wayground logo

Free Printable Worksheets

NEW

Font size

S
M
L
XL
Worksheets

ವೃಕ್ಷಸಾಕ್ಷಿ ಭಾಗ -1 ~~•ರಸಪ್ರಶ್ನೆ•~~

Total questions: 20

Worksheet time: 16mins

Name
Class
Date
1.

ಮನುಷ್ಯರ ಯಾವ ಕೃತ್ಯಗಳು ದೈವಗಳಿಗೆ (ದೇವರುಗಳಿಗೆ) ತಿಳಿದಿರುತ್ತವೆ.

a)

ಸುಕೃತ್ಯಗಳು (ಒಳ್ಳೆಯ ಕಾರ್ಯಗಳು)

b)

ದುಷ್ಕೃತ್ಯಗಳು (ದುಷ್ಟ ಕಾರ್ಯಗಳು)

c)

ಮೇಲಿನ ಯಾವುದೂ ಅಲ್ಲ

d)

ಮೇಲಿನ ಎರಡು ಸರಿ

2.

ಮರವನ್ನು ಸಾಕ್ಷಿಯಾಗಿ ನುಡಿಸುವುದು ಎಂತಹ ಕಾರ್ಯವೆಂದು ಧರ್ಮಾಧಿಕರಣರ ಅಭಿಪ್ರಾಯ.

a)

ಪರಮಗಹನ

b)

ಸ್ವಾಮಿದ್ರೋಹ

c)

ಅಶ್ರುತ ಪೂರ್ವ

d)

ವಿಶ್ವಾಸಘಾತುಕ

3.

"ಕರಮ್" ಪದದ ಅರ್ಥ.

a)

ವಚನ

b)

ಕಾರ್ಯ

c)

ತುಂಬಾ

d)

ಕಠಿಣ

4.

"ತಮ್ಮ- ತಮ್ಮ" ಈ ಪದವು.

a)

ಅನುಕರಣಾವ್ಯಯ

b)

ದ್ವಿರುಕ್ತಿ

c)

ಜೋಡುನುಡಿ

d)

ಪಡೆನುಡಿ

5.

ದುಷ್ಟಬುದ್ಧಿಯು ತನ್ನ ಮನೆಗೆ ಬಂದು ತನ್ನ ತಂದೆಗೆ ಹೇಳಿದ ಅಂಶಗಳಲ್ಲಿ ಯಾವುದು ಸರಿಯಾಗಿದೆ.

a)

ದುಷ್ಟಬುದ್ಧಿಯು ತಮ್ಮ ಅಯ್ಯ(ತಂದೆ)ಯ ಕೈ ಹಿಡಿದು ಕಟ್ಟಿ ಏಕಾಂತಕ್ಕೆ ಕರೆದುಕೊಂಡು ಹೋದನು.

b)

ನಿಮ್ಮ ಒಂದು ವಚನ ಮಾತ್ರದಿಂದ ನಮ್ಮ ಪರಿಹಾರ ಹಲವು ಕಾಲ ಹಸಿಯದೆ ಉಣ್ಣುವಂತಹ ಸಂಪತ್ತು ದೊರಕುವುದು ಎಂದನು.

c)

ಆ ಮರದ ಪೊಟರೆ ಒಳಗೆ ಅಡಗಿ ಕುಳಿತು ಧರ್ಮಬುದ್ಧಿಯೇ ಹೊನ್ನನ್ನು ತೆಗೆದುಕೊಂಡು ಹೋದನೆಂದು ನುಡಿಯಬೇಕು.

d)

ಈ ಮೇಲಿನ ಎಲ್ಲಾ ಅಂಶಗಳು ಸರಿಯಾಗಿವೆ.

6.

"ಅತಿಕುಟಿಲ" ಮತ್ತು "ಕಟ್ಟೇಕಾಂತ" ಈ ಪದಗಳು ಯಾವ ಸಮಾಸಕ್ಕೆ ಉದಾಹರಣೆಯಾಗಿವೆ.

a)

ತತ್ಪುರುಷ ಸಮಾಸ

b)

ಕರ್ಮಧಾರೆಯ ಸಮಾಸ

c)

ಅಂಶಿ ಸಮಾಸ

d)

ಕ್ರಿಯಾ ಸಮಾಸ

7.

