wayground logo

Free Printable Worksheets

NEW

Font size

S
M
L
XL
Worksheets

ಕಾರ್ಬನ್‍ ಮತ್ತು ಅದರ ಸಂಯುಕ್ತಗಳು

Total questions: 10

Worksheet time: 3mins

Name
Class
Date
1.

ಸಾಬೂನಿನಲ್ಲಿ ತಲೆಯ ತುದಿಯು

a)

ಕಾರ್ಬಾನಿಕ್‍ ತುದಿಯಾಗಿದ್ದು,ಜಲಾಕರ್ಷಕವಾಗಿದೆ.

b)

ಆಯಾನಿಕ್‍ ತುದಿಯಾಗಿದ್ದು,ಜಲವಿಕರ್ಷಕವಾಗಿದೆ.

c)

ಆಯಾನಿಕ್‍ ತುದಿಯಾಗಿದ್ದು,ಜಲಾಕರ್ಷಕವಾಗಿದೆ.

d)

ಕಾರ್ಬಾನಿಕ್‍ ತುದಿಯಾಗಿದ್ದು,ಜಲವಿಕರ್ಷಕವಾಗಿದೆ.

2.

ಅನುರೂಪ ಶ್ರೇಣಿಗಳು

a)

ಒಂದೇ ರೀತಿಯ ಕ್ರಿಯಾಗುಂಪು ಮತ್ತು ಒಂದೇ ಸಂಖ್ಯೆಯ ಕಾರ್ಬನ್‍ ಪರಮಾಣುಗಳ ಸರಣಿ ಮತ್ತು ಅನುಕ್ರಮ ಸದಸ್ಯರ ನಡುವಿನ ವ್ಯತ್ಯಾಸವು CH2 ಆಗಿರುತ್ತದೆ.

b)

ಬೇರೆ ಬೇರೆ ರೀತಿಯ ಕ್ರಿಯಾಗುಂಪು ಮತ್ತು ಒಂದೇ ಸಂಖ್ಯೆಯ ಕಾರ್ಬನ್‍ ಪರಮಾಣುಗಳ ಸರಣಿ ಮತ್ತು ಅನುಕ್ರಮ ಸದಸ್ಯರ ನಡುವಿನ ವ್ಯತ್ಯಾಸವು CH2 ಆಗಿರುತ್ತದೆ.

c)

ಒಂದೇ ರೀತಿಯ ಕ್ರಿಯಾಗುಂಪು ಮತ್ತು ಬೇರೆ ಬೇರೆ ಸಂಖ್ಯೆಯ ಕಾರ್ಬನ್‍ ಪರಮಾಣುಗಳ ಸರಣಿ ಮತ್ತು ಅನುಕ್ರಮ ಸದಸ್ಯರ ನಡುವಿನ ವ್ಯತ್ಯಾಸವು CH2 ಆಗಿರುತ್ತದೆ.

d)

ಬೇರೆ ಬೇರೆ ರೀತಿಯ ಕ್ರಿಯಾಗುಂಪು ಮತ್ತು ಒಂದೇ ಸಂಖ್ಯೆಯ ಕಾರ್ಬನ್‍ ಪರಮಾಣುಗಳ ಸರಣಿ ಮತ್ತು ಅನುಕ್ರಮ ಸದಸ್ಯರ ನಡುವಿನ ವ್ಯತ್ಯಾಸವು CH3 ಆಗಿರುತ್ತದೆ.

3.

ಕೆಂಪು ಮತ್ತು ನೀಲಿ ಲಿಟ್ಮಸ್‍ ಕಾಗದವನ್ನು ಸಾಬೂನಿನ ದ್ರಾವಣದಲ್ಲಿ ಅದ್ದಿದಾಗ

a)

ಕೆಂಪು ಲಿಟ್ಮಸ್‍ನಲ್ಲಿ ಬಣ್ಣ ಬದಲಾವಣೆ ಕಂಡುಬರುತ್ತದೆ. ಆದರೆ ನೀಲಿ ಲಿಟ್ಮಸ್‍ನಲ್ಲಿ ಬಣ್ಣ ಬದಲಾವಣೆ ಕಂಡುಬರುವುದಿಲ್ಲ

b)

ಕೆಂಪು ಲಿಟ್ಮಸ್‍ ಮತ್ತು ನೀಲಿ ಲಿಟ್ಮಸ್‍ ಎರಡರಲ್ಲೂ ಬಣ್ಣ ಬದಲಾವಣೆ ಕಂಡುಬರುತ್ತದೆ.

