Worksheetsಆಮ್ಲ ಪ್ರತ್ಯಾಮ್ಲ ಮತ್ತು ಲವಣಗಳು
Total questions: 19
Worksheet time: 10mins
ತಟಸ್ಥ ದ್ರಾವಣದ pHಮೌಲ್ಯವು
pH 3
pH 5
pH 7
pH 11
ಮಳೆ ನೀರಿನ pHಮೌಲ್ಯ
pHಮೌಲ್ಯ 5.6ಕ್ಕಿಂತ ಹೆಚ್ಚು
pHಮೌಲ್ಯ 5.6ಕ್ಕಿಂತ ಕಡಿಮೆ
pHಮೌಲ್ಯ 7.8ಕ್ಕಿಂತ ಹೆಚ್ಚು
pHಮೌಲ್ಯ 7.8ಕ್ಕಿಂತ ಕಡಿಮೆ
ನಮ್ಮ ದೇಹವು ------- ಯಿಂದ ------ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ
3.0 ರಿಂದ 3.8pH
4.0 ರಿಂದ 4.8pH
6.0 ರಿಂದ 6.8pH
7.0 ರಿಂದ 7.8pH
ನಮ್ಮ ಜಠರವು -------ಆಮ್ಲ ಉತ್ಪಾದಿಸುತ್ತದೆ.
ಹೈಡ್ರೋಕ್ಲೋರಿಕ್ ಆಮ್ಲ
ಸಲ್ಫ್ಯೂರಿಕ್ ಆಮ್ಲ
ನೈಟ್ರಿಕ್ ಆಮ್ಲ
ಎಥನೋಯಿಕ್ ಆಮ್ಲ
ಬಾಯಿಯಲ್ಲಿ ಹಲ್ಲಿನ ಸವೆತಕ್ಕೆ ಕಾರಣವಾದ pH.
pH 6.5 ಕ್ಕಿಂತ ಕಡಿಮೆಯಾದಾಗ
pH 7.5 ಕ್ಕಿಂತ ಕಡಿಮೆಯಾದಾಗ
pH 10.5 ಕ್ಕಿಂತ ಕಡಿಮೆಯಾದಾಗ
pH 5.5 ಕ್ಕಿಂತ ಕಡಿಮೆಯಾದಾಗ
ಇರುವೆ ಕಡಿತದಿಂದ ಬಿಡುಗಡೆಯಾಗುವ ಆಮ್ಲ
ಮೇಥೆನಾಯಕ್ ಆಮ್ಲ
ಅಸಿಟಿಕ್ ಆಮ್ಲ
ನೈಟ್ರಿಕ್ ಆಮ್ಲ
ಲ್ಯಾಕ್ಟಿಕ್ ಆಮ್ಲ
ಆಮ್ಲ ಶಾಮಕಗಳು ಕಾರ್ಯವೇನು?
ಜಠರದಲ್ಲಿರುವ ಹೆಚ್ಚುವರಿ ಆಮ್ಲವನ್ನು ತಟಸ್ಥಗೊಳಿಸುತ್ತದೆ
ಜಠರದಲ್ಲಿ ಆಮ್ಲದ ಪ್ರಮಾಣವನ್ನು ಹೆಚ್ಚಿಸುತ್ತದೆ
ಜಠರದಲ್ಲಿ ಪ್ರತ್ಯಾಮ್ಲ ಪ್ರಮಾಣವನ್ನು ಹೆಚ್ಚಿಸುತ್ತದೆ
ಜಠರದಲ್ಲಿರುವ ಹೆಚ್ಚುವರಿ ಪ್ರತ್ಯಾಮ್ಲ ವನ್ನು ತಟಸ್ಥಗೊಳಿಸುತ್ತದೆ
ಈ ಕೆಳಗಿನವುಗಳಲ್ಲಿ ಯಾವುದು ಪ್ರಬಲ ಆಮ್ಲ ವಾಗಿದೆ.
pH 5
pH 7
pH 3
pH 10
ದ್ರಾವಣದಲ್ಲಿ OH ಅಯಾನುಗಳ ಸಾರತೆ ಹೆಚ್ಚಿರುತ್ತದೆ.
pH 6
pH 7
pH 8
pH 10
ಕ್ಷಾರಗಳು ಎಂದರೇನು ?
