ನು ಬೇಡಿಕೊಂಡನು ?
a)
ಸಮುದ್ರವನ್ನು
b)
ಗಿರಿವನವನ್ನು
c)
ನದಿಯನ್ನು
d)
ಶಬರಿಯನ್ನು
6.
ರಾಮನ ಸ್ವಾಗತಕ್ಕಾಗಿ ಶಬರಿ ಮಾಡಿಕೊಂಡಿದ್ದ ಸಿದ್ಧತೆಗಳೇನು?
a)
ಕಡುಸವಿಯಾದ ಬಗೆಬಗೆಯ ಹಣ್ಣು - ಹಂಪಲುಗಳನ್ನು ಸಂಗ್ರಹಿಸಿಕೊಂಡಿದ್ದಳು
b)
ಜೇನುತುಪ್ಪ ಅಧಿಕವಾಗಿರುವ ಮಧುಪರ್ಕವೆಂಬ ಪಾನೀಯವನ್ನು ಸಂಗ್ರಹಿಸಿಕೊಟ್ಟಿದ್ದುಕೊಂಡಿದ್ದಳು
c)
ತಳಿರು, ಸುವಾಸನೆಯಿಂದ ಕೂಡಿದ ಹೂವುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಳು
d)
ಈ ಎಲ್ಲಾ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಳು
7.
“ದಶರಥನ ಮಗನಂತೆ, ಸಾಧು-ಸಜ್ಜನರ ಮಿತ್ರನಂತೆ, ಧೀರ ಶೂರ ವೀರ ಗಂಭೀರ ಸದ್ಗುಣಗಳ ಸಾರನಂತೆ, ಹೆದರಿಸುವವರ ಹೆದರುವಂತೆ ಬಿಲ್ಲು ಹಿಡಿದು ಬರುವನಂತೆ ಆದರೂ ತುಂಬ ಸೌಮ್ಯಸ್ವಭಾವದವನಂತೆ, ಮಗುವಿನಂತೆ ಕಾಣುವನಂತೆ - ಹೀಗೆಂದು ಶಬರಿ ಯಾರಿಗೆ ಹೊಗಳಿದಳು ?
a)
ದಶರಥನಿಗೆ
b)
ಮತಂಗ ಗುರುಗಳಿಗೆ
c)
ಶ್ರೀ ರಾಮನಿಗೆ
d)
ಲಕ್ಷ್ಮಣನಿಗೆ
8.
ವೂಲವರ್ಥ ಅಂಗಡಿಯಲ್ಲಿ ಸಿಗುವ ವಸ್ತುಗಳಾವುವು?
a)
ಬೂಟು, ಕಾಲುಚೀಲ, ಚಣ್ಣ (ಚಡ್ಡಿ)
b)
ಸಾಬೂನು, ಔಷಧ, ಪುಸ್ತಕ, ಅಡಿಗೆಯ ಪಾತ್ರೆ
c)
ಇಲೆಕ್ಟ್ರಿಕ್ ದೀಪದ ಸಾಮಾನು, ಫೊಟೋ, ಅಡವಿಯ ಹೂವು, ಯುದ್ಧಸಾಮಗ್ರಿ
d)
ಈ ಎಲ್ಲವೂ ದೊರೆಯುತ್ತವೆ.
9.
ಲಂಡನ್ನಿನ ಹೆಣ್ಣು ಮಕ್ಕಳು ಯಾವ ಯಾವ ಕೆಲಸದಲ್ಲಿ ನಿಯುಕ್ತರಾಗಿರುತ್ತಾರೆ?
a)
ಉಪಹಾರಗೃಹಗಳಲ್ಲಿ ಮಾಣಿಗಳಾಗಿ
b)
ದೊಡ್ಡ ದೊಡ್ಡ ಅಂಗಡಿಗಳಲ್ಲಿ ಟೈಪಿಸ್ಟ್ ಆಗಿ, ಕಾರಕೂನರಾಗಿ
c)
ಸಿನಿಮಾ ಗೃಹದಲ್ಲಿ ಪ್ರೇಕ್ಷಕರಿಗೆ ಜಾಗವನ್ನು ಹುಡುಕಿಕೊಡುವ ಕೆಲಸದಲ್ಲಿ ನಿಯುಕ್ತರಾಗಿರುತ್ತಾರೆ.
d)
ಈ ಎಲ್ಲಾ ಕಾರ್ಯಗಳಲ್ಲಿ
10.
