Worksheetsವೃಕ್ಷಸಾಕ್ಷಿ ಭಾಗ •~ 2 $$ ರಸಪ್ರಶ್ನೆ $$
Total questions: 20
Worksheet time: 18mins
ಪ್ರತ್ಯರ್ಥಿ ಬಂದನಿಲ್ಲ ಪಿರಿದು......... ಪೋದುದು ಎನಗೆ ಕರ್ತವ್ಯಮಾವುದು. (ಬಿಟ್ಟುಹೋದ ಪದ)
ಅನ್ನೆಗಂ
ಬರವಂ
ಪೊಳ್ತು
ಬವರಂ
ಧರ್ಮಾಧಿಕರಣರು ವಟವೃಕ್ಷವನ್ನು ಎಷ್ಟು ವಿಧದಿಂದ ಅರ್ಚಿಸಿದರು.
ಪಂಚವಿಧಾರ್ಚನೆ
ಅಷ್ಟವಿಧಾರ್ಚನೆ
ದಶವಿಧಾರ್ಚನೆ
ಷಟ್ವಿಧಾರ್ಚನೆ
ಧರ್ಮಾಧಿಕರಣರು ಮರವನ್ನು ಪ್ರಾರ್ಥಿಸಿದ ಅಂಶಗಳಲ್ಲಿ ಯಾವುದು ಸರಿಯಾಗಿದೆ.
ವಟವೃಕ್ಷವೇ ಶ್ರೇಷ್ಠ ದೇವತೆಗಳು ನಿನ್ನಲ್ಲಿ ನೆಲೆಸುವರು ಹಾಗೂ ಸೇವೆಯನ್ನು ಕೈಗೊಳ್ಳುವರು.
ವಟವೃಕ್ಷವೇ ನೀನು ಶ್ರೇಷ್ಠ ಮರವಾಗಿರುವುದರಿಂದ ತಪ್ಪದೇ ಸತ್ಯವನ್ನು ನುಡಿ.
ಈ ಮೇಲಿನ ಎರಡು ಅಂಶಗಳು ಸರಿಯಾಗಿವೆ
ಈ ಮೇಲಿನ ಎರಡು ಅಂಶಗಳು ತಪ್ಪಾಗಿದೆ
ದುಷ್ಟಬುದ್ಧಿಯ ತಂದೆ ಪ್ರೇಮಮತಿ ಎಲ್ಲಿ ಅಡಗಿ ಕುಳಿತಿದ್ದನು.
ವಟವೃಕ್ಷದ ಮೇಲೆ
ವಟವೃಕ್ಷದ ಕೆಳಗೆ
ವಟವೃಕ್ಷದ ಬದಿಯಲ್ಲಿ
ವಟವೃಕ್ಷದ ಪೊಟರೆಯಲ್ಲಿ
ಗಾದೆ ಮಾತಿನ ಸರಿಯಾದ ಪದಗಳ ಜೋಡಣೆಯ ಕ್ರಮ ಯಾವುದು?
'ಮನುಷ್ಯನಾಯುಷ್ಯಂ ವಿಕೃತಿಯಾದ ಕುಂದುಗುಂ ಪ್ರಕೃತಿ'
'ಪ್ರಕೃತಿ ಕುಂದುಗುಮ್ ಮನುಷ್ಯನಾಯುಷ್ಯ ವಿಕೃತಿಯಾದ'
'ಪ್ರಕೃತಿ ಕೃತಿಯಾದ ಮನುಷ್ಯನಾಯುಷ್ಯಂ ಕುಂದುಗುಂ'
'ವಿಕೃತಿಯಾದ ಪ್ರಕೃತಿ ಮನುಷ್ಯುಯನಾಷ್ಯಂ ಕುಂದುಗುಂ'
ಧರ್ಮಬುದ್ಧಿಯೇ ಹೊನ್ನನ್ನು ತೆಗೆದುಕೊಂಡನೆಂಬ ಮಾತು ಯಾರನ್ನು ಆಶ್ಚರ್ಯಗೊಳಿಸಿತು.
ನೆರೆದ (ಸೇರಿದ) ಜನಸಮೂಹಕ್ಕೆ
ಧರ್ಮಾಧಿಕರಣರಿಗೆ
ಧರ್ಮಬುದ್ಧಿಯನ್ನು
ಈ ಮೇಲಿನ ಎಲ್ಲರಿಗೂ
"ಚೋದ್ಯಮಿದು ದೈವಮಲ್ಲಕ್ಕುಮಂತಪ್ಪೊಡೆ ಸತ್ಯಮನೆಕೆ ನುಡಿಯದು." ಈ ಮಾತನ್ನು ಹೇಳಿದವರು.
