NEW
Font size
Worksheets10th Science ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ
Total questions: 20
Worksheet time: 10mins
ಅಲೈಂಗಿಕ ಸಂತಾನೋತ್ಪತ್ತಿಯು
ವಿಶೇಷ ಜೀವಕೋಶಗಳ ಸಮ್ಮಿಲನ ಕ್ರಿಯೆ
ಎಲ್ಲಾ ಜೀವಿಗಳು ಸಂತಾನೋತ್ಪತ್ತಿ ಕ್ರಿಯೆ ನಡೆಸುವ ಒಂದು ವಿಧಾನ
ತಳೀಯವಾಗಿ ಒಂದೇ ರೀತಿಯ ಸಂತತಿ ಉಂಟಾಗುವ ಒಂದು ವಿಧಾನ
ಒಂದಕ್ಕಿಂತ ಹೆಚ್ಚು ಪೋಷಕರನ್ನು ಒಳಗೊಂಡಿರುವ ಒಂದು ವಿಧಾನ
ಬೀಜಗಳನ್ನು ಉತ್ಪತ್ತಿ ಮಾಡುವ ಸಾಮರ್ಥ್ಯ ಕಳೆದುಕೊಂಡಿರುವ ಸಸ್ಯಗಳ ಗುಂಪು
ಮಲ್ಲಿಗೆ, ಗುಲಾಬಿ, ಬಾಳೆ
ತೆಂಗು, ಅಡಿಕೆ, ಬಾಳೆ
ಜೋಳ, ನವಣೆ, ನುಗ್ಗೆ
ಗುಲಾಬಿ, ತೆಂಗು, ಮಲ್ಲಿಗೆ
ಸಂತಾನೋತ್ಪತ್ತಿಗಾಗಿ ಮೊಗ್ಗುವಿಕೆ ವಿಧಾನ ಅನುಸರಿಸುವ ಜೀವಿ
ಅಮೀಬಾ
ಪ್ಲಾಸ್ಮೋಡಿಯಂ
ಲಿಶ್ಮೇನಿಯಾ
ಹೈಡ್ರಾ
ಕಬ್ಬು ಬೆಳೆಯಲು ರೈತನು ಅನುಸರಿಸಬೇಕಾದ ವಿಧಾನ
ತುಂಡರಿಕೆ
ಮೊಗ್ಗುವಿಕೆ
ವಿದಳನ
ಕಾಯಜ ಸಂತಾನೋತ್ಪತ್ತಿ
ನಿಶ್ಚಿತ ಸಮತಲದಲ್ಲಿ ವಿಭಜನೆಗೊಂಡು ಸಂತಾನೋತ್ಪತ್ತಿ ಉಂಟುಮಾಡುವ ಜೀವಿ
ಬ್ರಯೋಫಿಲ್ಲಂ
ಲಿಶ್ಮೇನಿಯಾ
ಪ್ಲಾಸ್ಮೋಡಿಯಂ
ಹೈಡ್ರಾ
ಲೈಂಗಿಕವಾಗಿ ಹರಡುವ ರೋಗದಿಂದ ವ್ಯಕ್ತಿಯನ್ನು ರಕ್ಷಿಸುವ ಗರ್ಭನಿರೋಧಕ ವಿಧಾನ
ಶಸ್ತ್ರಚಿಕಿತ್ಸೆ
ಕಾಪರ್-ಟಿ
ಕಾಂಡೋಮ್
ಮಾತ್ರೆಗಳು
ಬೇಕರಿ ಉತ್ಪನ್ನಗಳ ತಯಾರಿಗೆ ಹೆಚ್ಚು ಉಪಯುಕ್ತವಾಗಿರುವ ಗಂಡು ಮತ್ತು ಹೆಣ್ಣು ಲಿಂಗಾಣುಗಳ ಸಂಯೋಗವಿಲ್ಲದೇ ನಡೆಯುವ ಸಂತಾನೋತ್ಪತ್ತಿ ವಿಧಾನ ಯಾವುದು
ತುಂಡರಿಕೆ