ನೀರಿನಲ್ಲಿ ವಿಲೀನವಾಗದ ಪ್ರತ್ಯಾಮ್ಲಗಳನ್ನು ಕ್ಷಾರಗಳು ಎನ್ನುವರು
ನೀರಿನಲ್ಲಿ ವಿಲೀನವಾಗುವ ಪ್ರತ್ಯಾಮ್ಲಗಳನ್ನು ಕ್ಷಾರಗಳು ಎನ್ನುವರು
ನೀರಿನಲ್ಲಿ ವಿಲೀನವಾಗದ ಆಮ್ಲಗಳನ್ನು ಕ್ಷಾರಗಳು ಎನ್ನುವರು
ನೀರಿನಲ್ಲಿ ವಿಲೀನವಾಗುವ ಆಮ್ಲಗಳನ್ನು ಕ್ಷಾರಗಳು ಎನ್ನುವರು
ಆಮ್ಲ ಸಾರರಿಕ್ತ ಗೊಳಿಸುವಿಕೆ ಎಂದರೇನು ?
ಆಮ್ಲವು ನೀರಿನೊಂದಿಗೆ ಮಿಶ್ರಣ ಮಾಡಿದಾಗ ಏಕಮಾನ ಗಾತ್ರದಲ್ಲಿ ಅಯಾನುಗಳ ಸಾರತೆ ಹೆಚ್ಚಾಗುತ್ತದೆ
ಆಮ್ಲವು ನೀರಿನೊಂದಿಗೆ ಮಿಶ್ರಣ ಮಾಡಿದಾಗ ಏಕಮಾನ ಗಾತ್ರದಲ್ಲಿ ಅಯಾನುಗಳ ಸಾರತೆ ಕಡಿಮೆಯಾಗುತ್ತದೆ
ಆಮ್ಲವು ನೀರಿನೊಂದಿಗೆ ಮಿಶ್ರಣ ಮಾಡಿದಾಗ ಏಕಮಾನ ಗಾತ್ರದಲ್ಲಿ ಆಯಾನುಗಳ ಸಾರತೆ ಬದಲಾವಣೆಯಾಗುವುದಿಲ್ಲ
ಆಮ್ಲವು ನೀರಿನೊಂದಿಗೆ ಮಿಶ್ರಣ ಮಾಡಿದಾಗ ಲವಣ ಮತ್ತು ಅನಿಲ ಬಿಡುಗಡೆಗೊಳ್ಳುತ್ತದೆ
ತಟಸ್ಥೀಕರಣ ಕ್ರಿಯೆ ಎಂದರೇನು ?
ಆಮ್ಲ ಮತ್ತು ಪ್ರತ್ಯಾಮ್ಲಗಳು ನಡುವಿನ ಕ್ರಿಯೆ ಲವಣ ಮತ್ತು ನೀರನ್ನು ಉಂಟುಮಾಡುತ್ತದೆ
ಆಮ್ಲ ಮತ್ತು ಪ್ರತ್ಯಾಮ್ಲಗಳ ನಡುವಿನ ಕ್ರಿಯೆ ಲವಣ ಮತ್ತು ಹೈಡ್ರೋಜನ್ ಅನಿಲ ಉಂಟುಮಾಡುತ್ತದೆ
ಆಮ್ಲ ಮತ್ತು ಪ್ರತ್ಯಾಮ್ಲಗಳ ನಡುವಿನ ಕ್ರಿಯೆ ನೀರು ಮತ್ತು ಅನಿಲ ಬಿಡುಗಡೆ ಮಾಡುತ್ತದೆ
ಆಮ್ಲ ಮತ್ತು ಲೋಹಗಳ ನಡುವಿನ ಕ್ರಿಯೆ
ಲೋಹಿಯಾ ಆಕ್ಸೈಡ್ ಗಳನ್ನು ಪ್ರತ್ಯಾಮ್ಲ ಆಕ್ಸೈಡುಗಳು ಎನ್ನುವರು ಕಾರಣವೇನು ?
