wayground logo

Free Printable Worksheets

NEW

Font size

S
M
L
XL
Worksheets

ಅಧ್ಯಾಯ: 4 ಕಾರ್ಬನ್ ಮತ್ತು ಅದರ ಸಂಯುಕ್ತಗಳು

Total questions: 15

Worksheet time: 8mins

Name
Class
Date
1.

1. ಇವುಗಳಲ್ಲಿ ಕಾರ್ಬನ್ ನ ಸರಿಯಾದ ಎಲೆಕ್ಟ್ರಾನಿಕ್ ವಿನ್ಯಾಸ

a)

1s2 2s2 2p4

b)

1s2 2s2 2p6

c)

1s2 2s2 2p2

d)

1s2 2s2 2p1

2.

2. ಕಾರ್ಬನ್ ಗೆ ಟೆಟ್ರಾ ವೇಲೆಂಟ್ ಧಾತು ಎನ್ನಲು ಕಾರಣ

a)

ಕಾರ್ಬನ್ ಅತ್ಯಂತ ಹೊರಕವಚದಲ್ಲಿ ಜೋಡಿ ಆಗದ 4 ಎಲೆಕ್ಟ್ರಾನ್ ಗಳು ಇರುವುದರಿಂದ

b)

ಕಾರ್ಬನ್ ನಲ್ಲಿ ಒಟ್ಟು 6 ಪ್ರೋಟಾನ್ ಗಳು ನ್ಯೂಕ್ಲಿಯಸ್ ನಲ್ಲಿ ಇರುವುದರಿಂದ

c)

ಕಾರ್ಬನ್ ನಲ್ಲಿ 6 ಪ್ರೋಟಾನ್ ಗಳು ಮತ್ತು 6 ನ್ಯೂಟ್ರಾನುಗಳು ಇರುವುದರಿಂದ

d)

ಕಾರ್ಬನ್ ಅತ್ಯಂತ ಹೊರಕವಚದಲ್ಲಿ ಜೋಡಿ ಯಾಗದ 6 ಎಲೆಕ್ಟ್ರಾನ್ ಗಳು ಇರುವುದರಿಂದ

3.

3. ಮೀಥೇನ್ ನ ಅಣುಸೂತ್ರ

a)

C2H6

b)

C3H8

c)

CH4

d)

CH6

4.

4. ಕಾರ್ಬನ್ ಇತರೆ ತನ್ನ ಪರಮಾಣುಗಳ ಜೊತೆ ಬಂಧವನ್ನು ಏರ್ಪಡಿಸಿಕೊಂಡು ಬೃಹತ್ ಅಣುಗಳನ್ನು ಉಂಟುಮಾಡುವ ಕಾರ್ಬನ್ ನ ಗುಣವನ್ನು ಹೀಗೆನ್ನುವರು.

a)

ಕೆಟನೀಕರಣ

b)

ಅನುರೂಪ ಶ್ರೇಣಿ

c)

ಟೆಟ್ರಾ ವೇಲೆನ್ಸಿ

d)

ಕ್ರಿಯಾಗುಂಪು

5.

5. ಪರ್ಯಾಪ್ತ ಹೈಡ್ರೋಕಾರ್ಬನ್ ಸಂಯುಕ್ತಗಳು ಎಂದರೆ

a)

ಎರಡು ಕಾರ್ಬನ್ ಪರಮಾಣುಗಳ ನಡುವೆ ಏಕ ಬಂಧ ಇರಬೇಕು

b)

ಎರಡು ಕಾರ್ಬನ್ ಪರಮಾಣುಗಳ ನಡುವೆ ದ್ವಿಬಂಧ ಇರಬೇಕು

c)

ಎರಡು ಕಾರ್ಬನ್ ಪರಮಾಣುಗಳ ನಡುವೆ ತ್ರಿ ಬಂಧ ಇರಬೇಕು

d)

ಎರಡು ಕಾರ್ಬನ್ ಗಳ ನಡುವೆ 4 ಬಂಧ ಇರಬೇಕು

6.

6. ಆಲ್ಕೀನ್ ಗಳ ಸಾಮಾನ್ಯ ಅಣುಸೂತ್ರ

a)

CnHn

b)

CnH2n

c)

CnH2n+2

d)

CnH2n-2

7.