ಕಿಪ್ಲಿಂಗ್, ಹಾರ್ಡಿ, ಮ್ಯಾಕಾಲೆ, ಜಾನ್ಸನ್, ಗೋಲ್ಡ್ ಸ್ಮಿತ್, ಪ್ರಸಿದ್ಧ ವಿಮರ್ಶಕನಾದ ಡ್ರಾಯ್‍ಡನ್, ಬ್ರಿಟನ್‍ನ್ನಿನ ರಾಷ್ಟ್ರಕವಿ ವಡ್ರ್ಸ್‍ವರ್ತ್, ಪ್ರಖ್ಯಾತ ನಾಟಕಕಾರ ಬೆನ್‍ಜಾನ್ಸನ್ - ಇವರೆಲ್ಲರು ಎಲ್ಲಿದ್ದರು
a)
ಚೇರಿಂಗ್ ಕ್ರಾಸ್ ಓಣಿಯಲ್ಲಿ
b)
ರಾಯಲ್ ಚಾಪೆಲ್ ನಲ್ಲಿ
c)
ಪೊಯೆಟ್ ಕಾರ್ನರ್‍ನಲ್ಲಿ
d)
ವೂಲವರ್ಥದಲ್ಲಿ
11.
ರಿಚರ್ಡ್, 2ನೆಯ ಎಡ್ವರ್ಡ್, ಅರ್ಲ್ ಆಫ್ ಸ್ಟ್ಯಾಫೋರ್ಡ್, ರಾಣಿ ಎಲಿಜಬೆತ್, 1ನೆಯ ಜೇಮ್ಸ್ ಮೊದಲಾದವರ ಮೂರ್ತೀಗಳು ಎಲ್ಲವೆ ?
a)
ಚೇರಿಂಗ್ ಕ್ರಾಸ್ ಓಣಿಯಲ್ಲಿ
b)
ರಾಯಲ್ ಚಾಪೆಲ್ ನಲ್ಲಿ
c)
ಪೊಯೆಟ್ ಕಾರ್ನರ್‍ನಲ್ಲಿ
d)
ವೂಲವರ್ಥದಲ್ಲಿ
12.
ಸಾಮ್ರಾಟರ ರಾಜ್ಯಾಭಿಷೇಕವಾಗುವ ಸಿಂಹಾಸನದ ಮೇಲಿರುವ ಕಲ್ಲುಪಾಟಿಯ (ಸ್ಟೋನ್ ಆಫ್ ಸ್ಕೋನ್) ವಿಶೇಷತೆಯೇನು?
a)
ಬ್ರಿಟೀಷ್ ಸಾಮ್ರಾಟರ ರಾಜ್ಯಾಭಿಷೇಕವಾಗುವಾಗ ಅವರೂ ಕೂರುವ ಸಿಂಹಾಸನದ ಮೇಲೆ ಈ ಕಲ್ಲು ಪಾಟಿಯನ್ನು ಹಾಕುತ್ತಾರೆ.
b)
ಪಟ್ಟಾಭಿಷೇಕವಾಗುವಾಗ ಮಾತ್ರ ಸಾಮ್ರಾಟರು ಇದರ ಮೇಲೆ ಕೂಡ ಬೇಕು.
c)
ಈ ಶಿಲೆಯನ್ನು 3ನೇ ಎಡ್ವರ್ಡನು ಸ್ಕಾಟ್‍ಲೆಂಡಿನ ಅರಸರಿಂದ ಇದನ್ನು ಕಿತ್ತುಕೊಂಡು ಬಂದಂತೆ ಕಾಣುತ್ತದೆ.
d)
ಈ ಎಲ್ಲವೂ
13.
