NEW
Font size
Worksheetsಬೆಳಕು, ಪ್ರತಿಫಲನ ಮತ್ತು ವಕ್ರೀಭವನ
Total questions: 25
Worksheet time: 11mins
ನಿಯತ ಪ್ರತಿಫಲನ ಎಂದರೆ
ಕಬ್ಬಿಣದಿಂದ ಪ್ರತಿಫಲಿಸಿದ ಬೆಳಕು
ಕಟ್ಟಿಗೆಯಿಂದ ಪ್ರತಿಫಲಿಸಿದ ಬೆಳಕು
ಕನ್ನಡಿಯಿಂದ ಪ್ರತಿಫಲಿಸಿದ ಬೆಳಕು
ಬಟ್ಟೆಯಿಂದ ಪ್ರತಿಫಲಿಸಿದ ಬೆಳಕು
ಈ ಹೇಳಿಕೆಗಳನ್ನು ಗಮನಿಸಿ (1) ಪತನ ಕೋನವು ಪ್ರತಿಫಲನ ಕೋನಕ್ಕೆ ಸಮನಾಗಿರುತ್ತದೆ (2) ಪತನ ಕಿರಣ, ಪ್ರತಿಫಲನ ಕಿರಣ ಹಾಗೂ ಪತನ ಬಿಂದುವಿನಲ್ಲಿ ಎಳೆದ ಲಂಬ ಎಲ್ಲವೂ ಬೇರೆ ಬೇರೆ ಸಮತಲದಲ್ಲಿ ಇರುತ್ತವೆ
ಹೇಳಿಕೆ (1) ಮಾತ್ರ ಸರಿಯಾಗಿದೆ
ಹೇಳಿಕೆ (2) ಮಾತ್ರ ಸರಿಯಾಗಿದೆ
ಹೇಳಿಕೆ (1) ಮತ್ತು (2) ಎರಡು ಸರಿಯಾಗಿವೆ
ಹೇಳಿಕೆ (1) ಮತ್ತು (2) ಎರಡು ತಪ್ಪಾಗಿದೆ
ಸಮತಲ ದರ್ಪಣಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ ಗಳು ಸರಿಯಾಗಿದೆ/ವೆ
ಉಂಟಾದ ಪ್ರತಿಬಿಂಬವು ಯಾವಾಗಲೂ ಮಿಥ್ಯ ಮತ್ತು ನೇರ
ಪ್ರತಿಬಿಂಬದ ಗಾತ್ರವು ವಸ್ತುವಿನ ಗಾತ್ರಕ್ಕೆ ಸಮನಾಗಿರುತ್ತದೆ
ಪ್ರತಿಬಿಂಬವ ಪಾರ್ಶ್ವ ಪಲ್ಲಟ ಹೊಂದಿರುತ್ತದೆ
ಮೇಲಿನ ಎಲ್ಲವೂ ಸರಿಯಾಗಿದೆ
ಗೊಳೀಯ ದರ್ಪಣದ ಪ್ರತಿಫಲಿಸುವ ಮೇಲ್ಮೈಯ ಕೇಂದ್ರ ಬಿಂದುವನ್ನು ಹೀಗೆನ್ನುವರು
ವಕ್ರತಾ ಕೇಂದ್ರ
ಸಂಗಮ ಬಿಂದು
ಧ್ರುವ
ಪ್ರಧಾನಕ್ಷ
ದರ್ಪಣದಿಂದ ಪ್ರತಿಫಲಿತ ಎಲ್ಲಾ ಕಿರಣಗಳು ದರ್ಪಣದ ಪ್ರಧಾನ ಅಕ್ಷದ ಮೇಲಿರುವ ಒಂದು ಬಿಂದುವಿನಲ್ಲಿ ಸಂಧಿಸುವ ಅಥವಾ ಛೇದಿಸುವ ಬಿಂದುವನ್ನು ಹೀಗೆಂದು ಕರೆಯುತ್ತಾರೆ
ಸಂಗಮ ಬಿಂದು
