NEW
Font size
S
M
L
XL
Worksheets2.ಸಿರಿ ಕನ್ನಡ ನುಡಿ ಬಳಗ ಕ್ವಿಜ್ ಸರಣಿ-103 (ನಡುಗನ್ನಡ ಸಾಹಿತ್ಯ-1)
Total questions: 25
Worksheet time: 13mins
Name
Class
Date
1.
ನಡುಗನ್ನಡ ಸಾಹಿತ್ಯವು ಆರಂಭವಾಗುವುದು
a)
ವಚನ ಸಾಹಿತ್ಯದಿಂದ
b)
ರಗಳೆ ಸಾಹಿತ್ಯದಿಂದ
c)
ಷಟ್ಪದಿ ಸಾಹಿತ್ಯದಿಂದ
d)
ದಾಸ ವಾಙ್ಮಯದಿಂದ
2.
ಬಿ. ಎಚ್. ಶ್ರೀಧರರು ವಚನ ಸಾಹಿತ್ಯವನ್ನು ಕುರಿತು "ಇದು ಅಲ್ಪದಲ್ಲಿ ಕಲ್ಪವನ್ನು _______" ಎಂದು ಹೇಳಿದ್ದಾರೆ
a)
ನಿರ್ಮಿಸಿದ ನುಡಿಮುತ್ತು
b)
ಕೆತ್ತಿದ ಶಿಲ್ಪ
c)
ಚಿಮ್ಮಿಸಿದ ಬಿಂದುಗಳು
d)
ಹೊಮ್ಮಿಸಿದ ಸಿಂಧು
3.
"ವಚನಗಳು ನಮ್ಮ ಕನ್ನಡ ಸಾಹಿತ್ಯದ ಉಪನಿಷತ್ತುಗಳು" ಎಂದು ಮೊದಲು ಉದ್ಘೋಷಿಸಿದವರು
a)
ರಂ. ಶ್ರೀ ಮುಗಳಿ
b)
ಸಿ.ಪಿ.ಕೆ.
c)
ತಿಪ್ಪೇರುದ್ರಸ್ವಾಮಿ
d)
ಎಂ. ಆರ್. ಶ್ರೀನಿವಾಸಮೂರ್ತಿ
4.
ರಗಳೆಯ ಕವಿ' ಎಂದೇ ಹೆಸರಾದವನು
a)
ರಾಘವಾಂಕ
b)
ಕೆರೆಯ ಪದ್ಮರಸ
c)
ಹರಿಹರ
d)
ನೇಮಿಚಂದ್ರ
5.
ರಳ, ಕುಳ, ಕ್ಷಳಗಳ ಭೇದ ತೊಡೆದು, ಭಾಷೆಯಲ್ಲಿ ಕ್ರಾಂತಿ ಮೂಡಿಸಿದವ
a)
ಹರಿಹರ
b)
ರಾಘವಾಂಕ
c)
ಬಸವಣ್ಣ
d)
ಕುಮಾರವ್ಯಾಸ
6.
ಇದು ರಾಘವಾಂಕನ ಕೃತಿಯಲ್ಲ
a)
ಹರಿಶ್ಚಂದ್ರ ಕಾವ್ಯ
b)
ಪಂಪಾಶತಕ
c)
ಸಿದ್ದರಾಮ ಪುರಾಣ
d)
ಶರಭ ಚಾರಿತ್ರ
7.
ಇದು ಭೀಮಕವಿಯ ರಚನೆಯಾಗಿದೆ
a)
ಬಸವಪುರಾಣ
b)
ಗಿರಿಜಾ ಕಲ್ಯಾಣ
c)
ವೇಣು ಗೀತೆ
d)
ಸಾನಂದ ಚರಿತ್ರೆ
8.
ಇದು ಲಕ್ಷ್ಮೀಶ ಕವಿಗೆ ಸಲ್ಲುವ ಬಿರುದಾಗಿದೆ.
a)
ಉಪಮಾಲೋಲ
b)
ಕರ್ನಾಟ ಕವಿ ಚೂತವನ ಚೈತ್ರ
c)
ನಾದಲೋಲ
d)
ಇವೆಲ್ಲವೂ ಕೂಡ
9.
ಕುಮಾರವ್ಯಾಸನ ಕಾಲ ಕ್ರಿಸ್ತಶಕ
a)
1330
b)
1430
c)
1531
d)
1530
10.
"ನಡೆವರೆಡಹದೆ ಕುಳಿತವರೆಡಹುವರೆ" ಎಂಬ ನುಡಿಯು ಈ ಕಾವ್ಯದಲ್ಲಿ ರಚಿತವಾಗಿದೆ
a)
ಹರಿಶ್ಚಂದ್ರ ಕಾವ್ಯ
b)
ಪ್ರಭುಲಿಂಗಲೀಲೆ
c)
ಕರ್ನಾಟ ಭಾರತ ಕಥಾಮಂಜರಿ
d)
ಜೈಮಿನಿ ಭಾರತ
11.
ರಾಘವಾಂಕ ಚಾರಿತ್ರ 'ಕೃತಿಯನ್ನು ಬರೆದ ಕವಿ
a)
ಕುಮಾರ ವಾಲ್ಮೀಕಿ
b)
ರಾಘವಾಂಕ
c)
ಹರಿಹರ
d)
ಚಿಕ್ಕ ನಂಜೇಶ
12.
"ದಾಸರೆಂದರೆ ಪುರಂದರದಾಸರಯ್ಯ" ಎಂದು ಹೊಗಳಿದವರು
a)
ಕನಕದಾಸರು
b)
ವ್ಯಾಸರಾಯರು
c)
ಜಗನ್ನಾಥದಾಸರು
d)
ವಿಜಯದಾಸರು
13.
