NEW
Font size
Worksheets10th Science ಜೀವಕ್ರಿಯೆಗಳು
Total questions: 23
Worksheet time: 12mins
ಜೀರ್ಣವಾದ ಆಹಾರವನ್ನು ಹೀರಿಕೊಳ್ಳುವ ಭಾಗ
ಜಠರ
ಯಕೃತ್
ದೊಡ್ಡಕರುಳು
ಸಣ್ಣಕರುಳು
ಲಾಲಾರಸವು ಅಮೈಲೇಸ್ ಎಂಬ ಕಿಣ್ವವನ್ನು ಹೊಂದಿದ್ದು, ಒಂದು ವೇಳೆ ಈ ಕಿಣ್ವದ ಕೊರತೆಯಾದರೆ ಬಾಯಿಯಲ್ಲಿ ನಡೆಯುವ ಯಾವ ಕ್ರಿಯೆಗೆ ತೊಂದರೆಯಾಗುತ್ತದೆ?
ಪ್ರೋಟೀನ್ ಅಮೈನೋ ಆಮ್ಲವಾಗಿ ವಿಭಜನೆಯಾಗುವ ಕ್ರಿಯೆ
ಪಿಷ್ಟ ಮಾಲ್ಟೋಸ್ ಆಗಿ ಪರಿವರ್ತನೆಯಾಗುವ ಕ್ರಿಯೆ
ಜೀವಸತ್ವಗಳ ಹೀರುವಿಕೆ.
ಕೊಬ್ಬು, ಕೊಬ್ಬಿನ ಆಮ್ಲ & ಗ್ಲಿಸರಾಲ್ ಆಗಿ ವಿಭಜನೆಯಾಗುವ ಕ್ರಿಯೆ
ಎಲೆಯ ಜೀವಕೋಶಗಳಲ್ಲಿ ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಯುವ ಭಾಗ.
ಕ್ಲೋರೋಪ್ಲಾಸ್ಟ್
ಮೈಟೋಕಾಂಡ್ರಿಯಾ
ಸೈಟೋಪ್ಲಾಸಂ
ಪ್ರೋಟೋಪ್ಲಾಸಂ
ಸಸ್ಯದ ಬೇರುಗಳು ಈ ಕ್ರಿಯೆಯ ಮೂಲಕ ಮಣ್ಣಿನಿಂದ ನೀರನ್ನು ಹೀರಿಕೊಳ್ಳುತ್ತವೆ.
ವಿಸರಣೆ
ಬಾಷ್ಪ ವಿಸರ್ಜನೆ
ಅಭಿಸರಣೆ
ಯಾವುದೂ ಅಲ್ಲ
ಸಾಗಾಣಿಕೆಯಲ್ಲಿ ಪತ್ರರಂಧ್ರಗಳ ಪಾತ್ರ
ಮೇಲ್ಮುಖ ಸೆಳೆತವನ್ನು ಸೃಷ್ಟಿಸುವುದು
ಕಾರ್ಬನ್-ಡೈ- ಆಕ್ಸೈಡ್ ಅನ್ನು ಹೀರುವುದು
ಆಕ್ಸಿಜನ್ ಬಿಡುಗಡೆ ಮಾಡುವುದು
ನಿರಂತರ ಬಾಷ್ಪ ವಿಸರ್ಜನೆ ಮಾಡುವುದು
ದ್ಯುತಿಸಂಶ್ಲೇಷಣೆ ಹಂತಗಳ ಸರಿಯಾದ ಕ್ರಮ
1. ಕಾರ್ಬನ್-ಡೈ-ಆಕ್ಸೈಡ್ ಕಾರ್ಬೋಹೈಡ್ರೇಟ್ ಆಗಿ ಪರಿವರ್ತನೆಯಾಗುವುದು.
2. ನೀರಿನ ಅಣುಗಳು ಹೈಡ್ರೋಜನ್ ಮತ್ತು ಆಕ್ಸಿಜನ್ ಆಗಿ ಪರಿವರ್ತನೆಯಾಗುವುದು.
3. ಕ್ಲೋರೋಫಿಲ್ ಬೆಳಕಿನ ಶಕ್ತಿಯನ್ನು ಹೀರಿಕೊಳ್ಳುವುದು.
