wayground logo

Free Printable Worksheets

NEW

Font size

S
M
L
XL
Worksheets

SOCIAL

Total questions: 40

Worksheet time: 30mins

Name
Class
Date
1.

ಯುರೋಪಿನ ದೇಶಗಳ ನಡುವೆ ತೀವ್ರ ಪೈಪೋಟಿ ಸೃಷ್ಟಿಸಿದ ಅಂಶವೆಂದರೆ

a)

ಕೈಗಾರಿಕಾ ಕ್ರಾಂತಿಯು ಮತ್ತು ನೂತನ ಆವಿಷ್ಕಾರಗಳು

b)

ಪುನರುಜ್ಜೀವನ ಮತ್ತು ಭಾರತ ಸುಧಾರಣೆಗಳು

c)

ಭೂ ಅನ್ವೇಷಣೆಗಳು ಮತ್ತು ಮತ ಸುಧಾರಣೆಗಳು

d)

ಪುನರುಜ್ಜೀವನ ಮತ್ತು ಸಾಮ್ರಾಜ್ಯಶಾಹಿಗಳು

2.

ಯುರೋಪಿಯನ್ ದೇಶಗಳ ನಡುವೆ ಉಂಟಾದ ಸಂಕೀರ್ಣ ಒಪ್ಪಂದಗಳು ಈ ಸಮಸ್ಯೆಗಳನ್ನು ಜ್ವಲಂತ ಗೊಳಿಸಿದವು

a)

ರಾಜಕೀಯ ತಾಂತ್ರಿಕ ಸಂಬಂಧಗಳ ಸಮಸ್ಯೆ

b)

ಅಂತರಾಷ್ಟ್ರೀಯ ವ್ಯಾಪಾರ ಸಮಸ್ಯೆ

c)

ಭೌಗೋಳಿಕ ಗಡಿ ಸಮಸ್ಯೆ

d)

ಜಾಗತಿಕ ಆರ್ಥಿಕ ಸಮಸ್ಯೆ

3.

ರಷ್ಯಾದಲ್ಲಿ ಜರುಗಿದ 1917 ಫೆಬ್ರುವರಿ ಕ್ರಾಂತಿಯ ಪ್ರಮುಖ ಪರಿಣಾಮವೆಂದರೆ

a)

ಲೆನಿನ್ ರಷ್ಯಾದ ನೂತನ ಅಧ್ಯಕ್ಷನಾದ ನು

b)

ಮಹಾಯುದ್ಧದಿಂದ ರಷ್ಯಾ ಹಿಂದೆ ಸರಿಯಿತು

c)

ರಷ್ಯಾ ದಲ್ಲಿ ಕಮ್ಯುನಿಸ್ಟ್ ಸರ್ಕಾರ ಸ್ಥಾಪನೆಗೊಂಡಿತು

d)

ಎರಡನೇ ನಿಕೋಲಸ್ ದೇಶ ತ್ಯಜಿಸಿ ಓಡಿಹೋದನು

4.

ಮೊದಲನೇ ಮಹಾಯುದ್ಧದ ವೇಳೆ 1917ರಲ್ಲಿ ರಷ್ಯಾ ಜರ್ಮನಿ ಎಂದಿಗೆ ಯುದ್ಧಗಳು ಒಪ್ಪಂದವನ್ನು ಮಾಡಿಕೊಳ್ಳಲು ಕಾರಣ

a)

ರಾಷ್ಯಾದಲ್ಲಿ ಸಮಾಜವಾದಿ ಕ್ರಾಂತಿ ಜರುಗಿತು

b)

ರಷ್ಯಾವು ಜರ್ಮನಿಯ ಬಣವನ್ನು ಸೇರಿತು

c)

ಅಮೆರಿಕ ಯುದ್ದ ಪ್ರವೇಶಿಸಿತು

d)

ರಷ್ಯಾ ಇಟಲಿಯೊಂದಿಗೆ ಯುದ್ಧದಲ್ಲಿ ಸೋತಿತ್ತು

5.