ವಕ್ರತಾ ಕೇಂದ್ರ
ವಕ್ರತಾ ತ್ರಿಜ್ಯ
ದ್ಯುತಿ ರಂಧ್ರ
ದರ್ಪಣ ಗಳಲ್ಲಿ ಪ್ರತಿಬಿಂಬ ಉಂಟಾಗುವಿಕೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ
ಪ್ರಧಾನ ಅಕ್ಷಕ್ಕೆ ಸಮಾಂತರವಾಗಿರುವ ಕಿರಣ ಪ್ರತಿಫಲನದ ನಂತರ ಪ್ರಧಾನ ಸಂಗಮದ ಮೂಲಕ ಹಾದುಹೋಗುತ್ತದೆ
ಪ್ರಧಾನ ಸಂಗಮದ ಮೂಲಕ ಹಾದುಹೋಗುವ ಬೆಳಕಿನ ಕಿರಣವು ಪ್ರಧಾನ್ ಅಕ್ಷಕ್ಕೆ ಸಮಾಂತರವಾಗಿ ಚಲಿಸುತ್ತದೆ
ದರ್ಪಣದ ವಕ್ರತಾ ಕೇಂದ್ರದ ಮೂಲಕ ಹಾದುಹೋಗುವ ಬೆಳಕಿನ ಕಿರಣವು ಪ್ರತಿಫಲನದ ನಂತರ ಅದೇ ದಿಕ್ಕಿನಲ್ಲಿಯೇ ಮರಳಿ ಬರುತ್ತದೆ
ಮೇಲಿನ ಎಲ್ಲವೂ ಸರಿ
ನಿಮ್ನ ದರ್ಪಣದ ಉಪಯೋಗ ಎಂದರೆ
ವಾಹನಗಳ ಮುಂಭಾಗದ ದೀಪಗಳಲ್ಲಿ
ಬೆಳಕಿನ ಶಕ್ತಿಶಾಲಿ ಸಮಾಂತರ ಕಿರಣ ಪುಂಜವನ್ನು ಪಡೆಯಲು
ದಂತವೈದ್ಯರು ಹಲ್ಲುಗಳ ಪರೀಕ್ಷೆಯಲ್ಲಿ
ಈ ಮೇಲಿನ ಎಲ್ಲವೂ ಸರಿ
ಪೀನ ದರ್ಪಣದ ಉಪಯೋಗ ಎಂದರೆ
ವಾಹನಗಳ ಹಿನ್ನೋಟ ದರ್ಪಣ ಗಳಲ್ಲಿ
ದೂರದರ್ಶಕಗಳ ತಯಾರಿಕೆಯಲ್ಲಿ
ತಿರುವುಗಳಲ್ಲಿ ಮುಂಬದಿ ಯಿಂದ ಬರುವ ವಾಹನಗಳನ್ನು ವೀಕ್ಷಿಸಲು
ಈ ಮೇಲಿನ ಎಲ್ಲವೂ ಸರಿ
ವಾಹನಗಳಲ್ಲಿ ಸಮತಲ ದರ್ಪಣ ಗಳ ಬದಲಾಗಿ ಪೀನ ದರ್ಪಣ ಗಳನ್ನು ಬಳಸಲು ಕಾರಣ
ಪೀನ ದರ್ಪಣ ಯಾವಾಗಲೂ ಚಿಕ್ಕದಾದ ಮತ್ತು ನೇರ ಪ್ರತಿಬಿಂಬಗಳನ್ನು ಉಂಟುಮಾಡುತ್ತದೆ
ಚಾಲಕರಿಗೆ ಹಿಂಭಾಗದ ಹೆಚ್ಚಿನ ಕ್ಷೇತ್ರವನ್ನು ವೀಕ್ಷಿಸಲು ಸಹಾಯಕವಾಗಿದೆ
ಹಿಂಬದಿಯ ವಾಹನ ಎಷ್ಟು ದೂರದಲ್ಲಿದೆಯೊ ದರ್ಪಣದಲ್ಲಿ ಪ್ರತಿಬಿಂಬ ಅಷ್ಟು ದೂರದಲ್ಲಿ ಇರುವಂತೆ ಕಾಣುತ್ತದೆ
ಮೇಲಿನ ಎಲ್ಲವೂ ಸರಿ