4. ಬೆಳಕಿನ ಶಕ್ತಿಯು ರಾಸಾಯನಿಕ ಶಕ್ತಿಯಾಗಿ ಪರಿವರ್ತನೆಗೊಳ್ಳುವುದು
1, 3, 2, 4
3, 4, 2, 1
4, 3, 2, 1
4, 3, 1, 2
ಹಸಿರು ಸಸ್ಯಗಳಲ್ಲಿ ನಡೆಯುವ ದ್ಯುತಿಸಂಶ್ಲೇಷಣೆ ಪ್ರಕ್ರಿಯೆಯ ಪ್ರಾಥಮಿಕ ಹಂತ
ಕ್ಲೋರೋಫಿಲ್ ನಿಂದ ಬೆಳಕಿನ ಶಕ್ತಿ ಹೀರಿಕೆಯಾಗುವುದು
ಸೂರ್ಯನ ಶಕ್ತಿ ರಾಸಾಯನಿಕ ಶಕ್ತಿಯಾಗಿ ಬದಲಾಗುವುದು
ನೀರಿನ ಅಣು ಜಲಜನಕ ಮತ್ತು ಆಮ್ಲಜನಕಗಳಾಗಿ ವಿಭಜಿಸುವುದು
ಕಾರ್ಬನ್-ಡೈ- ಆಕ್ಸೈಡ್ ಕಾರ್ಬೋಹೈಡ್ರೇಟಾಗಿ ರೂಪಾಂತರ ಗೊಳ್ಳುವುದು
ಮಾನವನ ಸಾಗಾಣಿಕಾ ವ್ಯೂಹದಲ್ಲಿ ಕಂಡುಬರುವ ಅಪಧಮನಿಗಳಿಗೆ ಸಂಬಂಧಿಸಿದಂತೆ ಸರಿಯಾದ ಆಯ್ಕೆ
ಇವು ದಪ್ಪನಾದ ಸ್ಥಿತಿಸ್ಥಾಪಕ ಭಿತ್ತಿಯನ್ನು ಹೊಂದಿದ್ದು ರಕ್ತವು ಹೆಚ್ಚು ಒತ್ತಡದಲ್ಲಿ ಸಾಗುತ್ತದೆ
ನಾಳಗಳ ಭಿತ್ತಿಯು ತೆಳುವಾಗಿದ್ದು ರಕ್ತವು ಕಡಿಮೆ ಒತ್ತಡದಲ್ಲಿ ಸಾಗುತ್ತದೆ.
ನಾಳಗಳ ಭಿತ್ತಿಯು ತೆಳುವಾಗಿದ್ದು ರಕ್ತವು ಹೆಚ್ಚು ಒತ್ತಡದಲ್ಲಿ ಸಾಗುತ್ತದೆ
ಇವು ದಪ್ಪನಾದ ಸ್ಥಿತಿಸ್ಥಾಪಕ ಭಿತ್ತಿಯನ್ನು ಹೊಂದಿದ್ದು ರಕ್ತವು ಕಡಿಮೆ ಒತ್ತಡದಲ್ಲಿ ಸಾಗುತ್ತದೆ
ಜೀರ್ಣನಾಳದ ಲಯಬದ್ಧವಾದ ಸಂಕುಚನ ಮತ್ತು ವಿಕಸನ ಚಲನೆಯನ್ನು ಹೀಗೆನ್ನುವರು
ಬಾಷ್ಪ ವಿಸರ್ಜನೆ
ಸಾಗಾಣಿಕೆ
ಪರಿಕ್ರಮಣ ಚಲನೆ
ಜೀರ್ಣಕ್ರಿಯೆ
ಪೈರುವೇಟ್‌ನ ವಿಭಜನೆಯಿಂದ ಕಾರ್ಬನ್ ಡೈ- ಆಕ್ಸೈಡ್, ನೀರು ಮತ್ತು ಶಕ್ತಿಯು ಬಿಡುಗಡೆಯಾಗುವ ಸ್ಥಳ
ಕೋಶದ್ರವ್ಯ
ಮೈಟೋಕಾಂಡ್ರಿಯಾ
ಕ್ಲೋರೋಪ್ಲಾಸ್ಟ್
ನ್ಯೂಕ್ಲಿಯಸ್
ದ್ರವ ಆಹಾರದ ಕೆಲವು ಹನಿಗಳಿಗೆ ಅಯೋಡಿನ್ ದ್ರಾವಣವನ್ನು ಹಾಕಿದಾಗ ದ್ರಾವಣವು ನೀಲಿ ಮಿಶ್ರಿತ ಕಪ್ಪು ಬಣ್ಣಕ್ಖೆ ತಿರುಗಿದೆ. ದ್ರವ ಆಹಾರವು ಈ ಕೆಳಗಿನವುಗಳಲ್ಲಿ ಇದನ್ನು ಹೊಂದಿದೆ.