ಸೋವಿಯತ್ ರಷ್ಯಾದಲ್ಲಿ ಸಮಾಜವಾದ ಕುಸಿಯಲು ಕಾರಣ

a)

ಗೋಬೆ೯ಚೋವನ ಸುಧಾರಣೆಗಳು

b)

ಕಾರ್ಲ್ ಮಾಕ್ಸ೯ ನ ವೈಜ್ಞಾನಿಕ ಸಮಾಜವಾದ

c)

ಅಕ್ಟೋಬರ್ ಕ್ರಾಂತಿ

d)

ಜೋಸೆಫ್ ಸ್ಟಾಲಿನ್ ಸರ್ವಾಧಿಕಾರ

6.

ಹೋಲೋಕಾಸ್ಟ್ ಎಂದರೆ

a)

ಹಿಟ್ಲರ್ ನಡೆಸಿದ ಸಾಮೂಹಿಕ ಜನರ ಪ್ರೀತಿ

b)

ಹಿಟ್ಲರ್ ನಡೆಸಿದ ಸಾಮೂಹಿಕ ಜನರಿಗೆ ಭೂಮಿ ಹಂಚಿಕೆ

c)

ಹಿಟ್ಲರ್ ನಡೆಸಿದ ಸಾಮೂಹಿಕ ಕಗ್ಗೊಲೆಗಳು

d)

ಹಿಟ್ಲರ್ ನಡೆಸಿದ ಸಾಮೂಹಿಕ ವಿವಾಹ

7.

ಚೀನಾದಲ್ಲಿ ಕಮ್ಯುನಿಸ್ಟರ ದೀರ್ಘ ಪ್ರಯಾಣವನ್ನು ಕೈಗೊಳ್ಳಲು ಕಾರಣ

a)

ವಿದೇಶಿಯರನ್ನು ದೇಶದಿಂದ ಹೊರದುವುದು

b)

ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು

c)

ರೈತರ ಬೆಂಬಲವನ್ನು ಪಡೆಯುವುದು

d)

ಪ್ರಜಾಪ್ರಭುತ್ವ ಕ್ರಾಂತಿಯನ್ನು ಅಂತ್ಯ ಗೊಳಿಸುವುದು

8.

1. ಕಾರ್ಪೊರೇಟ್ ತಂತ್ರಗಾರಿಕೆ ಹೆಚ್ಚು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕಾದರೆ

a)

ಅತ್ಯಂತ ಕಠಿಣ ಕಾನೂನುಗಳನ್ನು ಜಾರಿಯಾಗಬೇಕು

b)

ಸಮಾಜದಲ್ಲಿ ಸುಸ್ಥಿರ ಜಾಗೃತಿ ಮೂಡಬೇಕು

c)

ಕಾರ್ಪೊರೇಟ್ ಸಂಸ್ಥೆಗಳು ನಿಷೇಧಿಸಬೇಕು

d)

ಲೋಕಾಯುಕ್ತ ಸಂಸ್ಥೆಗಳನ್ನು ಸ್ಥಾಪಿಸಬೇಕು

9.

ನಿರುದ್ಯೋಗ ಭ್ರಷ್ಟಾಚಾರ ತಾರತಮ್ಯ ಕೋಮುವಾದ ಭಯೋತ್ಪಾದಕತೆ ಕಾರ್ಪೊರೇಟ್ ತಂತ್ರಗಾರಿಕೆ ಎಲ್ಲಾ ಅಂಶಗಳು ಹೀಗೆ ಸೂಚಿಸುತ್ತದೆ

a)

ಸ್ವಾತಂತ್ರ್ಯದ ನಂತರ ಭಾರತ ಎದುರಿಸುತ್ತಿರುವ ಸಮಸ್ಯೆಗಳು

b)

ಭಾರತ ಸ್ವಾತಂತ್ರ್ಯದ ನಂತರ ಎದುರಿಸಿದ ಸಮಸ್ಯೆಗಳು ಅಲ್ಲ

c)

ಸ್ವತಂತ್ರ ಭಾರತದ ನಂತರ ಭಾರತವು ಭ್ರಷ್ಟಾಚಾರ ಮಾತ್ರ ಸಮಸ್ಯೆ ಎದುರಿಸಿತು

d)

ಮೇಲಿನ ಯಾವುದೂ ಅಲ್ಲ

10.

