wayground logo

Free Printable Worksheets

NEW

Font size

S
M
L
XL
Worksheets

ರಾಜ್ಯೋತ್ಸವ ವಿಶೇಷ ರಸಪ್ರಶ್ನೆ-11

Total questions: 30

Worksheet time: 15mins

Name
Class
Date
1.
"ಕನ್ನಡ ನಾಡಿನ ಜೀವನದಿ" ಎಂಬ ಹಾಡಿಗೆ ಎಸ್. ಪಿ. ಬಿ ಅವರೊಂದಿಗೆ ದನಿಗೂಡಿಸಿದ ಗಾಯಕಿ ?
a)
ಎಸ್ ಜಾನಕಿ
b)
ವಾಣಿ ಜಯರಾಂ
c)
ಅನುರಾಧ ಪೊಡವಾಲ್
d)
ಶ್ರೇಯಾ ಘೋಷಾಲ್
2.
"ಕನ್ನಡದ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ" "ಒಂದು ಸಿನಿಮಾ ಕಥೆ" ಚಿತ್ರದ ಈ ಹಾಡಿನ ಸಂಗೀತ ನಿರ್ದೇಶಕರು ಯಾರು?
a)
ರಾಜನ್- ನಾಗೇಂದ್ರ
b)
ಉಪೇಂದ್ರ ಕುಮಾರ್
c)
ಹಂಸಲೇಖ
d)
ಶಂಕರ್ - ಗಣೇಶ
3.
"ಈ ನಾಡ ಅಂದ ಈ ತಾಣ ಚೆಂದ" ಹಾಡಿದ ಅಪರೂಪದ ನಾಯಕ ನಟ
a)
ಅನಂತನಾಗ್
b)
ಶಂಕರನಾಗ್
c)
ಸುರೇಶ್ ಹೆಬ್ಳೀಕರ್
d)
ಕಾಶೀನಾಥ
4.
ಡಾ. ರಾಜಕುಮಾರ ಅಭಿನಯದ "ಮಯೂರ" ಚಿತ್ರದಲ್ಲಿ ಕನ್ನಡದ ಈ ರಾಜಮನೆತನದ ಚಿತ್ರಣವಿದೆ.
a)
ಕದಂಬರು
b)
ರಾಷ್ಟ್ರಕೂಟರು
c)
ಚಾಲುಕ್ಯರು
d)
ಕಲಚೂರಿಗಳು
5.
"ಅಂದವೋ ಅಂದವು ಕನ್ನಡ ನಾಡು" ಈ ಹಾಡನ್ನು ಹಾಡಿದ ಹಿನ್ನೆಲೆ ಗಾಯಕ
a)
ಪಿ . ಬಿ . ಶ್ರೀನಿವಾಸ್
b)
ಕೆ.ಜೆ.ಯೇಸುದಾಸ್
c)
ಎಸ್. ಪಿ . ಬಾಲಸುಬ್ರಮಣ್ಯಂ
d)
ಡಾ. . ರಾಜಕುಮಾರ್
6.
"ಕನ್ನಡ ಮಣ್ಣಿನ ಹೆಣ್ಣು ಅಂದರೆ ಹೂವಂತೆ" ಎಂದು ಪುನೀತ್ ರಾಜಕುಮಾರ್ ಜೊತೆ ಹಾಡಿದ ಹಿನ್ನೆಲೆ ಗಾಯಕಿ
a)
ವಾಣಿ ಜಯರಾಂ
b)
ಪಿ. ಸುಶೀಲ
c)
ಸುನಿಧಿ ಚೌಹಾಣ್
d)
ಶ್ರೇಯಾ ಘೋಷಾಲ್
7.
"ಒಂದೇ ನಾಡು ಒಂದೇ ಕುಲವು"ಈ ಹಾಡಿನ ಸಾಹಿತ್ಯ ರಚನೆ ಇವರದು
a)
ಹಂಸಲೇಖ
b)
ದೊಡ್ಡ ರಂಗೇಗೌಡ
c)
ಚಿ. ಉದಯಶಂಕರ್
d)
ಆರ್. ಎನ್ ಜಯಗೋಪಾಲ್
8.