ಧರ್ಮಾಧಿಕರಣರು
ಧರ್ಮಬುದ್ಧಿ
ದುಷ್ಟಬುದ್ಧಿ
ಪ್ರೇಮಮತಿ
"ಕೃತ್ರಿಮ" ಪದದ ಅರ್ಥ.
ಸ್ನೇಹ
ಕತ್ತಲೆ
ಕಳ್ಳ
ಮೋಸ
"ಬಲವಂದು" ಈ ಪದವು.
ಕರ್ಮಧಾರೆಯ ಸಮಾಸ
ಕ್ರಿಯಾ ಸಮಾಸ
ತತ್ಪುರುಷ ಸಮಾಸ
ಅಂಶಿ ಸಮಾಸ
ಧರ್ಮಬುದ್ಧಿಯು ಮರದ ಬಲವಂದು ಹಿರಿದಾದ ಪೊಟರೆಯನ್ನು ಕಂಡು ಏನೆಂದು ನಿಶ್ಚಯಿಸಿದನು?
ಹೊನ್ನನ್ನು ಅಡಗಿಸಿಟ್ಟಿರುವುದನು ನಿಶ್ಚಯಿಸಿದನು.
ಹೊನ್ನನ್ನು ಪನ್ನಗ ಸುತ್ತಿಕೊಂಡಿರುವುದು ನಿಶ್ಚಯಿಸಿದನು.
ಮರ ನುಡಿದಿರುವುದು ಸತ್ಯವೆಂದು ನಿಶ್ಚಯಿಸಿದನು.
ಪೊಟರೆಯಲ್ಲಿ ಮನುಷ್ಯ ಸಂಚಾರವಾಗಿದೆ ಎಂದು ನಿಶ್ಚಯಿಸಿದನು.
"ಹುಸಿಯದ ಬೇಹಾರಿಯೇ ಇಲ್ಲ." ಈ ಗಾದೆಯ ಅರ್ಥ.
ವ್ಯಾಪಾರಿಗಳು ಸುಳ್ಳನ್ನು ಹೇಳುವುದಿಲ್ಲ
ಸುಳ್ಳನ್ನು ಹೇಳದಿರುವ ವ್ಯಾಪಾರಿಯೇ ಇಲ್ಲ
ಸುಳ್ಳಿನಿಂದ ವ್ಯಾಪಾರವಿಲ್ಲ.
ಸುಳ್ಳು ವ್ಯಾಪಾರದ ಮಾರ್ಗ.
'ವ್ಯಾಪಾರಿ' ಮತ್ತು 'ಸಂದೇಹ' ಪದಗಳ ತದ್ಭವ ರೂಪ.
ಬಿಹಾರಿ ಮತ್ತು ಸಂಚಾರಿ
ಬೇಹಾರಿ ಮತ್ತು ಸಂದೆಯ
ವ್ಯಪಾರಿ ಮತ್ತು ಸಂಸಾರಿ
ಯಾವುದು ಅಲ್ಲ
ಧರ್ಮಬುದ್ಧಿ ಹೊನ್ನನ್ನು ವಂಚಿಸಿ ತೆಗೆದುಕೊಂಡು ಹೋಗದಿರಲು ಕೊಟ್ಟ ಕಾರಣಗಳಲ್ಲಿ ಯಾವುದು ಸರಿಯಾಗಿದೆ.
ಧರ್ಮಾಧಿಕರಣರೇ, ಸುಳ್ಳನ್ನು ಹೇಳದ ವ್ಯಾಪಾರಿಯೇ ಇಲ್ಲ, ನಾನು ಕೂಡಾ ವ್ಯಾಪಾರಿಯಾಗಿರುವುದರಿಂದ ಸುಳ್ಳನ್ನು ಹೇಳಿದೆ.
ಧರ್ಮಬುದ್ಧಿಯಾದ ನಾನು ಅಧರ್ಮದಿಂದ ಸಂಪತ್ತನ್ನು ವಂಚಿಸಿ ಮನೆಗೆ ಒಯ್ಯುವಷ್ಟರಲ್ಲಿ ನೇಸರು ಮೂಡಿದನು ಹೀಗಾಗಿ ಮರದ ಪೊಟರೆಯಲ್ಲಿ ಅಡಗಿಸಿಟ್ಟು ಹೋದೆ.
ಮರು ದಿವಸ ಬಂದು ನೋಡಿದಾಗ ಆ ಹೊನ್ನನ್ನು ಹಾವು ಸುತ್ತಿಕೊಂಡಿರುವರಿಂದ ತೆಗೆದುಕೊಂಡು ಹೋಗಲು ಹೆದರಿ ಇಲ್ಲಿಯೇ ಬಿಟ್ಟಿದ್ದೇನೆ.
