Wayground logo

Free Printable Worksheets

Font size

S
M
L
XL
Worksheets

9th ಅಂಗಾಂಶಗಳು Prashantha.SB

Total questions: 15

Worksheet time: 8mins

Name
Class
Date
1.

ತೆಂಗಿನ ಕಾಯಿಯ ಸಿಪ್ಪೆ ಮತ್ತು ಕಾಯಿಯ ಗಟ್ಟಿ ಕವಚಗಳಲ್ಲಿ ಕಂಡುಬರುವ ಅಂಗಾಂಶ_

a)

ಪೇರಂಕೈಮ

b)

ಕೋಲಂಕೈಮ

c)

ಸ್ಕ್ಲೀರಂಕೈಮ

d)

ವರ್ಧನ ಅಂಗಾಂಶ

2.

ಸ್ನಾಯುಗಳನ್ನು ಮೂಳೆಗಳಿಗೆ ಬಂಧಿಸುವ ಅಂಗಾಂಶ_

a)

ಅಸ್ಥಿರಜ್ಜು

b)

ಮೃದ್ವಸ್ಥಿ ಅಂಗಾಂಶ

c)

ಸ್ನಾಯುರಜ್ಜು

d)

ಏರಿಯೋಲಾರ್ ಅಂಗಾಂಶ

3.

ಮೂತ್ರಪಿಂಡದ ನಾಳ ಮತ್ತು ಲಾಲಾರಸ ಗ್ರಂಥಿಯ ನಾಳಗಳಲ್ಲಿ ಕಂಡುಬರುವ ಅನುಲೇಪಕ ಅಂಗಾಂಶದ ವಿಧ ಹೆಸರಿಸಿ.

a)

ಸ್ತರೀಕೃತ ಚಪ್ಪಟೆ ಅನುಲೇಕ ಅಂಗಾಂಶ.

b)

ಘನಾಕೃತಿ ಅನುಲೇಕ ಅಂಗಾಂಶ

c)

ಕಶಾಂಗ ಸಹಿತ ಸ್ತಂಭಾಕೃತಿ ಅನುಲೇಪಕ ಅಂಗಾಂಶ.

d)

ಸ್ತಂಭಾಕಾರದ ಅನುಲೇಪಕ ಅಂಗಾಂಶ

4.

ಸಸ್ಯದ ಕಾಂಡ ಹಾಗೂ ಬೇರುಗಳ ಉದ್ದವನ್ನು ಹೆಚ್ಚಿಸುವ ಅಂಗಾಂಶ_

a)

ಪೇರಂಕೈಮ

b)

ಕೋಲಂಕೈಮ

c)

ಸ್ಕ್ಲೀರಂಕೈಮ

d)

ವರ್ಧನ ಅಂಗಾಂಶ

5.

ದ್ಯುತಿ ಸಂಶ್ಲೇಷಣೆ ಕ್ರಿಯೆಯನ್ನು ನಡೆಸುವ ಸಾಮರ್ಥ್ಯ ಪಡೆದಿರುವ ಪೇರಂಕೈಮ ಅಂಗಾಂಶಕ್ಕೆ ಹೀಗೆನ್ನುವರು_

a)

ಏರಂಕೈಮ

b)

ಕೋಲಂಕೈಮ

c)

ಕ್ಲೋರಂಕೈಮ

d)

ಸ್ಕ್ಲೀರಂಕೈಮ

6.

ನಮ್ಮ ದೇಹದಲ್ಲಿ ಕೊಬ್ಬು ಸಂಗ್ರಹವಾಗುವ ಅಂಗಾಂಶ_

a)

ಅನುಲೇಕ ಅಂಗಾಂಶ

b)

ಅಡಿಫೋಸ್ ಅಂಗಾಂಶ

c)

ಸಂಯೋಜಕ ಅಂಗಾಂಶ

d)

ಏರಿಯೋಲಾರ್ ಅಂಗಾಂಶ

7.

ಸ್ನಾಯು ತಂತುಗಳು ನೀಳವಾಗಿ ಕೊಳವೆಯಾಕಾರದಲ್ಲಿದ್ದು, ಶಾಖೆಗಳನ್ನು ಹೊಂದಿರದೆ, ಅನೇಕ ನ್ಯೂಕ್ಲಿಯಸ್ ಹೊಂದಿದ್ದರೆ ಅವು_

a)

ಪಟ್ಟೆ ರಹಿತ ಸ್ನಾಯು

b)

ಪಟ್ಟೆ ಸಹಿತ ಸ್ನಾಯುಗಳು

c)

ಹೃದಯದ ಸ್ನಾಯುಗಳು

d)

ಸಂಯೋಜಕ ಅಂಗಾಂಶ

8.