ಮೊಗ್ಗುವಿಕೆ
ವಿದಳನ
ಕಾಯಜ ಸಂತಾನೋತ್ಪತ್ತಿ
ಪುರುಷ ಸಂತಾನೋತ್ಪತ್ತಿಯ ಭಾಗ
ಅಂಡಾಶಯ
ಗರ್ಭಕೋಶ
ವೀರ್ಯ ನಾಳ
ಅಂಡನಾಳ
ಲೈಂಗಿಕ ಸಂಪರ್ಕದಿಂದ ಹರಡದ ರೋಗ
ಗೊನೋರಿಯಾ
ಮಲೇರಿಯಾ
ಸಿಫಿಲಿಸ್
ಏಡ್ಸ್
ಸಂತಾನೋತ್ಪತ್ತಿಯು ಜೀವಿಗಳಿಗೆ ಅತ್ಯಾವಶ್ಯಕ. ಏಕೆಂದರೆ
ಜೀವಿಯ ಭಾಗಗಳು ಜೀವಂತವಾಗಿರಲು
ಅವುಗಳ ಶಕ್ತಿಯ ಪೂರೈಕೆಗಾಗಿ
ಬೆಳವಣಿಗೆಗಾಗಿ
ಪ್ರಭೇದದ ಮುಂದುವರಿಕೆಗಾಗಿ
ಡಿ.ಎನ್.ಎ ಸ್ವಪ್ರತೀಕರಣವು ಅತ್ಯವಶ್ಯಕ. ಏಕೆಂದರೆ
ಡಿ.ಎನ್.ಎ ಅಣುವು ಮುಂದಿನ ಪೀಳಿಗೆಗೆ ವರ್ಗಾವಣೆಯಾಗುವ ಗುಣಲಕ್ಷಣಗಳನ್ನು ಹೊಂದಿರುತ್ತದೆ
ಡಿ.ಎನ್.ಎ ಸ್ವಪ್ರತೀಕರಣದಿಂದ ಮರಿಕೋಶಗಳಿಗೆ ಒಂದೇ ಸಂಖ್ಯೆಯ ವರ್ಣತಣತುಗಳು ವರ್ಗಾವಣೆಯಾಗುತ್ತದೆ
ಮರಿಜೀವಕೋಶಗಳು ಅನುವಂಶೀಯವಾಗಿ ಒಂದೇ ರೀತಿಯಲ್ಲಿರುತ್ತವೆ
ಮೇಲಿನ ಎಲ್ಲವೂ
ಲೈಂಗಿಕ ಸಂಪರ್ಕದಿಂದ ಗರ್ಭಧಾರಣೆಯನ್ನು ತಡೆಯುವ ವಿಧಾನಗಳಾವುವು?
ಹಾರ್ಮೋನುಗಳನ್ನು ಅಸಮತೋಲನಗೊಳಿಸುವ ಮಾತ್ರೆಗಳನ್ನು ತೆಗೆದುಕೊಳ್ಳುವುದು.
ವಂಕಿ ಅಥವಾ ಕಾಪರ್ ಟಿ ಎಂಬ ತಡೆಯನ್ನು ಗರ್ಭಕೋಶದೊಳಗೆ ಸೇರಿಸುವುದು.
ಶಸ್ತ್ರಕ್ರಿಯೆಯ ಮೂಲಕ ವೀರ್ಯನಾಳ ಅಥವಾ ಅಂಡನಾಳಕ್ಕೆ ತಡೆ ಉಂಟುಮಾಡುವುದು.
ಮೇಲಿನ ಎಲ್ಲವೂ
ಹೂಬಿಡುವ ಸಸ್ಯ ಮತ್ತು ಮಾನವ ಸಂತಾನೋತ್ಪತ್ತಿ ವ್ಯೂಹಗಳೆರಡರಲ್ಲೂ ಕಂಡುಬರುವ ಒಂದೇ ಹೆಸರಿನ ಭಾಗ
ವೀರ್ಯ ನಾಳ
ಕೇಸರ
ಅಂಡಾಶಯ
ಶಲಾಕ ನಳಿಕೆ
ಭ್ರೂಣದಲ್ಲಿ ಉತ್ಪತ್ತಿಯಾದ ತ್ಯಾಜ್ಯ ಪದಾರ್ಥಗಳು ತಾಯಿಯ ರಕ್ತಕ್ಕೆ ವರ್ಗಾಯಿಸಲು ಸಂಪರ್ಕಿಸುವ ಭಾಗ ಯಾವುದು?