ಕಾರ್ಟೀಸಿಯನ್ ನಿಯಮದ ಪ್ರಕಾರ ವಸ್ತುವನ್ನು ಯಾವಾಗಲೂ ದರ್ಪಣದ
ಎಡ ಭಾಗದಲ್ಲಿ ಇರಿಸಬೇಕು
ಬಲ ಭಾಗದಲ್ಲಿ ಇರಿಸಬೇಕು
ಮಧ್ಯ ಭಾಗದಲ್ಲಿ ಇರಿಸಬೇಕು
ಮೇಲಿನ ಎಲ್ಲವೂ ಸರಿ
ಕಾರ್ಟಿಸಿಯನ್ ನಿಯಮದಂತೆ ಮೂಲ ಬಿಂದುವಿನ ಬಲಭಾಗದಲ್ಲಿರುವ ದೂರಗಳನ್ನು ಧನಾತ್ಮಕವಾಗಿ ಹಾಗೂ ಮೂಲ ಬಿಂದುವಿನ ಎಡಭಾಗದಲ್ಲಿರುವ ದೂರಗಳನ್ನು ಋಣಾತ್ಮಕವಾಗಿ ತೆಗೆದುಕೊಳ್ಳಬೇಕು.
ಈ ಹೇಳಿಕೆ ಸರಿಯಾಗಿದೆ
ಈ ಹೇಳಿಕೆ ತಪ್ಪಾಗಿದೆ
ಈ ಹೇಳಿಕೆ ಸಂದರ್ಭಾನುಸಾರ ಬದಲಾಗುತ್ತದೆ
ಇದು ಕಾರ್ಟೀಸಿಯನ್ ನಿಯಮ ಅಲ್ಲ
ಇವುಗಳಲ್ಲಿ ಯಾವುದು ದರ್ಪಣದ ಸೂತ್ರವಾಗಿದೆ
1/f = 1/v - 1/u
1/f = 1/v + 1/u
1/f = 1/v x 1/u
1/f = 1/v + 1/u +1/s
ದರ್ಪಣದ ವರ್ಧನೆಗೆ ಸಂಬಂಧಿಸಿದ ಸೂತ್ರ
m = h' / h = - v/u
m = h / h' = + u/v
m = h' + h
m = h' + h
ಈ ಕೆಳಗಿನ ಯಾವ ಸಂದರ್ಭದಲ್ಲಿ ಬೆಳಕಿನ ವಕ್ರೀಭವನ ಸಂಭವಿಸುತ್ತದೆ
ಬೆಳಕು ಚಲಿಸುವ ಎರಡು ಮಾಧ್ಯಮಗಳು ಒಂದೇ ಆಗಿರಬೇಕು
ಬೆಳಕು ಚಲಿಸುವ ಎರಡು ಮಾಧ್ಯಮಗಳು ಬೇರೆ ಬೇರೆ ಸಾಂದ್ರತೆಯನ್ನು ಹೊಂದಿರಬೇಕು
ಎರಡು ಮಾಧ್ಯಮಗಳ ಕಣಗಳ ಗುಣಲಕ್ಷಣಗಳು ಒಂದೇ ಆಗಿರಬೇಕು
ಎರಡು ಮಾಧ್ಯಮಗಳ ವಕ್ರೀಭವನ ಸೂಚ್ಯಂಕ ಒಂದೇ ಆಗಿರಬೇಕು
ಇವುಗಳಲ್ಲಿ ಯಾವುದು ಸ್ನೆಲ್ ನ ವಕ್ರೀಭವನ ನಿಯಮಕ್ಕೆ ಸಂಬಂಧಿಸಿದ ಸೂತ್ರವಾಗಿದೆ
Sin r / Sin i = ಸ್ಥಿರಾಂಕ
Sin i / Sin r = ಸ್ಥಿರಾಂಕ
Sin r > Sin i = ಸ್ಥಿರಾಂಕ
Sin i + Sin r = ಸ್ಥಿರಾಂಕ
ಬೆಳಕು ನಿರ್ವಾತ ಪ್ರದೇಶದಲ್ಲಿ ಚಲಿಸುವ ವೇಗ