ಮಿತಿಮೀರಿದ ಜನಸಂಖ್ಯೆ ಹೆಚ್ಚದ ತಂತ್ರಜ್ಞಾನಗಳ ಬಳಕೆ ನೈಸರ್ಗಿಕ ಸಂಪನ್ಮೂಲಗಳ ಕೊರತೆ ಕೃಷಿಯ ಮೇಲಿನ ಅಧಿಕ ಅವಲಂಬನೆ ಮನೆ ಗೃಹ ಕೈಗಾರಿಕೆಗಳ ನಾಶ ಕೌಶಲ್ಯ ಆಧಾರಿತ ಶಿಕ್ಷಣದ ಕೊರತೆ ಎಲ್ಲಾ ಅಂಶಗಳು ಇದಕ್ಕೆ ಸಂಬಂಧಿಸಿದೆ

a)

ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಲು ಕಾರಣವಲ್ಲ

b)

ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗದಿರಲು ಕಾರಣವಾಗಿದೆ

c)

ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಇಲ್ಲ

d)

ಭಾರತದಲ್ಲಿ ನಿರುದ್ಯೋಗ ಸಮಸ್ಯೆಯು ಹೆಚ್ಚಾಗದಿರಲು ಕಾರಣವಾಗಿವೆ

11.

ಸಮಾಜದಲ್ಲಿ ಅಪನಂಬಿಕೆ ಮತ್ತು ಭಯದ ಸೃಷ್ಟಿ ಗುಂಪುಗಾರಿಕೆ ಮತ್ತು ರಾಜಕೀಯ ಪೈಪೋಟಿ ಸಾಮಾಜಿಕ ನೆಮ್ಮದಿಯ ನಾಶ ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಧಕ್ಕೆ ವ್ಯಕ್ತಿಗಳ ಜೀವ ಹಾಗೂ ಸ್ವತ್ತುಗಳ ನಾಶ ಎಲ್ಲಾ ಅಂಶಗಳು ಕಾರಣವಾಗಿದೆ

a)

ಭ್ರಷ್ಟಾಚಾರ

b)

ಮತಿಯವಾದ

c)

ಜಾತಿವಾದ

d)

ಕೋಮುವಾದ

12.

ಭಾರತದಲ್ಲಿ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವ ನೆರೆರಾಷ್ಟ್ರಗಳ ಎಂದರೆ

a)

ನೇಪಾಳ ಮತ್ತು ಬಾಂಗ್ಲಾದೇಶ

b)

ಪಾಕಿಸ್ತಾನ ಮತ್ತು ಬಾಂಗ್ಲಾದೇಶ

c)

ಪಾಕಿಸ್ತಾನ ಮತ್ತು ಚೀನಾ

d)

ಶ್ರೀಲಂಕಾ ಮತ್ತು ನೇಪಾಳ

13.

ಸಂವಿಧಾನದ 371 ನೇ ವಿಧಿಯು ಕರ್ನಾಟಕದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಹಾಗಾದರೆ 371 ಜೆ ವಿಧಿ ಸಂಬಂಧಿಸಿದ್ದು

a)

ಭ್ರಷ್ಟಾಚಾರದ ನಿಯಂತ್ರಣ

b)

ಪಂಚಾಯತ್ ರಾಜ್ ವ್ಯವಸ್ಥೆಯ ಜಾರಿ

c)

ಪ್ರಾದೇಶಿಕ ಅಸಮತೋಲನ ನಿವಾರಣೆ

d)

ಬಡತನ ಮತ್ತು ನಿರುದ್ಯೋಗ ನಿವಾರಣೆ

14.

