wayground logo

Free Printable Worksheets

NEW

Font size

S
M
L
XL
Worksheets

ವಿದ್ಯಾಶಾರದೆ ಕೋಚಿಂಗ್ ಬಾಗಲಕೋಟೆ -9380850076 ಕನ್ನಡ ಭಾಷಾ ಬೋಧನೆ ಪ

Total questions: 30

Worksheet time: 18mins

Name
Class
Date
1.

ಕೆಳಕಂಡವುಗಳಲ್ಲಿ ಯಾವುದು ಭಾಷೆಯ ಸ್ವರೂಪವಾಗಿದೆ

a)

ಭಾಷೆಯ ಧ್ವನಿ ಸಂಕೇತಗಳ ಯಾದೃಚ್ಛಿಕ ವ್ಯವಸ್ಥೆ

b)

ಭಾಷೆಯು ಅನುಕರಣೆಯಿಂದ ಮೂಡಿಬರುವುದು

c)

ಭಾಷೆಯು ಅಭಿವ್ಯಕ್ತಿಯ ಸಾಧನ ಮತ್ತು ವಿಕಾಸದ ಸಾಧನ

d)

ಮೇಲೆ ಎಲ್ಲವೂ ಸರಿಯಾಗಿದೆ

2.

ಮಾತೃಭಾಷೆಯ ಬೋಧನೆ ಈ ಕೆಳಗಿನ ಯಾವುದಕ್ಕೆ ಅವಶ್ಯಕ

a)

ಜ್ಞಾನಾರ್ಜನೆಗೆ, ವಿಜ್ಞಾನ ಮತ್ತು ಸಂಶೋಧನೆ ಮಾಡಲು

b)

ಶಿಕ್ಷಣ ಕ್ಷೇತ್ರದಲ್ಲಿ ಓದುವ ಅಭಿರುಚಿಯ ಮೂಲಕ ಕಲಿಯಲು

c)

ಸಾಹಿತ್ಯ ಅಧ್ಯಯನ ಸಾಮರ್ಥ್ಯ ಮತ್ತು ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಲು

d)

ಮೇಲಿನ ಎಲ್ಲವೂ

3.

ಮಾತೃಭಾಷೆಯನ್ನು ಬೋಧಿಸುವಾಗ ಶಿಕ್ಷಕರು ಈ ಕೆಳಗಿನ ಯಾವ ಅಂಶವನ್ನು ಗಮನದಲ್ಲಿ ಇಟ್ಟುಕೊಂಡಿರಬೇಕು

a)

ಸಾಮಾಜಿಕ ಮೌಲ್ಯ

b)

ಶೈಕ್ಷಣಿಕ ಮೌಲ್ಯ

c)

ಸಾಹಿತ್ಯಕ ಮತ್ತು ಸಾಂಸ್ಕೃತಿಕ ಮೌಲ್ಯ

d)

ಮೇಲಿನ ಎಲ್ಲವೂ

4.

ಕನ್ನಡ ಭಾಷಾ ಶಿಕ್ಷಕರ ಗುಣಗಳು ಯಾವುವು

a)

ಭಾಷಾ ಪ್ರೇಮ

b)

ದೇಶಪ್ರೇಮ

c)

ವಿಪುಲವಾದ ಶಬ್ದ ಸಂಪತ್ತು

d)

ಮೇಲಿನ ಎಲ್ಲವೂ

5.

ನೀವು ಕನ್ನಡ ಭಾಷಾ ಶಿಕ್ಷಕರಾಗಿ ಬೋಧನೆಯಲ್ಲಿ ಕೆಳಗಿನ ಯಾವ ಬೋಧನಾ ಉಪಕರಣವನ್ನು ಬಳಸುವುದಿಲ್ಲ

a)

ಪಠ್ಯಪುಸ್ತಕ

b)

ಕವಿ ಲೇಖಕ ಅಥವಾ ನಾಟಕಕಾರರ ಸಮಗ್ರ ಚಿತ್ರಣ

c)

ರೇಡಿಯೋ

d)

ಸ್ಲೈಡ್ ಶೋ

6.

