NEW
Font size
Worksheetsಅಧ್ಯಾಯ 8 ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ
Total questions: 19
Worksheet time: 10mins
1 )ಮಹಾತ್ಮ ಗಾಂಧೀಜಿಯವರ ಪೂರ್ಣ ಹೆಸರೇನು ?
A) ಕರಮಚಂದ ಮೋಹನದಾಸ ಗಾಂಧಿ
B) ಮೋಹನದಾಸ ಕರಮಚಂದ ಗಾಂಧಿ
C) ಮೋಹನದಾಸ ರಾಮದಾಸ ಗಾಂಧಿ
D) ಮೋಹನದಾಸ ಕೃಷ್ಣದಾಸ ಗಾಂಧಿ
2) ಮಹಾತ್ಮ ಗಾಂಧೀಜಿಯವರು ಸತ್ಯಾಗ್ರಹ ಎಂಬ ಸಾಮಾಜಿಕ ಅವಿಷ್ಕಾರವನ್ನು ಮೊದಲ ಬಾರಿಗೆ ಪ್ರಯೋಗಿಸಿದ್ದು ಯಾವ ದೇಶದಲ್ಲಿ ?
A) ಇಂಗ್ಲೆಂಡ
B)ದಕ್ಷಿಣ ಆಫ್ರಿಕ
C) ಇಟಲಿ
D) ರಷ್ಯಾ
3) ನೀಲಿ ಬೆಳೆಯಿಂದ ಸಂತ್ರಸ್ತರಾದ ರೈತರ ಪರವಾಗಿ ಚಂಪಾರಣ್ಯ ದಲ್ಲಿ ಹೋರಾಟ ಮಾಡಿದವರು ಯಾರು ?
ಭಾವಚಿತ್ರ ನೋಡಿ ಉತ್ತರಿಸಿರಿ
4) ಮಹಾತ್ಮ ಗಾಂಧೀಜಿ ಅವರು ತಮ್ಮ ಸಿದ್ಧಾಂತಗಳನ್ನು ಯಾವ ಪತ್ರಿಕೆಗಳಲ್ಲಿ ವ್ಯಕ್ತಪಡಿಸಿದ್ದಾರೆ ?
A) ಕೇಸರಿ ಮತ್ತು ಮರಾಠ
B) ಯಂಗ್ ಇಂಡಿಯಾ ಮತ್ತು ಯುವ ಬಂಗಾಳಿ
C) ಯಂಗ್ ಇಂಡಿಯಾ ಮತ್ತು ಹರಿಜನ್
D) ಮರಾಠ ಮತ್ತು ಹರಿಜನ
5) ಸತ್ಯಾಗ್ರಹ ಪದದ ಅರ್ಥ ?
A) ಅಸತ್ಯ ಮಾತನಾಡುವುದು
B) ಹಿಂಸಾತ್ಮಕ ಹೋರಾಟ ಮಾಡುವುದು
C) ನ್ಯಾಯ ಕೇಳುವುದು
D) ಸತ್ಯವನ್ನು ಆಗ್ರಹಿಸುವುದು
6) ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ ವರ್ಷ ಯಾವುದು ?
A) 1918
B) 1919
C) 1920
D) 1921
7) ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಯಾವ ಕಾಯ್ದೆ ವಿರೋಧಿಸಿ ನಡೆದ ಚಳುವಳಿಯಾಗಿತ್ತು ?
A) ಅಸಹಕಾರ ಚಳುವಳಿ
B) ಕಾನೂನು ಭಂಗ ಚಳುವಳಿ
C) ರೌಲತ್ ಕಾಯ್ದೆ
D) ಮಾಡು ಇಲ್ಲವೇ ಮಡಿ ಹೋರಾಟ
8) ಭಾರತದಲ್ಲಿ ಖಿಲಾಫತ್ ಚಳುವಳಿಯ ರೂವಾರಿಗಳು ಯಾರು ?
A) ಮಹಾತ್ಮ ಗಾಂಧೀಜಿ
B) ಮಹಮ್ಮದ್ ಅಲಿ, ಶೌಕತ್ ಅಲಿ
C) ಸುಭಾಷ್ ಚಂದ್ರ ಬೋಸ್
D) ಮೋತಿಲಾಲ್ ನೆಹರು
9) ಅಸಹಕಾರ ಚಳುವಳಿ ಆರಂಭಗೊಂಡ ವರ್ಷ ಯಾವುದು ?
A) 1918
B) 1919
C) 1920
D) 1924
10) ಅಸಹಕಾರ ಚಳುವಳಿಯ ಸಂದರ್ಭದಲ್ಲಿ ನೈಟ್ ಹುಡ್ ಪ್ರಶಸ್ತಿಯನ್ನು ವಾಪಸ್ ಮಾಡಿದವರು ಯಾರು ?