(1) ಗ್ರಾಮ ನಿರ್ಮಲೀಕರಣ (2) ವೈದ್ಯ ಸಹಾಯ (3) ವಿದ್ಯಾ ಪ್ರಚಾರ (4) ನೀರಿನ ಸೌಕರ್ಯ (5) ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಯಾರ ಕಾಲದಲ್ಲಿ ಸ್ವಯಂ ಆಡಳಿತ ಕ್ಷೇತ್ರಗಳಾದವು ?
a)
ಮುಮ್ಮಡಿ ಕೃಷ್ಣರಾಜ ಒಡೆಯರು
b)
ನಾಲ್ವಡಿ ಕೃಷ್ಣರಾಜ ಒಡೆಯರು
c)
ಜಯರಾಮ ಕೃಷ್ಣರಾಜ ಒಡೆಯರು
d)
ಇವರೆಲ್ಲ ಕಾಲದಲ್ಲಿ
14.
“ಆಧುನಿಕ ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೂ ಪರಮೋಚ್ಚ ಪರಿಹಾರ, ಶಿಕ್ಷಣವು ಸಂಜೀವಿನಿ, ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಕೆಲವೇ ಜನರ ಸೊತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು” ಎಂದು ಯಾರ ಹೇಳಿದ್ದಾರೆ.
a)
ಮುಮ್ಮಡಿ ಕೃಷ್ಣರಾಜ ಒಡೆಯರು
b)
ನಾಲ್ವಡಿ ಕೃಷ್ಣರಾಜ ಒಡೆಯರು
c)
ವಿಶ್ವೇಶ್ವರಯ್ಯನವರು
d)
ನೆಹರೂ
15.
“ದುರದೃಷ್ಟವಶಾತ್ ಭಾರತೀಯರಾದ ನಾವು ಹೆಚ್ಚು ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರದವರೆಂಬ ದೂಷಣೆಗೆ ಒಳಗಾಗಿದ್ದೇವೆ. ತಾವು ಈ ಮಾತಿಗೆ ಬಹುದೊಢ್ಡ ರೀತಿಯಲ್ಲಿ ಹೊರತಾಗಿದ್ದೀರಿ. ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ. ಅದನ್ನು ನಾವು ತಮ್ಮಿಂದ ಕಲಿಯೋಣ”. ಎಂದು ನೆಹರೂ ಯಾರ ಬಗ್ಗೆ ಹೇಳಿದ್ದಾರೆ ?
a)
ಮುಮ್ಮಡಿ ಕೃಷ್ಣರಾಜ ಒಡೆಯರು
b)
ವಿಶ್ವೇಶ್ವರಯ್ಯನವರು
c)
ನಾಲ್ವಡಿ ಕೃಷ್ಣರಾಜ ಒಡೆಯರು
d)
ರಂಗಚಾರ್ಲು
16.
ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬಂದವು?
a)
ಶಿವನಸಮುದ್ರದ ಬಳಿ ಕಾವೇರಿ ನದಿ ನೀರಿನಿಂದ ಪ್ರಾರಂಭಿಸಿದ ಶಿವನಸಮುದ್ರ ಜಲವಿದ್ಯುತ್ ಯೋಜನೆ,
b)
1907ರಲ್ಲಿ ವಾಣಿ ವಿಲಾಸ ಸಾಗರ ಆಣೆಕಟ್ಟು
c)
1911ರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕನ್ನಾಂಬಾಡಿಯಲ್ಲಿ ಕೃಷ್ಣರಾಜ ಸಾಗರ ಆಣೆಕಟ್ಟು ನಿರ್ಮಾಣ
d)
ಈ ಎಲ್ಲವೂ
17.
ತನ್ನಷ್ಟಕ್ಕೆ ತಾನು ಇರುವ ಕೇವಲ ತಿಳಿವಳಿಕೆ, ಜ್ಞಾನ ಮಾತ್ರ ಅಲ್ಲ. ಅದು ಕ್ರಿಯೆಯ ಅನುಭವದಿಂದ ಒಡಮೂಡಿ ಬರುವುದು. ಅದು ಕೇಳಿ ತಿಳಿದಿದ್ದಲ್ಲ. ಕ್ರಿಯೆಯಲ್ಲಿ ಮೂಡಿದ ತಿಳಿವಳಿಕೆ, ಅದು ತರ್ಕವಲ್ಲ. ನಡೆಯಿಂದ ನುಡಿ ಹುಟ್ಟುವುದು ಎಂದು ವಚನಕಾರರು ಯಾವುದರ ಬಗ್ಗೆ ಹೇಳಿದ್ದಾರೆ ?
a)
ಅರಿವು
b)
ಪ್ರಜ್ಞೆ
c)
ದೇವರು
d)
ಈ ಎಲ್ಲವೂ
18.