ಈ ಮೇಲಿನ ಎಲ್ಲ ಕಾರಣಗಳು ಸರಿಯಾಗಿವೆ
ಮರದ ಪೊಟರೆಯಲ್ಲಿ ಅಡಗಿದ್ದವರನ್ನು ಹೊರತೆಗೆಯಲು ಧರ್ಮಬುದ್ಧಿ ಮಾಡಿದ ಉಪಾಯಗಳು.
ಹುಲ್ಲು ಮತ್ತು ಕಟ್ಟಿಗೆಗಳನ್ನು ಪೊಟರೆಯೊಳಗೆ ತುಂಬಿ ಕಿಚ್ಚನ್ನು ಹಚ್ಚುವುದು.
ಪೊಟರೆಯೊಳಗೆ ಹೊಗೆಯನ್ನು ಹಾಕಿ ಹಾವನ್ನು ಹೊರತೆಗೆದು ಕಳೆದುಕೊಂಡ ಸಂಪತ್ತನ್ನು ಕೊಡುವುದು.
ಈ ಮೇಲಿನ ಎರಡೂ ಸರಿಯಾಗಿವೆ.
ಈ ಮೇಲಿನ ಎರಡೂ ತಪ್ಪಾಗಿವೆ.
ದುಷ್ಟಬುದ್ಧಿಯ ಮನೆಯೊಳ್ ಕಿಚ್ಚನಿಕ್ಕುವಂತೆ. ಈ ವಾಕ್ಯವು.
ಉಪಮಾನ ಲುಪ್ತ ಉಪಮಾ ಅಲಂಕಾರ
ಉಪಮೇಯ ಲುಪ್ತ ಉಪಮಾ ಅಲಂಕಾರ
ಸಮಾನಧರ್ಮ ಲುಪ್ತ ಉಪಮಾ ಅಲಂಕಾರ
ವಾಚಕ ಪದ ಲುಪ್ತ ಉಪಮಾ ಅಲಂಕಾರ
ವಟವೃಕ್ಷದ ಪೊಟರೆಯಿಂದ ಧೃತಿಗೆಟ್ಟು ಪುಯ್ಯಲಿಟು ಸುರುಳ್ದುರುಳ್ದು ಕಂಠಗತಪ್ರಾಣನಾಗಿ ಬಿದ್ದವರು.
ದುಷ್ಟಬುದ್ಧಿ
ಪ್ರೇಮಮತಿ
ಧರ್ಮಬುದ್ಧಿ
ಸಭಾಸದರು
"ಸುರುಳ್ದುರುಳ್ದು" ಈ ಪದವು.
ಜೋಡುನುಡಿ
ದ್ವಿರುಕ್ತಿ
ನುಡಿಗಟ್ಟು
ಅನುಕರಣಾವ್ಯಯ
ಕಂಠಗತಪ್ರಾಣನಾಗಿ ಬಿದ್ದವನು ದುಷ್ಟಬುದ್ಧಿಯ ತಂದೆ ಎಂದವರಾರು?
ಧರ್ಮಬುದ್ಧಿ
ನೆರೆಯ ಜನ
ಧರ್ಮಾಧಿಕರಣರು
ಯಾರು ಅಲ್ಲ
"ಪ್ರೇಮಮತಿಗೆ ದುರ್ಮರಣಂ ಸಮನಿಸಿದುದು"
ದುಷ್ಟಬುದ್ಧಿಯ ಪಾಪಕರ್ಮದಿಂದ
ಧರ್ಮಬುದ್ಧಿಯ ಪಾಪಕರ್ಮದಿಂದ
ಪ್ರೇಮಮತಿಯ ಪಾಪಕರ್ಮದಿಂದ
ಸಭಾಸದರ ಪಾಪಕರ್ಮದಿಂದ.
"ಈ ಪಾಪಕರ್ಮನಪ್ಪ ದುಷ್ಪುತ್ರನಿಂ ನಿನಗಿಂತಪ್ಪ ದುರ್ಮರಣಂ ಸಮನಿಸಿದುದು" ಎಂಬ ಧರ್ಮಾಧಿಕರಣರ ಮಾತಿನ ನೀತಿಯು.
"ಸತ್ಯಕ್ಕೆ ಸಾವಿಲ್ಲ ಸುಳ್ಳಿಗ ಸುಖವಿಲ್ಲ"
"ಮಾಡಿದ್ದುಣ್ಣೊ ಮಾರಾಯಾ"
"ಹಣಕ್ಕಿಂತ ಗುಣ ಮೇಲು"
ಈ ಮೇಲಿನ ಎಲ್ಲವು.