7. ಎರಡು ಕ್ರಮಾನುಗತ ಕಾರ್ಬನ್ ಸಂಯುಕ್ತಗಳ ನಡುವೆ -CH2 ವ್ಯತ್ಯಾಸ ಇದ್ದರೆ ಅಂತಹ ಸಂಯುಕ್ತಗಳನ್ನು ಹೀಗೆನ್ನುವರು.

a)

ಕೆಟನೀಕರಣ

b)

ಸಮಾಂಗತೆ

c)

ಅನುರೂಪ ಶ್ರೇಣಿ

d)

ಕ್ರಿಯಾಗುಂಪು

8.

8. ಆಲ್ಕೋಹಾಲ್ ಸಂಯುಕ್ತಗಳಲ್ಲಿ ಕಂಡುಬರುವ ಕ್ರಿಯಾ ಗುಂಪಿನ ಅಣುಸೂತ್ರ

a)

-OH

b)

-COOH

c)

-CHO

d)

-CO

9.

9. ಕ್ಲೋರೋ, ಬ್ರೋಮೋ ಇವುಗಳು ಯಾವ ಸಂಯುಕ್ತಗಳ ಪೂರ್ವಪ್ರತ್ಯಯ ವಾಗಿವೆ.

a)

ಆಲ್ಡಿಹೈಡ್

b)

ಕೀಟೋನ್

c)

ಹ್ಯಾಲೋ ಅಲ್ಕೇನ್

d)

ಕಾರ್ಬಾಕ್ಸಿಲಿಕ್ ಆಮ್ಲ

10.

10.CH3CH2COOH ಸಂಯುಕ್ತದ ಹೆಸರು

a)

ಪ್ರೋಪೇನೊಯಿಕ್ ಆಮ್ಲ

b)

ಪ್ರೋಪೇನಲ್

c)

ಎಥೇನೋಯಿಕ್ ಆಮ್ಲ

d)

ಎಥೆನಾಲ್

11.

11.ಕ್ರಿಯಾವರ್ಧಕ ದ ಸಹಾಯದಿಂದ ಅಪರ್ಯಾಪ್ತ ಹೈಡ್ರೋಕಾರ್ಬನ್ ಗಳಿಗೆ ಹೈಡ್ರೋಜನ್ ಅನ್ನು ಸೇರಿಸುವುದರ ಮೂಲಕ ಪರ್ಯಾಪ್ತ ಹೈಡ್ರೋಕಾರ್ಬನ್ ಗಳಾಗಿ ಪರಿವರ್ತಿಸುವ ಕ್ರಿಯೆ

a)

ಸಮಾಂಗತೆ

b)

ಸಂಕಲನ ಕ್ರಿಯೆ

c)

ಆದೇಶನ ಕ್ರಿಯೆ

d)

ಅನುರೂಪ ಶ್ರೇಣಿ

12.

12. ಉದ್ದ ಸರಪಣಿಯ ಕಾರ್ಬಾಕ್ಸಿಲಿಕ್ ಆಮ್ಲಗಳ ಸೋಡಿಯಂ ಅಥವಾ ಪೊಟ್ಯಾಶಿಯಂ ಲವಣಗಳಿಗೆ ಹೀಗೆನ್ನುವರು.

a)

ಸಾಬೂನು

b)

ಮಾರ್ಜಕ

c)

ಅಡುಗೆ ಸೋಡಾ

d)

ಪ್ಲಾಸ್ಟರ್ ಆಫ್ ಪ್ಯಾರಿಸ್

13.

13. ಇವು ಗಡುಸು ನೀರಿನಲ್ಲಿಯೂ ಸಹ ಸ್ವಚ್ಛಗೊಳಿಸುತ್ತವೆ.

a)

ಸಾಬೂನು

b)

ಮಾರ್ಜಕಗಳು

c)

ಅಡುಗೆ ಸೋಡಾ

d)

ಜಿಪ್ಸಂ

14.

14. ಸಾಬೂನು ನೀರು ಮತ್ತು ಜಿಡ್ಡಿನೊಂದಿಗೆ ವರ್ತಿಸಿ ಈ ರಚನೆಯನ್ನು ಉಂಟುಮಾಡುತ್ತದೆ.

a)

ಕವಲು ಸರಪಣಿ

b)

ಮುಚ್ಚಿದ ಸರಪಳಿ

c)

ಉಂಗುರ ರಚನೆ

d)

ಮಿಸೆಲ್

15.

15. ಈ ಸಮೀಕರಣವನ್ನು ಪೂರ್ಣಗೊಳಿಸಿ.


CH4 + Cl2 --------> ________ + HCl

a)

CH4Cl

b)

CH3Cl

c)

CH3Cl2

d)

CH2Cl2