NEW
Font size
S
M
L
XL
Worksheets3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ವ್ಯಾಕರಣ-೨
Total questions: 50
Worksheet time: 25mins
Name
Class
Date
1.
ನಾಮಪದ ಕ್ರಿಯಾಪದಗಳಂತೆ ಲಿಂಗ, ವಚನ, ವಿಭಕ್ತಿ ಗಳಿಂದ ರೂಪ ಬೇಧವನ್ನು ಹೊಂದದೆ ಏಕರೂಪವಾಗಿ ಇರುವ ಶಬ್ದಗಳು
a)
ಕೃದಂತಗಳು
b)
ಅವ್ಯಯಗಳು
c)
ಜೋಡು ನುಡಿಗಳು
d)
ದ್ವಿರುಕ್ತಿಗಳು
2.
ಸಾಮಾನ್ಯ ಅವ್ಯಯಕ್ಕೆ ಉದಾಹರಣೆ
a)
ದಬದಬ
b)
ಆಹಾ !
c)
ಸಾಕು
d)
ಚೆನ್ನಾಗಿ
3.
ಆದ್ದರಿಂದ : ಸಂಬಂಧಾರ್ಥಕಾವ್ಯಯ : : ನಾನೇ : ------
a)
ಅವಧಾರಣಾರ್ಥಕಾವ್ಯಯ
b)
ಭಾವಸೂಚಕಾವ್ಯಯ
c)
ಅನುಕರಣಾವ್ಯಯ
d)
ಸಾಮಾನ್ಯ ಅವ್ಯಯ
4.
ಸುಯ್ಯನೆ - ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ
a)
ಸಾಮಾನ್ಯಾವ್ಯಯ
b)
ಅನುಕರಣಾವ್ಯಯ
c)
ಕೃದಂತಾವ್ಯಯ
d)
ತದ್ದಿತಾಂತ ಅವ್ಯಯ
5.
ಮನಸ್ಸಿನಲ್ಲಿ ಉಂಟಾಗುವ ಕೋಪ, ಹರ್ಷ, ದುಃಖ, ಮೆಚ್ಚುಗೆ, ಆಕ್ಷೇಪ ಭಾವನೆಗಳನ್ನು ವ್ಯಕ್ತಪಡಿಸುವಾಗ ಬಳಸುವ ಅವ್ಯಯಗಳು
a)
ಸಂಬಂಧಾರ್ಥಕಾವ್ಯಯ
b)
ಸಾಮಾನ್ಯಾವ್ಯಯ
c)
ತದ್ದಿತಾಂತಾವ್ಯಯ
d)
ಭಾವಸೂಚಕ ಅವ್ಯಯ
6.
ಕ್ರಿಯಾರ್ಥಕಾವ್ಯಯಕ್ಕೆ ಉದಾಹರಣೆ
a)
ಉಂಟು, ಬೇಕು
b)
ಬೇಡ, ಅಹುದು
c)
ಸಾಕು, ಅಲ್ಲ
d)
ಇವೆಲ್ಲವೂ
7.
ಮೆಲ್ಲನೆ : ಸಾಮಾನ್ಯಾವ್ಯಯ : : ಅಥವಾ : -------
a)
ಅನುಕರಣಾವ್ಯಯ
b)
ಸಂಬಂಧಾರ್ಥಕಾವ್ಯಯ
c)
ಭಾವಸೂಚಕಾವ್ಯಯ
d)
ಸಾಮಾನ್ಯಾವ್ಯಯ
8.
ಒಂದು ನಿಶ್ಚಯಾರ್ಥದಲ್ಲಿ ಇರುವ ಅವ್ಯಯ
a)
ಅನುಕರಣಾವ್ಯಯ
b)
ಅವಧಾರಣಾರ್ಥಕಾವ್ಯಯ
c)
ತದ್ದಿತಾಂತಾವ್ಯಯ
d)
ಕ್ರಿಯಾರ್ಥಕಾವ್ಯಯ
9.