ಕೊಬ್ಬು
ಸಂಕೀರ್ಣ ಪ್ರೋಟೀನ್
ಪಿಷ್ಟ
ಸರಳ ಪ್ರೋಟೀನ್
ತ್ಯಾಜ್ಯ ವಸ್ತುಗಳ ಹೊರಹಾಕುವಿಕೆಯು ಇವುಗಳಿಂದ ನಿಯಂತ್ರಿಸಲ್ಪಡುತ್ತದೆ
ಯಕೃತ್
ಗುದದ್ವಾರ
ಸಣ್ಣಕರುಳು
ಗುದ ಸಂಕುಚನ ಸ್ನಾಯುಗಳು
ಸಸ್ಯಗಳಲ್ಲಿ ಆಕ್ಸಿಜನ್ ರಹಿತ ಉಸಿರಾಟಕ್ರಿಯೆಯಲ್ಲಿ ಉಂಟಾಗುವ ಉತ್ಪನ್ನಗಳು
ಲ್ಯಾಕ್ಟಿಕ್ ಆಮ್ಲ ಮತ್ತು ಶಕ್ತಿ
ಕಾರ್ಬನ್ ಡೈ- ಆಕ್ಸೈಡ್, ನೀರು ಮತ್ತು ಶಕ್ತಿ
ಇಥನಾಲ್, ಕಾರ್ಬನ್ ಡೈ- ಆಕ್ಸೈಡ್, ನೀರು ಮತ್ತು ಶಕ್ತಿ
ಪೈರುವೇಟ್
ಆಕ್ಸಿಜನ್ ರಹಿತ ಪೈರುವೇಟ್ ವಿಭಜನೆಯು ಇಲ್ಲಿ ನಡೆಯುತ್ತದೆ
ಕೋಶದ್ರವ್ಯ
ಮೈಟೋಕಾಂಡ್ರಿಯಾ
ಕ್ಲೋರೋಪ್ಲಾಸ್ಟ್
ನ್ಯೂಕ್ಲಿಯಸ್
ಮನುಷ್ಯರಲ್ಲಿ, ರಕ್ತದಂತೆ ಸಾಗಾಣಿಕೆಯಲ್ಲಿ ತೊಡಗಿಕೊಂಡಿರುವ ಇನ್ನೊಂದು ದ್ರವ
ಕಿರುತಟ್ಟೆಗಳು
ಬಿಳಿ ರಕ್ತಕಣ
ದುಗ್ಧರಸ
ಪ್ಲಾಸ್ಮಾ
ನೆಫ್ರಾನಿನ ಯಾವ ಭಾಗವು ಉಪಯುಕ್ತ ವಸ್ತುಗಳಾದ ಅಮೈನೋ ಆಮ್ಲ, ಲವಣ ಮತ್ತು ನೀರನ್ನು ಮರುಹೀರಿಕೆ ಮಾಡುತ್ತದೆ.
ಸುರುಳಿಯಾಕಾರದ ನಾಳ
ಗ್ಲಾಮರುಲಸ್
ಬೌಮನ್ನನ ಕೋಶ
ಸಂಗ್ರಾಹಕ ನಾಳ
ಇವುಗಳಲ್ಲಿ ಯಾವುದು ಜಠರದಲ್ಲಿ ಜೀರ್ಣವಾಗುತ್ತದೆ
ವಿಟಮಿನ್
ಪ್ರೋಟೀನ್
ಕೊಬ್ಬು
ಖನಿಜ
ಯೀಸ್ಟ್ ನಲ್ಲಿ ಗ್ಲುಕೋಸ್‌ನ ಹುದುಗುವಿಕೆಯ ಉತ್ಪನ್ನ.