A) ಮಹಾತ್ಮ ಗಾಂಧಿ
B) ರಾಸ್ ಬಿಹಾರಿ ಬೋಸ್
C) ರವೀಂದ್ರನಾಥ್ ಟಾಗೋರ್
D) ಜ್ಯೋತಿ ಬಾಪುಲೆ
11) ಯಾವ ಘಟನೆಯಿಂದ ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ವಾಪಸ್ ಪಡೆದರು ?
A) ರೌಲತ್ ಕಾಯ್ದೆ
B) ಜಲಿಯನ್ ವಾಲಾಬಾಗ್ ದುರಂತ
C) ಚೌರಿಚೌರ ಘಟನೆ
D) ಮಾಡು ಇಲ್ಲವೇ ಮಡಿ ಹೋರಾಟ
12) 1919ರ ಮಾಂಟೆಗೊ ಚೆಮ್ಸ್ ಫರ್ಡ್ ಕಾಯ್ದೆ ಅನುಷ್ಠಾನ ಮತ್ತು ಅದರ ಪರಿಣಾಮಗಳನ್ನು ವಿಮರ್ಶಿಸುವ ಸಲುವಾಗಿ ಭಾರತಕ್ಕೆ ಆಗಮಿಸಿದ ಕಮಿಷನ್ ಯಾವುದು ?
A) ಮೆಕಾಲೆ ಆಯೋಗ
B) ಸೈಮನ್ ಕಮಿಷನ್
C) ವಾರನ್ ಹೇಸ್ಟಿಂಗ್ ಕಮಿಷನ್
D) ಲಾರ್ಡ್ ಕ್ಯಾನಿಂಗ್ ಕಮಿಷನ್
14) ಸವಿನಯ ಕಾನೂನು ಭಂಗ ಚಳುವಳಿ ಆರಂಭಿಸಿದ್ದು ಯಾವ ಸ್ಥಳದಿಂದ ?
A) ದಂಡಿ
B) ಸಾಬರಮತಿ
C) ಅಂಕೋಲಾ
D) ಲಾಹೋರ
15) ನೇತಾಜಿಯವರು ಕಟ್ಟಿದ ಹೊಸ ಪಕ್ಷದ ಹೆಸರೇನು ?
A) ಸ್ವತಂತ್ರ ಕಾರ್ಮಿಕ ಪಕ್ಷ
B) ಸಮಾಜವಾದಿ ಪಕ್ಷ
C) ಫಾರ್ವರ್ಡ್ ಬ್ಲಾಕ್
D) ಜನತಾ ಪಕ್ಷ
16) 'ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡಲು ಪ್ರಮಾಣಿಸುತ್ತೆವೆ' ಎಂದವರು ಯಾರು ?
A) ಜವಾಹರ್ಲಾಲ್ ನೆಹರು
B) ಮಹಾತ್ಮ ಗಾಂಧಿ
C) ಡಾ. ಅಂಬೇಡ್ಕರ್
D) ಸುಭಾಷ್ ಚಂದ್ರ ಬೋಸ್
17) 'ಸಾಮಾಜಿಕ ಸಮಾನತೆ ಇಲ್ಲದ ರಾಜಕೀಯ ಸ್ವಾತಂತ್ರ್ಯ ಅರ್ಥಹೀನ' ಎಂದು ಹೇಳಿದವರು ಯಾರು?
A) ಸುಭಾಷ್ ಚಂದ್ರ ಬೋಸ್
B) ಮಹಾತ್ಮ ಗಾಂಧಿ
C) ಬಾಲ ಗಂಗಾಧರ ತಿಲಕ
D) ಡಾ, ಬಿ ಆರ್ ಅಂಬೇಡ್ಕರ್
ಈ ಭಾವಚಿತ್ರದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಯಾರು ?
ಲಾಲಾ ಲಜಪತ ರಾಯ
ಸುಭಾಶಚಂದ್ರ ಬೋಸ
ಮಹಾತ್ಮ ಗಾಂಧೀಜಿ
ಜವಹರಲಾಲ ನೆಹರು
ಕೆಳಗಿನ ಭಾವಚಿತ್ರದಲ್ಲಿರುವ ಗುಂಪಿಗೆ ಸೇರದ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಿರಿ ?
ಕೆಳಗಿನ ಭಾವಚಿತ್ರದಲ್ಲಿರುವ ಮಂದಗಾಮಿ ಸ್ವಾತಂತ್ರ್ಯ ಹೋರಾಟಗಾರನನ್ನು ಗುರುತಿಸಿರಿ ?