ಪಟಪಟ - ಪದವು ಈ ಅವ್ಯಯಕ್ಕೆ ಉದಾಹರಣೆಯಾಗಿದೆ
a)
ಸಾಮಾನ್ಯಾವ್ಯಯ
b)
ಕ್ರಿಯಾರ್ಥಕಾವ್ಯಯ
c)
ಅನುಕರಣಾವ್ಯಯ
d)
ಭಾವಸೂಚಕಾವ್ಯಯ
10.
ಕ್ರಿಯಾಪದದ ಸ್ಥಾನದಲ್ಲಿ ನಿಂತು ವಾಕ್ಯದ ಅರ್ಥವನ್ನು ಪೂರ್ಣಗೊಳಿಸುವ ಪದಗಳು
a)
ತದ್ದಿತಾಂತ ಅವ್ಯಯ
b)
ಸಾಮಾನ್ಯಾವ್ಯಯ
c)
ಸಂಬಂಧಾರ್ಥಕಾವ್ಯಯ
d)
ಕ್ರಿಯಾರ್ಥಕಾವ್ಯಯ
11.
ಕರಕರ : ಅನುಕರಣಾವ್ಯಯ : : ನೆಟ್ಟಗೆ : ------
a)
ಭಾವಸೂಚಕಾವ್ಯಯ
b)
ಸಾಮಾನ್ಯಾವ್ಯಯ
c)
ಕೃದಂತಾವ್ಯಯ
d)
ತದ್ದಿತಾಂತ ಅವ್ಯಯ
12.
ಎರಡು ಪದ ಅಥವಾ ವಾಕ್ಯಗಳನ್ನು ಜೋಡಿಸುವ ಮತ್ತು ಸಂಬಂಧಗೊಳಿಸುವ ಶಬ್ದಗಳಿಗೆ ಹೀಗೆನ್ನುವರು
a)
ಸಾಮಾನ್ಯಾವ್ಯಯ
b)
ಅನುಕರಣಾವ್ಯಯ
c)
ಭಾವಸೂಚಕ ಅವ್ಯಯ
d)
ಸಂಬಂಧಾರ್ಥಕಾವ್ಯಯ
13.
ಅದೇ ನನ್ನ ಪುಸ್ತಕ. - ಈ ವಾಕ್ಯದಲ್ಲಿರುವ 'ಅದೇ' ಎಂಬ ಪದವು
a)
ಅನುಕರಣಾವ್ಯಯ
b)
ಸಂಬಂಧಾರ್ಥಕಾವ್ಯಯ
c)
ಅವಧಾರಣಾರ್ಥಕವ್ಯಯ
d)
ಸಾಮಾನ್ಯಾವ್ಯಯ
14.
ಎಲಾ ! ,ಅಯ್ಯೋ ! ,ಅಬ್ಬಾ ! ಇವುಗಳು ಯಾವ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿವೆ
a)
ಭಾವಸೂಚಕಾವ್ಯಯ
b)
ಅನುಕರಣಾವ್ಯಯ
c)
ಸಾಮಾನ್ಯಾವಾಯ
d)
ಕ್ರಿಯಾರ್ಥಕಾವ್ಯಯ
15.
ಮಳೆಯ ಹನಿಗಳು ದಬದಬನೆ ಸುರಿದವು - ಈ ವಾಕ್ಯದಲ್ಲಿನ 'ದಬದಬನೆ' ಪದವು
a)
ಸಾಮಾನ್ಯ ಅವ್ಯಯ
b)
ಕ್ರಿಯಾರ್ಥಕಾವ್ಯಯ
c)
ಅನುಕರಣಾವ್ಯಯ
d)
ತದ್ದಿತಾಂತ ಅವ್ಯಯ
16.
ಕ್ರಿಯೆಯ ಪೂರ್ಣ ಅರ್ಥವನ್ನು ಕೊಡುವ ಪದಗಳ
a)
ಕ್ರಿಯಾಪದ
b)
ವಿಭಕ್ತಿಗಳು
c)
ನಾಮಪದಗಳು
d)
ಭಾವಸೂಚಕಗಳು
17.