ಸ್ನೇಹಿತ ಪತ್ರ ಬರೆಯುವಾಗ, ಕಲಿಯುವವ ಈ ಕೆಳಗಿನ ಅಂಶಗಳಿಗೆ ಒತ್ತು ಕೊಡಬೇಕು

a)

ಎಲ್ಲರಿಗೂ ಅರ್ಥವಾಗುವ ಶೈಲಿ ಸಂಕ್ಷಿಪ್ತ ರೂಪಗಳ ಬಳಕೆ ಸ್ವಚ್ಛವಾದ ಪತ್ರಲೇಖ ರೂಪ

b)

ವೈಯಕ್ತಿಕತೆ ಮತ್ತು ಯಾವುದೇ ಚೌಕಟ್ಟಿನ ಅಗತ್ಯವಿಲ್ಲ

c)

ಒಂದು ಬಗೆಯ ಪತ್ರಲೇಖನ ಚೌಕಟ್ಟು ವೈಯಕ್ತಿಕ ಛಾಪು ಸಂಕ್ಷಿಪ್ತ ರೂಪಗಳು

d)

ಪತ್ರ ಬರವಣಿಗೆ ಚೌಕಟ್ಟನ್ನು ಅಚ್ಚುಕಟ್ಟಾಗಿ ಅನುಸರಿಸಿ ವೈಯಕ್ತಿಕ ಭಾಷೆಯನ್ನು ಬಳಸಬೇಕು

7.

ಭಾಷಾ ಪಠ್ಯಪುಸ್ತಕಗಳು ದೇಶಪ್ರೇಮ ಪ್ರೇಮ ಸಹೋದರತೆ ಸಮಾನತೆ ಜಾತ್ಯಾತೀತತೆ ಕಥೆ ಕವನಗಳು ಆತ್ಮಚರಿತ್ರೆಗಳನ್ನು ಒಳಗೊಂಡಿದ್ದರೆ ಇದು ಪಠ್ಯಪುಸ್ತಕದ ಯಾವ ರಚನಾ ತತ್ವವನ್ನು ಆಧರಿಸಿದೆ

a)

ವ್ಯಾಕರಣ ತತ್ವ

b)

ರಾಷ್ಟ್ರೀಯ ಭಾವೈಕ್ಯತಾ ತತ್ವ

c)

ಪ್ರಗತಿಶೀಲ ತತ್ವ

d)

ಅಭ್ಯಾಸ ತತ್ವ

8.

ಶಿಕ್ಷಣ ಕ್ಷೇತ್ರದಲ್ಲಿ ಬೋಧನೆ ಕಲಿಕೆ ಮೌಲ್ಯಮಾಪನ ಶಿಸ್ತು ಮಕ್ಕಳ ವರ್ತನೆ ಮೊದಲಾದವುಗಳಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶಿಕ್ಷಕರು ಈ ಕೆಳಗಿನ ಯಾವ ಮಾರ್ಗವನ್ನು ಅನುಸರಿಸಬೇಕು

a)

ಪರಿಹಾರ ಬೋಧನೆ

b)

ಕ್ರಿಯಾ ಸಂಶೋಧನೆ

c)

ಮೌಲ್ಯಮಾಪನ

d)

ಮೇಲಿನ ಎಲ್ಲವೂ

9.

ಶೈಕ್ಷಣಿಕ ಉದ್ದೇಶಗಳು ಮಕ್ಕಳಿಗೆ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಅರ್ಥವಾಗಿದೆ? ಇದರಿಂದ ಅವರ ಜ್ಞಾನ ವರ್ತನೆ ಕೌಶಲ್ಯ ಮತ್ತು ಮನೋಭಾವಗಳಲ್ಲಿ ಆಗಿರುವ ಬದಲಾವಣೆಗಳು ಏನೆಂಬುದನ್ನು ಗುರುತಿಸುವ ನಿರ್ದಿಷ್ಟ ಪ್ರಕ್ರಿಯೆಯೇ_____

a)

ಮೌಲ್ಯಮಾಪನ

b)

ಘಟಕ ಪರೀಕ್ಷೆ

c)

ಸಹಪಠ್ಯ ಚಟುವಟಿಕೆಗಳು

d)

ಮೇಲಿನ ಯಾವುದೂ ಅಲ್ಲ

10.

ಕೆಲವು ಬಾರಿ ಮಕ್ಕಳಿಗೆ ಪಠ್ಯಪುಸ್ತಕದಲ್ಲಿನ ಹಿಂದಿನ ಪ್ರಶ್ನೆಗಳು ನೀರಸ ಎನಿಸಬಹುದು ಆಗ ಬೋಧಕರು __________

a)

ಪಟ್ಟಿದ ಪ್ರಶ್ನೆಗಳಿಗೆ ಅಂಟಿಕೊಳ್ಳಬೇಕು

b)

ಹೆಚ್ಚುವರಿ ಪಠ್ಯಗಳನ್ನು ಕೊಡಬೇಕು

c)

ಸೃಜನಶೀಲ ಮತ್ತು ಸಮಸ್ಯೆಯ ನಿವಾರಕ ಚಟುವಟಿಕೆಗಳನ್ನು ನೀಡಬೇಕು

d)

ಇನ್ನೊಂದು ಪಠ್ಯವನ್ನು ತಯಾರಿಸಬೇಕು

11.