ಭಾರತದಲ್ಲಿ ನಿರುದ್ಯೋಗಕ್ಕೆ ಕಾರಣವಾಗುವ ಪ್ರಮುಖ ಪ್ರಕ್ರಿಯೆ ಎಂದರೆ

a)

ಜಾಗತೀಕರಣ

b)

ಖಾಸಗೀಕರಣ

c)

ಉದಾರಿಕರಣ

d)

ರಾಷ್ಟ್ರೀಕರಣ

15.

ಪಂಚಶೀಲ ತತ್ವಗಳು ಹಾಕಿದ ಎರಡು ರಾಷ್ಟ್ರ ಗಳು

a)

ಭಾರತ ಮತ್ತು ಪಾಕಿಸ್ತಾನ

b)

ಭಾರತ ಮತ್ತು ಶ್ರೀಲಂಕಾ

c)

ಭಾರತ ಮತ್ತು ಚೀನಾ

d)

ಭಾರತ ಮತ್ತು ಅಮೆರಿಕ

16.

ಭಾರತ ಅಲಿಪ್ತ ವಿದೇಶಾಂಗ ನೀತಿಯನ್ನು ಅನುಸರಿಸಿತು. ಅದರ ಅರ್ಥವೇನೆಂದರೆ ಭಾರತವು

a)

ಅಮೇರಿಕಾ ಬಣ್ಣವನ್ನು ಸೇರಿತು

b)

ರಸ್ಯ ಬಣ್ಣವನ್ನು ಸೇರಿತ್ತು

c)

ಎರಡು ಬಣಗಳ ಅಂತರ ಕಾಪಾಡಿತ್ತು

d)

ವಿಸ್ತರಣವಾದ ನೀತಿಯನ್ನು ಅನುಸರಿಸಿ

17.

ಯಾವುದೇ ರಾಷ್ಟ್ರ ಆಂತರಿಕವಾಗಿ ಬಾಹ್ಯ ವಾಗಿ ಆಗಿರಲಿ ಇತರೆ ರಾಷ್ಟ್ರಗಳಿಗೆ ಅಧೀನವಾಗಿರದೆ ಸ್ವತಂತ್ರವಾಗಿ ಇರುವುದನ್ನು ರಾಷ್ಟ್ರವನ್ನು ಹೀಗೆನ್ನುವರು

a)

ಪ್ರಜಾಪ್ರಭುತ್ವ

b)

ರಾಷ್ಟ್ರ

c)

ಭಾರತ

d)

ಸಾರ್ವಭೌಮ

18.

ಭಾರತವು ಹೊಸತು ಸಾಹಿತ್ಯವನ್ನು ಪ್ರಬಲವಾಗಿ ವಿರೋಧಿಸುತ್ತಿದ್ದೆ ಏಕೆಂದರೆ ಭಾರತವು

a)

ವಸಾಹತುಶಾಹಿತ್ವ ವನ್ನು ಅನುಸರಿಸುತ್ತಿದೆ

b)

ಹೊಸತು ಸಾಹಿತ್ಯವನ್ನು ವಿರೋಧಿಸಿ ಸ್ವಾತಂತ್ರ್ಯ ಗೊಳಿಸಿದೆ

c)

ಅಲಿಪ್ತ ನೀತಿಯನ್ನು ಅನುಸರಿಸುತ್ತಿದೆ

d)

ಯಾವುದೇ ಹೊಸತು ರಾಷ್ಟ್ರವನ್ನು ಹೊಂದಿಲ್ಲ

19.

ಭಾರತವು 1949 ಮತ್ತು 1955 ರಲ್ಲಿ ದೆಹಲಿ ಹಾಗೂ ಬಾಂಡೂಂಗ್ ಗಳಲ್ಲಿ ಜರುಗಿದ ಏಷ್ಯಾ ರಾಷ್ಟ್ರಗಳ ಸಮ್ಮೇಳನದಲ್ಲಿ ಈ ಕೆಳಗಿನ ಯಾವ ತನ್ನ ನಿಲುವನ್ನು ಪ್ರತಿಪಾದಿಸಿತು

a)

ಪಂಚಶೀಲ ತತ್ವಗಳ ನ್ನು ಪ್ರತಿಪಾದಿಸಿತು

b)

ಅಲಿಪ್ತ ನೀತಿಯನ್ನು ವಿರೋಧಿಸಿತು

c)

ವಸಾಹತು ಶಾಹಿತ್ವವನ್ನು ವಿರೋಧಿಸಿತ್ತು

d)

ನಿಶಸ್ತ್ರೀಕರಣ ಪ್ರತಿಪಾದಿಸಿತ್ತು

20.

