wayground logo

Free Printable Worksheets

NEW

Font size

S
M
L
XL
Worksheets

ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು

Total questions: 17

Worksheet time: 9mins

Name
Class
Date
1.

ಕೊಟ್ಟಿರುವ ಚಿತ್ರವನ್ನು ಗಮನಿಸಿ

P ಮತ್ತು Q ಗಳು ಪ್ರತಿನಿಧಿಸುತ್ತಿರುವ ಕಾಂತದ್ರುವಗಳು ಕ್ರಮವಾಗಿ

a)

ದಕ್ಷಿಣ(S) ಹಾಗೂ ದಕ್ಷಿಣ(S)

b)

ಉತ್ತರ(N) ಹಾಗೂ ದಕ್ಷಿಣ(S)

c)

ಉತ್ತರ(N) ಹಾಗೂ ದಕ್ಷಿಣ(S)

d)

ಉತ್ತರ(N) ಹಾಗೂ ಉತ್ತರ(N)

2.

ಒಂದು ಸೋಲನೈಡ್ ನ ಒಳಭಾಗದಲ್ಲಿ ಕಾಂತೀಯ ಬಲ ರೇಖೆಗಳು ಸಮಾಂತರವಾಗಿರುವಂತೆ ಗೋಚರಿಸುತ್ತವೆ ಇದಕ್ಕೆ ಕಾರಣ ಸೋಲನೈಡ್ ಒಳಭಾಗದಲ್ಲಿ ಕಾಂತ ಕ್ಷೇತ್ರವು

a)

ಅತ್ಯಂತ ಹೆಚ್ಚಾಗಿರುತ್ತದೆ

b)

ಏಕರೂಪವಾಗಿರುತ್ತದೆ

c)

ಸೊನ್ನೆಯಾಗಿರುತ್ತದೆ

d)

ವಿದ್ಯುತ್ ಪ್ರವಾಹದಿಂದ ಉಂಟಾಗಿರುತ್ತದೆ

3.

ಇವುಗಳಲ್ಲಿ ಯಾವುದು ಕಾಂತೀಯ ಬಲ ರೇಖೆಗಳ ಲಕ್ಷಣವಲ್ಲ

a)

ಕಾಂತಿಯ ಬಲ ರೇಖೆಗಳು ಧ್ರುವಗಳಲ್ಲಿ ದಟ್ಟವಾಗಿರುತ್ತವೆ

b)

ಕಾಂತೀಯ ಬಲ ರೇಖೆಗಳು ಆವೃತ ಜಾಲಗಳಾಗಿವೆ

c)

ಕಾಂತಿಯ ಬಲ ರೇಖೆಗಳು ಒಂದನ್ನೊಂದು ಛೇದಿಸುತ್ತದ.

d)

ಕಾಂತಿಯ ಬಲವಿಕೆಗಳು ಉತ್ತರ ಧ್ರುವದಲ್ಲಿ ಉತ್ಸರ್ಜಿತವಾಗಿ ದಕ್ಷಿಣ ಧ್ರುವದಲ್ಲಿ ವಿಲೀನಗೊಳ್ಳುತ್ತವೆ

4.

ಬಲಗೈ ಹೆಬ್ಬೆರಳು ನಿಯಮದಂತೆ ವಿದ್ಯುತ್ ಹರಿಯುತ್ತಿರುವ ನೇರವಾಹಕ ತಂತಿಯನ್ನು ಹೆಬ್ಬೆರಳು ಮೇಲ್ಮುಖವಾಗಿ ಇರುವಂತೆ ಹಿಡಿದಿರುವಿರೆಂದು ಭಾವಿಸಿಕೊಳ್ಳಿ ಆಗ ಕಾಂತ ಕ್ಷೇತ್ರದ ಕಾಂತೀಯ ಬಲ ರೇಖೆಗಳ ದಿಕ್ಕು

a)

ಕೆಳಮುಖವಾಗಿರುತ್ತದೆ

b)

ಮೇಲ್ಮುಖವಾಗಿರುತ್ತದೆ

c)

ಅಪ್ರದಕ್ಷಿಣಕಾರವಾಗಿರುತ್ತದೆ

d)

ಪ್ರದಕ್ಷಿಣಕಾರವಾಗಿರುತ್ತದೆ

5.

ವಿದ್ಯುತ್ ಪ್ರವಾಹವಿರುವ ನೇರ ಸೋಲನೈಡ್ ನ ಒಳಭಾಗದಲ್ಲಿರುವ ಕಾಂತ ಕ್ಷೇತ್ರವು

a)

ಕೆಳಮುಖವಾಗಿರುತ್ತದೆ ಎಲ್ಲಾ ಬಿಂದುಗಳಲ್ಲಿ ಸಮನಾಗಿರುತ್ತದೆ

b)

ಸೊನ್ನೆಯಾಗಿರುತ್ತದೆ

c)

ನಾವು ಅದರ ತುದಿಯ ಕಡೆಗೆ ಚಲಿಸಿದಂತೆ ಕಡಿಮೆಯಾಗುತ್ತದೆ

d)

ನಾವು ಅದರ ತುದಿಯ ಕಡೆಗೆ ಚಲಿಸಿದಂತೆ ಹೆಚ್ಚಾಗುತ್ತದೆ

6.