ಪ್ರೌಢಾವಸ್ಥೆ ನಂತರ ಹೊಸ ಭಾಷೆಯನ್ನು ಕಲಿಯುವಾಗ____

a)

ಸಾಧಾರಣ ಪ್ರಭುತ್ವ ದೊರಕುತ್ತದೆ

b)

ಭಾಷೆಯ ಕಲಿಕೆ ತುಸು ಕಷ್ಟಕರವಾಗುತ್ತದೆ

c)

ಪ್ರಭುತ್ವ ದಕ್ಕುವುದಿಲ್ಲ

d)

ಪ್ರಭುತ್ವ ಅತಿ ಹೆಚ್ಚಾಗುತ್ತದೆ

12.

ಭಾಷೆಯ ಮೇಲೆ ಹಿಡಿತವಿದ್ದರೆ ಅದು ಯಾವ ಭಾವನೆಯನ್ನು ನೀಡುತ್ತದೆ

a)

ಆತ್ಮವಿಶ್ವಾಸ

b)

ಸಂತೃಪ್ತಿ

c)

ಭದ್ರತೆ

d)

ಯಾವುದು ಅಲ್ಲ

13.

ಭಾಷೆಯನ್ನು ವ್ಯವಸ್ಥಿತವಾಗಿ ಅಭ್ಯಾಸ ಮಾಡದೆ ಸಹಜವಾಗಿ ಕಲಿತರೆ ಅದನ್ನು ಏನೆಂದು ಕರೆಯುತ್ತಾರೆ

a)

ಪ್ರಥಮ ಭಾಷೆ

b)

ಅವಸಾನ

c)

ಸಂಪಾದನೆ

d)

ಯಾವುದು ಅಲ್ಲ

14.

ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳ ಕಲಿಕಾ ಮಟ್ಟಕ್ಕಿಂತ ಹಿಂದೆ ಬಿದ್ದಾಗ ಅಂತಹ ವಿದ್ಯಾರ್ಥಿಗಳಿಗೆಂದು ಕೊಡುವ ಬೋಧನಾ ವಿಧಾನದ ಹೆಸರು

a)

ಸಾರಾಂಶ ಬೋಧನೆ

b)

ಮರು ಬೋಧನೆ

c)

ಪರಿಹಾರಕ್ಕೆ ಬೋಧನೆ ಮತ್ತು ನೈದಾನಿಕ ಬೋಧನೆ

d)

ಪರಿಷ್ಕರಣ ಬೋಧನೆ

15.

ಮಕ್ಕಳ ಪೂರ್ವ ಜ್ಞಾನವನ್ನು ಪರೀಕ್ಷಿಸಲು ಶಿಕ್ಷಕರು ಈ ಕೆಳಗಿನ ಯಾವ ಬೋಧನಾ ವಿಧಾನವನ್ನು ಬಳಸುತ್ತಾರೆ

a)

ನಾಟಕಾಭಿನಯ ಪದ್ಧತಿ

b)

ಕ್ರೀಡಾ ಪದ್ಧತಿ

c)

ಪ್ರಶ್ನೋತ್ತರ ಪದ್ಧತಿ

d)

ಉಪನ್ಯಾಸ ಪದ್ದತಿ

16.

ನಿರ್ದಿಷ್ಟವಾದ ವಿಷಯಗಳಿಂದ ಒಂದು ಸಾಮಾನ್ಯ ನಿರ್ಮಾಣದತ್ತ ತಾರ್ಕಿಕವಾಗಿ ಯೋಚಿಸುವುದು ಬೋಧನಾ ವಿಧಾನವೇ_____

a)

ನಿಗಮನ ಬೋಧನಾ ವಿಧಾನ

b)

ಕ್ರೀಡಾ ಪದ್ದತಿ

c)

ಅನುಗಮನ ಬೋಧನಾ ವಿಧಾನ

d)

ಪ್ರಶ್ನೋತ್ತರ ಪದ್ಧತಿ

17.

ಸಾಮಾನ್ಯ ತೀರ್ಮಾನ, ಸೂತ್ರ/ ನಿಯಮದಿಂದ ಪ್ರಾರಂಭವಾಗಿ ನಿರ್ದಿಷ್ಟವಾದ ವಿಷಯಗಳಲ್ಲಿ ತಾರ್ಕಿಕವಾಗಿ ಸಾಗುವ ಬೋಧನಾ ವಿಧಾನ

a)

ನಿಗಮನ ಬೋಧನಾ ಪದ್ಧತಿ

b)

ಅನುಗಮನ ಬೋಧನಾ ಪದ್ಧತಿ

c)

ಉಪನ್ಯಾಸ ಪದ್ದತಿ

d)

ನಾಟಕಾಭಿನಯ ಪದ್ಧತಿ

18.