1965 & 1971 ರಲ್ಲಿ ನಡೆದ ಪಾಕಿಸ್ತಾನ ಯುದ್ಧಗಳು ಲಾಲ್ಬಹದ್ದೂರ್ಶಾಸ್ತ್ರಿ ಮತ್ತು ಇಂದಿರಾಗಾಂಧಿಯವರು ವಿದೇಶಾಂಗ ನೀತಿಯನ್ನು ಅಳವಡಿಸಿಕೊಂಡಿದ್ದರು

a)

ಸಾಮ್ರಾಜ್ಯಶಾಹಿತ್ವ ವಿದೇಶಾಂಗ ನೀತಿ

b)

ತಟಸ್ಥ ವಿದೇಶಾಂಗ ನೀತಿ

c)

ವಸಾಹತುಶಾಹಿತ್ವ ವನ್ನು ವಿದೇಶಾಂಗ ನೀತಿ

d)

ಸವಾಲಿಗೆ ಸವಾಲಿನ ವಿದೇಶಾಂಗ ನೀತಿ

21.

ರಾಷ್ಟ್ರೀಯ ಹಿತಾಸಕ್ತಿಗಳು ಭೌಗೋಳಿಕ ಅಂಶಗಳು ರಾಜಕೀಯ ಪರಿಸ್ಥಿತಿ ಆರ್ಥಿಕ ವ್ಯವಸ್ಥೆ ರಕ್ಷಣಾ ಸಾಮರ್ಥ್ಯ ಜನಾಭಿಪ್ರಾಯ ಅಂತರಾಷ್ಟ್ರೀಯ ಪರಿಸರ ಎಲ್ಲಾ ಅಂಶಗಳು ಯಾವುದಕ್ಕೆ ಸಂಬಂಧಿಸಿದೆ

a)

ವಿದೇಶಾಂಗ ನೀತಿಯಲ್ಲಿ ಅಡಕವಾಗಿರುವ ಜ್ಯೋತಿಗಳು

b)

ವಿದೇಶಾಂಗ ನೀತಿಯಲ್ಲಿ ಅಡಕವಾಗಿರುವ ಪ್ರಾಣಗಳು

c)

ವಿದೇಶಾಂಗ ನೀತಿಯಲ್ಲಿ ಅಡಕವಾಗಿರುವ ಸಂಗತಿಗಳು

d)

ವಿದೇಶಾಂಗ ನೀತಿಯಲ್ಲಿ ಅಡಕವಾಗಿರುವ ಸಂಗತಿಗಳಲ್ಲ

22.

ಸ್ವಾತಂತ್ರ್ಯದ ನಂತರ ಪಾಂಡಿಚೇರಿ ಕಾರ್ಯಕ್ರಮ ಮತ್ತು ಚಂದ್ರನಾಗೂರಗಳು ಯಾರ ಅಧೀನದಲ್ಲಿದ್ದವು.

a)

ಬ್ರಿಟಿಷರು

b)

ಪೋರ್ಚುಗೀಸರು

c)

ಡಚ್ಚರು

d)

ಫ್ರೆಂಚರು

23.

ಲಕ್ಷಾಂತರ ನಿರಾಶ್ರಿತರ ಸಮಸ್ಯೆ, ಕೋಮುಗಲಭೆ ಸರ್ಕಾರ ರಚನೆ, ದೇಶಿಯ ಸಂಸ್ಥಾನ ವಿಲೀನಿಕರಣ, ಹಿಂದುಳಿದ, ಆರ್ಥಿಕತೆ ಸಾಮಾಜಿಕ ಅಸಮಾನತೆ ಈ ಎಲ್ಲಾ ಅಂಶಗಳು ಏನನ್ನು ಸೂಚಿಸುತ್ತವೆ

a)