ಫ್ಲೆಮಿಂಗನ ಎಡಗೈ ನಿಯಮದಲ್ಲಿ ಮಧ್ಯದ ಬೆರಳು ಸೂಚಿಸುವ ದಿಕ್ಕು

a)

ಕಾಂತ ಕ್ಷೇತ್ರ

b)

ವಿದ್ಯುತ್ ಪ್ರವಾಹ

c)

ವಾಹಕದ ಚಲನೆ

d)

ಪ್ರೇರಿತ ವಿದ್ಯುತ್ ಪ್ರವಾಹ

7.

ಕುದುರೆ ಲಾಳಾಕೃತಿ ಕಾಂತದ ಧ್ರುವಗಳ ನಡುವೆ ಒಂದು ವಿದ್ಯುತ್ ಪ್ರವಾಹವಿರುವ ಸಲಾಕೆಯನ್ನು ಇರಿಸಲಾಗಿದೆ ಸಲಾಕೆ ಯ ಸ್ಥಾನಪಲ್ಲಟವು ಗರಿಷ್ಠವಾಗಲು ವಿದ್ಯುತ್ ಪ್ರವಾಹದ ದಿಕ್ಕು ಮತ್ತು ಕಾಂತಕ್ಷೇತ್ರದ ದಿಕ್ಕುಗಳ ನಡುವೆ ಇರಬೇಕಾದ ಕೋನ

a)

0 ಡಿಗ್ರಿ

b)

45 ಡಿಗ್ರಿ

c)

90 ಡಿಗ್ರಿ

d)

180 ಡಿಗ್ರಿ

8.

ವಿದ್ಯುತ್ ಪ್ರವಹಿಸುತ್ತಿರುವ ವೃತ್ತಾಕಾರದ ವಾಹಕ ಸುರುಳಿಯ ಸ್ವತ್ತುಗಳ ಸಂಖ್ಯೆಯನ್ನು ಹೆಚ್ಚಿಸಿದಾಗ ಆಗ ಕಾಂತಕ್ಷೇತ್ರವು ಹೆಚ್ಚಾಗುವ ಪ್ರಮಾಣ

a)

100 ಪಟ್ಟು

b)

10 ಪಟ್ಟು

c)

20 ಪಟ್ಟು

d)

1000 ಪಟ್ಟು

9.

ವಿದ್ಯುತ್ ಪ್ರವಾಹವಿರುವ ವಾಹಕ ತಂತಿಯ ಬಳಿ ಸೂಜಿಕಾಂತವನ್ನು ತಂದಾಗ ದಿಕ್ ಪಲ್ಲಟ ಗೊಳ್ಳುತ್ತದೆ ಸೂಜಿ ಕಾಂತವು ದಿಕ್ ಪಲ್ಲಟ ಗೊಳ್ಳುವ ದಿಕ್ಕು ಅವಲಂಬಿಸಿರುವುದು

a)

ವಾಹಕದಉದ್ದ

b)

ವಾಹಕದಲ್ಲಿನ ವಿದ್ಯುತ್ ಪ್ರವಾಹದ ಪ್ರಮಾಣ

c)

ವಾಹಕದಲ್ಲಿನ ವಿದ್ಯುತ್ ಪ್ರವಾಹದ ದಿಕ್ಕು

d)

ಸೂಜಿ ಕಾಂತದ ಪ್ರಬಲತೆ

10.

ಕಾಂತಿಯ ಬಲ ರೇಖೆಗಳ ಸಾಂದ್ರತೆಯು ಹೆಚ್ಚಾಗಿದ್ದಲ್ಲಿ ಕಾಂತಕ್ಷೇತ್ರದ ಬಲವು

a)

ಹೆಚ್ಚಾಗಿರುತ್ತದೆ

b)

ಕಡಿಮೆಯಾಗಿರುತ್ತದೆ

c)

ಸೊನ್ನೆಯಾಗಿರುತ್ತದೆ

d)

ತಟಸ್ಥವಾಗಿರುತ್ತದೆ

11.

ಫ್ಲೆಮಿಂಗನ ಎಡಗೈ ನಿಯಮದಲ್ಲಿ ಕಾಂತಕ್ಷೇತ್ರವನ್ನು ಪ್ರತಿನಿಧಿಸುವ ಬೆರಳು

a)

ತೋರುಬೆರಳು

b)

ಹೆಬ್ಬೆರಳು

c)

ಮಧ್ಯ ಬೆರಳು

d)

ಕಿರು ಬೆರಳು

12.