ಅಮರೇಶ್ವರಲಿಂಗ : ಆಯ್ದಕ್ಕಿ ಮಾರಯ್ಯ : : ಅಪ್ಪಣ್ಣಪ್ರಿಯ ಚನ್ನಬಸವಣ್ಣ : _________
a)
ಶಿವಶರಣೆ ಲಿಂಗಮ್ಮ
b)
ಅಮುಗೆರಾಯಮ್ಮ
c)
ಆಯ್ದಕ್ಕಿ ಲಕ್ಕಮ್ಮ
d)
ಚೆನ್ನಬಸವಣ್ಣ
14.
ಷಡಕ್ಷರದೇವನ ನುಡಿ ಪೂರ್ತಿ ಮಾಡಿ: ನೆಲದೊಳ್ ಕೊಟ್ಟಂಗೆ -----------------
a)
ಸಿರಿತನಂ ಬಂದಪುದೇ
b)
ಬಡತನಂ ಬಂದಪುದೇ
c)
ಆಸೆಯೇಂ ಪೋದಪುದೇ
d)
ಆಯುಷ್ಯ ಪೋದಪುದೇ
15.
ಪ್ರಭುಲಿಂಗಲೀಲೆ ಕೃತಿಯನ್ನು ಬರೆದ ಕವಿ
a)
ರಾಘವಾಂಕ
b)
ಚಾಮರಸ
c)
ಹರಿಹರ
d)
ತಿಮ್ಮಣ್ಣ ಕವಿ
16.
ಕುಮಾರವ್ಯಾಸ ಭಾರತದ ನಾಯಕ
a)
ಅರ್ಜುನ
b)
ಭೀಮ
c)
ಕೃಷ್ಣ
d)
ಧರ್ಮರಾಯ
17.
ಕುಮಾರವ್ಯಾಸ ಭಾರತದ 'ಕೌರವೇಂದ್ರನ ಕೊಂದೆ ನೀನು' ಪದ್ಯವನ್ನು ಈ ಪರ್ವದಿಂದ ಆರಿಸಲಾಗಿದೆ
a)
ಭೀಷ್ಮಪರ್ವ
b)
ಆದಿಪರ್ವ
c)
ಕರ್ಣಪರ್ವ
d)
ಉದ್ಯೋಗಪರ್ವ
18.
ಗಡಣ' ಎಂಬ ಪದದ ಅರ್ಥ
a)
ಪೀಠ
b)
ಸಮೂಹ
c)
ಗುಡಾಣ
d)
ತಲ್ಲಣ
19.
ಇವುಗಳಲ್ಲಿ ಗುಂಪಿಗೆ ಸೇರದ ಪದ
a)
ಹಯ
b)
ಉರ್ವಿ
c)
ವಾಜಿ
d)
ತುರಂಗ
20.
"ಪಲವುಂ ಪಳ್ಳ ಸಮುದ್ರವೈ, ಬಡವಂ ಬಲ್ಲಿದನಾಗನೇ" ಇವು ಈ ಸಾಹಿತ್ಯಕ್ಕೆ ಸೇರಿವೆ
a)
ವಚನ ಸಾಹಿತ್ಯ
b)
ಶಾಸನ ಸಾಹಿತ್ಯ
c)
ಹರಿದಾಸ ಸಾಹಿತ್ಯ
d)
ಶತಕ ಸಾಹಿತ್ಯ
21.
ಹರಿದಾಸ ಸಾಹಿತ್ಯದ ಗುಂಪಿನಲ್ಲಿ ಇದು ಸೇರುವುದಿಲ್ಲ
a)
ಸುಳಾದಿ
b)
ಚಂಪೂ
c)
ಉಗಾಭೋಗ
d)
ಕೀರ್ತನೆ
22.
ಸಾಂಗತ್ಯ ಸಾಹಿತ್ಯದ ಸಾರ್ವಭೌಮ' ಎಂದು ಕರೆಸಿಕೊಂಡ ಕವಿ
a)
ನಂಜುಂಡ ಕವಿ
b)
ರತ್ನಾಕರವರ್ಣಿ
c)
ಸರ್ವಜ್ಞ
d)
ಚಾಮರಸ
23.
ಇವುಗಳಲ್ಲಿ ಯಾವುದು ಸರಿಯಾದುದಲ್ಲ
a)
ಚಂಪು ಕಾವ್ಯಕ್ಕೆ ಪಂಪ
b)
ರಗಳೆಗಳಿಗೆ ಹರಿಹರ
c)
ತ್ರಿಪದಿಗೆ ತಿರುಮಲಾರ್ಯ
d)
ಭಾಮಿನಿ ಷಟ್ಪದಿಗೆ ಕುಮಾರವ್ಯಾಸ
24.
ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ' ಎಂಬ ಹಾಡಿನ ರಚನಕಾರರು
a)
ನಿಜಗುಣ ಶಿವಯೋಗಿಗಳು
b)
ಸರ್ಪಭೂಷಣ ಶಿವಯೋಗಿಗಳು
c)
ಶಿಶುನಾಳ ಶರೀಫರು
d)
ಪುರಂದರದಾಸರು
25.
ಅಯ್ಯಯ್ಯ ಎಂಚ ಪೊರ್ಲಾಂಡೆಂದು ತುಳುವರು ಮೈಯ್ಯುಬ್ಬಿ ಕೇಳಬೇಕಣ್ಣ 'ಎಂದು ಹೇಳಿದ ಕವಿ
a)
ರತ್ನಾಕರವರ್ಣಿ
b)
ತಿರುಮಲಾರ್ಯ
c)
ನಂಜುಂಡ ಕವಿ
d)
ಸರ್ವಜ್ಞ
Reset