ಭಾರತ ಸ್ವತಂತ್ರ ಗಳಿಸಿದ ಸಮಯದಲ್ಲಿ ಎದುರಿಸುವ ಸಮಸ್ಯೆಗಳಲ್ಲ.

b)

ಭಾರತ ಸ್ವಾತಂತ್ರ್ಯಗಳಿಸಿದ ಸಮಯದಲ್ಲಿ ಎದುರಿಸಿದ ಸಮಸ್ಯೆಗಳಾಗಿವೆ

c)

. ಸ್ವತಂತ್ರ ಪಾಕಿಸ್ತಾನ ಸ್ವತಂತ್ರ ಗೊಂಡಾಗ ಪಾಕಿಸ್ತಾನ ಸಮಸ್ಯೆಗಳಾಗಿವೆ

d)

ಮೇಲಿನ ಯಾವುದೂ ಅಲ್ಲ

24.

ಹೈದ್ರಾಬಾದ್ ನಿಜಾಮರ ಸೈನಿಕ ಪಡೆಯನ್ನು ಹೀಗೆಂದು ಕರೆಯುತ್ತಾರೆ

a)

ಕ್ರೂರ ಪಡೆ

b)

. ಪಿರಂಗಿ ಪಡೆ

c)

ಕೆಂಪಂಗಿ ದಳ

d)

.ರಜಾಕರು

25.

ಪೊಟ್ಟಿ ಶ್ರೀರಾಮುಲು ಯಾರು

a)

ದೇಶ ಸ್ವಾತಂತ್ರ್ಯಗಳನ್ನು ಉಪವಾಸ ಮಾಡಿದನು

b)

ತಮಿಳುನಾಡು ರಾಜ್ಯ ರಚನೆಗಾಗಿ ಉಪವಾಸ ಮಾಡಿದವನು

c)

ಆಂಧ್ರಪ್ರದೇಶ ರಚನೆಗಾಗಿ ಉಪವಾಸ ಮಾಡಿದವನು

d)

ಕರ್ನಾಟಕ ರಚನೆಗಾಗಿ ಉಪವಾಸ ಮಾಡಿದವನು

26.

ದೇಶೀಯ ಸಂಸ್ಥಾನಗಳ ವಿಲೀನೀಕರಣ ಪ್ರಕ್ರಿಯೆಯಲ್ಲಿ ತೀವ್ರ ಪ್ರತಿರೋಧ ತೋರಿದ ಸಂಸ್ಥಾನಗಳೆಂದರೆ.

a)

. ಮೈಸೂರು ಜುನಾಗಡ್ ಹೈದರಾಬಾದ್

b)

ಹೈದರಾಬಾದ್ ಜುನಾಗಢ್ ಜಮ್ಮು-ಕಾಶ್ಮೀರ

c)

. ಜಮ್ಮು ಕಾಶ್ಮೀರ ಹೈದರಾಬಾದ್

d)

ಜುನಾಗಡ್ ಮೈಸೂರು ಜಮ್ಮು-ಕಾಶ್ಮೀರ

27.

ಬಾಂಗ್ಲಾದಿಂದ ಬಂದ ಬಹುತೇಕ ನಿರಾಸಿತರು ಬಂಗಾಳದಲ್ಲಿ ಮಾತ್ರ ನೆಲೆಯೂರಲು ಪ್ರಯತ್ನಿಸಿದರು ಏಕೆಂದರೆ

a)

ಅವರಿಗೆ ಬಂಗಾಳಿ ಭಾಷೆ ಮಾತ್ರ ಪರಿಚಯವಿತ್ತು

b)

ಅಲ್ಲಿ ಬಹುಸಂಖ್ಯಾತರು ಮುಸ್ಲಿಮರಾಗಿದ್ದರು

c)

ಬಂಗಾರ ಅತ್ಯಂತ ವಿಶಾಲ ರಾಜ್ಯವಾಗಿತ್ತು

d)

ಬಂಗಾರು ಬಾಂಗ್ಲಾದೇಶ ಸಮೀಪ ಇತ್ತು

28.