ದಕ್ಷಿಣ ಭಾರತದ ಹಾಡುಹಕ್ಕಿ' ಎಂದೇ ಖ್ಯಾತರಾಗಿರುವ ಎಸ್.ಜಾನಕಿ ರವರು ಕನ್ನಡ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಚಿತ್ರ
a)
ರಾಯರ ಸೊಸೆ
b)
ಸಾಹುಕಾರ
c)
ಶರಪಂಜರ
d)
ಅನ್ನಪೂರ್ಣ
9.
"ಕನ್ನಡದ ಕುಲದೇವಿ ಕಾಪಾಡು ಬಾ ತಾಯೇ ಮುನ್ನಡೆಯ ಕನ್ನಡದ ದಾರಿ ದೀವಿಗೆ ನೀನೆ" ಈ ಹಾಡಿಗೆ ಸಾಹಿತ್ಯ ನೀಡಿದವರು.
a)
ಹಂಸಲೇಖ
b)
ಚಿ. ಉದಯಶಂಕರ್
c)
ಜಿ. ವಿ. ಅಯ್ಯರ್
d)
ದೊಡ್ಡರಂಗೇಗೌಡ
10.
ಡಾ. ಎಸ್. ಪಿ. ಬಾಲಸುಬ್ರಮಣ್ಯಂ ಅವರು "ಇದೇ ನಾಡು ಇದೇ ಭಾಷೆ" ಎಂದು ಹಾಡಿ ಅಭಿನಯಿಸಿರುವ ಚಲನಚಿತ್ರ
a)
ನಕ್ಕರದೇ ಸ್ವರ್ಗ
b)
ತಿರುಗುಬಾಣ
c)
ನಾಗರಹಾವು
d)
ಸ್ವರ್ಗದಲ್ಲಿ ಮದುವೆ
11.
"ಕುಮಾರವ್ಯಾಸನ ಕಾವ್ಯದ ಚೆಂದ ಕವಿ ಸರ್ವಜ್ಞನ ಪದಗಳ ಅಂದ"ಈ ಹಾಡಿನ ಸಾಲುಗಳನ್ನು ಒಳಗೊಂಡ ಚಲನಚಿತ್ರ
a)
ಹೊಸಬೆಳಕು
b)
ಹುಲಿಯ ಹಾಲಿನ ಮೇವು
c)
ಹಾಲು ಜೇನು
d)
ಚಲಿಸುವ ಮೋಡಗಳು
12.
"ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು " ಎಂದು ಡಾ. ರಾಜ್ ಹಾಡಿ ಕುಣಿದದ್ದು ಈ ಊರಿನಲ್ಲಿ .
a)
ಧಾರವಾಡ
b)
ಮೈಸೂರು
c)
ಹುಬ್ಬಳ್ಳಿ
d)
ಬೆಂಗಳೂರು
13.
"ನಾನ್ ತುಂಬಾ ಹೊಸಬಾ ಬೊಸು ನಾ ಮಿಕ್ಸ್ ಕ್ಲಾಸ್ ಮಾಸ್ ನಂಗಿಲ್ಲಾ ಯಾವಾ ರೇಸು" ಈ ಹಾಡಿನ ಮೂಲಕ ಮತ್ತೊಮ್ಮೆ ಈ ನಾಯಕ ನಟನ ನೆನಪು ಮಾಡಿಕೊಳ್ಳಲಾಗಿದೆ.
a)
ಡಾ. ರಾಜಕುಮಾರ
b)
ಡಾ. ವಿಷ್ಣುವರ್ಧನ
c)
ಅಂಬರೀಷ್
d)
ಶಂಕರನಾಗ
14.
"ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ ತಾಯ ನಾಡ ಜಯಭೇರಿ ನಾವಾದೆವೆನ್ನಿ " ಎಂದು ಡಾ. ರಾಜ್ ಈ ಚಲನಚಿತ್ರದ ಮೂಲಕ ಆಹ್ವಾನಿಸಿದ್ದಾರೆ.
a)
ಕಾಸಿದ್ರೆ ಕೈಲಾಸ
b)
ಕರುಣೆಯೇ ಕುಟುಂಬದ ಕಣ್ಣು
c)
ಕಣ್ತೆರೆದು ನೋಡು
d)