ಒಂದು ಗಂಟೆಗೆ 3 x 108 ಮೀಟರ್ ಗಳು
ಒಂದು ನಿಮಿಷಕ್ಕೆ 3 x 108 ಮೀಟರ್ ಗಳು
ಒಂದು ಸೆಕೆಂಡಿಗೆ 3 x 108 ಕಿಲೋ ಮೀಟರ್
ಒಂದು ಸೆಕೆಂಡಿಗೆ 3 x 108 ಮೀಟರ್ ಗಳು
ಮಸೂರವು ಎರಡು ಹೊರ ಬಾಗಿದ ಗೊಲೀಯ ಮೇಲ್ಮೈಗಳನ್ನು ಹೊಂದಿದ್ದರೆ ಅದನ್ನು ಹೀಗೆನ್ನುವರ
ದ್ವಿ ನಿಮ್ನ ಮಸೂರ
ಪೀನ ಮಸೂರ
ನಿಮ್ನ ಮಸೂರ
ದ್ವಿ ಪೀನಮಸೂರ
ಮಸೂರದ ಕೇಂದ್ರ ಬಿಂದುವನ್ನು ಹೀಗೆನ್ನುವರು
ಸಂಗಮ ಬಿಂದು
ವಕ್ರತಾ ಕೇಂದ್ರ
ದೃಕ್ ಕೇಂದ್ರ
ದ್ಯುತಿ ರಂಧ್ರ
ನಿಮ್ನ ಮಸೂರವನ್ನು ಹೀಗೂ ಕರೆಯುತ್ತಾರೆ
ಕೇಂದ್ರೀಕರಿಸುವ ಮಸೂರ
ವಿಕೇಂದ್ರೀಕರಿಸುವ ಮಸೂರ
ಮೇಲಿನ ಎರಡು ಸರಿ
ಯಾವುದು ಸರಿ ಇಲ್ಲ
ಇವುಗಳಲ್ಲಿ ಯಾವುದು ಮಸೂರದ ಸೂತ್ರವಾಗಿದೆ
1/f = 1/v - 1/u
1/f = 1/v + 1/u
1/f = 1/v x 1/u
1/f = 1/v + 1/u +1/s
ಮಸೂರದ ಸಾಮರ್ಥ್ಯಕ್ಕೆ ಸಂಬಂಧಿಸಿದ ಸೂತ್ರ
P = 1/f
f = 1/P
f/P = ಸ್ಥಿರಾಂಕ
P/ f = ಸ್ಥಿರಾಂಕ
ಮಸೂರದ ಸಾಮರ್ಥ್ಯದ SI ಏಕಮಾನ
ನ್ಯೂಟನ್
ಜೌಲ್
ಡಯಾಪ್ಟರ್
ಪಾಸ್ಕಲ್
ಒಂದು ವೇಳೆ ಮಸೂರದ ಸಾಮರ್ಥ್ಯದ ಮೌಲ್ಯವು ಋಣಾತ್ಮಕವಾಗಿದ್ದರೆ ಅದು
ದ್ವಿ ನಿಮ್ನ ಮಸೂರ
ಪೀನ ಮಸೂರ
ನಿಮ್ನ ಮಸೂರ
ದ್ವಿ ಪೀನಮಸೂರ
ಮಸೂರದ ವರ್ಧನೆಗೆ ಸಂಬಂಧಿಸಿದ ಸೂತ್ರ
m = h' / h = - v/u
m = h / h' = + u/v
m = h' / h = v/u
m = h' + h
ಮಸೂರದ ಪ್ರಧಾನ ಸಂಗಮ ಮತ್ತು ದೃಕ್ ಕೇಂದ್ರಗಳ ನಡುವಿನ ದೂರವನ್ನು ಹೀಗೆಂದು ಕರೆಯುತ್ತಾರೆ
ಸಂಗಮ ದೂರ
ಸಂಗಮ ಬಿಂದು
ದೃಕ್ ಕೇಂದ್ರ
ದ್ಯುತಿ ರಂಧ್ರ