ಈ ಕೆಳಗಿನ ಯಾವ ತಿದ್ದುಪಡಿಯ ಮೂಲಕ ಸಂವಿಧಾನಕ್ಕೆ ಸಮಾಜವಾದಿ ಮತ್ತು ಜಾತ್ಯಾತೀತ ಎಂಬ ಪದಗಳನ್ನು ಸೇರಿಸಲಾಗಿದೆ

a)

32ನೇ ತಿದ್ದುಪಡಿ

b)

.42ನೇ ತಿದ್ದುಪಡಿ

c)

.45ನೇ ತಿದ್ದುಪಡಿ

d)

46ನೇ ತಿದ್ದುಪಡಿ

29.

19ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ವಿರೋಧಿ ಆಕ್ರೋಶವನ್ನು ಭಾರತದ ರೈತ ಮತ್ತು ಬುಡಕಟ್ಟುಗಳು ವ್ಯಕ್ತಪಡಿಸಲು ಕಾರಣವೇನು?

a)

ಬ್ರಿಟಿಷರು ತಂದ ಶಾಸನಗಳು

b)

ಬ್ರಿಟಿಷರ ಆಕ್ರಮಣಕಾರಿ ನೀತಿ

c)

ಬರಗಾಲ ಮತ್ತು ಆರ್ಥಿಕ ನೀತಿ

d)

ಸುಧಾರಣಾ ನೀತಿ

30.

ವರ್ಣಾಕ್ಯೂಲರ ಪ್ರೆಸ್ ಕಾಯ್ದೆಯನ್ನು ಲಾರ್ಡ್ ಲಿಟ್ಟನ್ ಜಾರಿಗೆ ತರಲು ಕಾರಣವೇನು ?

a)

ಸ್ವಾತಂತ್ರ್ಯ ಹೋರಾಟಗಾರರಿಗೆ ಜೈಲಿಗೆ ತಳ್ಳಲು

b)

ಕಾಂಗ್ರೇಸ್ ನ್ನು ನಿರ್ನಾಮ ಮಾಡಲು

c)

ಕಂದಾಯ ಪದ್ದತಿಯನ್ನು ಜಾರಿ ಮಾಡಲು

d)

ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು

31.

ಭಾರತದ ಸಂಪತ್ತು ಇಂಗ್ಲೆಂಡಿಗೆ ಹರಿದು ಹೋಗಲು ಕಾರಣ

a)

ಪ್ರತಿಕೂಲ ಸಂದಾಯ

b)

ಆಮದು ಮತ್ತು ರಪ್ತು ಹೆಚ್ಚಳ

c)

ಆಮದು ಕಡಿಮೆ ರಪ್ತು ಹೆಚ್ಚಳ

d)

ಅನೂಕೂಲ ಸಂದಾಯ

32.

ಯಾರನ್ನು ರಾಜಕೀಯ ಬಿಕ್ಷುಕರು ಎಂದು ಕರೆಯಲ್ಪಟ್ಟಿತ್ತು ?

a)

ತೀವ್ರಗಾಮಿಗಳು

b)

ಕ್ರಾಂತಿಕಾರಿಗಳು

c)

ಬ್ರಿಟಿಷರು

d)

ಮಂದಗಾಮಿಗಳು

33.

ಬಾಲಗಂಗಾಧರ ತಿಲಕರು ಈ ಕೆಳಗಿನ ಯಾವ ಪತ್ರಿಕೆಯನ್ನು ಆಂಗ್ಲ ಭಾಷೆಯಲ್ಲಿ ಹೊರಡಿಸಿದರು ?

a)

ಮರಾಠ

b)

ಕೇಸರಿ

c)

ಗೀತಾರಹಸ್ಯ

d)

ಗಧರ್

34.

ಯಾವಾಗ ಬ್ರಿಟಿಷರು ಬಂಗಾಳವನ್ನು ವಿಭಜಿಸಿದರು ?

a)

1909

b)

1919

c)

1911

d)

1905

35.