ಪ್ಲಾಸೆಂಟಾ
ಹೃದಯ
ಮೂತ್ರಪಿಂಡ
ಜಠರ
ಏಡ್ಸ್ ಸೋಂಕಿಗೆ ಕಾರಣವಾದ ಜೀವಿ
ಪ್ರೋಟೋಜೋವಾ
ಶಿಲೀಂಧ್ರ
ಬ್ಯಾಕ್ಟೀರಿಯಾ
ವೈರಸ್
ಬೀಜಕಗಳ ಉತ್ಪಾದನೆ ವಿಧಾನದ ಮೂಲಕ ಸಂತಾನೋತ್ಪತ್ತಿ ನಡೆಸುವುದರ ಬಗ್ಗೆ ಸರಿಯಾದ ಹೇಳಿಕೆ/ಗಳು (1) ಬೀಜಕಗಳು ದಪ್ಪವಾದ ಭಿತ್ತಿಯಿಂದ ಆವೃತವಾಗಿವೆ. (2) ಈ ಭಿತ್ತಿಯು ಬೀಜಕಗಳು ತೇವಾಂಶದ ಸಂಪರ್ಕಕ್ಕೆ ಬಂದು ಬೆಳೆಯಲು ಪ್ರಾರಂಭಿಸುವವರೆಗೂ ರಕ್ಷಿಸುತ್ತದೆ.
(1) ಮಾತ್ರ
(2) ಮಾತ್ರ
(1) ಮತ್ತು (2) ಎರಡೂ
ಯಾವುದೂ ಅಲ್ಲ
ಹೆಚ್ಚು ಸಂಕೀರ್ಣ ದೇಹರಚನೆಯನ್ನು ಹೊಂದಿರುವ ಜೀವಿಗಳಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆಗೆ ಇರುವ ವಿಶೇಷತೆ
ಸಂತಾನೋತ್ಪತ್ತಿಗೆ ವಿಶಿಷ್ಟ ಅಂಗಗಳನ್ನು ಹೊಂದಿರುತ್ತವೆ
ಈ ಅಂಗಗಳು ಲಿಂಗಾಣುಗಳನ್ನು ಉತ್ಪತ್ತಿ ಮಾಡುತ್ತವೆ
ಲಿಂಗಾಣುಗಳು ನಿಶೇಚನ ಹೊಂದಿ ಯುಗ್ಮಜವಾಗಿ ಹೊಸ ಜೀವಿಯಾಗಿ ಬೆಳೆಯುತ್ತದೆ
ಮೇಲಿನ ಎಲ್ಲವೂ
ಕಾಲಾ-ಆಜಾರ್ ರೋಗಕ್ಕೆ ಕಾರಣವಾದ ಜೀವಿ ಯಾವುದು? ಈ ಜೀವಿಯು ಹೇಗೆ ಸಂತಾನೋತ್ಪತ್ತಿಯನ್ನು ನಡೆಸುತ್ತದೆ?
ಲಿಶ್ಮೇನಿಯಾ, ಬಹುವಿದಳನ
ಲಿಶ್ಮೇನಿಯಾ, ದ್ವಿವಿದಳನ
ಅಮೀಬಾ, ದ್ವಿವಿದಳನ
ಅಮೀಬಾ, ಬಹುವಿದಳನ
ಬೀಜಕಗಳ ಉತ್ಪಾದನೆ ಮೂಲಕ ಸಂತಾನೋತ್ಪತ್ತಿ ನಡೆಸುವ ಜೀವಿ
ಅಮೀಬಾ
ಲಿಶ್ಮೇನಿಯಾ
ಬ್ರಯೋಫಿಲ್ಲಮ್
ರೈಸೋಪಸ್
ಹೂವುಗಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ
ಎಲ್ಲಾ ಹೂವುಗಳು ದ್ವಿಲಿಂಗಿಗಳಾಗಿವೆ.
ಹೂವುಗಳು ಸಂತಾನೋತ್ಪತ್ತಿಯ ಅಂಗಗಳನ್ನು ಹೊಂದಿವೆ
ಎಲ್ಲಾ ಪ್ರಭೇದದ ಸಸ್ಯಗಳು ಹೂಬಿಡುತ್ತವೆ.
ಏಕಲಿಂಗಿ ಹೂವುಗಳಲ್ಲಿ ಸ್ವಕೀಯ ಪರಾಗಸ್ಪರ್ಶಕ್ರಿಯೆ ನಡೆಯುತ್ತದೆ.
