wayground logo

Free Printable Worksheets

NEW

Font size

S
M
L
XL
Worksheets

First Language Kannada Model Question Paper

Total questions: 40

Worksheet time: 20mins

Name
Class
Date
1.

'ಹಿಂದುಸ್ತಾನಿ' ಭಾಷೆಗೆ ಸೇರಿದ ಪದ.

a)

ಕಾರು

b)

ಕಚೇರಿ

c)

ಚೊಂಬು

d)

ರಸ್ತೆ

2.

ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ನೀಡಿದ ಪದವಿ.

a)

ಪದ್ಮಭೂಷಣ

b)

ಭಾರತರತ್ನ

c)

ಸರ್

d)

ಕರ್ನಾಟಕ ರತ್ನ

3.

'ದುರ್ಗಸಿಂಹ'ನು ರಚಿಸಿದ ಕೃತಿ.

a)

ವಸುಭಾಗಭಟ್ಟನ ಪಂಚತಂತ್ರ

b)

ಸಂಸ್ಕೃತ ಪಂಚತಂತ್ರ

c)

ಕರ್ನಾಟಕ ಪಂಚತಂತ್ರ

d)

ಗುಣಾಡ್ಯನ ಪಂಚತಂತ್ರ

4.

ಹಲಗಲಿ ಬೇಡರಿಗೆ ಬುದ್ಧಿಮಾತು ಹೇಳಿದ ಬ್ರಿಟಿಷ ಅಧಿಕಾರಿ.

a)

ಡಾಲ್ಹೌಸಿ

b)

ಕಾರ ಸಾಹೇಬ

c)

ಹೆಬಲಕ ಸಾಹೇಬ

d)

ರಾಬರ್ಟ್ ಕ್ಲೈವ್

5.

'ದೇವನೂರು ಮಹಾದೇವ ಅವರಿಗೆ ಮನೆಮಂಚಮ್ಮನ ಕಥೆ ಹೇಳಿದ ಕವಿ.

a)

ಬಾಗಲೋಡಿ ದೇವರಾಯ

b)

ಸಿದ್ದಲಿಂಗಯ್ಯ

c)

ಮಾಸ್ತಿ ವೆಂಕಟೇಶ ಅಯ್ಯಂಗಾರ್

d)

ಸಿದ್ದರಾಮಯ್ಯ

6.

'ಶಬರಿ' ಗೀತನಾಟಕದ ಕರ್ತೃ.

a)

ಡಿ. ಎಸ್. ಜಯಪ್ಪಗೌಡ

b)

ಪು. ತಿ. ನರಸಿಂಹಾಚಾರ್

c)

ವಿ. ಕೃ. ಗೋಕಾಕ್

d)

ಸಾರಾ ಅಬೂಬಕ್ಕರ್

7.

''ಮುಕ್ಕಣ್ಣು' ಪದವು.




a)

ಕರ್ಮಧಾರೆಯ ಸಮಾಸ

b)

ಅಂಶಿ ಸಮಾಸ

c)

ದ್ವಿಗು ಸಮಾಸ

d)

ದ್ವಂದ್ವ ಸಮಾಸ

8.

'ಭಗತ್ ಸಿಂಗ'ನು ತನ್ನ ಸಹೋದರಿಗೆ ತಿಳಿಹೇಳಿದ ವಿಷಯ.

a)

ಸ್ವಾತಂತ್ರ್ಯಕ್ಕಾಗಿ ಹೋರಾಟ

b)

ಮಣ್ಣಿನ ಋಣ ತೀರಿಸಲು

c)

ತ್ಯಾಗದ ಪ್ರತೀಕ ಆ ಮಣ್ಣು

d)

ದೇಶಕ್ಕಾಗಿ ತ್ಯಾಗ

9.

ಬ್ರಿಟಿಷರನ್ನು ಕುರಿತು ಜಡಗ ಹೇಳಿದ ಮಾತು.

a)

ವಿಶ್ವಾಸ ಘಾತುಕರು

b)

ನಂಬಿಕಸ್ಥರು

c)

ನಮ್ಮ ಅಧಿಕಾರಿಗಳು

d)

ವಿಶ್ವಾಸ ಪ್ರಿಯರು

10.

ಚತುರ್ಥೀ ವಿಭಕ್ತಿಯ ಕಾರಕಾರ್ಥ.

a)

ಕರ್ಮಾರ್ಥ

b)

ಸಂಪ್ರದಾನ

c)

ಸಂಬಂಧ

d)

ಕರ್ಣರ್ಥ

11.