ಕ್ರಿಯಾಪದದ ಮೂಲರೂಪ
a)
ನಾಮಪ್ರಕೃತಿ
b)
ಸರ್ವನಾಮ
c)
ಧಾತು
d)
ಸಮಾಸ
18.
ಗುರುಗಳು ವಿದ್ಯಾರ್ಥಿಗಳಿಗೆ ಜೀವನ ಪಾಠವನ್ನು ಮಾಡಿದರು - ಈ ವಾಕ್ಯದಲ್ಲಿರುವ ಕ್ರಿಯಾಪದ
a)
ಗುರುಗಳು
b)
ವಿದ್ಯಾರ್ಥಿಗಳು
c)
ಜೀವನಪಾಠ
d)
ಮಾಡಿದರು
19.
ಮಾಡುವನು- ಕ್ರಿಯಾಪದದ ಧಾತು
a)
ಮಾಡಲಿ
b)
ಮಾಡಲು
c)
ಮಾಡು
d)
ಮಾಡ
20.
ಧಾತುಗಳಿಗೆ ಉದಾಹರಣೆ
a)
ತಿನ್ನು
b)
ಹೋಗು
c)
ಬರು
d)
ಎಲ್ಲವೂ
21.
ಇವುಗಳಲ್ಲಿ ಸಾಧಿತ ಧಾತು
a)
ಕನ್ನಡಿಸು
b)
ತೂಗು
c)
ಮಲಗಿದನು
d)
ಮಲಗು
22.
ಗಣೇಶನ ಹಣ್ಣನ್ನು ತಿಂದನು - ಈ ವಾಕ್ಯದಲ್ಲಿನ ಕ್ರಿಯಾಪದ
a)
ಗಣೇಶ
b)
ಹಣ್ಣು
c)
ತಿಂದನು
d)
ಅನ್ನು
23.
ಕರ್ಮ ಪದವನ್ನು ಅಪೇಕ್ಷಿಸುವ ಧಾತು
a)
ಸಕರ್ಮಕ ಧಾತು
b)
ಅಕರ್ಮಕ ಧಾತು
c)
ಸಾಧಿತ ಧಾತು
d)
ಕ್ರಿಯಾ ಧಾತು
24.
ಇವುಗಳಲ್ಲಿ ಸಕರ್ಮಕ ಧಾತು
a)
ಮಲಗು
b)
ರಕ್ಷಿಸು
c)
ಓಡು
d)
ಹೋಗು
25.
ಇವುಗಳಲ್ಲಿ ಸಕರ್ಮಕ ಧಾತು
a)
ಏಳು
b)
ನಾಚು
c)
ಓಡು
d)
ಬಿಡು
26.
ಇವುಗಳಲ್ಲಿ ಅಕರ್ಮಕ ಧಾತು
a)
ಮಲಗು
b)
ಉಣ್ಣು
c)
ಕತ್ತರಿಸು
d)
ತೆರೆ
27.
ಇವುಗಳಲ್ಲಿ ಅಕರ್ಮಕ ಧಾತು
a)
ಉಣ್ಣು
b)
ಓದು
c)
ಹೋಗು
d)
ಕಟ್ಟು
28.
ಇವುಗಳಲ್ಲಿ ಅಕರ್ಮಕ ಧಾತು
a)
ಸೇರು
b)
ಹೋಗು
c)
ಹುಟ್ಟು
d)
ಎಲ್ಲವೂ
29.
ಅಕರ್ಮಕ ಧಾತು
a)
ನಾಚು
b)
ಓಡು
c)
ಹುಟ್ಟು
d)
ಎಲ್ಲವೂ
30.
ಪದ್ಯಗಳ ರಚನಾ ನಿಯಮ ಶಾಸ್ತ್ರ
a)
ಛಂದಸ್ಸು
b)
ಅಲಂಕಾರ
c)
ಸಮಾಸ
d)
ಸಂಧಿ
31.