ಅರ್ಥಂ, ಸಾರ್ದಪುದು, ಪೊಳಲ್ ಮತ್ತು ಪರಿಗ್ರಹ. ಈ ಪದಗಳ ಅರ್ಥ.(ಅನುಕ್ರಮವಾಗಿ)

a)

ಸಂಪತ್ತು,ಪರಿವಾರ,ಪಟ್ಟಣ ಮತ್ತು ದೊರಕುವುದು.

b)

ದೊರಕುವುದು,ಪರಿವಾರ, ಪಟ್ಟಣ ಮತ್ತು ಸಂಪತ್ತು.

c)

ಪಟ್ಟಣ,ಸಂಪತ್ತು, ದೊರಕುವುದು ಮತ್ತು ಪರಿವಾರ.

d)

ಸಂಪತ್ತು,ದೊರಕುವುದು, ಪಟ್ಟಣ ಮತ್ತು ಪರಿವಾರ.

8.

ಪರಧನ, ಧನದಹರಣ ಮತ್ತು ಸ್ವಾಮಿದ್ರೋಹ ಈ ಪದಗಳು.

a)

ಕ್ರಿಯಾ ಸಮಾಸ

b)

ದ್ವಂದ್ವ ಸಮಾಸ

c)

ತತ್ಪುರುಷ ಸಮಾಸ

d)

ಗಮಕ ಸಮಾಸ

9.

ದುಷ್ಟಬುದ್ಧಿಯ ಯಾರನ್ನು ಸಾಕ್ಷಿಮಾಡಿ ನುಡಿಸಲು ಯೋಚಿಸಿದನು.

a)

ದುಷ್ಟಬುದ್ಧಿಯ ತಂದೆ (ಪ್ರೇಮಮತಿ)

b)

ಮಹಾವಟವಿಟಪಿ(ಅಶ್ವತ್ಥಮರ)

c)

ಧರ್ಮಾಧಿಕರಣರು

d)

ಧರ್ಮಬುದ್ಧಿ

10.

"ಮೇದಿನಿ" ಪದದ ಅರ್ಥ.

a)

ಭೂಮಿ

b)

ಮಹಿಮೆ

c)

ಕತ್ತಲು

d)

ಮೋಡ

11.

"ಮೇದಿನಿಯಂ ಕ್ರಮಕ್ರಮದೆ ಪವಿದುದಾತ್ತನಭೋವಿಭಾಗಮಾ". ಈ ಪದ್ಯ ಸಾಲಿನ ಅಕ್ಷರ ಗಣ.

a)

ನ ಜ ಭ ಜ ಜ ಜ ರ

b)

ಸ ಭ ರ ನ ಮ ಯ

c)

ಭ ರ ನ ಭ ಭ ರ

d)

ಮ ಸ ಜ ಸ ತ ತ

12.

"ಕ್ರಮ-ಕ್ರಮ" ಈ ಪದವು ಯಾವ ವ್ಯಾಕರಣಂಶಕ್ಕೆ ಉದಾಹರಣೆಯಾಗಿದೆ.

a)

ಜೋಡುನುಡಿ

b)

ಅನುಕರಣಾವ್ಯಯ

c)

ನುಡಿಗಟ್ಟು

d)

ದ್ವಿರುಕ್ತಿ

13.

"ಅಚ್ಛಾದಿತ" ಮತ್ತು "ವ್ಯವಹಿತ" ಪದಗಳ ಅರ್ಥ.

a)

ಅಚ್ಚರಿ ಮತ್ತು ವ್ಯವಸ್ಥಿತ

b)

ಆವರಿಸು ಮತ್ತು ವ್ಯವಸ್ಥೆ

c)

ಆವರಿಸು ಮತು ಮುಚ್ಚಿದ

d)

ಪ್ರಖರ ಮತ್ತು ಮೋಡ

14.