ಈ ಕೆಳಗಿನವುಗಳಲ್ಲಿ ಕ್ಸೈಲಂ ಅಂಗಾಂಶದ ಘಟಕಗಳನ್ನು ಗುರುತಿಸಿ.

a)

ಜರಡಿನಾಳಗಳು, ಸಂಗಾತಿ ಕೋಶಗಳು, ಫ್ಲೋಯಂ ನಾರುಗಳು ಮತ್ತು ಫ್ಲೋಯಂ ಪೇರಂಕೈಮ.

b)

ಜರಡಿನಾಳಗಳು, ಟ್ರೇಕಿಡ್‌ಗಳು, ಕ್ಸೈಲಂ ಪೇರಂಕೈಮ ಮತ್ತು ಕ್ಸೈಲಂನಾರು

c)

ಜರಡಿನಾಳಗಳು, ಸಂಗಾತಿ ಕೋಶಗಳು, ಕ್ಸೈಲಂ ಪೇರಂಕೈಮ ಮತ್ತು ಕ್ಸೈಲಂನಾರು

d)

ಟ್ರೇಕಿಡ್‌ಗಳು, ನಾಳಗಳು, ಕ್ಸೈಲಂ ಪೇರಂಕೈಮ ಮತ್ತು ಕ್ಸೈಲಂನಾರು

9.

ಎಲೆಗಳಲ್ಲಿ ತಯಾರಾದ ಆಹಾರವನ್ನು ಸಸ್ಯದ ವಿವಿಧ ಭಾಗಗಳಿಗೆ ಸಾಗಿಸುವ ಅಂಗಾಂಶ

a)

ಕ್ಸೈಲಂ

b)

ಫ್ಲೋಯಂ

c)

ಕೋಲಂಕೈಮ

d)

ಸ್ಕ್ಲೀರಂಕೈಮ

10.

ಚಿತ್ರದಲ್ಲಿ ನೀಡಿರುವ ಸಸ್ಯ ಅಂಗಾಂಶದ ವಿಧ ಗುರುತಿಸಿ.

a)

ಪೇರಂಕೈಮ

b)

ಸ್ಕ್ಲೀರಂಕೈಮ

c)

ಕೋಲಂಕೈಮ

d)

ಕ್ಲೋರಂಕೈಮ

11.

ಅನ್ನನಾಳದದಲ್ಲಿನ ಆಹಾರದ ಚಲನೆಗೆ ಕಾರಣವಾದ ಅಂಗಾಂಶ

a)

ಹೃದಯದ ಸ್ನಾಯುಗಳು

b)

ಪಟ್ಟೆ ಸಹಿತ ಸ್ನಾಯುಗಳು

c)

ಪಟ್ಟೆ ರಹಿತ ಸ್ನಾಯುಗಳು

d)

ಏರಿಯೋಲಾರ್ ಅಂಗಾಂಶ

12.

ದೇಹದ ಉಷ್ಣತೆಯು ನಷ್ಟವಾಗುವುದನ್ನು ತಡೆಯಲು ಸಹಾಕಾರಿಯಾದ ಅಂಗಾಂಶ_

a)

ಸ್ನಾಯು ಅಂಗಾಂಶ

b)

ಅಡಿಪೋಸ್ ಅಂಗಾಂಶ

c)

ಮೃದ್ವಸ್ಥಿ ಅಂಗಾಂಶ

d)

ಏರಿಯೋಲಾರ್ ಅಂಗಾಂಶ

13.

ಕೆಳಗಿನ ಹೇಳಿಕೆಗಳಲ್ಲಿ ಪತ್ರರಂಧ್ರಗಳಿಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆ ಗುರುತಿಸಿ_

a)

ಸಸ್ಯದ ದೇಹದಿಂದ ನೀರಿನ ನಷ್ಟವಾಗುವಿಕೆಯನ್ನು ತಡೆಯುತ್ತವೆ

b)

ಅನಿಲ ವಿನಿಮಯ ಪ್ರಕ್ರಿಯೆಯಲ್ಲಿ ತೊಡಗುತ್ತವೆ.

c)

ಬಾಷ್ಪವಿಸರ್ಜನೆಯನ್ನು ನಿಯಂತ್ರಿಸುತ್ತವೆ.

d)

ಇವುಗಳ ಮೂಲಕ ನೀರು ಸಸ್ಯ ದೇಹವನ್ನು ಪ್ರವೇಶಿಸುತ್ತದೆ.

14.

ಪ್ರಾಣಿಗಳಲ್ಲಿ ಪ್ರಚೋದನೆಗೆ ಪ್ರತಿಕ್ರಿಯೆ ನೀಡಲು ಸಹಾಯಕವಾದ ಅಂಗಾಂಶ_

a)

ನರ ಅಂಗಾಂಶ

b)

ಅನುಲೇಕ ಅಂಗಾಂಶ

c)

ಸಂಯೋಜಕ ಅಂಗಾಂಶ

d)

ಏರಿಯೋಲಾರ್ ಅಂಗಾಂಶ

15.

ಜೀರ್ಣವಾದ ಆಹಾರವನ್ನು ದೇಹದ ವಿವಿಧ ಭಾಗಗಳಿಗೆ ಸಾಗಿಸುವ ಅಂಗಾಂಶ_

a)

ಸ್ನಾಯು ಅಂಗಾಂಶ

b)

ನರ ಅಂಗಾಂಶ

c)

ಮೂಳೆ ಅಂಗಾಂಶ

d)

ರಕ್ತಅಂಗಾಂಶ