Worksheetsಹಕ್ಕಿ ಹಾರುತಿದೆ ನೋಡಿದಿರಾ - ಭಾಗ 2
Total questions: 21
Worksheet time: 11mins
ʼಗಾವುದಗಾವುದʼ ಈ ಪದದ ವ್ಯಾಕರಣಾಂಶ?
ಅನುಕರಣಾವ್ಯಯ
ದ್ವಿರುಕ್ತಿ
ಜೋಡುನುಡಿ
ದಿಗ್ವಾಚಕ
ಇರುಳು : ರಾತ್ರಿ : : ಎವೆ :
ಕಣ್ಣಿನರೆಪ್ಪೆ
ಸಮಯ ಅಳೆಯುವ ಮಾಪನ
ಕಾಲಪಕ್ಷಿ
ಹರದಾರಿ
ಕವಿ ದ.ರಾ.ಬೇಂದ್ರೆಯವರು ಹಕ್ಕಿಯನ್ನು ಯಾವುದಕ್ಕೆ ಹೋಲಿಸಿದ್ದಾರೆ?
ಕಾಲ
ಪಕ್ಷಿ
ಆಕಾಶ
ಸೂರ್ಯಚಂದ್ರ
ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ
ಎವೆತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ?
ಈ ಪದ್ಯ ಭಾಗದಲ್ಲಿ ಕವಿ ಈ ಅಂಶವನ್ನು ತಿಳಿಸಿದ್ದಾರೆ.
ಚಲನಶೀಲತೆ
ವಿಸ್ತಾರತೆ
ವೇಗದ ಗುಣ
ಈ ಎಲ್ಲವೂ
"ಗಾವುದ" ಎಂದರೇ?
4 ಮೈಲು
8 ಮೈಲು
12 ಮೈಲು
16 ಮೈಲು
ಕವಿ ಬೇಂದ್ರೆಯವರು ಈ ಕಾಲಕ್ಕೆ ಸೇರಿದ ಪ್ರಮುಖ ಕವಿ?
ನವೋದಯ
ನವ್ಯ
ಪ್ರಗತಿಶೀಲ
ದಲಿತ ಮತ್ತು ಬಂಡಾಯ
ಇದರ ಎದುರಿನಲ್ಲಿ ಎಲ್ಲರೂ ತಲೆಬಾಗಲೇಬೇಕೆಂದು ಕವಿ ಬೇಂದ್ರೆ ತಿಳಿಸಿದ್ದಾರೆ?
ಹಕ್ಕಿ
ಕಾಲಚಕ್ರ
ಪರಿಸರ
ರಾಜರು
"ಇರುಳಿರುಳು" ಇದು ಈ ಸಂಧಿಗೆ ಉದಾಹರಣೆ.
ಸವರ್ಣದೀರ್ಘಸಂಧಿ
ಆದೇಶಸಂಧಿ
ಲೋಪಸಂಧಿ
ಆಗಮಸಂಧಿ
ʼಪಕ್ಷಿʼ ಪದದ ತದ್ಭವ ರೂಪ.
ಹಕ್ಷಿ
ಹಕ್ಕಿ
ಪಕ್ಕಿ
ಹಕ್ಕಿ ಮತ್ತು ಪಕ್ಕಿ
ದ.ರಾ. ಬೇಂದ್ರೆಯವರಿಗೆ ಹೀಗೂ ಕರೆಯುವರು?
ರಾಷ್ಟ್ರಕವಿ
ನಾಡೋಜ
ವರಕವಿ
ಚಲಿಸುವ ನಿಘಂಟು