ಜಿ. ಎಸ್. ಶಿವರುದ್ರಪ್ಪನವರ ಜನ್ಮಸ್ಥಳ.

a)

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ

b)

ಶಿವಮೊಗ್ಗ ಜಿಲ್ಲೆಯ ಸಾಗರ

c)

ಶಿವಮೊಗ್ಗ ಜಿಲ್ಲೆಯ ಭದ್ರಾವತಿ

d)

ಶಿವಮೊಗ್ಗ ಜಿಲ್ಲೆಯ ಸೊರಬ

12.

ದ. ರಾ. ಬೇಂದ್ರೆ ಅವರಿಗೆ 'ನಾಕುತಂತಿ' ಕವನಸಂಕಲನಕ್ಕೆ ಲಭಿಸಿದ ಪ್ರಶಸ್ತಿ.

a)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

b)

ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

c)

ಪದ್ಮಭೂಷಣ ಪ್ರಶಸ್ತಿ

d)

ಭಾರತೀಯ ಜ್ಞಾನಪೀಠ ಪ್ರಶಸ್ತಿ

13.

ನೀರಲ್ಲೇ ಹುಟ್ಟೋದು ನೀರಲ್ಲೇ ಬೆಳೆಯೋದು ನೀರು ತಾಗಿದರೆ ಮಟಮಾಯವಾಗುವುದು.

a)

ಮಣ್ಣು

b)

ಉಪ್ಪು

c)

ಸಕ್ಕರೆ

d)

ದ್ರಾವಣ

14.

ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ ಹಚ್ಚಹಸುರನ್ನು ಕಂಡು ಪ್ರೇರಿತವಾಗಿ ರಚಿಸಿದ ಕವನ.

a)

ಹಸುರು

b)

ಸಂಕಲ್ಪಗೀತೆ

c)

ಹಕ್ಕಿ ಹಾರುತಿದೆ ನೋಡಿದಿರಾ

d)

ಹಲಗಲಿ ಬೇಡರು

15.

'ದೇವನೂರು ಮಹಾದೇವ' ಅವರ ಮನದೊಳಗೆ ಕೂತದ್ದು.

a)

ವಚನಕಾರರ ಆದರ್ಶ

b)

ಬುದ್ಧನ ಕಾರುಣ್ಯ

c)

ಬಸವಣ್ಣನವರ ಆದರ್ಶ

d)

ಅಂಬೇಡ್ಕರ್ ಅವರ ಆದರ್ಶ

16.

ತಂದೆಗೆ ಪತ್ರ ಬರೆಯುವಾಗ ಪತ್ರದಲ್ಲಿ ಆರಂಭದ ಸಂಬೋಧನೆ ಹೀಗಿರಬೇಕು.

a)

ಮಾನ್ಯರೇ

b)

ಮಾತೃಶ್ರೀಯವರಿಗೆ

c)

ತೀರ್ಥರೂಪರವರಿಗೆ

d)

ಪೂಜ್ಯರಿಗೆ

17.

ದುರ್ಯೋಧನನು ಭೀಷ್ಮರ ಬಳಿಗೆ ಬರಲು ಕಾರಣ.

a)

ಸಂಧಿ ಕಾರ್ಯಕ್ಕೆ ಒಪ್ಪಿಕೊಳ್ಳಲು

b)

ನಮಸ್ಕರಿಸಿ ಹೋಗಲು

c)

ಯುದ್ಧಕ್ಕೆ ಆಹ್ವಾನಿಸಲು

d)

ಆಶೀರ್ವಾದ ಪಡೆಯಲು

18.

"ನ್ಯಾಯ ವಿಧಾಯಕ ಸಭೆ"ಯನ್ನು ಸ್ಥಾಪಿಸಿದವರು.

a)

ಕೆ. ಶೇಷಾದ್ರಿ ಅಯ್ಯರರವರು

b)

ಒಂದನೇಯ ಕೃಷ್ಣರಾಜ ಒಡೆಯರು

c)

ನಾಲ್ವಡಿ ಕೃಷ್ಣರಾಜ ಒಡೆಯರು

d)

ಎಂ. ವಿಶ್ವೇಶ್ವರಯ್ಯನವರು

19.

'ಪಾದುಕಾ' ಪದದ ತದ್ಭವ ರೂಪ.

a)

ಪೀಠಿಕೆ

b)

ಹವುಗೆ

c)

ಹವಗೆ

d)

ಹಾವುಗೆ

20.