ಕತ್ತಲು ಆವರಿಸಿದ ಬಗೆಯನ್ನು ದುರ್ಗಸಿಂಹ ಹೋಲಿಕೆ ಮಾಡಿದವುಗಳಲ್ಲಿ ಯಾವುದು ಸರಿಯಾಗಿದೆ.

a)

ಕಪ್ಪಾದ ಹೊಗೆ ಮತ್ತು ಮೋಡ

b)

ಕಪ್ಪಾದ ಅಂಜನದ ಪುಂಜ ಮತ್ತು ಕೋಗಿಲೆಯ ಮೈಬಣ್ಣ

c)

ವಿಷ್ಣುವಿನ ಮೈಬಣ್ಣ ಹಾಗೂ ಶಿವನ ಕುತ್ತಿಗೆಯ ಬಣ್ಣ

d)

ಈ ಮೇಲಿನ ಎಲ್ಲವೂ ಸರಿಯಾಗಿವೆ.

15.

"ಬಳ್ಳಾರಿಯ ಮನೆಯಂ ಪರಕೆಯ ಕುರಿಯಂ ಪುಗಿಸುವಂತೆ" ಈ ವಾಕ್ಯದ ಅಲಂಕಾರ.

a)

ಉಪಮಾಲಂಕಾರ

b)

ಉಪಮಾನ ಲುಪ್ತ ಉಪಮಾ ಅಲಂಕಾರ

c)

ಉಪಮೆಯ ಲುಪ್ತ ಉಪಮಾ ಅಲಂಕಾರ

d)

ಪೂರ್ಣೋಪಮಾಲಂಕಾರ.

16.

ದುಷ್ಟಬುದ್ಧಿಯು ತನ್ನ ತಂದೆ ಪ್ರೇಮ ಮತಿಯನ್ನು ಯಾವ ಕುಟೀರದಲ್ಲಿ ಕುಳ್ಳಿಸಿದನು.

a)

ಮಹಾವಟವಿಟಪಿಯ ಕೋಟರ ಕುಟೀರ

b)

ಬಹಿರುದ್ಯಾನವನ ಕುಟೀರ

c)

ದುಷ್ಟಬುದ್ಧಿಯ ಮನೆಯ ಕುಟೀರ

d)

ಈ ಮೇಲಿನ ಯಾವುದೂ ಅಲ್ಲ

17.

"ಬವರ" ಪದದ ಅರ್ಥ.

a)

ದೇವರು

b)

ಬೆವರು

c)

ಜಗಳ

d)

ಜಳಕ

18.

"ಆದಿತ್ಯೋದಯ" ಈ ಪದವು.

a)

ಸವರ್ಣದೀರ್ಘ ಸಂಧಿ

b)

ಯಣ್ ಸಂಧಿ

c)

ಗುಣಸಂಧಿ

d)

ವೃದ್ಧಿ ಸಂಧಿ

19.

ಧರ್ಮಬುದ್ಧಿ ತನ್ನ ಬೆಳಗಿನ ಹೊತ್ತನ್ನು ಹೇಗೆ ಕಳೆದನು.

a)

ದೇವಪೂಜೆ ಮಾಡುತ್ತ

b)

ಗುರುಪೂಜೆ ಮಾಡುತ್ತ

c)

ದ್ವಿಜ ಪೂಜೆ ಮಾಡುತ್ತ

d)

ಈ ಮೇಲಿನ ಎಲ್ಲಾ ಅಂಶಗಳು ಸರಿಯಾಗಿವೆ.

20.

ಮುಖವನ್ನು ತೊಳೆಯದೆ ಧರ್ಮಾಧಿಕರಣರ ಹತ್ತಿರ ಬಂದವರು.

a)

ಧರ್ಮಬುದ್ಧಿ

b)

ದುಷ್ಟಬುದ್ಧಿ

c)

ಪ್ರೇಮಮತಿ

d)

ಈ ಮೇಲಿನ ಯಾರೂ ಅಲ್ಲ