ಎಥನಾಲ್, CO₂ & 2 ATP
ಎಥನಾಲ್, CO₂ & 36ATP
H₂O, CO₂ & 36 ATP
ಲ್ಯಾಕ್ಟಿಕ್ ಆಮ್ಲ, CO₂ & 2 ATP
ಕೆಳಗಿನವುಗಳಲ್ಲಿ ತಪ್ಪಾದ ಹೇಳಿಕೆ
ಆಮ್ಲಜನಕ ರಹಿತ ರಕ್ತವು ಬಲಹೃತ್ಕರ್ಣಕ್ಕೆ ಸಾಗಿಸಲ್ಪಡುತ್ತದೆ
ರಕ್ತದಿಂದ ಕಾರ್ಬನ್ ಡೈ- ಆಕ್ಸೈಡ್ ತೆಗೆದುಹಾಕಲು ಕಾರ್ಬನ್-ಡೈ- ಆಕ್ಸೈಡ್ ಸಮೃದ್ಧ ರಕ್ತವು ಶ್ವಾಸಕೋಶವನ್ನು ತಲುಪಬೇಕು.
ಪುಪ್ಪಸಕ ಅಪಧಮನಿಗಳು ಶುದ್ಧ ರಕ್ತವನ್ನು ದೇಹದೊಳಕ್ಕೆ ಪಂಪ್ ಮಾಡುತ್ತವೆ
ಬಲಹೃತ್ಕರ್ಣವು ಹಿಗ್ಗಿದಾಗ ಆಕ್ಸಿಜನ್ ರಹಿತ ರಕ್ತವು ದೇಹದಿಂದ ಅದಕ್ಕೆ ಬರುತ್ತದೆ
ಜೀರ್ಣಾಂಗವ್ಯೂಹದ ಈ ಭಾಗವು ಪಿತ್ತಕೋಶದಿಂದ ಪಿತ್ತರಸವನ್ನು ಸ್ವೀಕರಿಸುತ್ತದೆ
ಜಠರ
ಸಣ್ಣಕರುಳು
ದೊಡ್ಡಕರುಳು
ಅನ್ನನಾಳ
ಒಂದು ಪ್ರನಾಳದಲ್ಲಿರುವ ಸುಣ್ಣದ ತಿಳಿನೀರಿಗೆ ಬಾಯಿಯಿಂದ ಗಾಳಿಯನ್ನು ಊದಿದಾಗ ಸುಣ್ಣದ ತಿಳಿನೀರು ಹಾಲಿನಂತೆ ಬೆಳ್ಳಗಾಗಲು ಕಾರಣವಾದ ಅನಿಲ
ಕಾರ್ಬನ್-ಡೈ- ಆಕ್ಸೈಡ್
ಆಮ್ಲಜನಕ
ನೈಟೋಜನ್
ನೀರಾವಿ
ಪತ್ರರಂಧ್ರ ತೆರೆಯುವಿಕೆ ಮತ್ತು ಮುಚ್ಚುವಿಕೆಯು ಅವಲಂಬಿಸಿರುವ ಅಂಶ
ಪತ್ರರಂಧ್ರ ತೆರೆಯುವಿಕೆ ಮತ್ತು ಮುಚ್ಚುವಿಕೆಯು ಅವಲಂಬಿಸಿರುವ ಅಂಶ
ಆಮ್ಲಜನಕ
ತಾಪ
ಕಾವಲು ಕೋಶದಲ್ಲಿರುವ ನೀರು
ದ್ಯುತಿಸಂಶ್ಲೇಷಣೆಯಿಂದ ಬಿಡುಗಡೆಯಾಗುವ ಆಮ್ಲಜನಕ ಈ ವಸ್ತುವಿನಿಂದ ದೊರಕುತ್ತದೆ
ನೀರು
ಕ್ಲೋರೋಫಿಲ್
ಕಾರ್ಬನ್-ಡೈ-ಆಕ್ಸೈಡ್
ಗ್ಲುಕೋಸ್
