Worksheets8 ಮತ್ತು 9ನೇ ತರಗತಿಯ ಕನ್ನಡ ವ್ಯಾಕರಣ: ಸಂಯುಕ್ತಾಕ್ಷರಗಳು.
Total questions: 11
Worksheet time: 6mins
1. ಒಂದೇ ಜಾತಿಯ ಎರಡು ವ್ಯಂಜನಗಳಿಗೆ ಸ್ವರ ಸೇರಿ ಆಗುವ ಆಗುವ ಸಂಯುಕ್ತಾಕ್ಷರವು ----------
ಸಂಯುಕ್ತಾಕ್ಷರವಾಗಿದೆ.
೧. ಸಜಾತೀಯ
2. ವಿಜಾತೀಯ
3. ಸಂಯುಕ್ತಾಕ್ಷರ
4. ದೇಶೀಯ
2. ಅಕ್ಕ, ಅಜ್ಜ, ಅವ್ವ- ಈ ಪದಗಳಲ್ಲಿ ಕಂಡು ಬರುವ ಸಂಯುಕ್ತಾಕ್ಷರವು -------------
1. ವಿಜಾತೀಯ ಸಂಯುಕ್ತಾಕ್ಷರ
2. ಸಜಾತೀಯ ಸಂಯುಕ್ತಾಕ್ಷರ
3. ಸಂಯುಕ್ತಾಕ್ಷರ
4. ದೇಶೀಯ ಸಂಯುಕ್ತಾಕ್ಷರ
3. ಎರಡು ಅಥವಾ ಎರಡಕ್ಕಿಂತ ಹೆಚ್ಚು ವಿಜಾತೀಯ ವ್ಯಂಜನಗಳು + ಸ್ವರ = -----------------
1. ದೇಶೀಯ ಸಂಯುಕ್ತಾಕ್ಷರ
2. ಸಂಯುಕ್ತಾಕ್ಷರ
3. ಸಜಾತೀಯ ಸಂಯುಕ್ತಾಕ್ಷರ
4. ವಿಜಾತೀಯ ಸಂಯುಕ್ತಾಕ್ಷರ
5. ಅ+ಸ್+ತ್+ರ್+ಅ = ಅಸ್ತ್ರ= ಇಲ್ಲಿ ಕಂಡು ಬರುವ ಸಂಯುಕ್ತಾಕ್ಷರವು ------------------
1. ಸಜಾತೀಯ ಸಂಯುಕ್ತಾಕ್ಷರ
2. ವಿಜಾತೀಯ ಸಂಯುಕ್ತಾಕ್ಷರ
3. ಸಂಯುಕ್ತಾಕ್ಷರ
4. ದೇಶೀಯ ಸಂಯುಕ್ತಾಕ್ಷರ
4. ಅ+ಸ್+ತ್+ರ್+ಅ = ಅಸ್ತ್ರ- ಇಲ್ಲಿ ಕಂಡು ಬರುವ ಸಂಯುಕ್ತಾಕ್ಷರವು ------------------
1. ಸಜಾತೀಯ ಸಂಯುಕ್ತಾಕ್ಷರ
2. ವಿಜಾತೀಯ ಸಂಯುಕ್ತಾಕ್ಷರ
3. ಸಂಯುಕ್ತಾಕ್ಷರ
4. ದೇಶೀಯ ಸಂಯುಕ್ತಾಕ್ಷರ
5. ಪದವೆಂದರೆ -----------
1. ಪದಗಳ ಜೋಡಣೆ
2. ವ್ಯಂಜನಗಳ ಜೋಡಣೆ
3. ಅಕ್ಷರಗಳ ಅರ್ಥಪೂರ್ಣವಾದ ಜೋಡಣೆ
4. ಸ್ವರಗಳ ಜೋಡಣೆ
6. ಪದಗಳ ಎರಡು ಪ್ರಕಾರಗಳು -----------
1. ದೇಶ್ಯ ಪದ ಮತ್ತು ಅನ್ಯದೇಶ್ಯ ಪದ
2. ಸಜಾತೀಯ ಪದ ಮತ್ತು ವಿಜಾತೀಯ ಪದ
3. ಅರಬ್ಬೀ ಪದ ಮತ್ತು ಹಿಂದೂಸ್ತಾನಿ ಪದ
4. ಕನ್ನಡ ಪದ + ಸಂಸ್ಕೃತ ಪದ
7. ದೇಶ್ಯ ಪದವೆಂದರೆ;
1. ಬೇರೆ ಭಾಷೆಯ ಪದಗಳು.
2. ಆಯಾ ಭಾಷೆಯ ಮೂಲ ಪದಗಳು.
3. ದೇಶೀಯ ಪದಗಳು
4. ಸಂಸ್ಕೃತ ಪದಗಳು
8. ಸಂಖ್ಯಾ ಪದಗಳು, ದೇಹದ ಅಂಗಗಳ ಹೆಸರುಗಳು, ವಿಭಕ್ತಿ ಪ್ರತ್ಯಯಗಳು, ಬಂಧು ವಾಚಕ ಪದಗಳು ಇತ್ಯಾದಿಗಳು -------- ಪದಗಳು.
1. ಅನ್ಯದೇಶ್ಯ ಪದಗಳು
2. ಸಂಸ್ಕೃತ ಪದಗಳು
3. ಅವ್ಯಯ
4. ದೇಶ್ಯಪದಗಳು
9. ಹತ್ತು, ಕಣ್ಣು, ಅನ್ನು, ಅಜ್ಜ- ಈ ಪದಗಳು ------
1. ವಿಭಕ್ತಿ
2. ಸಂಸ್ಕೃತ ಪದಗಳು
3. ದೇಶ್ಯ ಪದಗಳು
4. ಅನ್ಯದೇಶ್ಯ ಪದಗಳು
10. ಬೇರೆ ಭಾಷೆಯಿಂದ ಬಂದಿರುವ ಪದಗಳು ------
1. ದೇಶ್ಯ ಪದಗಳು
2. ಅನ್ಯದೇಶ್ಯ ಪದಗಳು
3. ತದ್ಭವಗಳು
4. ಸಂಸ್ಕೃತ ಪದಗಳು