c)

ಕೆಂಪು ಲಿಟ್ಮಸ್‍ ಮತ್ತು ನೀಲಿ ಲಿಟ್ಮಸ್‍ ಎರಡರಲ್ಲೂ ಬಣ್ಣ ಬದಲಾವಣೆ ಕಂಡುಬರುವುದಿಲ್ಲ

d)

ಕೆಂಪು ಲಿಟ್ಮಸ್‍ನಲ್ಲಿ ಬಣ್ಣ ಬದಲಾವಣೆ ಕಂಡುಬರುವುದಿಲ್ಲ.ಆದರೆ ನೀಲಿ ಲಿಟ್ಮಸ್‍ನಲ್ಲಿ ಬಣ್ಣ ಬದಲಾವಣೆ ಕಂಡುಬರುತ್ತದೆ.

4.

C2H5OH

a)

ಪರ್ಯಾಪ್ತ ಹೈಡ್ರೋಕಾರ್ಬನ್ ಆಗಿದ್ದು ಅಲ್ಕೋಹಾಲ್‍ ಕ್ರಿಯಾಗುಂಪನ್ನು ಹೊಂದಿಲ್ಲ

b)

ಪರ್ಯಾಪ್ತ ಹೈಡ್ರೋಕಾರ್ಬನ್ ಆಗಿದ್ದು ಅಲ್ಕೋಹಾಲ್‍ ಕ್ರಿಯಾಗುಂಪನ್ನು ಹೊಂದಿದೆ

c)

ಅಪರ್ಯಾಪ್ತ ಹೈಡ್ರೋಕಾರ್ಬನ್ ಆಗಿದ್ದು ಅಲ್ಕೋಹಾಲ್‍ ಕ್ರಿಯಾಗುಂಪನ್ನು ಹೊಂದಿದೆ

d)

ಅಪರ್ಯಾಪ್ತ ಹೈಡ್ರೋಕಾರ್ಬನ್ ಆಗಿದ್ದು ಅಲ್ಕೋಹಾಲ್‍ ಕ್ರಿಯಾಗುಂಪನ್ನು ಹೊಂದಿಲ್ಲ

5.

ಕಾರ್ಬನ್‍ ಸಂಯುಕ್ತಗಳು

a)

ವಿದ್ಯುತ್ತಿನ ದುರ್ಬಲ ವಾಹಕಗಳಾಗಿದ್ದು, ಕಡಿಮೆ ದ್ರವನ ಬಿಂದು ಮತ್ತು ಹೆಚ್ಚಿನ ಕುದಿಯುವ ಬಿಂದುಗಳನ್ನು ಒಳಗೊಂಡಿದೆ.

b)

ವಿದ್ಯುತ್ತಿನ ಉತ್ತಮ ವಾಹಕಗಳಾಗಿದ್ದು, ಕಡಿಮೆ ದ್ರವನ ಬಿಂದು ಮತ್ತು ಹೆಚ್ಚಿನ ಕುದಿಯುವ ಬಿಂದುಗಳನ್ನು ಒಳಗೊಂಡಿದೆ.

c)

ವಿದ್ಯುತ್ತಿನ ದುರ್ಬಲ ವಾಹಕಗಳಾಗಿದ್ದು, ಕಡಿಮೆ ದ್ರವನ ಬಿಂದು ಮತ್ತು ಕಡಿಮೆ ಕುದಿಯುವ ಬಿಂದುಗಳನ್ನು ಒಳಗೊಂಡಿದೆ.

d)

ವಿದ್ಯುತ್ತಿನ ದುರ್ಬಲ ವಾಹಕಗಳಾಗಿದ್ದು, ಹೆಚ್ಚಿನ ದ್ರವನ ಬಿಂದು ಮತ್ತು ಕಡಿಮೆ ಕುದಿಯುವ ಬಿಂದುಗಳನ್ನು ಒಳಗೊಂಡಿದೆ.

6.