ಮನೆಗಳಲ್ಲಿ ವಿದ್ಯುತ್ ಉಪಕರಣಗಳಿಗೆ ಓವರ್ಲೋಡ್ ನಿಂದ ಉಂಟಾಗುವ ಹಾನಿಯನ್ನು ತಪ್ಪಿಸಲು ಬಳಸುವ ಸರಿಯಾದ ಸುರಕ್ಷಾ ಸಾಧನ

a)

ಭೂಸಂಪರ್ಕ ವ್ಯವಸ್ಥೆ ಕಲ್ಪಿಸುವುದು

b)

ವಿದ್ಯುತ್ ಪರಿವರ್ತಕಗಳನ್ನು ಅಳವಡಿಸುವುದು

c)

ಫ್ಯೂಸ್ ಗಳ ಬಳಕೆ

d)

ವಿದ್ಯುತ್ ಮೀಟರ್ ಅಳವಡಿಸುವುದು

13.

5A ವಿದ್ಯುತ್ ಪ್ರವಾಹ ವನ್ನು ಪ್ರವಹಿಸುವಂತೆ ಮಾಡಲು ಮಂಡಲಗಳಲ್ಲಿ ಈ ಕೆಳಗಿನ ಯಾವ ವಿದ್ಯುತ್ ಉಪಕರಣವು ಬಳಕೆಗೆ ಸೂಕ್ತವಲ್ಲ

a)

ಬಲ್ಬ್

b)

ಮಿಕ್ಸರ್

c)

ಫ್ಯಾನ್

d)

ಗೀಸರ್

14.

ಶಾರ್ಟ್ ಸರ್ಕ್ಯೂಟ್ ಸಂದರ್ಭದಲ್ಲಿ ವಿದ್ಯುತ್ ಪ್ರವಾಹವು

a)

ತುಂಬಾ ಕಡಿಮೆಯಾಗುತ್ತದೆ

b)

ತಟಸ್ಥವಾಗಿರುತ್ತದೆ

c)

ಬಹಳ ಹೆಚ್ಚಾಗುತ್ತದೆ

d)

ಸತತವಾಗಿ ಬದಲಾಗುತ್ತದೆ

15.

ದಂಡ ಕಾಂತ ಒಂದರಲ್ಲಿ ಕಾಂತೀಯ ಬಲವು ಅಧಿಕವಾಗಿರುವ ಭಾಗ

a)

N ತುದಿಯಲ್ಲಿ

b)

S ತುದಿಯಲ್ಲಿ

c)

N ಮತ್ತು 'S ಗಳ ನಡುವೆ

d)

ಎರಡೂ ತುದಿಗಳಲ್ಲಿ

16.

ಈ ಕೆಳಗಿನವುಗಳಲ್ಲಿ ಯಾವುದು ಉದ್ದನೆಯ ನೇರ ತಂತಿಯ ಸುತ್ತಲಿನ ಕಾಂತಕ್ಷೇತ್ರವು ಸರಿಯಾಗಿ ವಿವರಿಸುತ್ತದೆ

a)

ಕಾಂತಕ್ಷೇತ್ರವು ತಂತಿಗೆ ಲಂಬವಾದ ನೇರ ರೇಖೆಗಳನ್ನು ಹೊಂದಿರುತ್ತದೆ

b)

ಕಾಂತಕ್ಷೇತ್ರವು ತಂತಿಗೆ ಸಮಾಂತರವಾದ ರೇಖೆಗಳನ್ನು ಹೊಂದಿರುತ್ತದೆ

c)

ಕಾಂತಕ್ಷೇತ್ರವು ತಂತಿಯಿಂದ ಉದ್ಭವಿಸಿರುವ ಕಿರಣಗಳಂತಹ ರೇಖೆಗಳಾಗಿರುತ್ತವೆ

d)

ತಂತಿಯು ಕಾಂತ ಕ್ಷೇತ್ರದ ಏಕ ಕೇಂದ್ರೀಯ ಕಾಂತೀಯ ಬಲ ರೇಖೆಗಳ ಕೇಂದ್ರವಾಗಿರುತ್ತದೆ

17.

ಈ ಮೇಲಿನ ಚಿತ್ರವನ್ನು ಗಮನಿಸಿದ ವಿದ್ಯಾರ್ಥಿ ಒಬ್ಬ ಈ ಕೆಳಗಿನ ಯಾವ ತೀರ್ಮಾನಕ್ಕೆ ಬರುತ್ತಾನೆ

a)

ಕಾಂತಿಯ ಬಲ ರೇಖೆಗಳು ಉತ್ತರದ್ರುವದಲ್ಲಿ ಉತ್ಸರ್ಜಿತವಾಗಿ ದಕ್ಷಿಣ ಧ್ರುವದಲ್ಲಿ ವಿಲೀನಗೊಳ್ಳುತ್ತವೆ

b)

ಕಾಂತೀಯ ಬಲ ರೇಖೆಗಳ ಸಾಂದ್ರತೆಯು ಹೆಚ್ಚಾಗಿದ್ದಾಗ ಕಾಂತ ಕ್ಷೇತ್ರದ ಬಲವು ಹೆಚ್ಚಾಗಿರುತ್ತದೆ

c)

ಯಾವುದೇ ಎರಡು ಕಾಂತಿಯ ಬಲ ರೇಖೆಗಳು ಒಂದನ್ನೊಂದು ಛೇದಿಸುವುದಿಲ್ಲ

d)

ಈ ಮೇಲಿನ ಎಲ್ಲವೂ ಸರಿ