"ಹುಲಿ ಈಗ ಎಷ್ಟು ಹಸಿದಿರಬೇಕು" ಎಂದು ಯೋಚಿಸಿದವರು.

a)

ಶಾನುಭೋಗರು

b)

ಎ. ಎನ್. ಮೂರ್ತಿರಾಯರು

c)

ಚಿಕ್ಕನಾಯಕನಹಳ್ಳಿಯ ಜನರು

d)

ಗಾಡಿಯಲ್ಲಿ ಹೊರಟ ರೈತರು

21.

ಅತಿ ಸಾಮ್ಯದಿಂದಾಗಿ ಉಪಮೇಯ ಉಪಮಾನಗಳಲ್ಲಿ ಅಭೇದವನ್ನು ವರ್ಣಿಸಿ ಹೇಳುವ ಅಲಂಕಾರ.

a)

ರೂಪಕ ಅಲಂಕಾರ

b)

ಉಪಮಾ ಅಲಂಕಾರ

c)

ದೃಷ್ಟಾಂತ ಅಲಂಕಾರ

d)

ಉತ್ಪ್ರೇಕ್ಷ ಅಲಂಕಾರ

22.

'ಕುವೆಂಪು'ರವರಿಗೆ ಗಿಳಿ ಹಸುರಿನಂತೆ ಕಂಡದ್ದು.

a)

ವನದಿ

b)

ಅಡಕೆಯ ತೋಟ

c)

ಆಗಸ

d)

ಭತ್ತದ ಗದ್ದೆ

23.

ಶಾನುಭೋಗರ ರಾಜಭಕ್ತಿಯ ಲಾಂಛನವಿದು.

a)

ಭಗವದ್ಗೀತೆ

b)

ಖಿರ್ದಿ ಪುಸ್ತಕ

c)

ಹುಲಿಯ ಧರ್ಮ

d)

ಪುಣ್ಯಕೋಟಿ

24.

ಯಾವುದಾದರೊಂದು ಕ್ರಿಯೆಯನ್ನು ಹೇಳುವ ಅವ್ಯಯ.

a)

ಅವಧಾರಣಾರ್ಥಕಾವ್ಯಯ

b)

ಸಾಮಾನ್ಯಾರ್ಥಕಾವ್ಯಯ

c)

ಸಂಭವನಾರ್ಥಕಾವ್ಯಯ

d)

ಅನುಕರಣಾವ್ಯಯ

25.

ಸ್ವಾಮಿ ವಿವೇಕಾನಂದ ಅವರನ್ನು 'ಮಾನವತಾಮಿತ್ರ'ರೆಂದು ಕರೆದವರು.

a)

ಶಿವರಾಮ ಕಾರಂತ್

b)

ದ. ರಾ. ಬೇಂದ್ರೆ

c)

ಯು. ಆರ್. ಅನಂತಮೂರ್ತಿ

d)

ಕೆ. ವಿ. ಪುಟ್ಟಪ್ಪ

26.

ಮುದುಕಿಯ ಮನೆಗೆ ಬಂದ ಸೈನಿಕರು ದಿಟ್ಟಿಸಿ ನೋಡಿದ್ದು.

a)

ಮಗುವಿನ ಆಟ

b)

ಮಗುವಿನ ಮೃತದೇಹ

c)

ಮಗುವಿನ ಮುಖದಲ್ಲಿಯ ನಗು

d)

ಮಗುವಿನ ಮುಖದಲ್ಲಿಯ ಅಳು

27.

ಪ್ರಶ್ನೆರೂಪದ ಪದ ಮತ್ತು ವಾಕ್ಯಗಳ ಮುಂದೆ ಬಳಸಲಾಗುವ ಚಿಹ್ನೆ.

a)

ಅಲ್ಪವಿರಾಮ

b)

ಅರ್ಧ ವಿರಾಮ

c)

ಪ್ರಶ್ನಾರ್ಥಕ

d)

ಪೂರ್ಣ ವಿರಾಮ

28.

ಪುಟ್ಟ ಪೋರಿ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಳು.

a)

ಕಸ ಹೊಡೆಯುವುದರಲ್ಲಿ

b)

ಮುಸುರೆ ತಿಕ್ಕುವುದರಲ್ಲಿ

c)

ಬಟ್ಟೆ ತೊಳೆಯುವದರಲ್ಲಿ

d)

ಆಟ ಆಡುವದರಲ್ಲಿ

29.