ಮದಲಿಂಗನ ಕಣಿವೆಯಲ್ಲಿ ಬರುವಾಗ ಶಾನುಭೋಗರು ಏನೆಂದು ಯೋಚಿಸಿದರು?
a)
ಸ್ವಲ್ಪ ಚಿಕ್ಕ ಹೆಜ್ಜೆ ಹಾಕಿದರೆ ಊಟದ ಹೊತ್ತಿಗೆ ಊರು ಸೇರಿಕೊಳ್ಳಬಹುದು ಎಂದು ಯೋಚಿಸಿದರು.
b)
ಸ್ವಲ್ಪ ದೊಡ್ಡ ಹೆಜ್ಜೆ ಹಾಕಿದರೆ ಊಟದ ಹೊತ್ತಿಗೆ ಊರು ಸೇರಿಕೊಳ್ಳಬಹುದು ಎಂದು ಯೋಚಿಸಿದರು.
c)
ಸ್ವಲ್ಪ ನಿಧಾನ ಹೆಜ್ಜೆ ಹಾಕಿದರೆ ಊಟದ ಹೊತ್ತಿಗೆ ಊರು ಸೇರಿಕೊಳ್ಳಬಹುದು ಎಂದು ಯೋಚಿಸಿದರು.
d)
ಈ ಎಲ್ಲವೂ
19.
“ಈ ಹೊನ್ನನ್ನು ಹಂಚಿಕೊಂಡು ಮನೆಯ¯್ಲ ಸ್ವೇಚ್ಛೆಯಿಂದ ಇರುವವರಲ್ಲ. ಮತ್ತೆ ವ್ಯಾಪಾರಕ್ಕಾಗಿ ದೂರದೇಶಕ್ಕೆ ಹೋಗಬೇಕಾಗುತ್ತದೆ. ಆಕಾರಣದಿಂದ ನಿನಗೂ ನನಗೂ ವ್ಯಯಕ್ಕೆ (ಖರ್ಚಿಗೆ) ತಕ್ಕಷ್ಟು ಹೊನ್ನನ್ನು ತೆಗೆದುಕೊಂಡು, ಉಳಿದ ಹೊನ್ನನೆಲ್ಲವನ್ನು ಇಲ್ಲಿಯೇ ಇಡೋಣ” ಎಂದು ಯಾರು ಯಾರಿಗೆ ಸಲಹೆಯಿತ್ತರು ?
a)
ಧರ್ಮಬುದ್ಧಿ - ದುಷ್ಟಬುದ್ಧಿಗೆ
b)
ದುಷ್ಟಬುದ್ಧಿಗೆ - ಧರ್ಮಬುದ್ಧಿ
c)
ಧರ್ಮಬುದ್ಧಿ - ಪ್ರೇಮಮತಿಗೆ
d)
ಪ್ರೇಮಮತಿ - ದುಷ್ಟಬುದ್ಧಿಗೆ
20.
“ನೀನಾದರೋ ಯಕ್ಷಾದಿ ದಿವ್ಯ ದೇವತೆಗಳಿಗೆ ವಾಸಸ್ಥಾನವು ಮತ್ತು ಅವರ ಸೇವೆಯನ್ನು ಮಾಡುವಂತಹ ವೃಕ್ಷವೂ ಆಗಿದ್ದೀಯಾ, ಆ ಕಾರಣದಿಂದ ನಿನ್ನನ್ನು ಸಾಕ್ಷಿ ಮಾಡಿ ಕೇಳುವೆವು, ನೀನು ತಪ್ಪದೆ ಸಾಕ್ಷಿಯನ್ನು ನುಡಿ” ಎಂದು ಹೇಲಿದವರು
a)
ಧರ್ಮಾಧಿಕರಣರು
b)
ಧರ್ಮಬುದ್ಧಿ
c)
ದುಷ್ಟಬುದ್ಧಿ
d)
ಪ್ರೇಮಮತಿ