ಲೋಹಿಯಾ ಆಕ್ಸೈಡ್ ಗಳು ಪ್ರತ್ಯಾಮ್ಲದೊಂದಿಗೆ ವರ್ತಿಸಿ ಲವಣ ಮತ್ತು ಅನಿಲ ಉಂಟುಮಾಡುತ್ತದೆ ಇದು ಪ್ರತ್ಯಾಮ್ಲದೊಂದಿಗೆ ಆಮ್ಲದ ಕ್ರಿಯೆಯಂತೆ ಇರುವುದರಿಂದ
ಲೋಹಿಯಾ ಆಕ್ಸೈಡ್ ಗಳು ಪ್ರತ್ಯಾಮ್ಲದೊಂದಿಗೆ ವರ್ತಿಸಿ ಲವಣ ಮತ್ತು ನೀರನ್ನು ಉಂಟುಮಾಡುತ್ತದೆ ಇದು ಪ್ರತ್ಯಾಮ್ಲದೊಂದಿಗೆ ಆಮ್ಲದ ಕ್ರಿಯೆಯಂತೆ ಇರುವುದರಿಂದ
ಲೋಹಿಯಾ ಆಕ್ಸೈಡ್ ಗಳು ಆಮ್ಲದೊಂದಿಗೆ ವರ್ತಿಸಿ ಲವಣ ಮತ್ತು ನೀರನ್ನು ಉಂಟುಮಾಡುತ್ತದೆ ಇದು ಪ್ರತ್ಯಾಮ್ಲದೊಂದಿಗೆ ಆಮ್ಲದ ಕ್ರಿಯೆಯಂತೆ ಇರುವುದರಿಂದ
ಲೋಹಿಯಾ ಆಕ್ಸೈಡ್ ಗಳು ಪ್ರತ್ಯಾಮ್ಲದೊಂದಿಗೆ ವರ್ತಿಸಿ ಲವಣ ಮತ್ತು ಹೈಡ್ರೋಜನ್ ಅನಿಲ ಉಂಟುಮಾಡುತ್ತದೆ ಇದು ಪ್ರತ್ಯಾಮ್ಲದೊಂದಿಗೆ ಆಮ್ಲದ ಕ್ರಿಯೆಯಂತೆ ಇರುವುದರಿಂದ
ಕ್ಯಾಲ್ಸಿಯಂ ಕಾರ್ಬೊನೇಟ್ ಇನ ವಿವಿಧ ರೂಪಗಳು
ಸುಣ್ಣದ ಕಲ್ಲು ಸೀಮೆಸುಣ್ಣ ಮತ್ತು ಅಮೃತ ಶಿಲೆಗಳು
ಸುಣ್ಣದ ಕಲ್ಲು ವಾಷಿಂಗ್ ಸೋಡಾ ಮತ್ತು ಬ್ಲೀಚಿಂಗ್ ಪುಡಿ
ಸುಣ್ಣದ ಕಲ್ಲು ಮೆಗ್ನೀಷಿಯಂ ಹಾಲು ಮತ್ತು ಕ್ಯಾಲ್ಸಿಯಂ ಫಾಸ್ಫೇಟ್
ಸುಣ್ಣದ ಕಲ್ಲು ಕಾಸ್ಟಿಕ್ ಸೋಡಾ ಮತ್ತು ಸಲ್ಫೂರಿಕ್ ಆಮ್ಲ
ಈ ಕೆಳಗಿನ ಸರಿಯಾದ ಹೇಳಿಕೆಯನ್ನು ಗುರುತಿಸಿ
ಲೋಹದ ಕಾರ್ಬೊನೇಟ್ ಗಳು ಆಮ್ಲದೊಂದಿಗೆ ವರ್ತಿಸಿ ಲವಣ ಮತ್ತು ನೀರನ್ನು ಉಂಟುಮಾಡುತ್ತದೆ
ಲೋಹದ ಕಾರ್ಬೋನೇಟ್ ಗಳು ಆಮ್ಲದೊಂದಿಗೆ ವರ್ತಿಸಿ ಲವಣ, ಕಾರ್ಬನ್ ಡೈಆಕ್ಸೈಡ್ ಮತ್ತು ನೀರನ್ನು ಉಂಟುಮಾಡುತ್ತದೆ
ಲೋಹದ ಕಾರ್ಬೋನೇಟ್ ಗಳು ಆಮ್ಲದೊಂದಿಗೆ ವರ್ತಿಸಿ ಲವಣ ಮತ್ತು ಹೈಡ್ರೋಜನ್ ಅನಿಲವನ್ನು ಉಂಟುಮಾಡುತ್ತದೆ
ಲೋಹದ ಕಾರ್ಬೋನೇಟ್ ಆಮ್ಲದೊಂದಿಗೆ ವರ್ತಿಸಿ ಕಾರ್ಬನ್ ಡೈಆಕ್ಸೈಡ್ ಮತ್ತು ನೀರು ಉಂಟುಮಾಡುತ್ತದೆ
ಘ್ರಾಣ ಸೂಚಕಗಳು ಎಂದರೇನು ?