ರಣಧೀರ ಕಂಠೀರವ
15.
"ಹಾಡುಬಾ ಕೋಗಿಲೆ ನಲಿದಾಡು ಬಾ ನವಿಲೇ ಸಿರಿಗನ್ನಡಾಂಬೆಯ ಜಯ ಧ್ವನಿ ಮೊಳಗಲಿ " ಎಂದು ಹಾಡಿದ ಗಾಯಕ.
a)
ಜಿ. ಕೆ ವೆಂಕಟೇಶ್
b)
ಘಂಟಸಾಲಾ
c)
ಪಿ. ಬಿ. ಶ್ರೀನಿವಾಸ್
d)
ಪೀಠಾಪುರಂ ನಾಗೇಶ್ವರ ರಾವ್
16.
ಕನ್ನಡ ನಾಡಿನ ರಸಿಕರ ಹೃದಯ ಸೂರೆಗೊಂಡ ನಾಯಕಿ ಇವಳು
a)
ಆರತಿ
b)
ಭಾರತಿ
c)
ಮಂಜುಳಾ
d)
ಕಲ್ಪನಾ
17.
"ಅ ಆ ಇ ಈ ಕನ್ನಡದಾ ಅಕ್ಷರಮಾಲೆ" ಈ ಹಾಡಿಗೆ ಎಸ್ ಜಾನಕಿಯವರೊಂದಿಗೆ ದನಿಗೂಡಿಸಿರುವ ಇನ್ನೋರ್ವ ಗಾಯಕಿ
a)
ಪಿ. ಸುಶೀಲ
b)
ಬಿ. ಕೆ. ಸುಮಿತ್ರ
c)
ವಾಣಿ ಜಯರಾಂ
d)
ಎಲ್. ಆರ್ ಈಶ್ವರಿ
18.
"ನಮ್ಮೂರು ಮೈಸೂರು ನಿಮ್ಮೂರು ಯಾವೂರು?" ಈ ಹಾಡಿಗೆ ದ್ವಾರಕೀಶ್ ಅವರೊಂದಿಗೆ ಹೆಜ್ಜೆಹಾಕಿದ ನಟಿ?
a)
ಪ್ರಮೀಳಾ ಜೋಶಾಯ
b)
ಮಾಜುಳಾ
c)
ಪದ್ಮಪ್ರಿಯ
d)
ಮಂಜುಮಾಲಿನಿ
19.
"ಕನ್ನಡ ರೋಮಾಂಚನವೀ ಕನ್ನಡ" ಎಂದು ಅಂಬರೀಷ್ ಅಭಿನಯದ ಚಿತ್ರವಿದು
a)
ಮಂಡ್ಯದ ಗಂಡು
b)
ಸೋಲಿಲ್ಲದ ಸರದಾರ
c)
ಕಲಿಯುಗ ಕರ್ಣ
d)
ಚಕ್ರವ್ಯೂಹ
20.
" ಕನ್ನಡ ಮಾತನು ಕಲಿತಿರುವೆ ಕನ್ನಡ ನಾಡನು ಕಂಡಿರುವೆ " ಎಂದು ವಿದೇಶಿ ನಟಿ ದ್ವಾರಕೀಶ್ ಅವರೊಂದಿಗೆ ಅಭಿನಯಿಸಿರುವ ಚಿತ್ರವಿದು.
a)
ನೀ ಬರೆದ ಕಾದಂಬರಿ
b)
ಆಫ್ರಿಕಾದಲ್ಲಿ ಶೀಲಾ
c)
ಸಿಂಗಪೂರ್ ನಲ್ಲಿ ರಾಜಾಕುಳ್ಳ
d)
ನೀ ತಂದ ಕಾಣಿಕೆ
21.
"ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ "ಎಂಬ ಹಾಡು ಈ ಐತಿಹಾಸಿಕ ಸ್ಥಳದಲ್ಲಿ ಚಿತ್ರೀಕರಣ ಗೊಂಡಿದೆ.
a)
ವಿಜಯಪುರ
b)
ಐಹೊಳೆ
c)
ಬಾದಾಮಿ
d)
ಹಂಪೆ
22.
ಸಂಗಮ ಚಿತ್ರದ"ಸಿರಿವಂತನಾದರೂ ಕನ್ನಡನಾಡಲ್ಲೆ ಮೆರೆವೆˌ ಭಿಕ್ಷುಕನಾದರೂ ಕನ್ನಡನಾಡಲ್ಲೆ ಮಡಿವೆ" ಹಾಡಿನ ಸ್ವರ ಸಂಯೋಜನೆ ಮಾಡಿದವರು ?
a)
ಕೆ. ಪಿ. ಸುಖದೇವ
b)