ಈ ಕೆಳಗಿನ ಯಾರು ತೀವ್ರಗಾಮಿಗಳಾಗಿಯೂ ಮತ್ತು ಕ್ರಾಂತಿಕಾರಿಗಳಾಗಿಯೂ ಗುರುತಿಸಿಕೊಂಡಿದ್ದರು ?

a)

ಬಾಲ ಗಂಗಾಧರ ತಿಲಕ್

b)

ಲಾಲಾ ಲಜಪತರಾಯ್

c)

ಅರಬಿಂದೋ ಘೋಷ್

d)

ಬಿಪಿನ್ ಚಂದ್ರಪಾಲ್

36.

ಅಮೇರಿಕಾದಲ್ಲಿ ಉದಯವಾದ ಕ್ರಾಂತಿಕಾರಿ ಸಂಘಟನೆ ಯಾವುದು ?

a)

ಲೋಟಸ್ ಮತ್ತು ಡಾಗರ್

b)

ಗಧರ್

c)

ಅನುಶೀಲನ ಸಮಿತಿ

d)

ಅಭಿನವ ಭಾರತ್

37.

.ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ

1. 1919ರಲ್ಲಿ ಜಾರಿಗೆ ತಂದ ರೌಲೆತ್ ಕಾಯ್ದೆಯನ್ನು ಜಾರಿಗೆ ತಂದಿದ್ದರ ಉದ್ದೇಶ

a)

ಹೋರಾಟಗಾರರಿಗೆ ಮಣಿದು ಜಾರಿಗೆ ತರಲಾಯಿತು

b)

ಭಾರತೀಯ ಕಾಂಗ್ರೇಸನ್ನು ಹಣಿಯಲು

c)

ಭಾರತೀಯ ರಾಷ್ಟ್ರೀಯವಾದಿಗಳನ್ನು ನಿಯಂತ್ರಿಸಲು

d)

ಬ್ರಿಟಿಷ್ ಅಧಿಕಾರಿಗಳಿಗೆ ಬೆಂಬಲಿಸಲು

38.

ಖೇಡ ಸತ್ಯಾಗ್ರಹವನ್ನು ಗಾಂಧೀಜಿಯವರು ಏಕೆ ಕೈಗೊಂಡರು ?

a)

ಹತ್ತಿಗಿರಣಿಯ ಕಾರ್ಮಿಕರ ರಕ್ಷಣೆಗೆ

b)

ನೀಲಿ ಬೆಳೆಗಾರರ ರಕ್ಷಣೆಗೆ

c)

ಕಾರ್ಮಿಕರನ್ನು ಶೋಷಣೆಯಿಂದ ಮುಕ್ತಮಾಡಲು

d)

ಬ್ರಿಟಿಷರ ತೆರಿಗೆಯ ಹೊರೆ ಸಂಬಂದಿತವಾಗಿ

39.

ರವೀಂದ್ರನಾಥ ಠಾಗೋರ್ ರವರು ನೈಟ್ ಹುಡ್ ಪದವಿಯನ್ನು ಬ್ರಿಟಿಷ್ ಸರ್ಕಾರಕ್ಕೆ ವಾಪಾಸ ನೀಡಲು ಕಾರಣ

a)

ರೌಲೆತ್ ಕಾಯ್ದೆ ವಿರೋಧಿಸಲು

b)

ಜಲೀಯನ್ ವಾಲಾಬಾಗ ಹತ್ಯಕಾಂಡ ವಿರೋದಿಸಲು

c)

ಗಾಂಧೀಜಿಯ ಅಸಹಕಾರ ಚಳುವಳಿಯನ್ನು ವಿರೋಧಿಸಿ

d)

ಗಾಂಧೀಜಿಯ ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಂಡಿದ್ದರಿಂದ

40.

ಚೌರಿ ಚೌರ ಘಟನೆ ನಡೆದಿದ್ದು

a)

ಪೆಬ್ರವರಿ 5 1922

b)

ಪೆಬ್ರವರಿ 22 1922

c)

ಮಾರ್ಚ 10 1922

d)

ಪೆಬ್ರವರಿ 5 1923