ಪದ್ಯದ ಪ್ರತಿಯೊಂದು ಸಾಲಿನ ಒಂದನೆಯ ಮತ್ತು ಎರಡನೆಯ ಸ್ವರಗಳ ಮಧ್ಯದಲ್ಲಿ ಒಂದೇ ರೀತಿಯ ವ್ಯಂಜನಾಕ್ಷರಗಳು ಬರುವುದು
a)
ಪ್ಲುತ
b)
ಪ್ರಾಸ
c)
ಯತಿ
d)
ಗಣ
32.
ಪದ್ಯಗಳನ್ನು ಓದುವಾಗ ಅರ್ಥಕ ಅನುಸಾರ ಅನುಸರಿಸುವ ನಿಲುಗಡೆಯನ್ನು ಹೀಗೆ ಕರೆಯಲಾಗುತ್ತದೆ
a)
ಪ್ರಾಸ
b)
ಗಣ
c)
ಉಸಿರು
d)
ಯತಿ
33.
'ಕೆರೆಯನ್ನು' ಪದಕ್ಕೆ ಪ್ರಸ್ತಾರ ಹಾಕಿದಾಗ ಬರುವ ರೂಪವಿದು
a)
UU-U
b)
UUUU
c)
UU--
d)
UUU-
34.
ಒಂದು ಹ್ರಸ್ವಸ್ವರ ಉಚ್ಚಾರಣೆಯ ಕಾಲವನ್ನು ಹೀಗೆ ಪರಿಗಣಿಸಲಾಗುತ್ತದೆ
a)
ಒಂದು ಮಾತ್ರಾ
b)
ಎರಡು ಮಾತ್ರಾ
c)
ಮೂರು ಮಾತ್ರಾ
d)
ನಾಲ್ಕುಮಾತ್ರಾ
35.
ಗುರುವನ್ನು ಬಳಸುವಾಗ ಈ ಚಿಹ್ನೆ ಬಳಸುತ್ತೇವೆ
a)
---
b)
U
c)
S
d)
M
36.
3 ಮಾತ್ರೆಯ ಕಾಲಗಣನೆಯನ್ನು ತೆಗೆದುಕೊಳ್ಳುವ ಅಕ್ಷರಗಳನ್ನು ಹೀಗೆ ಕರೆಯುವರು
a)
ರಸ್ವಸ್ವರ
b)
ದೀರ್ಘಸ್ವರ
c)
ಪ್ಲುತಸ್ವರ
d)
ಅನುಕರಣ ಸ್ವರ
37.
ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದ
a)
ಅಕ್ಷರಗಣ
b)
ಮಾತ್ರಾಗಣ
c)
ಅಂಶಗಣ
d)
ಪದ್ಯ ಗಣ
38.
ಅಕ್ಷರಗಣ ಎಂದರೆ
a)
ಮೂರು ಮೂರು ಅಕ್ಷರಗಳ ಗುಂಪು
b)
ನಾಲ್ಕುನಾಲ್ಕು ಅಕ್ಷರಗಳ ಗುಂಪು
c)
ಐದು ಐದು ಅಕ್ಷರಗಳ ಗುಂಪು
d)
22 ಅಕ್ಷರಗಳು ಗುಂಪು
39.
ಮಾತ್ರಾಗಣ ಛಂದಸ್ಸಿಗೆ ಒಳಪಡದ ಪದ್ಯಜಾತಿ
a)
ಕಂದ
b)
ವೃತ್ತಗಳು
c)
ಷಟ್ಪದಿ
d)
ರಗಳೆ
40.
ಷಟ್ಪದಿಗಳಲ್ಲಿ ಇರುವ ಪ್ರಕಾರಗಳ ಸಂಖ್ಯೆ
a)
4
b)
3
c)
2
d)
6
41.
ಷಟ್ಪದಿಯಲ್ಲಿರುವ ಒಟ್ಟು ಸಾಲುಗಳ ಸಂಖ್ಯೆ
a)
4
b)
5
c)
3
d)
6
42.
