wayground logo

Free Printable Worksheets

NEW

Font size

S
M
L
XL
Worksheets

ಸಂಖ್ಯೆಗಳೊಂದಿಗೆ ಆಟ

Total questions: 15

Worksheet time: 8mins

Name
Class
Date
1.

ಈ ಕೆಳಗಿನವುಗಳಲ್ಲಿ 60 ರ ಅಪವರ್ತನ ಯಾವುದು?

a)

5

b)

8

c)

9

d)

11

2.

20 ಕ್ಕಿಂತ ದೊಡ್ಡದಾದ 7 ರ ಅತ್ಯಂತ ಚಿಕ್ಕ ಅಪವರ್ತ್ಯ ಯಾವುದು?

a)

49

b)

35

c)

28

d)

21

3.

ಈ ಕೆಳಗಿನವುಗಳಲ್ಲಿ 12 ರ ಅಪವರ್ತ್ಯ ಯಾವುದು?

a)

35

b)

24

c)

46

d)

53

4.

4 ಮತ್ತು 6 ರ ಲ. ಸಾ.ಗು. ಎಷ್ಟು?

a)

24

b)

36

c)

12

d)

18

5.

12 ಮತ್ತು 18 ರ ಮ.ಸಾ.ಅ. ಎಷ್ಟು?

a)

2

b)

3

c)

6

d)

9

6.

ಎರಡು ಸಂಖ್ಯೆಗಳ ಮ.ಸಾ.ಅ. '1' ಆದರೆ, ಆ ಸಂಖ್ಯೆಗಳನ್ನು ಏನೆಂದು ಕರೆಯುತ್ತೇವೆ?

a)

ಅವಿಭಾಜ್ಯ ಸಂಖ್ಯೆಗಳು

b)

ಸಹ ಅವಿಭಾಜ್ಯ ಸಂಖ್ಯೆಗಳು

c)

ಭಾಜ್ಯ ಸಂಖ್ಯೆಗಳು

d)

ಸಮ ಸಂಖ್ಯೆಗಳು

7.

ಒಂದು ಸಂಖ್ಯೆಯು 3 ರಿಂದ ಭಾಗವಾಗುವುದು ಎಂದು ಹೇಗೆ ಹೇಳಬಹುದು?

a)

ಅದು 3 ರಿಂದ ಕೊನೆಯಾಗುತ್ತದೆ

b)

ಅದು ಬೆಸ ಸಂಖ್ಯೆ

c)

ಎಲ್ಲಾ ಅಂಕಿಗಳ ಮೊತ್ತ 3 ರಿಂದ ಭಾಗವಾಗಬೇಕು

d)

0 ಅಥವಾ 5 ರಿಂದ ಕೊನೆಯಾಗಬೇಕು

8.

ಅತ್ಯಂತ ಚಿಕ್ಕ ಅವಿಭಾಜ್ಯ ಸಂಖ್ಯೆ ಯಾವುದು?

a)

2

b)

3

c)

1

d)

5

9.

ಈ ಕೆಳಗಿನವುಗಳಲ್ಲಿ ಅವಿಭಾಜ್ಯ ಸಂಖ್ಯೆ ಯಾವುದು?

a)

12

b)

21

c)

25

d)

17

10.

ಭಾಜ್ಯ ಸಂಖ್ಯೆ ಎಂದರೆ............

a)

ಒಂದೇ ಒಂದು ಅಪವರ್ತನ ಹೊಂದಿರುವ ಸಂಖ್ಯೆ

b)

ಎರಡು ಅಪವರ್ತನಗಳನ್ನು ಹೊಂದಿರುವ ಸಂಖ್ಯೆ

c)

ಎರಡಕ್ಕಿಂತ ಹೆಚ್ಚು ಅಪವರ್ತನಗಳನ್ನು ಹೊಂದಿರುವ ಸಂಖ್ಯೆ

d)

1 ಮತ್ತು ಅದೇ ಸಂಖ್ಯೆಯಿಂದ ಭಾಗವಾಗುವ ಸಂಖ್ಯೆ

11.

'1' ಇದೊಂದು................

a)

ಭಾಜ್ಯ ಸಂಖ್ಯೆ

b)

ಅವಿಭಾಜ್ಯ ಸಂಖ್ಯೆ

c)

ಎರಡೂ ಹೌದು

d)

ಎರಡೂ ಅಲ್ಲ

12.

ಯಾವುದೇ ಸಂಖ್ಯೆಯ ಅತ್ಯಂತ ಚಿಕ್ಕ ಅಪವರ್ತನ( ಆ ಸಂಖ್ಯೆಯನ್ನು ಹೊರತುಪಡಿಸಿ).................

a)

0

b)

1

c)

2

d)

3

13.

6 ರ ಅಪವರ್ತನಗಳ ಮೊತ್ತ.................

a)

6

b)

8

c)

10

d)

12

14.

ಒಂದು ಸಂಖ್ಯೆಯು 2 ಮತ್ತು 3 ಎರಡರಿಂದಲೂ ಭಾಗಿಸಲ್ಪಟ್ಟರೆ ಅದು ಈ ಸಂಖ್ಯೆಯಿಂದ ಭಾಗವಾಗುವುದು..........

a)

4

b)

5

c)

6

d)

9

15.

ಈ ಕೆಳಗಿನ ಯಾವ ಸಂಖ್ಯೆಗಳ ಮ.ಸಾ.ಅ. 1 ಆಗಿದೆ?

a)

14 ಮತ್ತು 21

b)

15 ಮತ್ತು 25

c)

18 ಮತ್ತು 24

d)

14 ಮತ್ತು 15