ಮಕ್ಕಳು ಭಾಷೆಯನ್ನು ಸಹಜವಾಗಿ ಈ ಕೆಳಗಿನ ಯಾವ ನಿಯಮದ ಮೂಲಕ ಕರೆಯುತ್ತಾರೆ

a)

ಸಿದ್ಧತಾ ನಿಯಮ

b)

ಅಭ್ಯಾಸ ನಿಯಮ

c)

ಅನುಕರಣ ನಿಯಮ

d)

ಪರಿಣಾಮ ನಿಯಮ

19.

ಪದ್ಯ ಬೋಧನೆಯನ್ನು ಮಾಡುವಾಗ ಈ ಕೆಳಗಿನ ಯಾವ ಬೋಧನಾ ವಿಧಾನವನ್ನು ಅನುಸರಿಸುವುದು ಸೂಕ್ತ

a)

ಸಾಂಪ್ರದಾಯಿಕ ಪದ್ಧತಿ (ಬಿಡಿ ಪದ್ದತಿ)

b)

ಪೂರ್ಣ ಪದ್ಧತಿ (ಇಡೀ ಪದ್ದತಿ)

c)

ಉಪನ್ಯಾಸ ಪದ್ದತಿ

d)

ಯೋಜನಾ ಪದ್ಧತಿ

20.

ಮಕ್ಕಳಿಗೆ ವ್ಯಾಕರಣ ಬೋಧನೆಯನ್ನು ಮಾಡುವಾಗ ಈ ಕೆಳಗಿನ ಯಾವ ಬೋಧನಾ ವಿಧಾನವನ್ನು ಅನುಸರಿಸುತ್ತಾರೆ

a)

ಅನುಗಮನ ಮತ್ತು ನಿಗಮನ

b)

ಪ್ರಶ್ನೋತ್ತರ ಮತ್ತು ಉಪನ್ಯಾಸ

c)

ಕ್ರೀಡಾ ಪದ್ಧತಿ ಮತ್ತು ಕಥನ ಪದ್ಧತಿ

d)

ನಾಟಕಾಭಿನಯ ಮತ್ತು ಪ್ರಶ್ನೋತ್ತರ

21.

ಪದ್ಯ ಬೋಧನೆ ಪ್ರಾಮುಖ್ಯತೆ ಏನು ?

a)

ಸೃಜನಶೀಲ ಅಭಿವ್ಯಕ್ತಿ ಸಾಮರ್ಥ್ಯ ಬೆಳೆಸುವುದು

b)

ಛಂದಸ್ಸು ಮತ್ತು ಅಲಂಕಾರ ತಿಳಿದುಕೊಳ್ಳಲು

c)

ಭಾಷಾಭಿವ್ಯಕ್ತಿ ಬೆಳೆಸುವುದು

d)

ಕಂಠಪಾಠವನ್ನು ಪ್ರೋತ್ಸಾಹಿಸುವುದು

22.

ಕೆಳಗಿನ ಯಾವ ಬೋಧನಾ ಪದ್ಧತಿಯಿಂದ ಮಕ್ಕಳಲ್ಲಿ ಆಲಿಸುವಿಕೆಯ ಸಾಮರ್ಥ್ಯ ಹೆಚ್ಚುತ್ತದೆ

a)

ಉಪನ್ಯಾಸ ಪದ್ದತಿ

b)

ಅನುಗಮನ ಪದ್ಧತಿ

c)

ಪ್ರಶ್ನೋತ್ತರ ಪದ್ಧತಿ

d)

ನಾಟಕ ಅಭಿನಯ

23.

ಮಕ್ಕಳು ವಯಸ್ಕರಿಗಿಂತ ಅತಿಸುಲಭವಾಗಿ ಅನ್ಯ ಭಾಷೆಯನ್ನು ಕಲಿಯುವ ವಯಸ್ಸು

a)

ಎಂಟು ವರ್ಷಕ್ಕಿಂತ ಮುಂಚೆ

b)

ಎಂಟು ವರ್ಷದ ನಂತರ

c)

ಹದಿಮೂರು ವರ್ಷಕ್ಕಿಂತ ಮುಂಚೆ

d)

ಹತ್ತು ವರ್ಷಕ್ಕಿಂತ ಮುಂಚೆ

24.

