wayground logo

Free Printable Worksheets

NEW

Font size

S
M
L
XL
Worksheets

KSEEB ಮಾದರಿ ಪ್ರಶ್ನೆ ಪತ್ರಿಕೆ೧

Total questions: 10

Worksheet time: 2mins

Name
Class
Date
1.

1846ರ ಲಾಹೋರ್ ಒಪ್ಪಂದ ಎಡೆ ಮಾಡಿಕೊಟ್ಟ ಅಂಶ

a)

ಪಂಜಾಬ್ ಸ್ವತಂತ್ರಗೊಂಡಿತು.

b)

ಬ್ರಿಟಿಷ್ ರೆಸಿಡೆಂಟನು ಪಂಜಾಬಿನ ನಿಜವಾದ ಆಡಳಿತಗಾರನಾದನು.

c)

ರಣಜೀತ್ ಸಿಂಗನು ಕೊಲ್ಲಲ್ಪಟ್ಟನು.

d)

ಬ್ರಿಟಿಷರ ನಿಯಂತ್ರಣಕ್ಕೆ ಕಾಶ್ಮೀರವು ಒಳಪಟ್ಟಿತು.

2.

ಆಗಷ್ಟ 15,1947 ಇಡೀ ಭಾರತವೇ ಸ್ವಾತಂತ್ರ್ಯವನ್ನು ಆಚರಿಸುತ್ತಿದ್ದರೆ ಗಾಂಧೀಜಿಯವರು ಇದ್ದದ್ದು

a)

ಲಾಹೋರ್

b)

ನೌಕಾಲಿ

c)

ದೆಹಲಿ

d)

ಅಮೃತಸರ

3.

ಭಾರತ ನಿಶ್ಯಸ್ತ್ರೀಕರಣವನ್ನು ಉತ್ತೇಜಿಸುತ್ತದೆ. ಏಕೆಂದರೆ

a)

ಭಾರತ ಪರಮಾಣು ಶಸ್ತ್ರಾಸ್ತ್ರ ಹೊಂದಿದೆ.

b)

ಭಾರತವು ಅತಿ ದೊಡ್ಡ ಮಿಲಿಟರಿಯನ್ನು ಹೊಂದಿದೆ.

c)

ಭಾರತ ಶಾಂತಿಪ್ರಿಯ ದೇಶ.

d)

ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ.

4.

ಬಾಲಕಾರ್ಮಿಕ ಪದ್ಧತಿಯನ್ನು ಪೋಷಿಸುವುದು

a)

ಅಸಂಘಟಿತ ಕಾರ್ಮಿಕ ವಲಯ

b)

ಸಂಘಟಿತ ಕಾರ್ಮಿಕ ವಲಯ

c)

ಸಂಭಾವನೆ ರಹಿತ ದುಡಿಮೆ ವಲಯ.

d)

ಸಂಭಾವನೆ ಸಹಿತ ದುಡಿಮೆ ವಲಯ.

5.

ಬಾಲ್ಯ ವಿವಾಹ ತಡೆಗಟ್ಟಲು ನೀಡಿರುವ ಸಹಾಯವಾಣಿ.

a)

1919

b)

1098

c)

1800

d)

1909

6.

ಪಶ್ಚಿಮಘಟ್ಟಗಳ ಪೂರ್ವ ಭಾಗವು ಪಶ್ಚಿಮ ಭಾಗದಷ್ಟು ಮಳೆ ಪಡೆಯುವುದಿಲ್ಲ. ಏಕೆ

a)

ಅವು ದಕ್ಷಿಣ ಭಾಗದಲ್ಲಿದೆ.

b)

ಮಳೆ ನೆರಳಿನ ಪ್ರದೇಶದಲ್ಲಿವೆ.

c)

ಹೆಚ್ಚು ಹಿಮಪಾತವಾಗುತ್ತದೆ.

d)

ಅಲ್ಲಿ ಹೆಚ್ಚು ದಟ್ಟ ಅರಣ್ಯವಿದೆ.

7.

ಇವುಗಳಲ್ಲಿ ಪ್ರತ್ಯಕ್ಷ ತೆರಿಗೆ

a)

ವ್ಯಾಟ್

b)

ಜಿ.ಎಸ್.ಟಿ

c)

ವೃತ್ತಿ ತೆರಿಗೆ

d)

ಆಮದು ಮತ್ತು ರಫ್ತು ತೆರಿಗೆ

8.

ಗ್ರಾಹಕ ರಕ್ಷಣಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಕಟ್ಟಬೇಕಾದ ಶುಲ್ಕ/ನೋಂದಣಿ ಶುಲ್ಕ.

a)

ಸರಕು/ಸೇವೆಯ ಒಟ್ಟು ಶೇ 12 ಭಾಗದಷ್ಟು

b)

ಸರಕು/ಸೇವೆಯ ಒಟ್ಟು ಶೇ 1೦ ಭಾಗದಷ್ಟು.

c)

ಯಾವುದೇ ಹಣ ಪಾವತಿಸುವಂತಿಲ್ಲ.

d)

ಕನಿಷ್ಠ100ರೂ ಶುಲ್ಕ.

9.

ಮೊದಲನೇ ಮಹಾಯುದ್ಧವನ್ನು ಅಂತ್ಯಗೊಳಿಸಿದ ಒಪ್ಪಂದ

a)

ವರ್ಸೇಲ್ಸ್

b)

ಪ್ಯಾರಿಸ್

c)

ಜಿನೀವಾ

d)

ತಾಷ್ಕೆಂಟ್

10.

ವಿಶ್ವ ಸಂಸ್ಥೆಯು ಅಸ್ತಿತ್ವಕ್ಕೆ ಬಂದಿದ್ದು

a)

24 ಅಕ್ಟೋಬರ್1946

b)

25 ಅಕ್ಟೋಬರ್1945

c)

25 ಅಕ್ಟೋಬರ್1946

d)

24 ಅಕ್ಟೋಬರ್1945