ಅಪರ್ಯಾಪ್ತ ಹೈಡ್ರೋಕಾರ್ಬನ್‍ಗಳು

a)

ನಿಕ್ಕೆಲ್ ಅಥವಾ ಪೆಲ್ಲೇಡಿಯಂನ್ನು ಕ್ರಿಯಾವರ್ಧಕಗಳಾಗಿ ಬಳಸಿಕೊಂಡು ಅಪರ್ಯಾಪ್ತ ಹೈಡ್ರೋಕಾರ್ಬನ್‍ಗಳನ್ನುಂಟು ಮಾಡುತ್ತವೆ

b)

ಕಾರ್ಬನ್ ಅಥವಾ ಪೆಲ್ಲೇಡಿಯಂನ್ನು ಕ್ರಿಯಾವರ್ಧಕಗಳಾಗಿ ಬಳಸಿಕೊಂಡು ಪರ್ಯಾಪ್ತ ಹೈಡ್ರೋಕಾರ್ಬನ್‍ಗಳನ್ನುಂಟು ಮಾಡುತ್ತವೆ

c)

ನಿಕ್ಕೆಲ್ ಅಥವಾ ಪೆಲ್ಲೇಡಿಯಂನ್ನು ಕ್ರಿಯಾವರ್ಧಕಗಳಾಗಿ ಬಳಸಿಕೊಂಡು ಪರ್ಯಾಪ್ತ ಹೈಡ್ರೋಕಾರ್ಬನ್‍ಗಳನ್ನುಂಟು ಮಾಡುತ್ತವೆ

d)

ನಿಕ್ಕೆಲ್ ಅಥವಾ ಮೆಗ್ನೆಷಿಯಂನ್ನು ಕ್ರಿಯಾವರ್ಧಕಗಳಾಗಿ ಬಳಸಿಕೊಂಡು ಪರ್ಯಾಪ್ತ ಹೈಡ್ರೋಕಾರ್ಬನ್‍ಗಳನ್ನುಂಟು ಮಾಡುತ್ತವೆ

7.

ಸರಿಯಾದ ಹೇಳಿಕೆಯನ್ನು ಗುರುತಿಸಿರಿ

a)

ಸಹವೇಲೆನ್ಸಿ ಸಂಯುಕ್ತಗಳು ದ್ರವ ಅಥವಾ ಅನಿಲ ರೂಪದಲ್ಲಿರುತ್ತವೆ.

b)

ಸಹವೇಲೆನ್ಸಿ ಸಂಯುಕ್ತಗಳು ಹೆಚ್ಚು ಕರಗುವ ಮತ್ತು ಕುದಿಯುವ ಬಿಂದುಗಳನ್ನು ಹೊಂದಿರುವುದಿಲ್ಲ

c)

ಸಾವಯವ ಸಂಯುಕ್ತಗಳಲ್ಲಿ ಮಾತ್ರ ಕರಗುತ್ತವೆ.

d)

ಮೇಲಿನ ಎಲ್ಲವೂ ಸರಿ

8.

ಈ ಚಿತ್ರವು

a)

ಮೀಥೇನ್‍ನ ಚುಕ್ಕಿ ವಿನ್ಯಾಸವನ್ನು ಸೂಚಿಸುತ್ತದೆ.

b)

ಈಥೇನ್‍ನ ಚುಕ್ಕಿ ವಿನ್ಯಾಸವನ್ನು ಸೂಚಿಸುತ್ತದೆ.

c)

ಬ್ಯುಟೇನ್‍ನ ಚುಕ್ಕಿ ವಿನ್ಯಾಸವನ್ನು ಸೂಚಿಸುತ್ತದೆ.

d)

ಯಾವುದೂ ಅಲ್ಲ

9.

ಈ ಚಿತ್ರದಲ್ಲಿರುವ ಹೈಡ್ರೋಕಾರ್ಬನ್‍

a)

ಸೈಕ್ಲೋಹೆಕ್ಸೇನ್‍

b)

ಸೈಕ್ಲೋಪೆಂಟೇನ್‍

c)

ಸೈಕ್ಲೋಬ್ಯುಟೇನ್‍

d)

ಸೈಕ್ಲೋಪ್ರೋಪೇನ್

10.

ಉತ್ಕರ್ಷಣ ಎಂದರೆ,

a)

ಹೈಡ್ರೋಜನ್‍ನ್ನು ಸೇರಿಸುವುದು

b)

ಆಕ್ಸಿಜನ್‍ನ್ನು ತೆಗೆಯುವುದು

c)

ಹೈಡ್ರೋಜನ್‍ನ್ನು ಸೇರಿಸುವುದು ಮತ್ತು ಆಕ್ಸಿಜನ್‍ನ್ನು ತೆಗೆಯುವುದು

d)

ಯಾವುದೂ ಅಲ್ಲ