ಶಿಕ್ಷಣದಲ್ಲಿ ಇ- ಕಲಿಕೆಯು (e-learing) ಅಂದರೇನು

a)

ದೂರಶಿಕ್ಷಣದ ಒಂದು ಬಗೆಯಾಗಿದೆ

b)

ಸಾಕ್ಷ್ಯಚಿತ್ರೀಕರಣ

c)

ತಾಂತ್ರಿಕತೆಯ ಸಹಾಯದೊಂದಿಗೆ ಕಲಿಯುವುದರ ಸಮ್ಮಿಶ್ರ ವಿಧಾನ

d)

ಯಾಂತ್ರಿಕ ಸಲಕರಣೆಗಳ ಸಮ್ಮೇಳನ

25.

ಭಾಷಾಪ್ರಯೋಗ ಶಾಲೆಯೆಂದು ಇದನ್ನು ಕರೆಯುತ್ತಾರೆ

a)

ಭಾಷೆಯನ್ನು ಪ್ರಯೋಗಕ್ಕೆ ಒಳಪಡಿಸುವ ಕೊಠಡಿ

b)

ವಿದ್ಯುನ್ಮಾನ ಬೋಧನೋಪಕರಣಗಳಿಂದ ಕೂಡಿದ ಕೊಠಡಿ

c)

ವಿದ್ಯಾರ್ಥಿ-ಶಿಕ್ಷಕರನ್ನೊಳಗೊಂಡ ಭಾಷಾ ಕೊಠಡಿ

d)

ಕಂಪ್ಯೂಟರ್ ರೇಡಿಯೋ ಟಿವಿ ಹೊಂದಿರುವ ಕೊಠಡಿ

26.

ಬರವಣಿಗೆ ಕೌಶಲ್ಯ ಸಂವರ್ಧನೆಗೆ ಈ ಚಟುವಟಿಕೆ ಸೂಕ್ತವಾದದಲ್ಲ

a)

ಗಾದೆ ಮಾತು ವಿಸ್ತರಣೆ

b)

ಪತ್ರಲೇಖನ

c)

ಪರಸ್ಪರ ಸಂಭಾಷಣೆ ನಡೆಸುವುದು

d)

ಪ್ರಬಂಧ ರಚನೆ

27.

ನಾಟಕ ಸಾಹಿತ್ಯ ಬೋಧಿಸುವಾಗ ಈ ಅಂಶದ ಕಡೆಗೆ ಹೆಚ್ಚು ಹೊತ್ತು ನೀಡಬೇಕು

a)

ವೈಚಾರಿಕತೆ

b)

ಸಂಭಾಷಣೆ ಮತ್ತು ಸನ್ನಿವೇಶ ಚಿತ್ರಣ

c)

ಭೌಗೋಳಿಕ ವೈಶಿಷ್ಟ್ಯ

d)

ಪ್ರಚಲಿತ ವಿದ್ಯಮಾನಗಳ ವಿಶ್ಲೇಷಣೆ

28.

ಉಪನ್ಯಾಸ ವಿಧಾನದ ಬೋಧನೆಯ ಅನುಕೂಲವೆಂದರೆ

a)

ಹಗಲುಗನಸಿಗೆ ನಾಂದಿ

b)

ಮೌಲ್ಯಮಾಪನಕ್ಕೆ ಅವಕಾಶವಿಲ್ಲ

c)

ಅಧ್ಯಾಪಕರ ನೆನಪಿನ ಶಕ್ತಿಯ ಮೇಲೆ ಅಪಾರ ಹೊರೆ ಬೀಳುತ್ತದೆ

d)

ಎಂತಹ ದೊಡ್ಡ ಗುಂಪು ಸಭೆಗಳಿಗೂ ಇದನ್ನು ಹೊಂದಿಸಬಹುದು

29.

ಪಠ್ಯಪುಸ್ತಕದ ರಚನಾ ತತ್ವ

a)

ಶಿಶು ಕೇಂದ್ರಿತ

b)

ಶಿಕ್ಷಕ ಕೇಂದ್ರಿತ

c)

ಪೋಷಕ ಕೇಂದ್ರಿತ

d)

ಸಂಸ್ಥೆ ಕೇಂದ್ರಿತ

30.

ಕೈಬರಹದಲ್ಲಿ ಕಂಡುಬರುವ ದೋಷ

a)

ಸಂಭಾಷಣೆ ದೋಷ

b)

ಉಚ್ಛಾರಣೆ ದೋಷ

c)

ಕಾಗುಣಿತ ದೋಷ

d)

ಉಗ್ಗುವಿಕೆ