ಕೆಲವು ವಸ್ತುಗಳ ವಾಸನೆ ಆಮ್ಲ ಮತ್ತು ಪ್ರತ್ಯಾಮ್ಲ ಮಾಧ್ಯಮದಲ್ಲಿ ಬದಲಾಗುತ್ತದೆ ಇವುಗಳನ್ನು ಘ್ರಾಣ ಸೂಚಕಗಳು ಎನ್ನುವರು
ಕೆಲವು ವಸ್ತುಗಳ ವಾಸನೆ ಆಮ್ಲ ಮತ್ತು ಪ್ರತ್ಯಾಮ್ಲ ಮಾಧ್ಯಮದಲ್ಲಿ ಬದಲಾಗುವುದಿಲ್ಲ ಇವುಗಳನ್ನು ಘ್ರಾಣ ಸೂಚಕಗಳು ಎನ್ನುವರು
ಕೆಲವು ವಸ್ತುಗಳ ರುಚಿಯು ಆಮ್ಲ ಮತ್ತು ಪ್ರತ್ಯಾಮ್ಲ ಮಾಧ್ಯಮದಲ್ಲಿ ಬದಲಾಗುತ್ತದೆ ಇವುಗಳನ್ನು ಘ್ರಾಣ ಸೂಚಕಗಳು ಎನ್ನುವರು
ಕೆಲವು ವಸ್ತುಗಳ ರುಚಿಯು ಆಮ್ಲ ಮತ್ತು ಪ್ರತ್ಯಾಮ್ಲ ಮಾಧ್ಯಮದಲ್ಲಿ ಬದಲಾಗುವುದಿಲ್ಲ ಇವುಗಳನ್ನು ಘ್ರಾಣ ಸೂಚಕಗಳು ಎನ್ನುವರು
ಆಮ್ಲ ಮತ್ತು ಪ್ರತ್ಯಾಮ್ಲಗಳನ್ನು ಪರೀಕ್ಷಿಸಲು ಬಳಸುವ ನೈಸರ್ಗಿಕ ಸೂಚಕ.
ಮಿಥೈಲ್ ಆರೆಂಜ್
ಲಿಟ್ಮಸ್
ಫೀನಾಫ್ತಲೀನ್
ಕಾಟನ್ ಬ್ಲೂ
ಆಮ್ಲಿಯ ಗುಣಗಳು
ಕಹಿ ರುಚಿ ಹೊಂದಿದ್ದು ನೀಲಿ ಲಿಟ್ಮಸ್ ಅನ್ನು ಕೆಂಪು ಬಣ್ಣಕ್ಕೆ ಬದಲಾಯಿಸುತ್ತದೆ
ಕಹಿ ರುಚಿಯನ್ನು ಹೊಂದಿದ್ದು ಕೆಂಪು ಲಿಟ್ಮಸ್ ಅನ್ನು ಬಣ್ಣಕ್ಕೆ ಬದಲಾಯಿಸುತ್ತದೆ
ಹುಳಿ ರುಚಿ ಹೊಂದಿದ್ದು ನೀಲಿ ಲಿಟ್ಮಸ್ ಅನ್ನು ಕೆಂಪು ಬಣ್ಣಕ್ಕೆ ಬದಲಾಯಿಸುತ್ತದೆ
ಹುಳಿ ರುಚಿ ಹೊಂದಿದ್ದು ಕೆಂಪು ಲಿಟ್ಮಸ್ ಅನ್ನು ನೀಲಿ ಬಣ್ಣಕ್ಕೆ ಬದಲಾಯಿಸುತ್ತದೆ
ಪ್ರತ್ಯಾಮ್ಲೀಯ ಗುಣಗಳು
ಕಹಿ ರುಚಿ ಹೊಂದಿದ್ದು ನೀಲಿ ಲಿಟ್ಮಸ್ ಅನ್ನು ಕೆಂಪು ಬಣ್ಣಕ್ಕೆ ಬದಲಾಯಿಸುತ್ತದೆ
ಕಹಿ ರುಚಿಯನ್ನು ಹೊಂದಿದ್ದು ಕೆಂಪು ಲಿಟ್ಮಸ್ ಅನ್ನು ಬಣ್ಣಕ್ಕೆ ಬದಲಾಯಿಸುತ್ತದೆ
ಹುಳಿ ರುಚಿ ಹೊಂದಿದ್ದು ನೀಲಿ ಲಿಟ್ಮಸ್ ಅನ್ನು ಕೆಂಪು ಬಣ್ಣಕ್ಕೆ ಬದಲಾಯಿಸುತ್ತದೆ
ಹುಳಿ ರುಚಿ ಹೊಂದಿದ್ದು ಕೆಂಪು ಲಿಟ್ಮಸ್ ಅನ್ನು ನೀಲಿ ಬಣ್ಣಕ್ಕೆ ಬದಲಾಯಿಸುತ್ತದೆ