ವಾಸುದೇವರಾವ್
c)
ಸಿ. ಅಶ್ವಥ್
d)
ವೈದ್ಯನಾಥನ್
23.
"ಕನ್ನಡ ನಾಡಿನ ಹೆಮ್ಮೆಯ ರತುನ ಕೇಳೋ ಕಥೆಯನ್ನ" ಎಂಬ ಹೆಮ್ಮೆಯ ಹಾಡನ್ನು ಒಳಗೊಂಡಿರುವ ಚಲನಚಿತ್ರ?
a)
ಶರವೇಗದ ಸರದಾರ
b)
ಅಶ್ವಮೇಧ
c)
ವಿಜಯೋತ್ಸವ
d)
ವೀರಕನ್ನಡಿಗ
24.
"ಎಂಥ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು " ಎಂದು ಅಭಿಮಾನದಿಂದ ಹಾಡಿದ ನಟ
a)
ಶಂಕರನಾಗ್
b)
ಅಂಬರೀಷ್
c)
ಅನಂತನಾಗ್
d)
ವಿಷ್ಣುವರ್ಧನ್
25.
"ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು" ಈ ಹಾಡು ಕರ್ನಾಟಕದ ಯಾವ ರಾಜಮನೆತನದ ಕುರಿತಾದ ಹಾಡು ಇದಾಗಿದೆ?
a)
ಹೊಯ್ಸಳರ
b)
ಚಾಲುಕ್ಯರ
c)
ವಿಜಯನಗರದ
d)
ಕದಂಬರ
26.
"ಕರ್ನಾಟಕದ ಇತಿಹಾಸದಲಿ ಬಂಗಾರದ ಯುಗದ ಕಥೆಯನ್ನು" - ಕೃಷ್ಣ ರುಕ್ಮಣಿ ಚಿತ್ರದ ಮೂಲಕ ಹೇಳಿದ ನಿರ್ದೇಶಕ?
a)
ಭಾರ್ಗವ
b)
ದೊರೆ ಭಗವಾನ್
c)
ವಿ. ಸೋಮಶೇಖರ
d)
ವಿಜಯ್
27.
ಸಿಂಹಾದ್ರಿಯ ಸಿಂಹ ಚಿತ್ರದ " ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ " ಈ ಹಾಡಿನ ಸಾಹಿತ್ಯ ರಚನೆ ಮಾಡಿದವರು?
a)
ಎಸ್ ನಾರಾಯಣ
b)
ಚಿ ಉದಯಶಂಕರ
c)
ದೊಡ್ಡ ರಂಗೇಗೌಡ
d)
ಶ್ರೀರಂಗ
28.
ಆಕಸ್ಮಿಕ ಚಿತ್ರದ ಮೂಲಕತೆ ಈ ಸಾಹಿತಿ ಅವರದು
a)
ಅನಕೃ
b)
ತರಾಸು
c)
ಬಸವರಾಜ್ ಕಟ್ಟೀಮನಿ
d)
ನಿರಂಜನ
29.
"ಸಿಂಪಲ್ಲಾಗ್ ಹೇಳ್ತೀನ್ ಕೇಳೆ ನಮ್ಮೂರ ಭಾಷೆ" ಎಂದು ಅಪ್ಪು ಹೇಳಿದ್ದು ಈ ನಟಿಗೆ ?
a)
ಮೀರಾ ಜಾಸ್ಮಿನ್
b)
ರಮ್ಯಾ
c)
ರಕ್ಷಿತಾ
d)
ರಶ್ಮಿಕ
30.
"ನಿಮ್ಕಡೆ ಸಾಂಬಾರ್ ಅಂದ್ರೆ ನಮಕಡೆ ತಿಳಿಯೋದಿಲ್ಲ " ಎಂದು ಎಸ್. ಪಿ. ಬಿ ಅವರೊಂದಿಗೆ ಹಾಡಿದ ಹಿನ್ನೆಲೆ ಗಾಯಕಿ
a)
ಪಿ. ಲೀಲಾ
b)
ಮಾಲ್ಗುಡಿ ಶುಭಾ
c)
ಶಮಿತಾ ಮಲ್ನಾಡ್
d)
ಪಿ. ಗೀತಾ