ಚಾಲುಕ್ಯರ ದೊರೆ ತೈಲಪನು ರನ್ನ ಕವಿಗೆ ನೀಡಿದ ಬಿರುದು.

a)

ಕವಿ ಚೂತವನ ಚೈತ್ರ

b)

ರತ್ನತ್ರಯ

c)

ರೂಪಕ ಸಾಮ್ರಾಜ್ಯ ಚಕ್ರವರ್ತಿ

d)

ಕವಿಚಕ್ರವರ್ತಿ

30.

"ಹುಸಿಯದ ಬೇಹಾರಿಯೇ ಇಲ್ಲ" ಎಂದು ನುಡಿದವರು.

a)

ಧರ್ಮಾಧಿಕಾರಿಗಳು

b)

ಪ್ರೇಮಮತಿ

c)

ದುಷ್ಟಬುದ್ಧಿ

d)

ಧರ್ಮಬುದ್ಧಿ

31.

'ಶಬರಿ' ಗೀತನಾಟಕ ಈ ಮಹಾಕಾವ್ಯವನ್ನು ಆಧರಿಸಿ ರಚಿಸಲಾಗಿದೆ.

a)

ಮಹಾಭಾರತ

b)

ಭಗವದ್ಗೀತೆ

c)

ರಾಮಾಯಣ

d)

ಬೈಬಲ್

32.

'ಸೂರ್ಯದೇವ'ನಿಗಿರುವ ಮತ್ತೊಂದು ಹೆಸರು.

a)

ಮುರಾರಿ

b)

ಮಾಧವ

c)

ರಾಜೀವಸಖ

d)

ಇನತನೂಜ

33.

ರಾಹಿಲನು ತನ್ನ ಕಾಲಿನ ಆರೈಕೆಗಾಗಿ ಮುದುಕಿಯಿಂದ ಪಡೆದುಕೊಂಡದ್ದು.

a)

ಪುಟ್ಟ ಹಲಗೆ ತುಂಡುಗಳು

b)

ಬಟ್ಟೆಯ ತುಂಡುಗಳು

c)

ಔಷಧಿಗಳು

d)

ಚಿಕಿತ್ಸಾ ಸಾಮಗ್ರಿಗಳು

34.

ಜಿ. ಎಸ್. ಶಿವರುದ್ರಪ್ಪನವರ ಪ್ರಕಾರ ಕಲುಷಿತವಾದವುಗಳು.

a)

ಮನೆ ಮನಗಳು

b)

ಸಮಾಜ ಸಮುದಾಯಗಳು

c)

ನದೀಜಲಗಳು

d)

ಜನ ಮನಗಳು

35.

ತನ್ನ ಒಡನಾಡಿಗಳೊಂದಿಗೆ ತೋಟದ ಕಾವಲನ್ನು ಮಾಡುತ್ತಿದ್ದವನು.

a)

ಶತ್ರುಘ್ನ

b)

ಲಕ್ಷ್ಮಣ

c)

ಕುಶ

d)

ಲವ

36.

ಕಟ್ಟುವುದು ಕಠಿಣ; ಕೆಡಹುವುದು ____

a)

ಸತ್ಯ

b)

ಸುಲಭ

c)

ಸರಲ

d)

ಅಸತ್ಯ

37.

ಗುರು-ಲಘು ಮೊದಲಲ್ಲಿ ಬರಲು.

a)

ಸ ತ ಗಣ

b)

ಜ ರ ಗಣ

c)

ಭ ಯ ಗಣ

d)

ಮ ನ ಗಣ

38.

ಅಶ್ವಿನಿ ದೇವತೆಗಳ ವರಬಲದಿಂದ ಜನಿಸಿದವರು.

a)

ಭೀಮಾರ್ಜುನರು

b)

ನಕುಲಸಹದೇವರು

c)

ಧರ್ಮ ಪಾರ್ಥರು

d)

ಕರ್ಣ ಭೀಮರು

39.

'ನೀಲಮೇಘಮಂಡಲ-ಸಮ ಬಣ್ಣ' ಸಾಲಿನ ನಂತರದ ಸಾಲು.

a)

ಚಿಕ್ಕೆಯಮಾಲೆಯ ಸಿಕ್ಕಿಸಿಕೊಂಡು

b)

ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ

c)

ಹಕ್ಕಿಹಾರುತಿದೆ ನೋಡಿದಿರಾ?

d)

ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ

40.

ವೀರಲವನು ಕದಳಿ ದ್ರುಮಕ್ಕೆ ಕುದುರೆಯನ್ನು ಕಟ್ಟಲು ಬಳಸಿದ್ದು.

a)

ಉತ್ತರೀಯ

b)

ಸೀರೆ

c)

ಹಗ್ಗ

d)

ನಾರು