ಭಾಮಿನಿ ಷಟ್ಪದಿಯಲ್ಲಿ ಗಣಗಳ ವಿಂಗಡಣೆ
a)
3/4/3/4
b)
4/3/4/3
c)
5/5/5/5
d)
4/4/4/4
43.
ಭಾಮಿನಿ ಷಟ್ಪದಿಯಲ್ಲಿ ಮೊದಲ ಸಾಲಿನಲ್ಲಿರುವ ಮಾತ್ರೆಗಳ ಸಂಖ್ಯೆ
a)
16
b)
14
c)
20
d)
10
44.
ಕಾವ್ಯಮಯ ಭಾಷೆಯಲ್ಲಿನ ಶಬ್ದಾರ್ಥ ವೈಚಿತ್ರ ಗಳ ಹೀಗೆ ಕರೆಯಲಾಗುತ್ತದೆ
a)
ಛಂಧಸ್ಸು
b)
ಅಲಂಕಾರ
c)
ಸಂಧಿಗಳು
d)
ಸಮಾಸಗಳು
45.
ಪರಸ್ಪರ ಎರಡು ವಸ್ತುಗಳಿಗೆ ಸುಂದರವಾಗಿ ಹೋಲಿಸುವುದು
a)
ಉಪಮಾಲಂಕಾರ
b)
ರೂಪಕಲಂಕಾರ
c)
ಉತ್ಪ್ರೇಕ್ಷೆ ಅಲಂಕಾರ
d)
ದೃಷ್ಟಾಂತ ಅಲಂಕಾರ
46.
ಉಪಮೇಯ ಉಪಮಾನಗಳೊಳಗೆ ಅಬೇಧತೆಯನ್ನು ಕಲ್ಪಿಸುವುದು
a)
ಉಪಮಾಲಂಕಾರ
b)
ಶಬ್ದಲಂಕಾರ
c)
ದೃಷ್ಟಾಂತ ಅಲಂಕಾರ
d)
ರೂಪಕ ಅಲಂಕಾರ
47.
ಮಗುವಿನ ಮುಖ ಚಂದ್ರನಂತೆ ಅರಳಿತು - ಈ ವಾಕ್ಯದಲ್ಲಿರುವ ಅಲಂಕಾರ
a)
ಉಪಮಾಲಂಕಾರ
b)
ಶಬ್ದಲಂಕಾರ
c)
ಶ್ಲೇಷ ಅಲಂಕಾರ
d)
ರೂಪಕ ಅಲಂಕಾರ
48.
ಸೀತೆಯ ಮುಖ ಕಮಲ ಅರಳಿತು - ಈ ವಾಕ್ಯವು ಯಾವ ಅಲಂಕಾರಕ್ಕೆ ಉದಾಹರಣೆ
a)
ಉಪಮಾಲಂಕಾರ
b)
ರೂಪಕಲಂಕಾರ
c)
ಉತ್ಪ್ರೇಕ್ಷೆ ಅಲಂಕಾರ
d)
ದೃಷ್ಟಾಂತ ಅಲಂಕಾರ
49.
ಉಪಮಾಲಂಕಾರಕ್ಕೆ ಉದಾಹರಣೆ
a)
ಬಾಳೆಯ ಹಣ್ಣಿನಂತೆ ಬಾಗಿದ ಕುಣಿಗಲ್ ಕೆರೆ
b)
ನಿಂಬೆಯ ಹಣ್ಣಿನಂತೆ ತುಂಬಿದ ಕುಣಿಗಲ್ ಕೆರೆ
c)
ಹಕ್ಕಿಯ ಗೂಡುಗಳು ತೊಟ್ಟಿಲಿನಂತೆ ತೂಗಾಡುತ್ತಿದ್ದವು
d)
ಈ ಎಲ್ಲವೂ
50.
ರೂಪಕ ಅಲಂಕಾರಕ್ಕೆ ಉದಾಹರಣೆ
a)
ವನಜಮುಖಿ
b)
ಮುಖಚಂದ್ರ
c)
ಪಾದಕಮಲ
d)
ಈ ಎಲ್ಲವೂ
Reset
